ಶವಯಾತ್ರೆ ವೇಳೆ ಪೆಟ್ಟಿಗೆಯೊಳಗಿಂದ ಟಕ್‌ ಟಕ್‌ ಸದ್ದು : ಪೆಟ್ಟಿಗೆ ತೆರೆದು ನೋಡಿದವರಿಗೆ ಶಾಕ್

  • ಶವ ಪೆಟ್ಟಿಗೆಯೊಳಗೆ ಟಕ ಟಕ ಸೌಂಡ್‌
  • ಮುಚ್ಚಳ ತೆಗೆದು ನೋಡಿದಾಗ ಕಣ್ಣು ಬಿಟ್ಟ ಮಹಿಳೆ
  • ದಕ್ಷಿಣ ಅಮೆರಿಕಾದ ಪೆರುವಿನಲ್ಲಿ ಘಟನೆ
     
A regular funeral in Peru ended up being shocking and dramatic akb

ಪೆರು: ಶವಯಾತ್ರೆ ವೇಳೆ, ಚಿತೆಗೆ ಬೆಂಕಿ ಕೊಡುವ ವೇಳೆ, ಸಮಾಧಿ ಮಾಡುವ ವೇಳೆ, ಸತ್ತವರು ಎದ್ದು ಕುಳಿತ ಉಸಿರಾಡುತ್ತಿದ್ದ ಹಲವು ಘಟನೆಗಳನ್ನು ನೀವು ನಮ್ಮ ದೇಶದಲ್ಲಿ ಈಗಾಗಲೇ ನಡೆದಿರುವುದನ್ನು ಕೇಳಿರಬಹುದು. ಆದರೆ ಈಗ ದಕ್ಷಿಣ ಅಮೆರಿಕಾದ ಪೆರುವಿನಲ್ಲೂ ಇಂತಹದೊಂದು ಘಟನೆ ನಡೆದಿದ್ದು, ಶವಯಾತ್ರೆ ನಡೆಸುತ್ತಿದ್ದವರನ್ನು ಬೆಚ್ಚಿ ಬೀಳುವಂತೆ ಮಾಡಿದೆ. 

ಅಪಘಾತವೊಂದರಲ್ಲಿ ರೋಸಾ ಇಸಾಬೆಲ್ ಸೆಸ್ಪೆಡೆಸ್ ಕಲ್ಲಾಕಾ ( Rosa Isabel Cespedes Callaca) ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ ಪರಿಣಾಮ ಅವರ ಕುಟುಂಬವು ಏಪ್ರಿಲ್ 26 ರಂದು ಲಂಬಾಯೆಕ್ ನಗರದಲ್ಲಿ ಅಂತಿಮ ನಮನ ಸಲ್ಲಿಸಲು ಜಮಾಯಿಸಿದರು. ಈ ವೇಳೆ ಅಂತ್ಯಸಂಸ್ಕಾರಕ್ಕಾಗಿ ಮರದ ಶವಪೆಟ್ಟಿಗೆಯಲ್ಲಿ ಶವವನ್ನು ಹಾಕಿ ಪೆಟ್ಟಿಗೆಗೆ ಹೆಗಲು ಕೊಟ್ಟು ಶವವನ್ನು ಸ್ಮಶಾನಕ್ಕೆ ಸಾಗಿಸಲು ಶುರು ಮಾಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೆ ಶವ ಪೆಟ್ಟಿಗೆ ಒಳಗಿನಿಂದ ಟಕ ಟಕ ಬಡಿಯುತ್ತಿರುವ ಸದ್ದು ಶವ ಹೊತ್ತವರಿಗೆ ಕೇಳಿ ಬಂದಿದೆ. 

ಮೃತ ಎಂದು ಘೋಷಿಸಿದ ವ್ಯಕ್ತಿ ಮನೆಯಲ್ಲಿ ಎದ್ದು ಕುಳಿತ!

ಹೀಗಾಗಿ ಕೂಡಲೇ ಪೆಟ್ಟಿಗೆಯನ್ನು ಕೆಳಗಿಳಿಸಿದ ಸಿಬ್ಬಂದಿ ಅದರ ಮುಚ್ಚಳವನ್ನು ತೆರೆದಾಗ ಅವರಿಗೆ ಶಾಕ್ ಕಾದಿತ್ತು. ರೋಸಾ ಇಸಾಬೆಲ್ ದೇಹದಲ್ಲಿ ಜೀವಂತಿಕೆ ಕಂಡು ಬಂದಿದ್ದು, ಆಕೆ ಇವರತ್ತ ಇಣುಕಿ ನೋಡುತ್ತಿದ್ದಳು. ಇದರಿಂದ ಶಾಕ್‌ಗೊಳಗಾದ ಸಂಬಂಧಿಗಳು ಕೂಡಲೇ ರೋಸಾಳನ್ನು ಸಮೀಪದ ಆಸ್ಪತ್ರೆಗೆ ಕರೆ ತಂದರು. ಅಲ್ಲಿ ಆಕೆ ಜೀವನದ ದುರ್ಬಲ ಲಕ್ಷಣಗಳನ್ನು ಹೊಂದಿದ್ದಳು. ನಂತರ ತಕ್ಷಣವೇ ಆಕೆಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು (life-support system) ಜೋಡಿಸಲಾಯಿತು.

ಈ ವೇಳೆ ಆಕೆ ಕಣ್ಣು ತೆರೆದಿದ್ದು, ಬೆವರುತ್ತಿದ್ದಳು. ಕೂಡಲೇ ನಾನು ನನ್ನ ಕಚೇರಿಗೆ ತೆರಳಿ ಪೊಲೀಸರಿಗೆ ಕರೆ ಮಾಡಿದೆ ಎಂದು ಸ್ಮಶಾನದ ಕೇರ್ ಟೇಕರ್ ಆದ ಜುವಾನ್ ಸೆಗುಂಡೋ ಕಾಜೊ(Juan Segundo Cajo) ಮಾಧ್ಯಮಗಳಿಗೆ ಹೇಳಿದ್ದಾರೆ.

ಆದರೆ ದುರಂತವೆಂದರೆ ಆಕೆಯ ಸ್ಥಿತಿ ನಂತರದ ಕೆಲ ಗಂಟೆಗಳಲ್ಲಿ ತೀವ್ರವಾಗಿ ಕ್ಷೀಣಿಸಿದ್ದು, ಅದೇ ದಿನ ಆಕೆ ಸಾವನ್ನಪ್ಪಿದ್ದಾಳೆ. ಇದಾದ ಬಳಿಕ ಆಕೆಯ ಸಂಬಂಧಿಗಳು ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಹೊರಿಸಿದ್ದಾರೆ. ಆದರೆ ಈ ಬಗ್ಗೆ ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ. 

ಅಂತ್ಯಕ್ರಿಯೆ ವೇಳೆ ಚಟ್ಟದ ಮೇಲಿಂದ ಎದ್ದ ಅಜ್ಜಿ, ಬೆಚ್ಚಿ ಬಿದ್ದ ಜನ!

ಶವ ಸಂಸ್ಕಾರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ನಮ್ಮ ಸೊಸೆ ಏಕೆ ಪ್ರತಿಕ್ರಿಯಿಸಿದಳು. ಆಕೆ ಶವ ಪೆಟ್ಟಿಗೆಯನ್ನು ತಳ್ಳುತ್ತಿರುವುದು ಮುಟ್ಟುತ್ತಿರುವುದು ಕಂಡು ಬಂದಿದೆ ಎಂದು ಹೆಸರು ತಿಳಿಯದ ಮಹಿಳೆಯೊಬ್ಬಳು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.  ಏಪ್ರಿಲ್ 26 ರಂದು ಪೆರುವಿನ ಚಿಕ್ಲಾಯೊ-ಪಿಕ್ಸಿ ರಸ್ತೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಅಪಘಾತದಲ್ಲಿ ರೋಸಾ ಅವರ ಸೋದರ ಮಾವ ಪ್ರಾಣ ಕಳೆದುಕೊಂಡಿದ್ದರು. ಅಲ್ಲದೇ ಆಕೆಯ ಸೋದರಳಿ ತೀವ್ರವಾಗಿ ಗಾಯಗೊಂಡಿದ್ದರು. ಅಲ್ಲದೇ ರೋಸಾ ಕೂಡ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರಿಂದ ಶವ ಸಂಸ್ಕಾರ ಮಾಡಲು ನಿರ್ಧರಿಸಲಾಗಿತ್ತು. ಈ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ.

Latest Videos
Follow Us:
Download App:
  • android
  • ios