ಟ್ವೀಟರ್ ಷೇರು ಖರೀದಿಸಿದ ಎಲಾನ್ ಮಸ್ಕ್: ಎಡಿಟ್ ಬಟನ್ ಬೇಕೇ ಎಂದು ನೆಟ್ಟಿಗರಿಗೆ ಪ್ರಶ್ನೆ
ಟೆಸ್ಲಾ ಸಿಇಓ ಎಲೋನ್ ಮಸ್ಕ್ ಟ್ವಿಟರ್ ಸಮೀಕ್ಷೆವೊಂದನ್ನು ಪೋಸ್ಟ್ ಮಾಡಿದ್ದು ಟ್ವೀಟರ್‌ನಲ್ಲಿ ಎಡಿಟ್ ಬಟನ್ ಬೇಕೇ ಎಂದು ಕೇಳಿದ್ದಾರೆ.
Elon Musk Tweet: ಟ್ವೀಟರ್‌ನಲ್ಲಿ ಹೈಪರ್ ಆಕ್ಟೀಬ್ ಆಗಿರುವ ಟೆಸ್ಲಾ ಸಿಇಓ ಎಲೋನ್ ಮಸ್ಕ್ (Elon Musk) ಈಗ ಟ್ವಿಟರ್ ಸಮೀಕ್ಷೆವೊಂದನ್ನು (Poll) ಪೋಸ್ಟ್ ಮಾಡಿದ್ದು ಬಳಕೆದಾರರಿಗೆ ಟ್ವೀಟರ್‌ನಲ್ಲಿ ಎಡಿಟ್ ಬಟನ್ (Edit Button) ಬೇಕೇ ಎಂದು ಕೇಳಿದ್ದಾರೆ. ಇತ್ತೀಚೆಗೆ ಎಲೋನ್ ಮಸ್ಕ್ ಟ್ವಿಟರ್‌ನಲ್ಲಿ 9.2 ಪ್ರತಿಶತ ಪಾಲನ್ನು ಪಡೆದುಕೊಂಡಿದ್ದು 73.5 ಮಿಲಿಯನ್ ಷೇರುಗಳನ್ನು ಖರೀದಿಸಿದ್ದಾರೆ. ಅಲ್ಲದೇ ಮೈಕ್ರೋಬ್ಲಾಗಿಂಗ್ ಸೈಟ್‌ನ ಏಕೈಕ ಅತಿದೊಡ್ಡ ಷೇರುದಾರರಾಗಿದ್ದಾರೆ.
ಟ್ವೀಟರ್‌ನಲ್ಲಿ ಎಲಾನ್ ಷೇರು ಹೊಂದಿರುವ ಸುದ್ದಿ ಬಹಿರಂಗಗೊಂಡ ಬಳಿಕ ಸೋಮವಾರ ಮಾರುಕಟ್ಟೆ ತೆರೆಯುವ ಮೊದಲು ಟ್ವಿಟರ್‌ನ ಷೇರುಗಳು 25 ಪ್ರತಿಶತಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು, ಟೆಸ್ಲಾ ಷೇರುಗಳು ಕೂಡ ಸ್ವಲ್ಪಮಟ್ಟಿಗೆ ಏರಿಕೆ ಕಂಡಿವೆ. ಕಳೆದ ಕೆಲವು ದಿನಗಳಿಂದ ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಮುಕ್ತವಾಗಿ ಸಂವಹನ ಮಾಡುವ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ, ಅಲ್ಲದೇ ಕಳೆದ ತಿಂಗಳು ವಾಕ್ ಸ್ವಾತಂತ್ರ್ಯದ ( free speech) ಬಗ್ಗೆ ಕೂಡ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಯಶಸ್ವಿಯಾಗಲು ಈ 6 ಸೂತ್ರ ಅನುಸರಿಸಿ ಅಂತಾರೆ Elon Musk
ಪರಾಗ್ ಅಗರ್‌ವಾಲ್ ಪ್ರತಿಕ್ರಿಯೆ: ಈಗ ಎಲಾನ್ ಟ್ವೀಟರ್‌ನಲ್ಲಿ ಎಡಿಟ್ ಬಟನ್ ಬೇಕೇ ಎಂಬ ಸಮೀಕ್ಷೆ ಪೋಸ್ಟ್ ಮಾಡಿದ್ದಾರೆ. ಸಮೀಕ್ಷೆಯ ಆರಂಭಿಕ ಫಲಿತಾಂಶಗಳು ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಟ್ವೀಟರ್‌ನಲ್ಲಿ ಎಡಿಟ್ ವೈಶಿಷ್ಟ್ಯವನ್ನು ಬಯಸುತ್ತಾರೆ ಎಂದು ತೋರಿಸುತ್ತದೆ. ಎಲೋನ್ ಮಸ್ಕ್ ಸಮೀಕ್ಷೆಗೆ ಉತ್ತರಿಸಿದ ಟ್ವಿಟರ್ ಸಿಇಒ ಭಾರತೀಯ ಪರಾಗ್ ಅಗರವಾಲ್, ಸಮೀಕ್ಷೆಯ ಫಲಿತಾಂಶಗಳು ಮುಖ್ಯ ಪಾತ್ರ ವಹಿಸಲಿವೆ ಎಂದು ಟ್ವೀಟ್ ಮಾಡಿದ್ದು ದಯವಿಟ್ಟು ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ಹೇಳಿದ್ದಾರೆ.
ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ನವೆಂಬರ್‌ನಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದ ಬಳಿಕ ಭಾರತೀಯ ಪರಾಗ್ ಅಗರ್‌ವಾಲ್ ಸಿಇಓ ಆಗಿ ನೇಮಕಗೊಂಡಿದ್ದರು. ಟ್ವಿಟರ್‌ನಲ್ಲಿ ಮಸ್ಕ್‌ನ ಪಾಲು ಈಗ ದೊಡ್ಡ ವೈಯಕ್ತಿಕ ಷೇರುದಾರರಾಗಿದ್ದ ಡಾರ್ಸೆಯ ಗಾತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.
ಅಮೆರಿಕಾ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ಫೈಲಿಂಗ್ ಸೋಮವಾರ ಸಾರ್ವಜನಿಕಗೊಳಿಸಿದ್ದು, ಫೈಲಿಂಗನ್ನು ಮಾಡುವ ನಿರ್ಧಾರ ಮಾರ್ಚ್ 14 ರಂದು ಸಂಭವಿಸಿದೆ ಎಂದು ಹೇಳುತ್ತದೆ. ಟ್ವಿಟರ್‌ನಲ್ಲಿ ಮಸ್ಕ್‌ನ ಪಾಲನ್ನು ನಿಷ್ಕ್ರಿಯ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ, ಅಂದರೆ ಮಸ್ಕ್ ದೀರ್ಘಕಾಲೀನ ಹೂಡಿಕೆದಾರರಾಗಿದ್ದು, ಷೇರುಗಳ ಖರೀದಿ ಮತ್ತು ಮಾರಾಟವನ್ನು ಕಡಿಮೆ ಮಾಡಲು ಬಯಸುತ್ತಾರೆ.
ಇದನ್ನೂ ಓದಿ: Elon Musk: ಜಗತ್ತಿನ ಶ್ರೀಮಂತ ಪುಣೆಯ ಟೆಕ್ಕಿ ಚಡ್ಡಿ ದೋಸ್ತರು!
ಶೀಘ್ರದಲ್ಲೇ ಟ್ವೀಟರ್ ಎಡಿಟ್?: ಏಪ್ರಿಲ್ 1 ರಂದು, ಟ್ವಿಟರ್ ತನ್ನ ಅಧಿಕೃತ ಖಾತೆಯಲ್ಲಿ ಸಂದೇಶವನ್ನು ಟ್ವೀಟ್ ಮಾಡಿದ್ದು, ಇದು ಬಹುನಿರೀಕ್ಷಿತ "Edit" ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿತ್ತು. ಈ ಟ್ವೀಟ್ ಒಂದು ತಮಾಷೆಯೇ ಎಂದು ಕೇಳಿದಾಗ, ಕಂಪನಿಯು "ನಾವು ಇದನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ, ಆದರೆ ನಾವು ನಂತರ ನಮ್ಮ ಹೇಳಿಕೆಯನ್ನು ಎಡಿಟ್ ಮಾಡಬಹುದು" ಎಂದು ಹೇಳಿತ್ತು.
ಎಲಾನ್ ಮಸ್ಕ್ ಅವರು ತಮ್ಮ ಬೃಹತ್ ಮತ್ತು ನಿಷ್ಠಾವಂತ ಟ್ವಿಟರ್ ಫಾಲೋವರ್ಸ್ ಮುಂದೆ ಟ್ವೀಟರ್‌ಗೆ ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ನೆಟ್ವರ್ಕ್ ರಚಿಸುವ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ. ಆದರೆ ಹೈಪರ್ ಆಕ್ಟಿವ್ ಸಿಇಒ ದೀರ್ಘಕಾಲ ಬದಿಯಲ್ಲಿ ಉಳಿಯುತ್ತಾರೆಯೇ ಎಂಬ ಬಗ್ಗೆ ಉದ್ಯಮದ ವಿಶ್ಲೇಷಕರು ಸಂಶಯ ವ್ಯಕ್ತಪಡಿಸಿದ್ದಾರೆ.