ಭೂ ಕುಸಿತದಿಂದ ಮನೆ ಕಳೆದುಕೊಂಡಿದ್ದ ಬಾಲಕ ಬಾಲಕನ ಸುತ್ತಲೂ ಕುಣಿದು ಖುಷಿಪಡಿಸಿದ ಅಗ್ನಿಶಾಮಕ ಸಿಬ್ಬಂದಿ ಮನೆ ಕಳೆದುಕೊಂಡ ಬಾಲಕನ ಮೊಗದಲ್ಲಿ ನಗು ತರಿಸಿದ ಸಿಬ್ಬಂದಿ

ಮನೆ ಕಳೆದುಕೊಂಡು ದುಃಖಿತನಾದ ಬಾಲಕನ ಮುಂದೆ ಅಗ್ನಿಶಾಮಕ ಸಿಬ್ಬಂದಿ ಕುಣಿಯುವ ಮೂಲಕ ದುಃಖಿತನಾದ ಆತನ ಮುಖದಲ್ಲಿ ನಗು ತರಿಸಿದ್ದಾರೆ. ಬ್ರೆಜಿಲಿಯನ್ ಅಗ್ನಿಶಾಮಕ ಸಿಬ್ಬಂದಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೋಡುಗರು ಅಗ್ನಿಶಾಮಕ ಸಿಬ್ಬಂದಿಯ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುಡ್ ನ್ಯೂಸ್ ವರದಿಗಾರ ಟ್ವಿಟ್ಟರ್‌ನಲ್ಲಿ (twitter) ಹಂಚಿಕೊಂಡಿರುವ ವೀಡಿಯೊದಲ್ಲಿ, ಅಗ್ನಿಶಾಮಕ ಸಿಬ್ಬಂದಿಯ ಗುಂಪು ನೋಮ್(Noam) ಎಂಬ ಪುಟ್ಟ ಹುಡುಗನ ಸುತ್ತಲೂ ನೃತ್ಯ ಮಾಡುವುದನ್ನು ತೋರಿಸುತ್ತಿದೆ. ಬ್ರೆಜಿಲ್‌ನಲ್ಲಿ ರೆಕಾರ್ಡ್ ಮಾಡಲಾದ ವೀಡಿಯೊವು ರಿಯೊ ಡಿ ಜನೈರೊ (Rio de Janeiro) ರಾಜ್ಯದ ಪರ್ವತ ಪ್ರದೇಶದಿಂದ ಪ್ರವಾಹದಂತೆ ನುಗ್ಗಿ ಬಂದ ಮಣ್ಣಿನಿಂದಾಗಿ ತನ್ನ ಮನೆಯನ್ನು ಕಳೆದುಕೊಂಡ ಪುಟ್ಟ ಹುಡುಗನನ್ನು ತೋರಿಸುತ್ತಿದೆ. 

Scroll to load tweet…

ಟ್ವಿಟರ್‌ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋದಲ್ಲಿ ಅಗ್ನಿಶಾಮಕ ದಳದ (FireFighters)ಗುಂಪು ನೋಮ್ ಎಂಬ ಹೆಸರಿನ ಪುಟ್ಟ ಬಾಲಕನ ಸುತ್ತ ನೃತ್ಯ ಮಾಡುತ್ತಿದ್ದು, ಈ ವೇಳೆ ಬಾಲಕ ನೋಮ್‌ ತನ್ನ ಆಟಿಕೆಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಮಧ್ಯೆ ನಿಂತಿದ್ದು, ತನ್ನ ಸುತ್ತ ನೃತ್ಯ(dance) ಮಾಡುತ್ತಿರುವ ಅಗ್ನಿಶಾಮಕ ಸಿಬ್ಬಂದಿಯನ್ನೇ ನೋಡುತ್ತ ಅವರ ನೃತ್ಯವನ್ನು ಆನಂದಿಸುತ್ತಾನೆ. 

ಫೈರ್ ಫೈಟರ್ ಅಪ್ಪನ ಫೋಟೋ ಶೇರ್ ಮಾಡಿದ ಮಗಳು: ನೆಟ್ಟಿಗರು ಭಾವುಕ!

ಮನೆ ಕಳೆದುಕೊಂಡು ಬೇಸರದಲ್ಲಿದ್ದ ಪುಟ್ಟ ನೋಮ್ ಅನ್ನು ಖುಷಿ ಪಡಿಸಲು ಅಗ್ನಿಶಾಮಕ ಸಿಬ್ಬಂದಿ ಮಾಡಿದ ಒಂದು ಉತ್ತಮ ಪ್ರಯತ್ನ ಇದಾಗಿದೆ. ಕಳೆದ ತಿಂಗಳು ಬ್ರೆಜಿಲ್‌ನಲ್ಲಿ ಸಂಭವಿಸಿದ ಪ್ರವಾಹ(flood) ಮತ್ತು ಭೂ ಕುಸಿತದ (landslide) ಪರಿಣಾಮವಾಗಿ ನೋಮ್ ಮತ್ತು ಅವರ ಕುಟುಂಬವು ತಮ್ಮ ಮನೆಯನ್ನು ಕಳೆದುಕೊಂಡಿತು. 'ತುಂಬಾ ನೋವು ಮತ್ತು ಹತಾಶೆಯ ನಡುವೆ, ಈ ಕ್ಷಣವು, ಅವ್ಯವಸ್ಥೆಯ ನಡುವೆ ಹೊಸ ಆರಂಭದ ಭರವಸೆಯನ್ನು ನೀಡುತ್ತದೆ' ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ಮಣಿಪುರದ ಕಲಾವಿದರೊಂದಿಗೆ ಸಖತ್ ಸ್ಟೆಪ್‌ ಹಾಕಿದ ಸಚಿವೆ ಸ್ಮೃತಿ ಇರಾನಿ

ವೀಡಿಯೊವನ್ನು 12 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಗ್ನಿಶಾಮಕ ದಳದವರು ಇಂತಹ ಅದ್ಭುತ ಕೆಲಸ ಮಾಡುತ್ತಿರುವುದನ್ನು ನೋಡಿ ಕೆಲವರು ಸಂತೋಷಪಟ್ಟರೆ, ಇನ್ನು ಕೆಲವರು ಪುಟ್ಟ ನೋಮ್ ಮತ್ತು ಅವರ ಕುಟುಂಬಕ್ಕೆ ಶುಭ ಹಾರೈಸಿದರು. ಮಂಗಳವಾರದಂದು ಬ್ರೆಜಿಲ್‌ನ ಪೆಟ್ರೋಪೊಲಿಸ್ (Petropolis)ನಗರವು ಜಲಪ್ರಳಯದಿಂದ ತತ್ತರಿಸಿತ್ತು, ಪರಿಣಾಮ ರಕ್ಷಣಾ ಕಾರ್ಯ ನಡೆಸುತ್ತಿರುವ ಸಿಬ್ಬಂದಿ ಅವಶೇಷಗಳಡಿ ಇರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ದುರಂತದಲ್ಲಿ ಮೃತರ ಸಂಖ್ಯೆ ಹೆಚ್ಚು ಸಾಧ್ಯತೆ ಇದೆ ಎಂದು ಮೇಯರ್ ರೂಬೆನ್ಸ್ ಬೊಮ್ಟೆಂಪೊ (Rubens Bomtempo) ಹೇಳಿದ್ದಾರೆ. 

ಇತ್ತೀಚೆಗೆ ಶಿರಸಿ ತಾಲೂಕಿನ ಬರೂರು ಶ್ರೀ ಲಕ್ಷ್ಮೀ ನರಸಿಂಹದ ದೇವಸ್ಥಾನದ ಪುನರ್ ಪ್ರತಿಷ್ಠೆಯಲ್ಲಿ ಭಾಗವಹಿಸಿದ್ದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಗಿಲಿಗಚ್ಚಿ ಬಾರಿಸಿ ಹೆಜ್ಜೆ ಹಾಕಿದರು. ಸ್ಪೀಕರ್‌ ವಿಶೇಷ ಕಲೆಯಾದ ಸಾಂಪ್ರದಾಯಿಕ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.