ಥಾಣೆಯ ಅಪಾರ್ಟ್‌ಮೆಂಟ್ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ ಭಾರೀ ಗಾತ್ರದ ಹಾವಿನ ರಕ್ಷಣೆ: ವೀಡಿಯೋ ವೈರಲ್
ಸುರಕ್ಷಿತ ಸ್ಥಳ ಅರಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಲು ಯತ್ನಿಸಿದ ಹಾವೊಂದನ್ನು ಇಬ್ಬರು ಯುವಕರು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಯುವಕರ ಈ ಸಾಹಸದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಮಳೆಗಾಲದ ಸಮಯದಲ್ಲಿ ಹಾವುಗಳು ಸುರಕ್ಷಿತ ಜಾಗವನ್ನು ಅರಸಿ ಮನೆಯೊಳಗೆ ವಾಹನದೊಳಗೆ ನುಗ್ಗುವುದು ಸಾಮಾನ್ಯವಾಗಿದೆ. ಹಾಗೆಯೇ ಮಹಾರಾಷ್ಟ್ರ ಹಾಗೂ ಪುಣೆಯಲ್ಲಿ ಕಳೆದ ಕೆಲ ದಿನಗಳಿಂದ ಜೋರಾಗಿ ಸುರಿದ ಮಳೆಗೆ ಹಾವುಗಳು ಬೆಚ್ಚನೆಯ ಜಾಗ ಅರಸಿ ಮನೆ ಕಾಡು ಪೊದೆಗಳ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿವೆ. ಅದೇ ರೀತಿ ಸುರಕ್ಷಿತ ಸ್ಥಳ ಅರಸಿ ಅಪಾರ್ಟ್‌ಮೆಂಟ್‌ಗೆ ನುಗ್ಗಲು ಯತ್ನಿಸಿದ ಹಾವೊಂದನ್ನು ಇಬ್ಬರು ಯುವಕರು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಯುವಕರ ಈ ಸಾಹಸದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಅಪಾರ್ಟ್‌ಮೆಂಟ್‌ನ ಕಿಟಕಿಯ ಮೂಲಕ ಒಳನುಗ್ಗಿದ್ದ ಭಾರೀ ಗಾತ್ರದ ಹಾವು
ಸ್ನೇಹ ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇಬ್ಬರು ಯುವಕರು ಅಪಾರ್ಟ್‌ಮೆಂಟ್‌ನ ಕಿಟಕಿಯಲ್ಲಿ ನೇತಾಡುತ್ತಿದ್ದ ಬೃಹತ್ ಗಾತ್ರದ ಹಾವನ್ನು ರಕ್ಷಣೆ ಮಾಡಿದ್ದಾರೆ. ಮಹಾರಾಷ್ಟ್ರದ ಥಾಣೆಯ ಅಪಾರ್ಟ್‌ಮೆಂಟೊಂದರಲ್ಲಿಈ ಘಟನೆ ನಡೆದಿದೆ. ವೀಡಿಯೋದಲ್ಲಿ ಕಾಣಿಸುವಂತೆ ಹಾವೊಂದು ಅಪಾರ್ಟ್‌ಮೆಂಟ್ ಒಳಗೆ ಹೊಗುವುದಕ್ಕಾಗಿ ಕಿಟಕಿಯಲ್ಲಿ ನುಗ್ಗಿದ್ದು, ಕಿಟಕಿಯ ಸರಳುಗಳ ಮಧ್ಯೆ ಸಿಲುಕಿಕೊಂಡಿದೆ. ಇದನ್ನು ಅಲ್ಲಿಂದ ಬಿಡಿಸುವುದಕ್ಕಾಗಿ ರಕ್ಷಣಾ ತಂಡದ ಇಬ್ಬರು ಯುವಕರು ಸಾಹಸ ಮಾಡುತ್ತಿದ್ದಾರೆ. ಇದಕ್ಕಾಗಿ ಓರ್ವ ಯುವಕ ಕಿಟಕಿಯ ಸನ್‌ಶೇಡ್ ಮೇಲೆ ನಿಂತಿದ್ದರೆ ಮತ್ತೋರ್ವ ಕಿಟಕಿಯ ಮೇಲೆಯೇ ನಿಂತು ಹಾವನ್ನು ಸರಳುಗಳ ನಡುವಿನಿಂದ ಬಿಡಿಸಲು ಪ್ರಯತ್ನಿಸುತ್ತಿದ್ದಾನೆ. ಕೊನೆಗೂ ಹಾವು ಕಿಟಕಿಯಿಂದ ಕೆಳಗೆ ಬಿದ್ದಿದೆ.
ರೈಲು ಬರಲು ಕೆಲ ಕ್ಷಣಗಳಿರುವಾಗ ರೈಲುಹಳಿಗೆ ಬಿದ್ದ ಅಂಧ ತಾಯಿಯ ಮಗ: ಆಮೇಲಾಗಿದ್ದು ಪವಾಡ..!
ಈ ವಿಡಿಯೋ ನೋಡಿದ ಅನೇಕರು ಹಾವಿನ ಗಾತ್ರವನ್ನು ನೋಡಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಹಾವನ್ನು ರಕ್ಷಿಸಿದ ಯುವಕರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪುಸ್ತಕದೊಳಗೆ ಫೋನ್: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು