ದಾರಿಮಧ್ಯೆ ಸಂಕಷ್ಟಕ್ಕೊಳಗಾದ ಒಡತಿಯ ಸುರಕ್ಷಿತವಾಗಿ ಕರೆತಂದ ಶ್ವಾನ: ಕ್ಯಾಮರಾದಲ್ಲಿ ದೃಶ್ಯ ಸೆರೆ
ಇಲ್ಲೊಂದು ಶ್ವಾನ ಸಂಕಷ್ಟದಲ್ಲಿದ್ದ ತನ್ನ ಒಡತಿಯ ರಕ್ಷಣೆಗೆ ಧಾವಿಸಿದ ಘಟನೆಯೊಂದು ನಡೆದಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು ವೈರಲ್ ಆಗಿದೆ.
ನಾಯಿಗಳು ಮನುಷ್ಯನ ಬೆಸ್ಟ್ ಫ್ರೆಂಡ್, ಇದು ಹಲವು ಸಲ ಸಾಬೀತಾಗಿದೆ. ಮೊನ್ನೆಯಷ್ಟೇ ಉಡುಪಿಯಲ್ಲಿ ಕಾಡಿನಲ್ಲಿ ಕಾಣೆಯಾಗಿ ವಾರದ ನಂತರ ಸಿಕ್ಕಿದ ಯುವಕನೊಂದಿಗೆ ಆತ ಸಾಕಿದ ಶ್ವಾನವೂ ಕೂಡ ಉಳಿದುಕೊಂಡು ಸ್ವಾಮಿನಿಷ್ಠೆ ಮೆರೆದ ಘಟನೆ ಎಲ್ಲೆಡೆ ವ್ಯಾಪಕವಾಗಿ ವರದಿಯಾಗಿತ್ತು. ಅದೇ ರೀತಿ ಇಲ್ಲೊಂದು ಶ್ವಾನ ಸಂಕಷ್ಟದಲ್ಲಿದ್ದ ತನ್ನ ಒಡತಿಯ ರಕ್ಷಣೆಗೆ ಧಾವಿಸಿದ ಘಟನೆಯೊಂದು ನಡೆದಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ ಜೊತೆಗೆ ವೈರಲ್ ಆಗಿದೆ.
ಈ ಶ್ವಾನಕ್ಕೆ ಮಾಲಕಿ ಉತ್ತಮವಾದ ತರಬೇತಿ ನೀಡಿದ್ದು, ಸರ್ವೀಸ್ ಡಾಗ್ ರೀತಿ ಕಾಣಿಸುವ ಈ ಶ್ವಾನಕ್ಕೆ ಒಡತಿ ಹೇಳುವ ಪ್ರತಿಯೊಂದು ಕೂಡ ಅರ್ಥವಾಗುತ್ತದೆ. ಒಡತಿಯ ಪ್ರತಿ ಮಾತನ್ನು ಇದು ಪಾಲಿಸುತ್ತದೆ.
ವೀಡಿಯೋದಲ್ಲೇನಿದೆ.
ಈ ಶ್ವಾನದ ಹೆಸರು ಡೊಂಗ್ವ ಆಗಿದ್ದು, ಸಿಸಿಟಿವಿ (CCTV) ಕಣ್ಗಾವಲಿನಲ್ಲಿ ಶ್ವಾನ (Dog) ಮಲಗಿದೆ. ಶ್ವಾನದ ಒಡತಿ ದೂರದಲ್ಲೆಲ್ಲೋ ಇದ್ದು, ಬಹುಶಃ ವಾಕಿಟಾಕಿಯ ಮೂಲಕ ಶ್ವಾನವನ್ನು ಕರೆದು ಮಾತನಾಡುತ್ತಾಳೆ. ತಾನು ಸಂಕಷ್ಟದಲ್ಲಿದ್ದು ಸಹಾಯ ಮಾಡುವಂತೆ ಕೇಳುತ್ತಾಳೆ. ಅದರಂತೆ ಶ್ವಾನ ಆಕೆಯ ಎಲ್ಲ ನಿರ್ದೇಶನಗಳನ್ನು ಮನುಷ್ಯರು ಕೇಳುವಂತೆ ಕೇಳಿ ಆಕೆ ಹೇಳಿದಂತೆ ಮಾಡುವುದಲ್ಲದೇ ಆಕೆಯ ರಕ್ಷಣೆಗೆ ಧಾವಿಸಿ ಆಕೆಯನ್ನು ಸ್ವಲ್ಪ ಹೊತ್ತಿನಲ್ಲೇ ಅಲ್ಲಿಂದ ಕರೆದುಕೊಂಡು ಬರುತ್ತದೆ.
ಭಾರತದ ಹಸಿರು ಕ್ರಾಂತಿಯ ಜನಕ ಎಂ.ಎಸ್. ಸ್ವಾಮಿನಾಥನ್ ಇನ್ನಿಲ್ಲ
ಒಡತಿ ಶ್ವಾನಕ್ಕೆ ನೀಡಿದ ನಿರ್ದೇಶನವೇನು?
ಡೊಂಗ್ವ ಡೊಂಗ್ವ ಎಂದು ಶ್ವಾನವನ್ನು ಅದರ ಒಡತಿ ಕರೆಯುತ್ತಾಳೆ. ಈ ವೇಳೆ ಕುಳಿತಲ್ಲಿಂದ ಎದ್ದು ಬರುವ ಶ್ವಾನ ಒಡತಿಯ ಧ್ವನಿಗೆ ಕಿವಿಗೊಡುತ್ತದೆ. ಈ ವೇಳೆ ಒಡತಿ ತಾನು ಕ್ಯಾಮರಾ ಮುಂದೆ ಬಂದರೆ ತಾನು ನಿನ್ನ ಜೊತೆ ಮಾತನಾಡಬಹುದು ಎಂದು ಶ್ವಾನಕ್ಕೆ ನಿರ್ದೇಶನ ನೀಡುತ್ತಾಳೆ. ಅದರಂತೆ ಶ್ವಾನ ಕ್ಯಾಮರಾ ಮುಂದೆ ಬರುತ್ತದೆ. ನನ್ನ ಫೋನ್‌ನ ಬ್ಯಾಟರಿ ಖಾಲಿಯಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಚಾರ್ಜ್ ಖಾಲಿಯಾಗಲಿದೆ. ನಾನು ಬಹುತೇಕ ಗ್ರಾಮಕ್ಕೆ ಪ್ರವೇಶ ನೀಡುವಲ್ಲಿಗೆ ತಲುಪಿದ್ದೇನೆ. ನೀನು ಇಲ್ಲಿಗೆ ಬಂದು ನನ್ನನ್ನು ಕರೆದುಕೊಂಡು ಹೋಗಬಹುದೇ ಎಂದು ಶ್ವಾನದ ಬಳಿ ಕೇಳುತ್ತಾಳೆ. ಈ ಮಾತು ಕೇಳಿದ್ದೆ ತಡ ಶ್ವಾನ ಹೊರಡಲು ಶುರು ಮಾಡುತ್ತದೆ. ಈ ವೇಳೆ ಜೊತೆಯಲ್ಲಿ ಟೇಬಲ್ ಮೇಲಿರು ಲೈಟ್ ಹಿಡಿದುಕೊಳ್ಳುವಂತೆ ನಾಯಿಗೆ ಒಡತಿ ಹೇಳುತ್ತಾಳೆ....
ಥಾಣೆಯ ಅಪಾರ್ಟ್‌ಮೆಂಟ್ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ ಭಾರೀ ಗಾತ್ರದ ಹಾವಿನ ರಕ್ಷಣೆ: ವೀಡಿಯೋ ವೈರಲ್
ಹೀಗಾಗಿ ಸ್ವಲ್ಪ ದೂರ ಹೋಗಿ ಮತ್ತೆ ಬರುವ ಶ್ವಾನ ಟೇಬಲ್ ಮೇಲಿದ್ದ ಪ್ಲ್ಯಾಶ್ ಲೈಟ್‌ನ್ನು ತೆಗೆದುಕೊಂಡು ಕ್ಯಾಮರಾ ಮುಂದೆ ನಿಲ್ಲುತ್ತದೆ. ಅದರಲ್ಲಿ ಚಾರ್ಜರ್ ಬಹುತೇಕ ಮುಗಿಯಲು ಆಗಿದ್ದು, ಅದರ ಮುಂಭಾಗದಲ್ಲಿರುವ ಸ್ವಿಚ್ ಆನ್ ಮಾಡುವಂತೆ ಹೇಳುತ್ತಾಳೆ. ಅದರಂತೆ ನಾಯಿ ಲೈಟ್‌ನ ಸ್ವಿಚ್ ಆನ್ ಮಾಡಿದ್ದು, ಲೈಟ್ ಉರಿಯಲು ಆರಂಭಿಸುತ್ತದೆ. ಹೋ ಲೈಟ್‌ನ ಬ್ಯಾಟರಿ ಇದೆ ಎಂದ ಮಹಿಳೆ ಅದನ್ನು ಹಿಡಿದುಕೊಂಡು ನನ್ನನ್ನು ಪಿಕ್‌ಅಪ್ ಮಾಡಲು ಬರುವಂತೆ ಶ್ವಾನಕ್ಕೆ ಹೇಳುತ್ತಾಳೆ. ಅದರಂತೆ ಶ್ವಾನ ಲೈಟ್ ಹಿಡಿದು ಓಡುತ್ತಾ ತನ್ನ ಒಡತಿಯ ಬಳಿ ಹೋಗುತ್ತದೆ. ಈ ವೇಳೆ ಒಡತಿ ನಿಧಾನವಾಗಿ ಸುರಕ್ಷಿತವಾಗಿ ಬರುವಂತೆ ಹೇಳಿದ್ದರು, ಒಡತಿಯ ನೋಡಲು ಕಾತುರಗೊಂಡ ಶ್ವಾನ ಲೈಟ್ ಹಿಡಿದುಕೊಂಡು ಓಡುತ್ತಲೇ ಶ್ವಾನದ ಬಳಿ ಹೋಗುತ್ತದೆ. ಇದಾಗಿ ಐದು ನಿಮಿಷದ ನಂತರ ಶ್ವಾನ ತನ್ನ ಒಡತಿಯೊಂದಿಗೆ ಬರುತ್ತಿರುವ ದೃಶ್ಯ ಈ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಮೊಲ ಆಮೆಯ ಓಟದ ಕತೆ ಕೇಳಿದ್ದೀರಾ.... ಈ ಕತೆ ನಿಜ ಅಂತ ಹೇಳ್ತಿರುವ ವೀಡಿಯೋ ಇಲ್ಲಿದೆ ನೋಡಿ
ಈ ವೀಡಿಯೋ ನೋಡಿದ ಅನೇಕರು ಶ್ವಾನದ ಬುದ್ಧಿವಂತಿಕೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಶ್ವಾನದ ಬುದ್ಧಿವಂತಿಕೆ ಹಾಗೂ ಸ್ವಾಮಿನಿಷ್ಠೆ ಮನುಷ್ಯನ ಬುದ್ಧಿಗೂ ಮೀರಿದ್ದು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ಶ್ವಾನ ಬರೀ ನಾಯಿ ಅಲ್ಲ ಆ ಮಹಿಳೆಯ ಮಗ ಎಂದು ಕೆಲವರು ಶ್ವಾನವನ್ನು ಬಣ್ಣಿಸಿದ್ದಾರೆ. ಮಕ್ಕಳು ನಮ್ಮ ಮಾತು ಕೇಳಲ್ಲ, ಆದರೆ ಶ್ವಾನ ಕೇಳುತ್ತೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಈ ಶ್ವಾನಕ್ಕೆ ತರಬೇತಿ ನೀಡಿದ್ದು, ಹೇಗೆ ಎಂದು ಅನೇಕರು ಬಹಳ ಕುತೂಹಲದಿಂದ ಪ್ರಶ್ನಿಸಿದ್ದಾರೆ.
ಅಯ್ಯೋ ನಮ್ದು ಇದೇ ಕತೆ... ನಂದಿನಿ ಹಾಡಿನ ನ್ಯೂವರ್ಷನ್‌ಗೆ ಹೌದಪ್ಪ ಹೌದು ಎಂದ ಗೃಹಿಣಿಯರು...!