Asianet Suvarna News Asianet Suvarna News

ಬೇಡ ಎಂದು ಮಾರಿದ್ರೂ ಹಳೆ ಮಾಲೀಕನ ಹುಡುಕಿ 27 ದಿನ 64 ಕಿಮೀ ನಡೆದ ಶ್ವಾನ

ನಾಯಿಗಳು ತನಗೆ ಅನ್ನ ಹಾಕಿದ ಮಾಲೀಕನಿಗೆ ಸ್ವಾಮಿನಿಷ್ಠೆ ತೋರಿದ, ತನ್ನ ಜೀವ ಕೊಟ್ಟು ಮಾಲೀಕನ ಉಳಿಸಿದ ಹಲವು ನಿದರ್ಶನಗಳು ನಮ್ಮ ಮಧ್ಯೆ ಇವೆ. ಇದಕ್ಕೊಂದು ಹೊಸ ಸೇರ್ಪಡೆ ಐರ್ಲೆಂಡ್‌ನಲ್ಲಿ ನಡೆದ ಈ ಘಟನೆ.

A dog walked 27 day 64 kilo meters to reach its old owner emotional story of the dog goes viral akb
Author
First Published May 2, 2023, 4:16 PM IST

ಐರ್ಲೆಂಡ್: ಶ್ವಾನಗಳು ಸ್ವಾಮಿನಿಷ್ಠೆಗೆ ಹೆಸರು ವಾಸಿ. ಅನ್ನ ಹಾಕಿದವವನ ಎಂದು ಮರೆಯದ ಶ್ವಾನಗಳು ಒಂದು ತುತ್ತು ಅನ್ನ ಕೊಟ್ಟವನ ತನ್ನ ಉಸಿರಿರುವವರೆಗೂ ಮರೆಯುವುದಿಲ್ಲ. ಹೊಡೆದರು ಬಡೆದರು ಮತ್ತದೇ ಎಂದಿನ ಪ್ರೀತಿಯಿಂದ ಬಂದು ನಿಮ್ಮ ಮುದ್ದಾಡುವ ಏಕೈಕ ಜೀವ ಒಂದಿದ್ದರೆ ಅದು ಶ್ವಾನ ಮಾತ್ರ. ಹೀಗೆ ನಾಯಿಗಳು ತನಗೆ ಅನ್ನ ಹಾಕಿದ ಮಾಲೀಕನಿಗೆ ಸ್ವಾಮಿನಿಷ್ಠೆ ತೋರಿದ, ತನ್ನ ಜೀವ ಕೊಟ್ಟು ಮಾಲೀಕನ ಉಳಿಸಿದ ಹಲವು ನಿದರ್ಶನಗಳು ನಮ್ಮ ಮಧ್ಯೆ ಇವೆ. ಇದಕ್ಕೊಂದು ಹೊಸ ಸೇರ್ಪಡೆ ಐರ್ಲೆಂಡ್‌ನಲ್ಲಿ ನಡೆದ ಈ ಘಟನೆ.

ಐರ್ಲೆಂಡ್‌ನ (Ireland) ವ್ಯಕ್ತಿಯೊಬ್ಬರು ತಾವು ಪ್ರೀತಿಯಿಂದ ಸಾಕಿದ ಶ್ವಾನವೊಂದನ್ನು ತಮಗೆ ಸಾಕಲಾಗದ ಕಾರಣಕ್ಕೆ ಉತ್ತರ ಐರ್ಲೆಂಡ್‌ನಲ್ಲಿರುವ ಕೌಂಟಿ ಟೈರೋನ್‌ನಲ್ಲಿರುವ ವ್ಯಕ್ತಿಯೊಬ್ಬರಿಗೆ ಮಾರಾಟ (sale) ಮಾಡಿದ್ದರು. ಆದರೆ ಈ ಶ್ವಾನ ಕಾಡು ಮೇಡು ಅಲೆದು ಹಲವು ಊರುಗಳನ್ನು ಕ್ರಮಿಸಿ ಮತ್ತೆ ತನ್ನ ಹಳೆ ಮಾಲೀಕನ ಅರಸಿ ಬಂದಿದ್ದು, ಮಾರಿದ ಶ್ವಾನವನ್ನುಮತ್ತೆ ಮನೆ ಮುಂದೆ ನೋಡಿದ ಮಾಲೀಕ ಅದನ್ನು ಬಾಚಿ ತಬ್ಬಿಕೊಂಡು ಭಾವುಕರಾಗಿದ್ದಾರೆ. ಕಣ್ಣೀರಾಕಿದ್ದಾರೆ.

ನಾಯಿ ಹಾಗೂ ಪುಟ್ಟ ಬಾಲಕ: 3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ ವೀಡಿಯೋ ಇದು

ಶ್ವಾನ ನಡೆದಿದ್ದು, 27 ದಿನ 64 ಕಿಲೋ ಮೀಟರ್.

ತನ್ನ ಹಳೆ ಮಾಲೀಕನ ಅರಸಿ ಬರುವುದಕ್ಕೆ ಈ ನಾಯಿ ಸಾಗಿದ ಹಾದಿ ಸಣ್ಣ ಮಟ್ಟದೇನಲ್ಲ. ಬರೋಬ್ಬರಿ 27 ದಿನ ನಡೆದು 64 ಕಿಲೋ ಮೀಟರ್‌ಗಳನ್ನು ಕ್ರಮಿಸಿ ಈ ಶ್ವಾನ ಹಳೆ ಮಾಲೀಕನ ಬಳಿ ಬಂದಿದ್ದು, ಇದು ಮಾಲೀಕನನ್ನು ಭಾವುಕನಾಗಿ ಕಣ್ಣೀರು ಹಾಕುವಂತೆ ಮಾಡಿದೆ.  ಅಂದಹಾಗೆ ಈ ಶ್ವಾನ ಗೋಲ್ಡನ್ ರಿಟ್ರೈವರ್ ತಳಿಗೆ ಸೇರಿದ ಶ್ವಾನವಾಗಿದ್ದು, ಇದಕ್ಕೆ ಕೂಪರ್ (Cooper) ಎಂದು ಮಾಲೀಕ ಹೆಸರಿಟ್ಟಿದ್ದರು. ಶ್ವಾನವನ್ನು ಮಾರಲು ನಿರ್ಧರಿಸಿದ ನಂತರ ಮಾಲೀಕ ಒಲ್ಲದ ಮನಸ್ಸಿನಿಂದಲೇ ಅದನ್ನು ಕಳುಹಿಸಿಕೊಟ್ಟಿದ್ದರು. ಇತ್ತ ಕೂಪರ್‌ನನ್ನು ಖರೀದಿಸಿದವರು ಕೂಡ ಕಾರಿನಲ್ಲಿ ಕೂರಿಸಿಕೊಂಡು ತನ್ನೂರಿಗೆ ಶ್ವಾನವನ್ನು ಕರೆದೊಯ್ದಿದ್ದರು. 

ಕೊಲೆ ಪ್ರಕರಣವನ್ನು ಕ್ಷಣದಲ್ಲಿ ಭೇದಿಸಿದ ಶ್ವಾನಕ್ಕೆ 'ಬೆಸ್ಟ್ ಕಾಪ್ ಅವಾರ್ಡ್‌'

64 ಕಿಲೋ ಮೀಟರ್ ಕ್ರಮಿಸಿ ಹೊಸ ಮಾಲೀಕನ ಮನೆಗೆ ಬಂದ ಶ್ವಾನ ಕಾರು (Car) ಇಳಿಯುತ್ತಿದ್ದಂತೆ ಅಲ್ಲಿಂದ ಓಡಿ ಎಸ್ಕೇಪ್ ಆಗಿದೆ. ಕೂಡಲೇ ಹಳೆ ಮಾಲೀಕನಿಗೆ ಕರೆ ಮಾಡಿದ ಹೊಸ ಮಾಲೀಕ ನಾಯಿ ತಪ್ಪಿಸಿಕೊಂಡು ಹೋಗಿರುವುದಾಗಿ ಹೇಳಿದ್ದರು.  ಅಲ್ಲದೇ ಸುತ್ತಮುತ್ತಲೆಲ್ಲಾ ನಾಯಿಗಾಗಿ ಹುಡುಕಾಡಿದ್ದಾರೆ. ಆದರೆ ಕೂಪರ್ ಮಾತ್ರ ಆತನ ಕಣ್ಣಿಗೆ ಕಾಣಿಸದಂತೆ  ತನ್ನ ಹಳೆ ಮಾಲೀಕನ ಮನೆ ದಾರಿ ಅರಸಿ ಹೊರಟಿದೆ. ಇತ್ತ ಪ್ರೀತಿಯಿಂದ ಸಾಕಿದ ನಾಯಿಯನ್ನು ಮಾರಿದ್ದೇನೋ ಆಯ್ತು. ಆದರೆ ಅಲ್ಲೂ ಇಲ್ಲ ಎಲ್ಲಿ ಹೊಗಿರಬಹುದು ಎಂದು ಹಳೆ ಮಾಲೀಕ ಬೇಸರದಿಂದಲೇ ಕಾಲ ಕಳೆದಿದ್ದಾರೆ. ಆದರೆ ಅದೃಷ್ಟ ಎಂಬಂತೆ ಬರೋಬ್ಬರಿ 27 ದಿನಗಳ ಬಳಿಕ ಅವರು ಸಾಕಿದ್ದ ಶ್ವಾನ ಮರಳಿ ಅವರ ಮನೆ ಸೇರಿದೆ. 
 

Follow Us:
Download App:
  • android
  • ios