ಇಲ್ಲೊಂದು ಕಡೆ ಬೃಹದಾಕಾರದ ಗೋಡೆಯಂತೆ ಕಾಣುವ ಮಂಜುಗಡ್ಡೆಯೊಂದು ನೈಸರ್ಗಿಕವಾಗಿ ಸೃಷ್ಟಿಯಾಗಿದ್ದು, ನೋಡುಗರನ್ನು ವಿಸ್ಮಯಕ್ಕೆ ದೂಡಿದೆ. ಅಂದಹಾಗೆ ಈ ದೈತ್ಯಾಕಾರದ ಮಂಜುಗಡ್ಡೆ ಕಾಣಿಸಿದ್ದು, ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕರಾವಳಿಯಲ್ಲಿ.
ನ್ಯೂಫೌಂಡ್ ಲ್ಯಾಂಡ್: ಪ್ರಕೃತಿ ಸದಾಕಾಲ ತನ್ನ ವೈವಿಧ್ಯತೆಯಿಂದ ನಮ್ಮನ್ನು ವಿಸ್ಮಯಗೊಳಿಸುತ್ತಲೇ ಇರುತ್ತದೆ. ಪ್ರಕೃತಿಯ ಕೆಲ ವಿದ್ಯಮಾನಗಳು ಸದಾ ಅದ್ಭುತವಾಗಿದ್ದು, ನಾವು ಅಚ್ಚರಿಯಿಂದ ನೋಡುವಂತೆ ಮಾಡುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಬೃಹದಾಕಾರದ ಗೋಡೆಯಂತೆ ಕಾಣುವ ಮಂಜುಗಡ್ಡೆಯೊಂದು ನೈಸರ್ಗಿಕವಾಗಿ ಸೃಷ್ಟಿಯಾಗಿದ್ದು, ನೋಡುಗರನ್ನು ವಿಸ್ಮಯಕ್ಕೆ ದೂಡಿದೆ. ಅಂದಹಾಗೆ ಈ ದೈತ್ಯಾಕಾರದ ಮಂಜುಗಡ್ಡೆ ಕಾಣಿಸಿದ್ದು, ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕರಾವಳಿಯಲ್ಲಿ.
ಸೈನ್ಸ್ ಗರ್ಲ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಕೆನಡಾದ ನ್ಯೂ ಫೌಂಡ್ ಲ್ಯಾಂಡ್ ಬಳಿ ಸಮುದ್ರ ತೀರದ ಸಮೀಪದಲ್ಲೇ ಕಾಣಿಸಿಕೊಂಡ ಬೃಹತ್ ಗಾತ್ರದ ಮಂಜುಗಡ್ಡೆ ತೇಲುತ್ತಾ ತೀರದತ್ತ ಬರುವುದನ್ನು ಕಾಣಬಹುದಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಇದು ಸಮುದ್ರದಲ್ಲಿ ತೇಲುತ್ತಿದ್ದು, ಗೋಡೆಯಷ್ಟು ಎತ್ತರ ಮೈದಾನದಷ್ಟು ಉದ್ದವಿರುವಂತೆ ಕಾಣುತ್ತಿದೆ. ದೈತ್ಯ ಅಲೆಯೂ ಇಲ್ಲಿ ಕಾಣಿಸಿಕೊಂಡರೆ ಈ ಮಂಜುಗಡ್ಡೆ ತೀರಕ್ಕೆ ಬಂದು ಅಪ್ಪಳಿಸಲಿದ್ದು, ಅಲ್ಲಿರುವ ಜನವಸತಿ ಪ್ರದೇಶಗಳು ಧ್ವಂಸಗೊಳ್ಳುವ ಭೀತಿ ಇದೆ. 10 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.
ಟೈಟಾನಿಕ್ 2.0: ಮಂಜುಗಡ್ಡೆಗೆ ಅಪ್ಪಳಿಸಿದ ಹಡಗು: ವಿಡಿಯೋ ವೈರಲ್
ಸಾಮಾಜಿಕ ಮಾಧ್ಯಮಗಳಲ್ಲಿರುವ ಮಾಹಿತಿ ಪ್ರಕಾರ ಈ ವೀಡಿಯೋವನ್ನು Emoinu Oinam ಎಂಬುವವರು ಕಳೆದ ತಿಂಗಳು ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಂತರ ಇನ್ಸ್ಟಾಗ್ರಾಮ್‌ನಲ್ಲಿಯೂ ವೀಡಿಯೋ ಶೇರ್ ಮಾಡಿದ್ದ ಅವರು ಶಂಖದ ಸುತ್ತ ನಡೆಯುವುದು ಹೇಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ನಾನು ಸುತ್ತಲೂ ನಡೆಯಲು ಮತ್ತು ಮಂಜುಗಡ್ಡೆಯನ್ನು ಎದುರಿಸುತ್ತಿರುವಾಗ ನನ್ನೊಂದಿಗೆ ಸೇರಿಕೊಳ್ಳಿ ಎಂದು ಹೇಳಿದ್ದರು. 2021ರಲ್ಲಿ ಈ ನ್ಯೂಫೌಂಡ್ ಲ್ಯಾಂಡ್‌ನ ಈ ಪಟ್ಟಣದ ಜನಸಂಖ್ಯೆ 149 ಎಂದು ಅವರು ಮಾಹಿತಿ ನೀಡಿದ್ದರು.
ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ ಪ್ರಕಾರ, ನ್ಯೂಫೌಂಡ್‌ಲ್ಯಾಂಡ್‌ನ ಕರಾವಳಿಯ ಕಡೆಗೆ ಪೂರ್ವಕ್ಕೆ ಚಲಿಸುವ ಈ ಮಂಜುಗಡ್ಡೆಗಳು ಸಾಮಾನ್ಯವಾಗಿ ಗ್ರೀನ್‌ಲ್ಯಾಂಡ್‌ನ ಹಿಮನದಿಗಳ ತುಂಡುಗಳಂತೆ. Emoinu Oinam ಅವರು ಈ ಬೃಹತ್ ಗಾತ್ರದ ಮಂಜುಗಡ್ಡೆಯ ಮತ್ತಷ್ಟು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಡ್ರೋನ್ ಶಾಟ್ ಕೂಡ ಸೇರಿದೆ.
ಕರಗುತ್ತಿವೆ ಟಿಬೆಟ್‌ನ ಹಿಮಗಡ್ಡೆಗಳು, ಪತ್ತೆಯಾಯ್ತು 1000 ಹೊಸ ಬ್ಯಾಕ್ಟೀರಿಯಾಗಳು, ಭಾರತ-ಚೀನಾಗೆ ಅಪಾಯ!
ನ್ಯೂಫೌಂಡ್‌ಲ್ಯಾಂಡ್ ಮತ್ತು ಲ್ಯಾಬ್ರಡಾರ್ ಪ್ರಾಂತ್ಯದ ಪೂರ್ವ ಕರಾವಳಿಯ ಉದ್ದಕ್ಕೂ ಇರುವ ಈ ಪ್ರದೇಶವು 'ಐಸ್ಬರ್ಗ್ ಅಲ್ಲೆ' ಎಂದು ಪ್ರಸಿದ್ಧವಾಗಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಮಂಜುಗಡ್ಡೆಗಳ ಗಾತ್ರವು ಹೆಚ್ಚಾಗುತ್ತಿದೆ ಎಂದು ತಿಳಿದು ಬಂದಿದೆ. ಟಿಕ್‌ಟಾಕ್‌ನಲ್ಲಿ ಹಾಕಲಾದ ಈ ವೀಡಿಯೋವನ್ನು 6 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಮನಮೋಹಕವಾದ ಈ ವೀಡಿಯೋವನ್ನು ನೋಡಿದ ಜನ ಅಚ್ಚರಿಯ ಜೊತೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಕೆಲವು ಬಳಕೆದಾರರು ಮಂಜುಗಡ್ಡೆಯ ಸಮೀಪವಿರು ತೀರದಲ್ಲಿ ವಾಸವಿರುವ ಮನೆಯ ನಿವಾಸಿಗಳು ಅನುಭವಿಸಿದ ಆಶ್ಚರ್ಯದ ಬಗ್ಗೆ ಪ್ರಶ್ನೆ ಮಾಡಿದ್ರೆ ಮತ್ತೆ ಕೆಲವರು ಇದನ್ನು ರೋಮಾಂಚಕ ಹಾಗೂ ಭಯಾನಕ ಚಲನಚಿತ್ರಗಳಿಗೆ ಹೋಲಿಸಿದ್ದಾರೆ.
