ನ್ಯೂಯಾರ್ಕ್(ಫೆ.10): ಮಾಜಿ ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್‌ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ 2006ರಲ್ಲಿ ಹೊಂದಿದ್ದ ಲೈಂಗಿಕ ಸಂಬಂಧದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಸ್ಟ್ಯಾಂಡ್‌ ಅಪ್‌ ಕಾಮಿಡಿ ಕ್ಲಬ್‌ ಕಾರ‍್ಯಕ್ರಮದಲ್ಲಿ ವೀಕ್ಷಕರು ‘ನೀವು ಟ್ರಂಪ್‌ ಜತೆ ಕಾಂಡೋಂ ಬಳಸಿ ಸೆಕ್ಸ್‌ ನಡೆಸಿದ್ದಿರಾ?’’ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೇನಿಯಲ್‌, ‘ಆ 90 ಸೆಕೆಂಡ್‌ಗಳು ನನ್ನ ಜೀವನದ ಅತಿ ಕೆಟ್ಟಗಳಿಗೆ’ ಎಂದು ಹೇಳಿದರು.

ಟ್ರಂಪ್‌ ಜಾರಿಗೆ ತಂದಿದ್ದ 3 ವಲಸೆ ನೀತಿ ರದ್ದು!

ತಮ್ಮೊಂದಿಗೆ ಹೊಂದಿದ್ದ ಲೈಂಗಿಕ ಸಂಬಂಧವನ್ನು ಮುಚ್ಚಿಡಲು 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್‌ 1,30,000 ಡಾಲರ್‌ ನೀಡಿದ್ದರು ಎಂದು ಡೇನಿಯಲ್‌ ಆರೋಪಿಸಿದ್ದು, ಈ ಆರೋಪವನ್ನು ಟ್ರಂಪ್‌ ಅಲ್ಲಗಳೆದಿದ್ದರು. ಈ ಸಂಬಂಧ ಟ್ರಂಪ್‌ ವಿರುದ್ಧ ಡೇನಿಯಲ್‌ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದಾರೆ.