ಟ್ವೀಟರ್ ಎಡಿಟ್ ಬಟನ್ ಶೀಘ್ರದಲ್ಲೇ ಲಭ್ಯ: ಟೆಸ್ಲಾ ಸಿಇಓ ಎಲಾನ್‌ ಮಸ್ಕ್‌ ಟ್ವೀಟ್‌ ಫಲುಶ್ರುತಿ?

ಇತ್ತೀಚೆಗೆ ಟ್ವೀಟರ್‌ನಲ್ಲಿ 9.2 ಶೇಕಡಾ ಪಾಲನ್ನು ಪಡೆದುಕೊಂಡಿದ್ದ ಟೆಸ್ಲಾ ಸಿಐಓ ಎಲೋನ್ ಮಸ್ಕ್  ತಮ್ಮ ಅನುಯಾಯಿಗಳಿಗೆ ಎಡಿಟ್ ಬಟನ್ ಬೇಕೇ ಎಂದು ಕೇಳುವ ಸಮೀಕ್ಷೆಯನ್ನು ಪೋಸ್ಟ್‌ ಮಾಡಿದ್ದರು. ಇದಾದ ಸುಮಾರು ಒಂದು ದಿನದ ನಂತರ ಟ್ವೀಟರ್‌ ಈಗ ಈ ಪ್ರಕಟನೆ ಮಾಡಿದೆ.

Twitter announces edit button hours after Elon Musk poll testing to begin soon mnj

Twitter Edit Button: ಸಾಮಾಜಿಕ ಜಾಲತಾಣ ವೇದಿಕೆ  ಟ್ವಿಟರ್ ಎಡಿಟ್ ಬಟನ್‌ ಬಿಡುಗಡೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ದೃಢಪಡಿಸಿದ. ಬಳಕೆದಾರರು ತಮ್ಮ ಟ್ವೀಟ್‌ಗಳಲ್ಲಿನ ತಪ್ಪು ಮಾಹಿತಿಯನ್ನು ಸರಿಪಡಿಸಲು ಅಥವಾ  ಟೈಪಿಂಗ್ ದೋಷಗಳನ್ನು ಸರಿಪಡಿಸಲು ಎಡಿಟ್‌ ಬಟನ್‌ ಸಹಾಯ ಮಾಡಲಿದೆ. ಟ್ವೀಟರ್‌ ಬಳಕೆದಾರರು ಬಹಳ ಸಮಯದಿಂದ ವಿನಂತಿಸುತ್ತಿರುವ ವೈಶಿಷ್ಟ್ಯವನ್ನು ಟ್ವೀಟರ್‌ ಅಂತಿಮವಾಗಿ ಬಿಡುಗಡೆ ಮಾಡಲಿದೆ. 

ಪ್ರಸ್ತುತ, ಬಳಕೆದಾರರು ದೋಷಗಳಿರುವ ಟ್ವೀಟ್‌ಗಳನ್ನ ಎಡಿಟ್‌ ಮಾಡಲು ಸಾಧ್ಯವಿಲ್ಲ. ಟ್ವೀಟ್‌ ಸರಿಪಡಿಸಬೇಕಿದ್ದರೆ ಅದನ್ನು ಡಿಲೀಟ್‌ ಮಾಡಿ ಹೊಸ ಟ್ವೀಟ್‌ ಮಾಡಬೇಕಾಗುತ್ತದೆ. ಆದರೆ ಎಡಿಟ್ ಬಟನ್ ತೊಂದರೆಯನ್ನು ದೂರ ಮಾಡಲಿದೆ. ಆದರೆ ಇದೇ ಸಮಯದಲ್ಲಿ ಎಡಿಟ್ ಬಟನ್ ಅನ್ನು ದುರುಪಯೋಗಪಡಿಸಿಕೊಳ್ಳುವ ಸಧ್ಯತೆ ಇದೆ ಎಂದು ಟ್ವೀಟರ್ ಕಳವಳ ವ್ಯಕ್ತಪಡಿಸಿದೆ.‌

ಎಲಾನ್‌ ಮಸ್ಕ್‌ ಟ್ವೀಟ್: ಇತ್ತೀಚೆಗೆ  ಎಲೋನ್ ಮಸ್ಕ್ ಟ್ವಿಟರ್‌ನಲ್ಲಿ 9.2 ಪ್ರತಿಶತ ಪಾಲನ್ನು ಪಡೆದುಕೊಂಡಿದ್ದು 73.5 ಮಿಲಿಯನ್ ಷೇರುಗಳನ್ನು ಖರೀದಿಸಿರುವುದರ ಮೂಲಕ  ಮೈಕ್ರೋಬ್ಲಾಗಿಂಗ್ ಸೈಟ್‌ನ ಏಕೈಕ ಅತಿದೊಡ್ಡ ಷೇರುದಾರರಾಗಿರುವು ಬಹಿರಂಗೊಂಡಿತ್ತು. ಈ ಬಳಿಕೆ ಟ್ವಿಟರ್ ಸಮೀಕ್ಷೆವೊಂದನ್ನು  ಪೋಸ್ಟ್ ಮಾಡಿದ್ದ ಮಸ್ಕ್ ಬಳಕೆದಾರರಿಗೆ ಟ್ವೀಟರ್‌ನಲ್ಲಿ ಎಡಿಟ್ ಬಟನ್ (Edit Button) ಬೇಕೇ ಎಂದು ಕೇಳಿದ್ದರು. ಇದಕ್ಕೆ ಟ್ವೀಟರ್‌ ಸಿಇಓ ಭಾರತೀಯ ಪರಾಗ್‌ ಅಗರ್‌ವಾಲ್‌ ಕೂಡ ಪ್ರತಿಕ್ರಿಯೆ ನೀಡಿದ್ದರು. ‌

ಇದನ್ನೂ ಓದಿಟ್ವೀಟರ್ ಷೇರು ಖರೀದಿಸಿದ ಎಲಾನ್ ಮಸ್ಕ್: ಎಡಿಟ್‌ ಬಟನ್ ಬೇಕೇ ಎಂದು ನೆಟ್ಟಿಗರಿಗೆ ಪ್ರಶ್ನೆ

ಪರಾಗ್‌ ಅಗರ್‌ವಾಲ್‌ ಪ್ರತಿಕ್ರಿಯೆ ಬಳಿಕ ಎಡಿಟ್ ಬಟನ್ ಶೀಘ್ರದಲ್ಲೆ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಬಳಕೆದಾರರಿಗೆ ಮನವರಿಕೆಯಾಗಿತ್ತು.  ಇದಾದ ಸುಮಾರು ಕೆಲ ಗಂಟೆಗಳ ಬಳಿಕ ಟ್ವೀಟರ್‌ ಈಗ ಎಡಿಟ್‌ ಬಟನ್‌ ಹೊರತರುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. 

ಟ್ವಿಟರ್ ಕಾಮ್ಸ್ (@TwitterComms) ಎಡಿಟ್ ಬಟನ್ ಹೇಗಿರುತ್ತದೆ ಎಂಬುದನ್ನು ತೋರಿಸುವ ಜೀಫ್ಫನ್ನು (GIF) ಸಹ ಪೋಸ್ಟ್ ಮಾಡಿದೆ, ಆದರೆ ಅದು ಎಲ್ಲರಿಗೂ ಲಭ್ಯವಾಗುವ ಮೊದಲು ಪರೀಕ್ಷೆಗೆ ಒಳಗಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕಾದ ಸಂಗತಿ. 

 

 

ದುರುಪಯೋಗ ಸಾಧ್ಯತೆ:  ಟ್ವೀಟ್‌ಗಳಿಗಾಗಿ ಎಡಿಟ್ ಬಟನ್‌ನ ಮೂಲಕ ನೀವು ಟ್ವೀಟ್‌ನಲ್ಲಿನ ಟೈಪಿಂಗ್ ದೋಷಗಳು ಮತ್ತು ಇತರ ದೋಷಗಳನ್ನು ಅಳಿಸಿ ಮತ್ತು ಮರು ಟೈಪ್ ಮಾಡದೆಯೇ ಸರಿಪಡಿಸಲು ಸಾಧ್ಯವಾಗುತ್ತದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ವೈಶಿಷ್ಟ್ಯಗಳನ್ನು ಬಳಸಲು ಟ್ವಿಟರ್ ಬ್ಲೂ ಚಂದಾದಾರಿಕೆ ಪಡೆದಿರುವ ಬಳಕೆದಾರರಿಗೆ  ಮುಂಬರುವ ತಿಂಗಳುಗಳಲ್ಲಿ ಎಡಿಟ್ ಬಟನ್ ವೈಶಿಷ್ಟ್ಯವನ್ನು  ಪರೀಕ್ಷಿಸಲು ಯೋಜಿಸುತ್ತಿದೆ ಎಂದು ಟ್ವಿಟರ್ ಹೇಳಿದೆ. 

ಟ್ವಿಟರ್‌ನ ಕಂಸ್ಯೂಮರ್‌ ಪ್ರೋಡಕ್ಟ್‌ನ ಉಪಾಧ್ಯಕ್ಷ ಜೇ ಸುಲ್ಲಿವಾನ್, ಎಡಿಟ್ ಬಟನ್ "ಹಲವು ವರ್ಷಗಳಿಂದ ವಿನಂತಿಸಲಾಗುತ್ತಿದ್ದ ಟ್ವಿಟರ್ ವೈಶಿಷ್ಟ್ಯವಾಗಿದೆ, ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ. ‌

ಟ್ವಿಟರ್‌ನ ಮಾಜಿ ಸಿಇಒ  ಜಾಕ್ ಡೋರ್ಸೆಗೆ ಎಡಿಟ್‌ ಬಟನ್ ವೈಶಿಷ್ಟ್ಯವನ್ನು ಸೇರಿಸಲು ಇಷ್ಟವಿರಲಿಲ್ಲ ಏಕೆಂದರೆ ಎಡಿಟ್ ಬಟನ್ ಟ್ವೀಟ್ ವೈರಲ್ ಆದ ನಂತರ ಅದರ ಅರ್ಥವನ್ನು ಬದಲಾಯಿಸಬಹುದು ಎಂದು ಅವರು ನಂಬಿದ್ದರು. ಆದರೆ ಈಗ ಎಡಿಟ್ ಬಟನ್ ಪರೀಕ್ಷಿಸಲು ಟ್ವೀಟರ್‌ ನಿರ್ಧಾರ ಕೈಗೊಂಡಿದೆ. 

ಇದನ್ನೂ ಓದಿ: Elon Musk: ಜಗತ್ತಿನ ಶ್ರೀಮಂತ ಪುಣೆಯ ಟೆಕ್ಕಿ ಚಡ್ಡಿ ದೋಸ್ತರು!

ವಾಸ್ತವವಾಗಿ, 2020 ರಲ್ಲಿ, ಟ್ವಿಟರ್ "ಬಹುಶಃ ಎಂದಿಗೂ" ಎಡಿಟ್ ಬಟನನ್ನು ಪರಿಚಯಿಸುವುದಿಲ್ಲ ಎಂದು ಡಾರ್ಸೆ ಹೇಳಿದ್ದರು. ಆದರೆ ಟ್ವಿಟರ್‌ನ ಪ್ರಸ್ತುತ ಸಿಇಒ ಪರಾಗ್ ಅಗರವಾಲ್ ಎಡಿಟ್ ಬಟನನ್ನು ವಿಭಿನ್ನವಾಗಿ ತೆಗೆದುಕೊಳ್ಳುವಂತೆ ತೋರುತ್ತಿದೆ. ಟ್ವಿಟರ್ ಇತ್ತೀಚೆಗೆ ಏಪ್ರಿಲ್ ಮೂರ್ಖರ ದಿನದಂದು ಎಡಿಟ್ ಬಟನ್‌ನಲ್ಲಿ ಕೆಲಸ ಮಾಡುವ ಬಗ್ಗೆ ಟ್ವೀಟ್‌ ಮಾಡಿತ್ತು. 

ಎಲಾನ್‌ ಮಸ್ಕ್‌ ಟ್ವೀಟರ್‌ ಬಾಸ್: ಎಡಿಟ್ ಬಟನ್‌ಗಾಗಿ  ಟ್ವೀಟರ್‌ಗೆ ಎಲಾನ್‌ ಮಸ್ಕ್ ತರಲು ಬಯಸುವ ಬದಲಾವಣೆಗಳ ಒಂದು ಭಾಗವಾಗಿರಬಹುದು. ಮಸ್ಕ್ ಟ್ವಿಟರ್‌ನಲ್ಲಿ ಪಾಲನ್ನು ಖರೀದಿಸಿದ್ದು ಮಾತ್ರವಲ್ಲದೆ, ಅವರು ಟ್ವಿಟರ್‌ನ ಮಂಡಳಿಯನ್ನು‌ (Baord) ಸಹ ಸೇರಿಕೊಂಡಿದ್ದಾರೆ - ಇದು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ ಗಮನಾರ್ಹ ಬದಲಾವಣೆಗಳನ್ನು ತರಲು ಅವರಿಗೆ ಅನುವು ಮಾಡಿಕೊಡುತ್ತದೆ. 

ಮಸ್ಕ್ ದೀರ್ಘಕಾಲದಿಂದ ಟ್ವಿಟ್ಟರನ್ನು ಟೀಕಿಸುತ್ತಿದ್ದರು. ಸ್ವತಃ ಅನೇಕ ವಿವಾದಗಳಲ್ಲಿ ಸಿಲುಕಿರುದ್ದ ಮಸ್ಕ್ ಟ್ವಿಟರ್‌ ವಾಕ್ ಸ್ವಾತಂತ್ರ್ಯದ ಮೂಲಭೂತ ಅಂಶಗಳಿಗೆ ಬದ್ಧವಾಗಿಲ್ಲ ಎಂದು ಟೀಕಿಸಿದ್ದರು. ಟ್ವಿಟ್ಟರ್‌ನ ಅಗರವಾಲ್ ಮಸ್ಕ್ "ನಮ್ಮ ಮಂಡಳಿಗೆ ಹೆಚ್ಚಿನ ಮೌಲ್ಯವನ್ನು ತರುತ್ತಾರೆ" ಎಂದು ತಿಳಿಸಿದ್ದು ಅವರು "ಉತ್ಸಾಹಭರಿತ ನಂಬಿಕೆಯುಳ್ಳವರು ಮತ್ತು ಸೇವೆಯ ತೀವ್ರ ವಿಮರ್ಶಕರಾಗಿದ್ದಾರೆ, ಇದು ನಮಗೆ ಟ್ವಿಟ್ಟರ್‌ನಲ್ಲಿ ನಿಖರವಾಗಿ ಅಗತ್ಯವಿದೆ..." ಎಂದು ಹೇಳಿದ್ದಾರೆ 

Latest Videos
Follow Us:
Download App:
  • android
  • ios