ಮಿಯಾಮಿಯಲ್ಲಿ ನೃತ್ಯ ಮಾಡುತ್ತಿರುವವರ ಗುಂಪು ಸೇರಿ ಕುಣಿದ ಸಿಖ್‌ ವ್ಯಕ್ತಿ ಅಪರಿಚಿತನನ್ನು ತುಂಬು ಹೃದಯದಿಂದ ಸ್ವಾಗತಿಸಿದ ಜನ ಸಮೀಂದರ್ ಸಿಂಗ್‌ ದಿಡ್ಸಾ ಡಾನ್ಸ್‌ಗೆ ಬೆರಗಾದ ಮಿಯಾಮಿ ಜನ

ಡಾನ್ಸ್‌ ಮಾಡುವುದನ್ನು ಇಷ್ಟ ಪಡುವವರು ಎಲ್ಲಿದ್ದರೂ ಡಾನ್ಸ್‌ ಮಾಡುತ್ತಾರೆ ಅದರಲ್ಲೂ ಡಾನ್ಸ್‌ ಮಾಡುವ ಟೀಮ್‌ಗಳಿದ್ದಲ್ಲಿ ಮಧ್ಯೆ ಸೇರಿಕೊಂಡು ಅವರೊಂದಿಗೆ ಬೆರೆತು ಡಾನ್ಸ್‌ ಮಾಡುತ್ತಾ ಎಂಜಾಯ್‌ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬರು ಸಿಖ್ ವ್ಯಕ್ತಿಯೊಬ್ಬರು ಅಮೆರಿಕಾದ ಫ್ಲೋರಿಡಾದಲ್ಲಿ ಬರುವ ಮಿಯಾಮಿಯಲ್ಲಿ ಡಾನ್ಸ್‌ ಮಾಡುತ್ತಿರುವ ಅಪರಿಚಿತ ವ್ಯಕ್ತಿಗಳ ಮಧ್ಯೆ ಸೇರಿಕೊಂಡು ತಾವು ಕೂಡ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಖ್ ವ್ಯಕ್ತಿಯ ನಡೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. 

ಸಮೀಂದರ್ ಸಿಂಗ್‌ ದಿಡ್ಸಾ (Saminder Singh Dhindsa) ಎಂಬವರು ಮಿಯಾಮಿಯಲ್ಲಿ ಅಲ್ಲಿನ ಸ್ಥಳೀಯರು ಗುಂಪಾಗಿ ಡಾನ್ಸ್‌ ಮಾಡುವುದನ್ನು ನೋಡುತ್ತಾರೆ. ನಂತರ ನಿಧಾನವಾಗಿ ಅವರ ಗುಂಪನ್ನು ಸೇರುವ ಅವರು ಹಿಪ್‌ಹಾಪ್‌ನಿಂದ ಭಂಗ್ರಾದವರೆಗೆ ಎಲ್ಲ ಡಾನ್ಸ್‌ಗಳನ್ನು ಮಿಕ್ಸ್‌ಪ್‌ ಮಾಡಿ ಕುಣಿಯುತ್ತಾರೆ. ಇತ್ತ ಡಾನ್ಸ್‌ ಮಾಡುತ್ತಾ ತಮ್ಮ ಗುಂಪಿಗೆ ಬಂದ ಪರಕೀಯನನ್ನು ಹೊರಗಿನವನು ಎಂದು ಕಾಣದೇ ಅಷ್ಟೇ ಪ್ರೀತಿಯಿಂದ ಸ್ವಾಗತಿಸುವ ಮಿಯಾಮಿ ಜನ ಸಮೀಂದರ್ ಸಿಂಗ್ ದಿಡ್ಸಾ ಅವರ ಡಾನ್ಸ್‌ ನೋಡಿ ಬೆರಗಾಗುತ್ತಾರೆ ಅಷ್ಟೇ ಅಲ್ಲದೇ ಅವರೊಂದಿಗೆ ತಾವು ಕುಣಿಯುತ್ತಾ ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸುತ್ತಾರೆ. 

View post on Instagram

ಈ ವಿಡಿಯೋವನ್ನು ಸ್ವತಃ ಸಮೀಂದರ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ಮಿಯಾಮಿ ಜಾನಪದ ನೃತ್ಯ ಮಾಡುತ್ತಿದ್ದವರ ಗುಂಪಿನೊಂದಿಗೆ ಸೇರಿ ನಾನು ನೃತ್ಯ ಮಾಡಲು ಶುರು ಮಾಡಿದಾಗ ಹುಡುಗರು ನನ್ನನ್ನು ಪ್ರೋತ್ಸಾಹಿಸಿದರು ಎಂದು ಅವರು ಬರೆದುಕೊಂಡಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಿಖ್‌ ವ್ಯಕ್ತಿ ಮಿಯಾಮಿಯಲ್ಲಿ ವೈಬ್ಸ್‌ ಚೆಕ್ ಮಾಡಿದಾಗ ಎಂದು ಕ್ಯಾಪ್ಷನ್ ನೀಡಲಾಗಿದೆ. ಇನ್ನು ಈ ವಿಡಿಯೋಗೆ ತುಂಬಾ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಸಿಖ್‌ಎಕ್ಸ್‌ಪೋ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಅಪ್ಲೋಡ್ ಮಾಡಲಾಗಿದ್ದು ಲಕ್ಷಾಂತರ ಜನ ಲೈಕ್ಸ್ ಮಾಡಿದ್ದಾರೆ. ಮಿಯಾಮಿಯಲ್ಲಿ ಸಿಂಗ್‌ ಈಗಲೂ ಕಿಂಗ್‌ ಎಂದು ಬರೆಯಲಾಗಿದೆ.

ಡೊಲಿಡಾ ಹಾಡಿಗೆ ಐಫೆಲ್ ಟವರ್ ಮುಂದೆ ಕುಣಿದ ಮಹಿಳೆಯರು

ಮನೆ ಕಳೆದುಕೊಂಡು ದುಃಖಿತನಾದ ಬಾಲಕನ ಮುಂದೆ ಅಗ್ನಿಶಾಮಕ ಸಿಬ್ಬಂದಿ ಕುಣಿಯುವ ಮೂಲಕ ದುಃಖಿತನಾದ ಆತನ ಮುಖದಲ್ಲಿ ನಗು ತರಿಸಿದ ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬ್ರೆಜಿಲಿಯನ್ ಅಗ್ನಿಶಾಮಕ ಸಿಬ್ಬಂದಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೋಡುಗರು ಅಗ್ನಿಶಾಮಕ ಸಿಬ್ಬಂದಿಯ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಗುಡ್ ನ್ಯೂಸ್ ವರದಿಗಾರ ಟ್ವಿಟ್ಟರ್‌ನಲ್ಲಿ (twitter) ಹಂಚಿಕೊಂಡಿರುವ ವೀಡಿಯೊದಲ್ಲಿ, ಅಗ್ನಿಶಾಮಕ ಸಿಬ್ಬಂದಿಯ ಗುಂಪು ನೋಮ್(Noam) ಎಂಬ ಪುಟ್ಟ ಹುಡುಗನ ಸುತ್ತಲೂ ನೃತ್ಯ ಮಾಡುವುದನ್ನು ತೋರಿಸುತ್ತಿದೆ. ಬ್ರೆಜಿಲ್‌ನಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊವು ರಿಯೊ ಡಿ ಜನೈರೊ (Rio de Janeiro) ರಾಜ್ಯದ ಪರ್ವತ ಪ್ರದೇಶದಿಂದ ಪ್ರವಾಹದಂತೆ ನುಗ್ಗಿ ಬಂದ ಮಣ್ಣಿನಿಂದಾಗಿ ತನ್ನ ಮನೆಯನ್ನು ಕಳೆದುಕೊಂಡ ಪುಟ್ಟ ಹುಡುಗನನ್ನು ತೋರಿಸುತ್ತಿದೆ. 

ಮನೆ ಕಳೆದುಕೊಂಡ ದುಃಖಿತನಾದ ಬಾಲಕನೆದುರು ಕುಣಿದು ಖುಷಿಪಡಿಸಿದ್ರು... ವಿಡಿಯೋ
ಟ್ವಿಟರ್‌ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋದಲ್ಲಿ ಅಗ್ನಿಶಾಮಕ ದಳದ (FireFighters)ಗುಂಪು ನೋಮ್ ಎಂಬ ಹೆಸರಿನ ಪುಟ್ಟ ಬಾಲಕನ ಸುತ್ತ ನೃತ್ಯ ಮಾಡುತ್ತಿದ್ದು, ಈ ವೇಳೆ ಬಾಲಕ ನೋಮ್‌ ತನ್ನ ಆಟಿಕೆಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಮಧ್ಯೆ ನಿಂತಿದ್ದು, ತನ್ನ ಸುತ್ತ ನೃತ್ಯ(dance) ಮಾಡುತ್ತಿರುವ ಅಗ್ನಿಶಾಮಕ ಸಿಬ್ಬಂದಿಯನ್ನೇ ನೋಡುತ್ತ ಅವರ ನೃತ್ಯವನ್ನು ಆನಂದಿಸುತ್ತಾನೆ.