Asianet Suvarna News Asianet Suvarna News

ಜೇನುನೊಣಗಳ ಹಾವಳಿ: 4 ಗಂಟೆ ತಡವಾಗಿ ಹೊರಟ ವಿಮಾನ: ಪ್ರಯಾಣಿಕರ ಆಕ್ರೋಶ

ಜೇನುನೊಣಗಳ ಸಮೂಹವೊಂದು ವಿಮಾನದ ರೆಕ್ಕೆಯಲ್ಲಿ ಕುಳಿತ ಪರಿಣಾಮ ವಿಮಾನ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ವಿಶೇಷ ಘಟನೆ ಹೂಸ್ಟನ್‌ನಲ್ಲಿ ನಡೆದಿದೆ.

A swarm of bees sitting on the wing of a plane A Delta flight from Houston to Atlanta that departed 4 hour late akb
Author
First Published May 8, 2023, 5:39 PM IST

ಟೆಕ್ಸಾಸ್‌: ಜೇನುನೊಣಗಳ ಸಮೂಹವೊಂದು ವಿಮಾನದ ರೆಕ್ಕೆಯಲ್ಲಿ ಕುಳಿತ ಪರಿಣಾಮ ವಿಮಾನ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ವಿಶೇಷ ಘಟನೆ ಹೂಸ್ಟನ್‌ನಲ್ಲಿ ನಡೆದಿದೆ.  ಹೂಸ್ಟನ್‌ ವಿಮಾನ ನಿಲ್ದಾಣದಿಂದ ಅಟ್ಲಾಂಟಾಕ್ಕೆ ಹೊರಟಿದ್ದ ದೇಶಿಯ ಸಂಚಾರದ ಡೆಲ್ಟಾ ವಿಮಾನದ ರೆಕ್ಕೆಯಲ್ಲಿ ಜೇನು ನೊಣಗಳ ಗುಂಪುಗಳು ಹೋಗಿ ಕುಳಿತಿವೆ.  ದೇಶಿಯವಾಗಿ ಸೇವೆ ನೀಡುವ ಡೆಲ್ಟಾ ಏರ್‌ಲೈನ್ಸ್‌ನ ವಿಮಾನದಲ್ಲಿ ಈ ಘಟನೆ ನಡೆದಿದ್ದು,  ಸಾವಿರಕ್ಕೂ ಹೆಚ್ಚಿದ್ದ ಜೇನು ನೊಣಗಳು ವಿಮಾನದ ರೆಕ್ಕೆಯಲ್ಲಿ ಗುಂಪು ಗೂಡಿದ್ದವು. 

ಈ ಡೆಲ್ಟಾ ವಿಮಾನವೂ ಟೆಕ್ಸಾಸ್ ರಾಜಧಾನಿಯಿಂದ ಬುಧವಾರ ಮಧ್ಯಾಹ್ನ 12.25 (Eastern Time)ಕ್ಕೆ  ಹೊರಡಬೇಕಿತ್ತು. ಆದರೆ ಸಂಜೆ 4.30 ಆದರೂ ಟೇಕಾಫ್ ಆಗಲು ಸಾಧ್ಯವಾಗಿಲ್ಲ ಎಂದು ಫ್ಲೈಟ್ ಎವೇರ್. ಕಾಮ್ ವರದಿ ಮಾಡಿದೆ. ಜಾರ್ಜ್ ಬುಷ್ ಇಂಟರ್‌ಕಾಂಟಿನೆಂಟಲ್ ಏರ್‌ಪೋರ್ಟ್‌ನಲ್ಲಿದ್ದ (George Bush Intercontinental Airport) ಈ ವಿಮಾನದಲ್ಲಿ ಪತ್ರಕರ್ತೆ ಹಾಗೂ ಲೇಖಕರು ಆದ ಅಂಜಲಿ ಇಂಜೆಟಿ ಕೂಡ ಇದ್ದು, ಅವರು ಈ ಘಟನೆಯನ್ನು ವಿಡಿಯೋ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

Viral Video : ನೀರಿನಲ್ಲಿ ಬಿದ್ದು ಒದ್ದಾಡ್ತಿದ್ದ ಸ್ನೇಹಿತನ ಪ್ರಾಣ ಉಳಿಸಿದ ಜೇನ್ನೊಣ! 

 

ಒಂದು ರೆಕ್ಕೆಯ ತುದಿಯಲ್ಲಿ ಜೇನುನೊಣಗಳು ಒಟ್ಟುಗೂಡಿದ ಕಾರಣ ಹೂಸ್ಟನ್‌ನಿಂದ ಹೊರಡುವ ನನ್ನ ವಿಮಾನ ವಿಳಂಬವಾಗಿದೆ. ಅವರು ಜೇನುನೊಣಗಳನ್ನು ತೆಗೆಯುವವರೆಗೂ ನಮ್ಮನ್ನು ಹತ್ತಲು ಬಿಡುವುದಿಲ್ಲ, ಆದರೆ ಭೂಮಿಯ ಮೇಲೆ ಇದು ಹೇಗೆ ಸಾಧ್ಯ? ನಾವು ಟೇಕಾಫ್ ಮಾಡಿದಾಗ ನೊಣಗಳು ರೆಕ್ಕೆ ಬಿಡುವುದಿಲ್ಲವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ. 

ಅಲ್ಲದೇ ಏರ್‌ಪೋರ್ಟ್ ಸಿಬ್ಬಂದಿ ಜೇನುನೊಣಗಳನ್ನು ಓಡಿಸಲು ವಿಳಂಬ ಮಾಡಿದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣದ ನಿಯಮಗಳ  ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.  ರೂಲ್ಸ್ ನಂಬರ್ 1) ಬೀ ಕೀಪರ್‌ಗೆ (ಜೇನು ಸಾಕಾಣಿಕೆದಾರರು ವಿಮಾನಗಳನ್ನು ಮುಟ್ಟಲು ಅನುಮತಿ ಇಲ್ಲ ಆದ್ದರಿಂದ ಅವರು ಬರುವುದಿಲ್ಲ 2) ಕೀಟ ನಿಯಂತ್ರಣವನ್ನು ವಿಮಾನಗಳಿಗೆ ಸಿಂಪಡಿಸಲು ಅನುಮತಿ ಇಲ್ಲ. 3) ಅವುಗಳನ್ನು ನೀರೆರಚಿ ಓಡಿಸಲು ವಿಮಾನ ನಿಲ್ದಾಣದಲ್ಲಿ ಕೊಳವೆ ಇಲ್ಲ! 4) ಅಗ್ನಿಶಾಮಕ ದಳದವರು ಬರಲು ಸಾಧ್ಯವಿಲ್ಲ ಎಂದು ಅಂಜಲಿ ವಿವರಿಸಿದರು.

ಕಟ್ಟಡದ ತುದಿಯಲ್ಲಿದ್ದ ಜೇನುಗೂಡಿನ ಮೇಲೆ ಹಕ್ಕಿಯ ದಾಳಿ: ವೈರಲ್ ವಿಡಿಯೋ

ರೆಕ್ಕೆಯಲ್ಲಿ ಕುಳಿತ ಜೇನು ನೊಣಗಳನ್ನು ಓಡಿಸಲು ಹಲವು ಪ್ರಯತ್ನಗಳ ನಂತರ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದರು. ನಂತರ ವಿಮಾನದ ಸಿಬ್ಬಂದಿ ಎಲ್ಲರೂ ಕೆಳಗಿಳಿದರು. ನಂತರ ಡೆಲ್ಟಾ ನಮಗೆ ಬೇರೆ ವಿಮಾನ ನೀಡಲು ನಿರ್ಧರಿಸಿತು. ಆದರೆ ಪ್ಲೇನ್‌ನ ಇಂಜಿನ್ ಆನ್ ಆಗುತ್ತಿದ್ದಂತೆ ಜೇನು ನೊಣಗಳೆಲ್ಲಾ ಅಲ್ಲಿಂದ ಓಟ ಕಿತ್ತವು. ಏನೇನು ಮಾಡುವ ಬದಲು ಕೇವಲ ವಿಮಾನದ ಇಂಜಿನ್ ಆನ್ ಮಾಡಿದ್ದರೆ ಸಾಕಿತ್ತು.  ಆದರೆ ಸುಮ್ಮನೇ ಏನೇನೋ ಮಾಡಲು ಹೋಗಿ ಪ್ರಯಾಣಿಕರ ಸಮಯವನ್ನು ಡೆಲ್ಟಾ ಏರ್‌ಲೈನ್ಸ್ ವ್ಯರ್ಥಗೊಳಿಸಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದಾದ ಬಳಿಕ ವಿಮಾನಯಾನ ಸಿಬ್ಬಂದಿ ವಿಮಾನ ಪ್ರಯಾಣಿಕರಲ್ಲಿ ಘಟನೆ ಬಗ್ಗೆ ಕ್ಷಮೆ ಕೇಳಿದ್ದು, ನಿನ್ನೆ ನಮ್ಮ ವಿಮಾನದ ರೆಕ್ಕೆಗಳ ಮೇಲೆ ಒಟ್ಟುಗೂಡಿದ ಜೇನುನೊಣಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಮತ್ತು ನಿರ್ಗಮನದ ಸಮಯದಲ್ಲಿ ನಮ್ಮ ವಿಮಾನದ ಯಾವುದೇ ಮೇಲ್ಮೈಗಳು ಕಲುಷಿತವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಈ ಹಾರಾಟವನ್ನು ವಿಳಂಬಗೊಳಿಸಬೇಕಾಗಿದೆ ಎಂದು ಡೆಲ್ಟಾ ಹೇಳಿದೆ.

 

Follow Us:
Download App:
  • android
  • ios