Asianet Suvarna News Asianet Suvarna News

ನೋಡುವಷ್ಟು ನೋಡಿ.... ಕ್ಯಾಮರಾಗೆ ಫೋಸ್ ಕೊಡ್ತಿದ್ದ ರೂಪದರ್ಶಿಯ ಬಟ್ಟೆ ಎಳೆದೊಯ್ದ ಶ್ವಾನ: ವೀಡಿಯೋ

ಫೋಟೋಗೆ ಫೋಸ್ ನೀಡ್ತಿದ್ದ ಮಾಡೆಲ್‌ ಉಡುಗೆಯನ್ನು ಶ್ವಾನವೊಂದು ಎಳೆದೊಯ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

A clever Dog dragged models clothes when she was posing to camera video goes viral akb
Author
First Published Nov 26, 2023, 11:53 AM IST

ಸಾಮಾಜಿಕ ಜಾಲತಾಣಗಳಲ್ಲಿ ಶ್ವಾನಗಳ ಸಾಕಷ್ಟು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಮನುಷ್ಯನ ಬೆಸ್ಟ್‌ ಫ್ರೆಂಡ್ ಎನಿಸಿರುವ ಶ್ವಾನಗಳು ದೇಶ ಸೇವೆಯಲ್ಲೂ ಸಕ್ರಿಯವಾಗಿವೆ. ದೇಶಕ್ಕಾಗಿ ಹೋರಾಡುತ್ತಾ ಪ್ರಾಣತೆತ್ತ ಶ್ವಾನಗಳ ಸುದ್ದಿಯನ್ನು ನೀವು ಓದಿರಬಹುದು. ಮರಿ ಇರುವಾಗಲೇ ತರಬೇತಿ ನೀಡುವ ಮೂಲಕ ಶ್ವಾನವನ್ನು ನಿಮಗೆ ಬೇಕಾದಂತೆ ಪಳಗಿಸಬಹುದು. ಹೀಗೆ ತರಬೇತಿ ಪಡೆದ ಶ್ವಾನಗಳು ಮನೋರಂಜನೆ ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಇಂತಹ ಮುದ್ದಾದ ಶ್ವಾನಗಳ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಅದೇ ರೀತಿ ಈಗ ಇಲ್ಲೊಂದು ಶ್ವಾನದ ವೀಡಿಯೋವೊಂದು ವೈರಲ್ ಆಗಿದ್ದು, ಈ ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ವೀಡಿಯೋದಲ್ಲೇನಿದೆ?

ವೀಡಿಯೋದಲ್ಲಿ  ಕಟ್ಟಡವೊಂದರ ಎದುರು ರಸ್ತೆಯಲ್ಲಿ ಮಾಡೆಲ್‌ಗಳಿಬ್ಬರೂ ಫೋಟೋಗಳಿಗೆ ಫೋಸ್‌ ನೀಡುತ್ತಿದ್ದಾರೆ.  ಕಪ್ಪು ಹಾಗೂ ಬಿಳಿ ಬಣ್ಣದ ಲಾಂಗ್ ಗವನ್‌ನಂತಹ ಧಿರಿಸು ಧರಿಸಿರುವ ಮಾಡೆಲ್‌ಗಳು ಫೋಟೋಗೆ ಫೋಸ್ ನೀಡ್ತಾ ನಿಂತಿದ್ದು, ಈ ವೇಳೆ ಅಲ್ಲಿಗೆ ಬಂದ ಶ್ವಾನ ಬಿಳಿ ಬಣ್ಣದ ಬಟ್ಟೆ ಧರಿಸಿದ ಯುವತಿಯ ಬಟ್ಟೆಯನ್ನು  ಕಚ್ಚಿ ಎಳೆದುಕೊಂಡು ಅಲ್ಲಿಂದ ಓಡಲು ಶುರು ಮಾಡುತ್ತದೆ. ದಿಢೀರ್‌ ಆದ ಈ ಬೆಳವಣಿಗೆಯಿಂದ ಗಾಬರಿಯಾದ ಆ ಮಾಡೆಲ್ ನಾಯಿ ಹಿಂದೆಯೇ ಓಡಲು ಶುರು ಮಾಡಿದ್ದಾಳೆ. ಟವೆಲ್‌ನಂತೆ ಈ ಬಟ್ಟೆ ಇದ್ದು, ನಾಯಿ ಎಳೆದುಕೊಂಡು ಹೋದ ಕೂಡಲೇ ಯುವತಿ ಒಳ ಉಡುಪಿನೊಂದಿಗೆ ನಾಯಿಯ ಹಿಂದೆ ಓಡುತ್ತಿದ್ದರೆ, ಆಕೆಯ ಜೊತೆಗೆ ನಿಂತ ಯುವತಿ ಕೂಡ ಶಾಕ್‌ಗೆ ಒಳಗಾಗಿದ್ದು, ನಂತರ ಸವರಿಸಿಕೊಂಡು ನಗಲು ಶುರು ಮಾಡುತ್ತಾಳೆ.

ಎಷ್ಟೊಳ್ಳೆ ಮಗ ಇದು...ಅಂತ ಅಜ್ಜಿ ಮುದ್ದಿಸ್ತಾ ಇದ್ರೆ ಮಡಲಲ್ಲೇ ನಿದ್ರೆ ಹೋಯ್ತು ನಾಯಿಮರಿ

ಈ ವಿಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ದಯವಿಟ್ಟು ಮುಂದಿನ ಸಲ ಈ ರೀತಿ ಕರ್ಟನ್‌ಗಳನ್ನು ಧರಿಸದಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ರೀತಿ ನಾಯಿಗೆ ತರಬೇತಿ ನೀಡುವುದು ಹೇಗೆ ಎಂದು ತುಂಟತನದಿಂದ ಪ್ರಶ್ನಿಸಿದ್ದಾರೆ. ಈ ನಾಯಿಯನ್ನು ಅಲ್ಲಿಗೆ ಕರೆತಂದವರು ಯಾರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.  ನಾಯಿಗೆ ಚೆನ್ನಾಗಿ ತರಬೇತಿ ನೀಡಲಾಗಿದ್ದು, ಇದೆಲ್ಲಾ ರಷ್ಯಾದಲ್ಲಿ ಸಾಮಾನ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ನಾಯಿ ಅಡ್ಡ ಬಂದು ಬೈಕ್ ಸವಾರ ಸಾವು, ತನ್ನಿಂದಾದ ತಪ್ಪಿಗೆ 3 ದಿನದ ಬಳಿಕ ಮೃತನ ಮನೆಗೆ ಬಂದು ಕ್ಷಮೆ ಕೇಳ್ತಾ ಶ್ವಾನ?

Follow Us:
Download App:
  • android
  • ios