ದುಬೈನಿಂದ ಇಸ್ರೇಲ್‌ಗೆ 180 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವು ಸೌದಿ ಅರೇಬಿಯಾ ಮೇಲಿರುವಾಗ ಹೈಜಾಕ್ ತುರ್ತು ಸಂದೇಶ ರವಾನಿಸಿದೆ. ಇದರಿಂದ ಆತಂಕಗೊಂಡ ಇಸ್ರೇಲ್, ತನ್ನ ನಾಗರಿಕರ ರಕ್ಷಣೆಗೆ ತಕ್ಷಣವೇ ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಿದೆ.

Flydubai plane hijacking signal:180 ಪ್ರಯಾಣಿಕರನ್ನ ಹೊತ್ತು ದುಬೈನಿಂದ ಇಸ್ರೇಲ್‌ನ ಟೆಲ್‌ ಅವೀವ್‌ಗೆ ತೆರಳುತ್ತಿದ್ದ Flydubai ಪ್ಯಾಸೆಂಜರ್ ವಿಮಾನವೂ ಸೌದಿ ಅರೇಬಿಯಾದ ಮೇಲೆ ಹಾರುತ್ತಿದ್ದಾಗಲೇ ಹೈಜಾಕ್ ಆಗುವ ಸಾಧ್ಯತೆ ಕುರಿತು ತುರ್ತು ಸಂದೇಶ ಕಳುಹಿಸಿದೆ. ಈ ಹಿನ್ನೆಲೆ ಆತಂಕಕ್ಕೊಳಗಾದ ಇಸ್ರೇಲ್ ತನ್ನ ನಾಗರಿಕರ ರಕ್ಷಣೆ ತುರ್ತು ಕಾರ್ಯಾಚರಣೆಗೆ ಯುದ್ಧ ವಿಮಾನಗಳನ್ನ ಕಾರ್ಯಾಚರಣೆಗೆ ನಿಯೋಜಿಸಿದೆ ಎಂದು UNN ಮತ್ತು The Times of Israel‌ ವರದಿ ಮಾಡಿದೆ.

Flydubai ವಿಮಾನದಿಂದ ಹೈಜಾಕ್‌ ಘಟನೆಯ ವಿವರ:

ವಿಮಾನವು 180 ಪ್ರಯಾಣಿಕರನ್ನ ಹೊತ್ತು ಇಸ್ರೇಲ್‌ನ ಟೆಲ್‌ ಅವೀವ್‌ನತ್ತ ಹೊರಟಿತ್ತು. ವಿಮಾನದಲ್ಲಿ ಬಹುತೇಕರು ಇಸ್ರೇಲಿಗಳಾಗಿದ್ದರು. ಆರಂಭದಲ್ಲಿ ಸುರಕ್ಷಿತವಾಗಿ ಹಾರಿದ್ದ ವಿಮಾನ ಸೌದಿ ಆಗಸದ ಮೇಲೆ ಹಾರುತ್ತಿದ್ದಂತೆ ಪೈಲಟ್‌ಗೆ 7700 ಕೋಡ್ ಅನ್ನು ಕಳಿಸಿದೆ. ಇದು ಅಂತಾರಾಷ್ಟ್ರೀಯ ತುರ್ತು ಸಂಕೇತವಾಗಿದೆ. ವಿಮಾನದ ಹಾರಾಟದ ಮಾಹಿತಿ ನೀಡುವ ಡೇಟಾದಲ್ಲೂ ಈ ತುರ್ತು ಸಂಕೇತ ತೋರಿಸಿದೆ. ಇದಾದ ಕೆಲವೇ ಸಮಯದೊಳಗೆ ವಿಮಾನ ಮತ್ತೆ 7500 ಕೋಡ್‌ ಅನ್ನು ಕಳುಹಿಸಿದೆ. ಈ ಕೋಡ್ ವಿಮಾನ ಹೈಜಾಕ್ ಆಗಿರುವ ಅಥವಾ ಕಾನೂನುಬಾಹಿರವಾಗಿ ಹಸ್ತಕ್ಷೇಪ ನಡೆದಿರುವುದನ್ನ ಸೂಚಿಸುತ್ತದೆ.

ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗಿಳಿಸಿದ ಇಸ್ರೇಲ್

ಭದ್ರತಾ ಸೇವೆಗಳ ಮೂಲಗಳ ಪ್ರಕಾರ, ವಿಮಾನವನ್ನು ತಡೆದು ಪರಿಶೀಲನೆ ನಡೆಸಲು ಇಸ್ರೇಲ್ ವಾಯುಪಡೆಯ ಯುದ್ಧ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಹೇಳಿದೆ. ಆದರೆ ಘಟನೆ ಸಂಬಂಧ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

ವಿಮಾನ ಹೈಜಾಕ್ ಸಾಧ್ಯತೆ

ಅಬುಧಾಬಿಯಿಂದ ವಿಮಾನ ಟೆಲ್ ಅವೀವ್‌ಗೆ ತೆರಳುತ್ತಿತ್ತು. ಹೈಜಾಕ್ ಆಗುವ ಸಾಧ್ಯತೆ ತುರ್ತು ಸಂದೇಶ ಕಳಿಸಿದ ಹಿನ್ನೆಲೆ ವಿಮಾನವನ್ನು ಸೌದಿ ಅರೇಬಿಯಾಕ್ಕೆ ತಿರುಗಿಸಲಾಗಿದೆ. ವಿಮಾನ ಹೈಜಾಕ್‌ ಆಗಿರುವ ಸಾಧ್ಯತೆ ಬಗ್ಗೆ ಆತಂಕವಿದೆ ಎಂದು ಇಸ್ರೇಲಿ ಪತ್ರಕರ್ತ ಅಮಿತ್ ಸೆಗಲ್ ಹೇಳಿದ್ದಾರೆ.

ವಿಮಾನದಲ್ಲಿ ಸುಮಾರು 180 ಪ್ರಯಾಣಿಕರು ಇದ್ದರು ಎಂದು ವರದಿಯಾಗಿದೆ. ತುರ್ತು ಸಂಕೇತ ಕಳುಹಿಸಿದ್ದ ದುಬೈ-ಟೆಲ್ ಅವೀವ್ Flydubai ವಿಮಾನವು ಸದ್ಯ ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿರುವುದಾಗಿ ತಿಳಿದುಬಂದಿದೆ. ಇಸ್ರೇಲಿ ಭದ್ರತಾ ವಲಯದ ಮೂಲಗಳ ಪ್ರಕಾರ, 'ಕಾನೂನುಬಾಹಿರ ಹಸ್ತಕ್ಷೇಪ' ಸಂಕೇತ ಮತ್ತು ಸಾಮಾನ್ಯ ತುರ್ತು ಸಂಕೇತ ಕಳುಹಿಸಲು ಕಾರಣ ವಿಮಾನದಲ್ಲಿದ್ದ ಪೈಲಟ್‌ಗಳ ನಡುವಿನ ಸಂಘರ್ಷ ಕಾರಣವಾಗಿರಬಹುದು ಎಂದು ಹೇಳಿದೆ.