ಬ್ರಿಟನ್ ಸಂಸದ ರೂಪರ್ಟ್ ಲೋವ್ ಅವರು, ಪಾಕಿಸ್ತಾನ ಮೂಲದ ಪುರುಷರ ಗುಂಪೊಂದು ದಶಕಗಳಿಂದ 2.5 ಲಕ್ಷಕ್ಕೂ ಹೆಚ್ಚು ಬ್ರಿಟಿಷ್ ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿರುವ ಬಗ್ಗೆ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಸ್ವತಂತ್ರ ತನಿಖೆಯ ಪ್ರಕಾರ, ಈ ಕೃತ್ಯದಲ್ಲಿ ಪಾಕ್ ಮೂಲದ ಟ್ಯಾಕ್ಸಿ ಚಾಲಕರು ಮತ್ತು ವ್ಯಾಪಾರಿಗಳು ಭಾಗಿಯಾಗಿದ್ದು, ಸಂತ್ರಸ್ತೆಯರು ಅನುಭವಿಸಿದ ಘೋರ ದೌರ್ಜನ್ಯದ ಬಗ್ಗೆಯೂ ವರದಿಯಾಗಿದೆ.

ಲಂಡನ್‌: ಪಾಕಿಸ್ತಾನ ಮೂಲದ ಪುರುಷರ ಗುಂಪೊಂದು ಬ್ರಿಟನ್‌ನ 2.5 ಲಕ್ಷಕ್ಕೂ ಅಧಿಕ ಮಕ್ಕಳು ಮತ್ತು ಸ್ತ್ರೀಯರ ಮೇಲೆ ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಲೈಂಗಿಕ ಶೋಷಣೆ ಹಾಗೂ ಸಂತ್ರಸ್ತೆಯರ ದಯನೀಯ ಸ್ಥಿತಿಯ ಬಗ್ಗೆ ಬ್ರಿಟನ್‌ನ ಸಂಸದ ರೂಪರ್ಟ್ ಲೋವ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಜತೆಗೆ, ಇದರ ವಿರುದ್ಧ ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ವತಂತ್ರ ತನಿಖೆಯಿಂದ ತಿಳಿದುಬಂದಿರುವಂತೆ ಈ ಕುಕೃತ್ಯದಲ್ಲಿ ತೊಡಗಿರುವವರೆಲ್ಲಾ ಪಾಕ್‌ ಮೂಲಕ ಟ್ಯಾಕ್ಸಿ ಚಾಲಕರು ಮತ್ತು ವ್ಯಾಪಾರಿಗಳಾಗಿದ್ದಾರೆ ಎಂದಿರುವ ಲೋವ್‌, ಸಂತ್ರಸ್ತೆಯರು ಹಂಚಿಕೊಂಡ ಅನುಭವಗಳನ್ನೂ ಓದಿ ಹೇಳಿದರು.

3 ವರ್ಷದಲ್ಲಿ 700 ಜನರಿಂದ ರೇಪ್‌

 ‘ನಾನು 13 ವರ್ಷದವಳಿದ್ದಾಗಲೇ ನನ್ನ ಮೇಲೆ ದೌರ್ಜನ್ಯ ಆರಂಭಿಸಲಾಗಿತ್ತು. 3 ವರ್ಷಗಳಲ್ಲಿ 600-700 ಜನ ನನ್ನ ಮೇಲೆ ಅತ್ಯಾ*ಚಾರ ಮಾಡಿದ್ದರು’ ಎಂದು ಸಂತ್ರಸ್ತೆಯೊಬ್ಬರು ಹೇಳಿದ್ದಾರೆ. ಇನ್ನೊಬ್ಬಾಕೆ ಮಾತನಾಡಿ, ‘12 ವರ್ಷದವಳಿದ್ದಾಗ ನನ್ನ ಜನನಾಂಗದೊಳಗೆ ಮದ್ಯದ ಗಾಜಿನ ಬಾಟಲಿ ತುರುಕಿ ಒಡೆದರು’ ಎಂದರು. 

‘ನನಗೆ ತೀವ್ರ ರಕ್ತಸ್ರಾವವಾಗುತ್ತಿತ್ತು ಹಾಗೂ ಕೂರಲೂ ಆಗುತ್ತಿರಲಿಲ್ಲ. ಆಸ್ಪತ್ರೆಗೆ ಹೋದರೂ ವೈದ್ಯರೆದುರು ನಿಜ ಹೇಳಲಾಗಲಿಲ್ಲ. ನಾನಾಗ 15 ವರ್ಷದವಳಾಗಿದ್ದೆ’ ಎಂದು ಇನ್ನೊಬ್ಬ ಸಂತ್ರಸ್ತೆ ಕಣ್ಣೊರೆಸಿಕೊಂಡಿದ್ದಾಳೆ.

ನಾಯಿಯಿಂದ ರೇ*ಪ್‌

‘ನಮ್ಮನ್ನು ಪಂಜರದೊಳಗೆ ಕೂಡಿಹಾಕಲಾಗಿತ್ತು. ಸುತ್ತಲೂ ನಿಂತಿದ್ದ ಪುರುಷರು ಸಹಾಯ ಮಾಡುವ ಬದಲು, ನಾಯಿಗಳಿಂದ ನಮ್ಮ ಮೇಲೆ ಅತ್ಯಾ*ಚಾರ ಮಾಡಿಸಿದರು. ಬಳಿಕ ಅವರೂ ಸರದಿಯಲ್ಲಿ ಬಂದು ಶೋಷಿಸಿದರು. ನಂತರ ಮನಸೋ ಇಚ್ಛ ಥಳಿಸಿ, ಆ ಬಗ್ಗೆ ಯಾರಿಗಾದರೂ ಹೇಳಿದರೆ ನನ್ನನ್ನು ಕೊಂದು, ನನ್ಬವರಿಗೆ ತೊಂದರೆ ಮಾಡುವುದಾಗಿ ಬೆದರಿಸಿದರು’ ಎಂದು ಆ ಕೂಪದಲ್ಲಿ ಸಿಲುಕಿದ್ದ ಮಹಿಳೆ ಹೇಳಿದ್ದಾರೆ. ಈದ್‌ ಹಬ್ಬ ಮತ್ತು ರಜಾ ದಿನಗಳಲ್ಲಿ ಇದು ಅತಿರೇಕಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.