ಭಾರಿ ಷೇರು ಖರೀದಿಸಿದ್ದರೂ ಟ್ವೀಟರ್ ನಿರ್ದೇಶಕರ ಮಂಡಳಿ ಸೇರದ ಎಲಾನ್ ಮಸ್ಕ್
- ಟ್ವೀಟರನ್ನು ಜಾಹೀರಾತು ಮುಕ್ತ ಮಾಡಲು ಒಪ್ಪದ್ದಕ್ಕೆ ಈ ನಿರ್ಧಾರ
- ಷೇರು ಖರೀಸಿದ್ದರೂ ನಿರ್ದೇಶಕರ ಮಂಡಳಿ ಸೇರದ ಎಲಾನ್ ಮಸ್ಕ್
- ಟ್ವಿಟ್ಟರ್‌ನಲ್ಲಿ ಬದಲಾವಣೆ ತರಲು ಬಯಸಿದ್ದ ಮಸ್ಕ್
ಸ್ಯಾನ್‌ಫ್ರಾನ್ಸಿಸ್ಕೋ: ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಅತಿಹೆಚ್ಚು ಷೇರುಗಳನ್ನು ಖರೀದಿಸಿದ ನಂತರವೂ ತಾವು ಟ್ವೀಟರಿನ ನಿರ್ದೇಶಕರ ಮಂಡಳಿಯಲ್ಲಿ ಸೇರ್ಪಡೆಯಾಗುವುದಿಲ್ಲ ಎಂದು ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ (Elon Musk) ಸ್ಪಷ್ಟಪಡಿಸಿದ್ದಾರೆ.ಈ ಮೊದಲು ಮಸ್ಕ್ ತಾವು ಟ್ವೀಟರ್‌ನ ನಿರ್ದೇಶಕರ ಮಂಡಳಿಯಲ್ಲಿ ಸೇರ್ಪಡೆಯಾಗುವುದಾಗಿ ತಿಳಿಸಿದ್ದರು. ಅಲ್ಲದೇ ಟ್ವೀಟರ್ ಅನ್ನು ಜಾಹೀರಾತು ಮುಕ್ತ ವೆಬ್‌ಸೈಟಾಗಿ ಮಾಡುವುದು ಸೇರಿದಂತೆ ಇನ್ನಿತರ ಬದಲಾವಣೆಗಳನ್ನು ತರಲು ಬಯಸಿದ್ದರು. ಆದರೆ ಟ್ವೀಟರ್ ಸಿಇಒ ಪರಾಗ್ ಅಗರ್‌ವಾಲ್ 2021ರಲ್ಲಿ ಟ್ವೀಟರಿನಲ್ಲಿ ಶೇ. 90 ರಷ್ಟುಆದಾಯವು ಜಾಹೀರಾತಿನ ಮೂಲಕವೇ ಬರುವ ಕಾರಣ ಮಸ್ಕ್ ಪ್ರಸ್ತಾಪ ವಿರೋಧಿಸಿದ್ದರು ಎನ್ನಲಾಗಿದೆ.
ಇದಲ್ಲದೇ ಪರಾಗ್, ಮಸ್ಕ್ ಟ್ವೀಟರಿನ ಇನ್ನಿತರ ಷೇರುದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ಉತ್ತಮ ಎಂದಿದ್ದರು. ಈ ಹಿನ್ನೆಲೆಯಲ್ಲಿ ಮಸ್ಕ್ ಟ್ವೀಟರ್ ನಿರ್ದೇಶಕ ಮಂಡಳಿ ಸೇರುವ ನಿರ್ಧಾರವನ್ನು ಕೈಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಟ್ವೀಟರ್‌ನಲ್ಲಿ ಹೈಪರ್ ಆಕ್ಟೀವ್ ಆಗಿರುವ ಟೆಸ್ಲಾ ಸಿಇಓ ಎಲೋನ್ ಮಸ್ಕ್ (Elon Musk) ಕೆಲದಿನಗಳ ಹಿಂದೆ ಟ್ವಿಟರ್ ಸಮೀಕ್ಷೆವೊಂದನ್ನು (Poll) ಪೋಸ್ಟ್ ಮಾಡಿದ್ದು ಬಳಕೆದಾರರಿಗೆ ಟ್ವೀಟರ್‌ನಲ್ಲಿ ಎಡಿಟ್ ಬಟನ್ (Edit Button) ಬೇಕೇ ಎಂದು ಕೇಳಿದ್ದಾರೆ. ಇತ್ತೀಚೆಗೆ ಎಲೋನ್ ಮಸ್ಕ್ ಟ್ವಿಟರ್‌ನಲ್ಲಿ 9.2 ಪ್ರತಿಶತ ಪಾಲನ್ನು ಪಡೆದುಕೊಂಡಿದ್ದು 73.5 ಮಿಲಿಯನ್ ಷೇರುಗಳನ್ನು ಖರೀದಿಸಿದ್ದಾರೆ. ಅಲ್ಲದೇ ಮೈಕ್ರೋಬ್ಲಾಗಿಂಗ್ ಸೈಟ್‌ನ ಏಕೈಕ ಅತಿದೊಡ್ಡ ಷೇರುದಾರರಾಗಿದ್ದಾರೆ.
ಟ್ವೀಟರ್ ಎಡಿಟ್ ಬಟನ್ ಶೀಘ್ರದಲ್ಲೇ ಲಭ್ಯ: ಟೆಸ್ಲಾ ಸಿಇಓ ಎಲಾನ್ ಮಸ್ಕ್ ಟ್ವೀಟ್ ಫಲುಶ್ರುತಿ?
ಟ್ವೀಟರ್‌ನಲ್ಲಿ ಎಲಾನ್ ಷೇರು ಹೊಂದಿರುವ ಸುದ್ದಿ ಬಹಿರಂಗಗೊಂಡ ಬಳಿಕ ಸೋಮವಾರ ಮಾರುಕಟ್ಟೆ ತೆರೆಯುವ ಮೊದಲು ಟ್ವಿಟರ್‌ನ ಷೇರುಗಳು 25 ಪ್ರತಿಶತಕ್ಕಿಂತ ಹೆಚ್ಚು ಏರಿಕೆ ಕಂಡಿದ್ದವು ಟೆಸ್ಲಾ ಷೇರುಗಳು ಕೂಡ ಸ್ವಲ್ಪಮಟ್ಟಿಗೆ ಏರಿಕೆ ಕಂಡಿವೆ. ಕಳೆದ ಕೆಲವು ದಿನಗಳಿಂದ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಮುಕ್ತವಾಗಿ ಸಂವಹನ ಮಾಡುವ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ, ಅಲ್ಲದೇ ಕಳೆದ ತಿಂಗಳು ವಾಕ್ ಸ್ವಾತಂತ್ರ್ಯದ ( free speech) ಬಗ್ಗೆ ಕೂಡ ಟ್ವೀಟ್ ಮಾಡಿದ್ದಾರೆ.
ಈಗ ಎಲಾನ್ ಟ್ವೀಟರ್‌ನಲ್ಲಿ ಎಡಿಟ್ ಬಟನ್ ಬೇಕೇ ಎಂಬ ಸಮೀಕ್ಷೆ ಪೋಸ್ಟ್ ಮಾಡಿದ್ದಾರೆ. ಸಮೀಕ್ಷೆಯ ಆರಂಭಿಕ ಫಲಿತಾಂಶಗಳು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಟ್ವೀಟರ್‌ನಲ್ಲಿ ಎಡಿಟ್ ವೈಶಿಷ್ಟ್ಯವನ್ನು ಬಯಸುತ್ತಾರೆ ಎಂದು ತೋರಿಸುತ್ತದೆ. ಎಲೋನ್ ಮಸ್ಕ್ ಸಮೀಕ್ಷೆಗೆ ಉತ್ತರಿಸಿದ ಟ್ವಿಟರ್ ಸಿಇಒ ಭಾರತೀಯ ಪರಾಗ್ ಅಗರವಾಲ್, ಸಮೀಕ್ಷೆಯ ಫಲಿತಾಂಶಗಳು ಮುಖ್ಯ ಪಾತ್ರ ವಹಿಸಲಿವೆ ಎಂದು ಟ್ವೀಟ್ ಮಾಡಿದ್ದು ದಯವಿಟ್ಟು ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ಹೇಳಿದ್ದಾರೆ.
ಟ್ವೀಟರ್ ಷೇರು ಖರೀದಿಸಿದ ಎಲಾನ್ ಮಸ್ಕ್: ಎಡಿಟ್ ಬಟನ್ ಬೇಕೇ ಎಂದು ನೆಟ್ಟಿಗರಿಗೆ ಪ್ರಶ್ನೆ
ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ನವೆಂಬರ್‌ನಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದ ಬಳಿಕ ಭಾರತೀಯ ಪರಾಗ್ ಅಗರ್‌ವಾಲ್ (Parag Agarwal) ಸಿಇಓ (CEO) ಆಗಿ ನೇಮಕಗೊಂಡಿದ್ದರು. ಟ್ವಿಟರ್‌ನಲ್ಲಿ ಮಸ್ಕ್‌ನ ಪಾಲು ಈಗ ದೊಡ್ಡ ವೈಯಕ್ತಿಕ ಷೇರುದಾರರಾಗಿದ್ದ ಡಾರ್ಸೆಯ (Darse) ಗಾತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ನವೆಂಬರ್‌ನಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದ ಬಳಿಕ ಭಾರತೀಯ ಪರಾಗ್ ಅಗರ್‌ವಾಲ್ ಸಿಇಓ ಆಗಿ ನೇಮಕಗೊಂಡಿದ್ದರು. ಟ್ವಿಟರ್‌ನಲ್ಲಿ ಮಸ್ಕ್‌ನ ಪಾಲು ಈಗ ದೊಡ್ಡ ವೈಯಕ್ತಿಕ ಷೇರುದಾರರಾಗಿದ್ದ ಡಾರ್ಸೆಯ ಗಾತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.