ಟೀಚರ್ ಬೆಲ್ಲಿ ಡಾನ್ಸ್ ವೈರಲ್... ಮನೆಗೆ ಕಳುಹಿಸಿದ ಶಾಲೆ : ಡಿವೋರ್ಸ್ ನೀಡಿದ ಗಂಡ
- ಬೆಲ್ಲಿ ಡಾನ್ಸ್ ಮಾಡಿದ ಟೀಚರ್‌ಗೆ ಅಮಾನತಿನ ಶಿಕ್ಷೆ
- ಗುಂಪಿನಲ್ಲಿ ಡಾನ್ಸ್ ಮಾಡಿದ ಶಿಕ್ಷಕಿ ಆಯಾ ಯೂಸೆಫ್
ಈಜಿಫ್ಟ್(14): ಬೆಲ್ಲಿ ಡಾನ್ಸ್ ಮಾಡಿದ ಟೀಚರೊಬ್ಬರನ್ನು ಶಾಲೆಯ ಆಡಳಿತ ಮಂಡಳಿ ಅಮಾನತುಗೊಳಿಸಿ ಮನೆಗೆ ಕಳುಹಿಸಿದೆ. ಇತ್ತ ಟೀಚರ್ ಡಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಂಡನೂ ಈಕೆಗೆ ಡಿವೋರ್ಸ್ ನೀಡಿದ್ದಾನೆ. ಈಜಿಫ್ಟ್ ( Egypt)ನಲ್ಲಿ ಈ ಘಟನೆ ನಡೆದಿದೆ. ಈ ಡಾನ್ಸ್ ಮಹಿಳೆಯರ ಹಕ್ಕುಗಳ ಬಗ್ಗೆ ಸಂಪ್ರದಾಯವಾದಿಗಳಲ್ಲಿ ಆಕ್ರೋಶ ಮತ್ತು ರಾಷ್ಟ್ರೀಯ ಚರ್ಚೆಯನ್ನು ಈಜಿಫ್ಟ್‌ನಲ್ಲಿ ಹುಟ್ಟು ಹಾಕಿದೆ.
ವರದಿಗಳ ಪ್ರಕಾರ ಡಾನ್ಸ್ ಮಾಡಿದ ಟೀಚರ್, ಆಯಾ ಯೂಸೆಫ್ (Aya Youssef) ಅವರನ್ನು, ಅವರು ಶಿಕ್ಷಕ ವೃತ್ತಿ ನಿರ್ವಹಿಸುತ್ತಿದ್ದ ಶಾಲೆಯಿಂದ ವಜಾಗೊಳಿಸಲಾಗಿದೆ. ಜೊತೆಗೆ ನೈಲ್ ಕ್ರೂಸ್(Nile cruise) ನಲ್ಲಿ ಸಾಂಪ್ರದಾಯಿಕ ಸಂಗೀತಕ್ಕೆ ಬೆಲ್ಲಿ ನೃತ್ಯವನ್ನು ಮಾಡಿದ ಬಳಿಕ ಪತಿ ಕೂಡ ಆಕೆಗೆ ವಿಚ್ಛೇದನ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ವಿಡಿಯೋದಲ್ಲಿ ಟೀಚರ್ ಗಂಡಸರು ಇರುವ ಗುಂಪಿನೊಂದಿಗೆ ಡಾನ್ಸ್ ಮಾಡುತ್ತಿದ್ದು ತಲೆಯಿಂದ ಕಾಲಿನವರೆಗೆ ಕಪ್ಪು ಬಟ್ಟೆಯನ್ನು ಧರಿಸಿದ್ದಾಳೆ. ಯೂಸುಫ್ ಅವರ ಸಾಮಾನ್ಯ ಎನಿಸಿದ ಬೆಲ್ಲಿ ನೃತ್ಯವನ್ನು 'ಅಶ್ಲೀಲ' ಎಂದು ಬ್ರಾಂಡ್ ಮಾಡಿ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದಾದ ಬಳಿಕ ಈಜಿಫ್ಟ್‌ನ ಎಲ್ಲೆಡೆ ವಿಡಿಯೋಗೆ ಆಕ್ರೋಶ ವ್ಯಕ್ತವಾಗಿತ್ತು. ಪರಿಣಾಮ ಶಿಕ್ಷಕಿಯನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಜೊತೆಗೆ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡಿದ್ದಾನೆ.
ಇದರಿಂದ ಸಂಕಷ್ಟಕ್ಕೊಳಗಾದ ಶಿಕ್ಷಕಿ ಯೂಸೆಫ್ ಈಜಿಫ್ಟ್‌ನ ಮಾಧ್ಯಮ ಈಜಿಪ್ಟ್ ಇಂಡಿಪೆಂಡೆಂಟ್‌ಗೆ ಹೇಳಿಕೆ ನೀಡಿದ್ದು, ಈ ವಿಡಿಯೋದಿಂದ ನನ್ನ ಬದುಕು ಸರ್ವನಾಶವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಕಳಂಕ ತರಲು ಪ್ರಯತ್ನಿಸಿದ ನಿರ್ಲಜ್ಜ ವ್ಯಕ್ತಿಯಿಂದಾಗಿ ನನ್ನ ಜೀವನ ನಾಶವಾಯಿತು ಮತ್ತು ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸುವ ಸಲುವಾಗಿಯೇ ಕ್ಯಾಮರಾವನ್ನು ನನ್ನ ಹತ್ತಿರಕ್ಕೆ ತಂದರು ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ನಾನು ನಿಜವಾಗಿಯೂ ತಪ್ಪು ಮಾಡಿದ್ದೇನೆ ಏಕೆಂದರೆ ನಾನು ಪ್ರಾಮಾಣಿಕರಲ್ಲದ ಜನರೊಂದಿಗೆ ಸಂತೋಷದಿಂದ ಆಟವಾಡಿದೆ. ಆದರೆ ಜನರು ನನ್ನನ್ನು ದೂಷಿಸಿದರು ಮತ್ತು ಅವಮಾನಿಸಿದರು. ನಾನು ನನ್ನ ಕೆಲಸವನ್ನು ಕಳೆದುಕೊಂಡೆ, ನನ್ನ ಪತಿ, ನನ್ನ ಮನೆ ಮತ್ತು ನನ್ನ ತಾಯಿ ಅನಾರೋಗ್ಯಕ್ಕೆ ಒಳಗಾದರು. ಇದೆಲ್ಲದರಿಂದ ನನ್ನ ಕುಟುಂಬದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಆಕೆ ಹೇಳಿದರು.
ಪುಷ್ಪಾದ ಒ ಅಂಟವಾ ಹಾಡಿಗೆ ಸಮಂತಾ ಕೂಡ ನಾಚುವಂತೆ ಕುಣಿದ ಅಮೆರಿಕನ್ ಡ್ಯಾಡ್
ಯೂಸೆಫ್‌ಗೆ ನೀಡಿದ ಶಿಕ್ಷೆಯ ಬಗ್ಗೆ ಈಜಿಪ್ಟ್‌ನಲ್ಲಿ ಮಹಿಳಾ ಹಕ್ಕುಗಳ ಪರ ಹೋರಾಡುವ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ತುಂಬಾ ದುಃಖಕರವಾಗಿದೆ. ಇಲ್ಲಿನ ಈ ಬೇಧಭಾವದ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಲಘುವಾಗಿ ತೆಗೆದುಕೊಳ್ಳಬೇಕಾದ ಮಾನವ ಹಕ್ಕುಗಳಂತಹ ಸರಳ ವಿಷಯಗಳು ಇನ್ನೂ ಕೆಲವು ಸ್ಥಳಗಳಲ್ಲಿ ಇದುವರೆಗೂ ಇಲ್ಲ ಎಂದು ತಿಳಿಯಲು ನನಗೆ ಭಯವಾಗುತ್ತದೆ ಎಂದು ಯೂಟ್ಯೂಬ್ (YouTube) ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋ ವಿವಾದಕ್ಕೀಡಾಗಿ ಯೂಸೆಫ್ ಬದುಕಿನಲ್ಲಿ ಅನಾಹುತವಾಗಿದ್ದು, ಇದಾದ ಬಳಿಕ ಈಜಿಪ್ಟಿನ ಮಹಿಳಾ ಹಕ್ಕುಗಳ ಕೇಂದ್ರದ ಮುಖ್ಯಸ್ಥ ಡಾ. ಹಿಹಾದ್ ಅಬಿಯು ಕುಸ್ಮಾನ್ (Hihad Abiu Qusman) ಅವರು ಯೂಸೆಫ್ ಅವರನ್ನು ಭೇಟಿಯಾಗಿದ್ದು, ಅವರನ್ನು ಕೆಲಸದಿಂದ ವಜಾಗೊಳಿಸಿದ್ದರ ವಿರುದ್ಧ ದೂರು ದಾಖಲಿಸಲು ಸಹಾಯ ಮಾಡಿದರು.
ಜಬರ್‌ದಸ್ತ್ ಡಾನ್ಸ್‌ನಿಂದ ನೋರಾ ಫತೇಹಿಯನ್ನು ಇಂಪ್ರೆಸ್ ಮಾಡಿದ ತಾಂಜೇನಿಯಾ ತರುಣ
ಸಾಮಾಜಿಕ ಮಾಧ್ಯಮದಲ್ಲಿ ಶಿಕ್ಷಕಿಗೆ ಬೆಂಬಲದ ಆಸರೆ ಸಿಕ್ಕ ನಂತರ, ದಖಹ್ಲಿಯಾ (Daqahlia) ಶಿಕ್ಷಣ ನಿರ್ದೇಶನಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿತು ಮತ್ತು ಹೊಸ ಶಾಲೆಯೊಂದರಲ್ಲಿ ಅರೇಬಿಕ್ ಭಾಷೆ ಬೋಧಿಸಲು ಶಿಕ್ಷಕರಾಗಿ ಕೆಲಸ ಮಾಡಲು ಯೂಸೆಫ್‌ಗೆ ಸಹಾಯ ಮಾಡಿತು. ದಖಹ್ಲಿಯಾದಲ್ಲಿನ ಶಿಕ್ಷಣ ನಿರ್ದೇಶನಾಲಯದ ಸಹಾಯವು ತನ್ನ ಘನತೆಯನ್ನು ಎತ್ತಿ ಹಿಡಿಯುವಂತೆ ಮಾಡಿದೆ ಎಂದು ಯೂಸೆಫ್ ಹೇಳಿದರು.