Asianet Suvarna News Asianet Suvarna News

ಟ್ರಂಪ್‌ ಜಾರಿಗೆ ತಂದಿದ್ದ 3 ವಲಸೆ ನೀತಿ ರದ್ದು!

ಟ್ರಂಪ್‌ ಜಾರಿಗೆ ತಂದಿದ್ದ 3 ವಲಸೆ ನೀತಿ ರದ್ದು| ಹೊಸ 3 ವಲಸೆ ನೀತಿಗೆ ಬೈಡೆನ್‌ ಸಹಿ| ಮಕ್ಕಳನ್ನು ಪೋಷಕರಿಂದ ಬೇರ್ಪಡಿಸಿದ್ದ ನೀತಿ ಕೂಡ ರದ್ದು

US President Biden signs 3 executive orders undoing Trump immigration policies pod
Author
Bangalore, First Published Feb 4, 2021, 12:11 PM IST

ವಾಷಿಂಗ್ಟನ್(ಫೆ.04): ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟಂಪ್‌ ಜಾರಿಗೆ ತಂದಿದ್ದ 3 ವಿವಾದಾತ್ಮಕ ವಲಸೆ ನೀತಿಗಳನ್ನು ರದ್ದುಗೊಳಿಸಿ ಹೊಸ 3 ನೀತಿಗಳಿಗೆ ನೂತನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬುಧವಾರ ಸಹಿ ಹಾಕಿದ್ದಾರೆ. ಇದರಲ್ಲಿ, ಪೋಷಕರನ್ನು ಮಕ್ಕಳಿಂದ ಬೇರ್ಪಡಿಸುವ ವಿವಾದಿತ ನೀತಿ ರದ್ದತಿಯೂ ಪ್ರಮುಖವಾದುದು.

‘ಕೆಟ್ಟನೀತಿಗಳನ್ನು ರದ್ದುಗೊಳಿಸುವುದೇ ಇದರ ಹಿಂದಿನ ಉದ್ದೇಶ. ಇವೇನೂ ಹೊಸ ಕಾನೂನುಗಳಲ್ಲ’ ಎಂದು ಜೋ ಬೈಡೆನ್‌ ತಿಳಿಸಿದ್ದಾರೆ.

ಮೊದಲನೆಯ ಆದೇಶದ ಪ್ರಕಾರ, ಸರ್ಕಾರದ ಅಧಿಕಾರಿಗಳು ಮಕ್ಕಳಿಂದ ಬೇರ್ಪಟ್ಟಪೋಷಕರನ್ನು ಒಂದುಗೂಡಿಸುವ ಕೆಲಸ ಮಾಡಲಿದ್ದಾರೆ. ಈ ಹಿಂದೆ ಟ್ರಂಪ್‌ ಅವರು, ಅಮೆರಿಕ-ಮೆಕ್ಸಿಕೋ ಗಡಿಯನ್ನು ಅಕ್ರಮವಾಗಿ ದಾಟಿ ಬಂದಿದ್ದ ವಯಸ್ಕರನ್ನು ಅವರ ಮಕ್ಕಳಿಂದ ಬೇರ್ಪಡಿಸುವ ನೀತಿ ಜಾರಿಗೊಳಿಸಿದ್ದರು. ಇದರಿಂದಾಗಿ 5,500 ಕುಟುಂಬಗಳ ಪೋಷಕರು ಹಾಗೂ ಮಕ್ಕಳು ಪ್ರತ್ಯೇಕವಾಗಿದ್ದರು. 600 ಪಾಲಕರ ಸುಳಿವೇ ಸಿಕ್ಕಿರಲಿಲ್ಲ.

ಎರಡನೇ ಆದೇಶವು, ವಲಸೆಯ ಮೂಲ ಉದ್ದೇಶವನ್ನು ಅರಿತುಕೊಳ್ಳಬೇಕು ಹಾಗೂ ಗಡಿ ದಾಟಿ ಬಂದವರಿಗೆ ಮಾನವೀಯತೆಯ ನೆಲೆಯಲ್ಲಿ ಆಶ್ರಯ ನೀಡಬೇಕು ಎಂದು ಸೂಚಿಸಲಾಗಿದೆ.

ಮೂರನೇ ಆದೇಶವು, ವಲಸೆ ವ್ಯವಸ್ಥೆಗೆ ಅಡ್ಡಿಯಾಗಿ ನಿಂತಿರುವ ನಿಯಮಗಳ ಸಮಗ್ರ ಮರುಪರಿಶೀಲನೆ ಮಾಡುವುದಾಗಿದೆ.

Follow Us:
Download App:
  • android
  • ios