ಮೇರಿ ರಾಣಿ ಹಾಡಿಗೆ ತಾಂಜೇನಿಯಾ ಹುಡುಗನ ಜಬರ್‌ದಸ್ತ್‌ ಡಾನ್ಸ್ ಕಿಲಿ ಪೌಲ್‌ ವಿಡಿಯೋವನ್ನು ಶೇರ್‌ ಮಾಡಿದ ನೋರಾ ಫತೇಹಿ ಲಕ್ಷಕ್ಕೂ ಹೆಚ್ಚು ಜನರಿಂದ ವಿಡಿಯೋ ವೀಕ್ಷಣೆ

ತಾಂಜೇನಿಯಾ: ಬಾಲಿವುಡ್‌ನ ಅನೇಕ ಹಾಡುಗಳಿಗೆ ಈಗಾಗಲೇ ಸಖತ್‌ ಆಗಿ ಹೆಜ್ಜೆ ಹಾಕಿ ಖ್ಯಾತಿ ಗಳಿಸಿರುವ ತಾಂಜೇನಿಯಾದ ಪ್ರತಿಭೆ ಕಿಲಿ ಪೌಲ್‌ (Kili Paul) ಈಗ ಮತ್ತೊಂದು ಫೇಮಸ್‌ ಡಾನ್ಸ್‌ನೊಂದಿಗೆ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದು, ಈ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ. ನೂರ್ ಫತೇಹಿ ನಟಿಸಿರುವ ಗುರು ರಂದಾವ್‌ ಹಾಗೂ ಜಹ್ರಾ ಎಸ್ ಖಾನ್‌ ಹಾಡಿರುವ ಡಾನ್ಸ್‌ ಮೇರಿ ರಾಣಿ ಹಾಡಿಗೆ ಈ ಬಾರಿ ಕಿಲಿ ಪೌಲ್‌ ಹೆಜ್ಜೆ ಹಾಕಿದ್ದಾರೆ. ಈ ವೈರಲ್ ವೀಡಿಯೋದಲ್ಲಿ ಕಿಲಿ ಪೌಲ್ ಡ್ಯಾನ್ಸ್ ಮೇರಿ ರಾಣಿ ಹಾಡಿನಲ್ಲಿರುವ ಹುಕ್ ಸ್ಟೆಪ್ಸ್‌ಗಳನ್ನು ಸಖತ್ ಆಗಿ ಹಾಕುತ್ತಿದ್ದು, ತನ್ನ ಅಮೋಘ ನೃತ್ಯದ ಮೂಲಕ ಈಗಾಗಲೇ ಸಾಕಷ್ಟು ನೆಟ್ಟಿಗರ ಗಮನ ಸೆಳೆದಿದ್ದಾನೆ.

ಹುಲ್ಲು ಬೆಳೆದ ಬಯಲಿನಲ್ಲಿ ಯಾವುದೇ ಅಡೆತಡೆ ಇಲ್ಲದೇ ನುಣುಪಾದ ನೆಲದಲ್ಲಿ ಕಾಲು ಜಾರಿಸುವಂತೆ ಹೆಜ್ಜೆ ಹಾಕುತ್ತಿರುವ ಕಿಲಿಯ ಈ ನೃತ್ಯ ಎಲ್ಲರನ್ನು ಸೆಳೆಯುತ್ತಿದೆ. ಡಾನ್ಸ್‌ ಗೊತ್ತಿದ್ದವರು ಎಂತ ಸ್ಥಳದಲ್ಲೂ ಕುಣಿಯಲು ಸಿದ್ಧರಿರುತ್ತಾರೆ ಎಂಬುದು ಈ ವಿಡಿಯೋದಿಂದ ಸಾಬೀತಾಗಿದೆ. ಡಾನ್ಸರ್‌ ನೂರ್ ಫತೇಹಿ ಹಾಕಿದ ಸ್ಟೆಪ್ಸ್‌ಗೆ ಕಿಲಿ ಪೌಲ್‌ ಲಿಪ್‌ ಸಿಂಕ್‌ ಜೊತೆ ಡಾನ್ಸ್‌ ಮಾಡಿದ್ದಾನೆ. ಈ ಹಾಡನ್ನು ತನಿಷ್ಕ್‌ ಬಗಚಿ(Tanishk Bagchi) ಸಂಯೋಜಿಸಿದ್ದಾರೆ. ಕಿಲಿ ಮಾಡಿದ ಡಾನ್ಸ್‌ ವಿಡಿಯೋವನ್ನು ನೊರಾ ಫತೇಹಿ ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದು, ಲೆಟ್ಸ್‌ ಗೋ ಅಂತ ಕ್ಯಾಪ್ಷನ್‌ ನೀಡಿದ್ದಾರೆ. ಸುಂದರವಾದ ಹೆಜ್ಜೆಗಳು. ಇದೊಂದು ಅದ್ಭುತ ಎಂದು ನೋರಾ ಪ್ರತಿಕ್ರಿಯಿಸಿದ್ದಾರೆ. 

View post on Instagram

ಕೆಲ ದಿನಗಳ ಹಿಂದಷ್ಟೇ ಕಿಲಿ ಪೌಲ್‌ ಇನ್ಸ್ಟಾಗ್ರಾಮ್‌ನಲ್ಲಿ 732 ಸಾವಿರ ಫಾಲೋವರ್‌ಗಳನ್ನು ಗಳಿಸಿದ್ದರು. ಇದರಲ್ಲಿರುವ ಬಹುತೇಕ ಫಾಲೋವರ್‌ಗಳು ಭಾರತದವರಾಗಿದ್ದಾರೆ. ಇವರು ಸಂಪ್ರದಾಯಿಕ ಮಾಸೈ ಧಿರಿಸು ಧರಿಸಿ ತಮ್ಮ ಸಹೋದರಿ ನೀಮಾ(Neema) ಜೊತೆ ಸೇರಿ ಡಾನ್ಸ್‌ ಮಾಡುತ್ತಾರೆ. ಇವರ ಡಾನ್ಸ್‌ ಕೇವಲ ಭಾರತೀಯರನಷ್ಟೇ ಆಕರ್ಷಿಸಿಲ್ಲ. ನಟರು ಗಾಯಕರು, ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಇರುವ ಗಣ್ಯರು ಕಿಲಿ ಪೌಲ್‌ ಡಾನ್ಸ್‌ನ್ನು ಇಷ್ಟ ಪಡುತ್ತಾರೆ. ಇದೇ ತಿಂಗಳು ಡಿಸೆಂಬರ್ 21 ರಂದು ಈ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಸಾರಿ ಉಟ್ಟ ನಾರಿಯ ಜಬರ್‌ದಸ್ತ್‌ ಡಾನ್ಸ್‌.. ಎರ್ರಾಬಿರ್ರಿ ಸ್ಟೆಪ್‌ಗೆ ಸುತ್ತಲಿದ್ದವರು ಗಾಬರಿ

ಡಾನ್ಸ್‌, ಹಾಡು ಮುಂತಾದವುಗಳಿಗೆ ಯಾವುದೇ ಜಾತಿ, ಭಾಷೆ, ವಯಸ್ಸು, ದೇಶದ ಗಡಿಗಳ ಹಂಗಿಲ್ಲ. ನಿಮಗೆ ನೃತ್ಯ ಗೊತ್ತಿದ್ದರೇ ಸಾಕು ಎಲ್ಲಿ ಯಾವ ಹಾಡಿಗೆ ಬೇಕಾದರೂ ನೀವು ಕುಣಿಯಬಹುದು. ಆದರೆ ಕೆಲವು ಹಾಡುಗಳು ಅವುಗಳಿಗೆ ನೀಡಿರುವ ಸಂಗೀತಾ ಇದುವರೆಗೆ ಡಾನ್ಸ್‌ ಮಾಡದವರನ್ನು ಎಗ್ಗು ಸಿಗ್ಗಿಲ್ಲದೇ ಕುಣಿಸುತ್ತವೆ. ಇತ್ತೀಚೆಗೆ ಬಾಲಿವುಡ್‌ ನಟ ಹೃತಿಕ್ ರೋಷನ್ (Hrithik Roshan) ಅವರ 'ಬ್ಯಾಂಗ್ ಬ್ಯಾಂಗ್' (Bang Bang) ಹಾಡಿಗೆ ಮಹಿಳೆಯೊಬ್ಬರು ಎರ್ರಾಬಿರ್ರಿ ಕುಣಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದು ಪಾರ್ಟಿಯೊಂದರ ದೃಶ್ಯಾವಳಿಯಾಗಿದ್ದು, ವೀಡಿಯೊದಲ್ಲಿ ಮಹಿಳೆ ಕೆಂಪು ಸೀರೆಯನ್ನು ಧರಿಸಿ ಗುಂಪಿನ ಮಧ್ಯೆ ಎದ್ದು ಬಿದ್ದು ಸಖತ್‌ ಎನರ್ಜಿಟಿಕ್‌ ಆಗಿ ಡಾನ್ಸ್‌ ಮಾಡುತ್ತಿದ್ದಾರೆ. ಇವರ ಡಾನ್ಸ್‌ಗೆ ಸುತ್ತಲು ಡಾನ್ಸ್‌ ಮಾಡುತ್ತಿದ್ದವರು ಕೂಡ ಸ್ವಲ್ಪ ಕಾಲ ತಮ್ಮ ಡಾನ್ಸ್‌ ನಿಲ್ಲಿಸಿ ಇವರಿಗೆ ಚಪ್ಪಾಳೆ ತಟ್ಟಿದ್ದಾರೆ. ಮತ್ತೆ ಕೆಲವರು ಆಶ್ಚರ್ಯದಿಂದ ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಡಾನ್ಸ್ ಮಾಡುವವರು ತಮ್ಮನ್ನು ಯಾರೂ ನೋಡುತ್ತಿಲ್ಲ ಎಂದು ಭಾವಿಸಿಕೊಂಡು ಕುಣಿಯಬೇಕು ಎಂಬ ಮಾತು ಡಾನ್ಸ್ ವಲಯದಲ್ಲಿ ಪ್ರಚಲಿತವಿದೆ. ಈ ವಿಡಿಯೋ ನೋಡಿದರೆ ಆ ಮಾತು ನಿಜ ಎಂಬುದು ಮತ್ತೆ ಸಾಬೀತಾಗಿದೆ. ಯಾರು ಬೇಕಾದರೂ ನೋಡಲಿ ಡೋಂಟ್‌ಕೇರ್‌ ಎಂಬಂತೆ ಈ ಮಹಿಳೆ ಭರ್ಜರಿಯಾಗಿ ಡಾನ್ಸ್‌ ಮಾಡಿದ್ದಾರೆ.