ನಾಯಿ ಅಡ್ಡ ಬಂದು ಬೈಕ್ ಸವಾರ ಸಾವು, ತನ್ನಿಂದಾದ ತಪ್ಪಿಗೆ 3 ದಿನದ ಬಳಿಕ ಮೃತನ ಮನೆಗೆ ಬಂದು ಕ್ಷಮೆ ಕೇಳ್ತಾ ಶ್ವಾನ?
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಈ ವಿಸ್ಮಯಕಾರಿ ಘಟನೆ ನಡೆದಿದೆ. ಬೈಕ್‌ಗೆ ಅಡ್ಡ ಬಂದು ಸವಾರ ಸಾವನ್ನಪ್ಪಿರುವ ತಪ್ಪಿಗೆ ನಾಯಿ ಮರುಕಪಟ್ಟಿದ್ದರು. ಮೃತಪಟ್ಟ ಸವಾರನ ,ಮನೆಗೆ ಹೋಗಿ ಸಾಂತ್ವಾನ ಹೇಳಿದೆ.
ದಾವಣಗೆರೆ (ನ.22): ಇದೊಂದು ವಿಸ್ಮಯಕಾರಿ ಘಟನೆ ನಡೆದಿದೆ. ನಾಯಿಗಿರುವ ನಿಯತ್ತು ಮನುಷ್ಯರಿಗಿರಲ್ಲ. ತುತ್ತು ಅನ್ನ ಹಾಕಿದ್ರೆ ಜೀವನಪರ್ಯಂತ ಅನ್ನ ಹಾಕಿದವನಿಗೆ ನಿಯತ್ತಾಗಿರುತ್ತೆ. ಈ ಮೂಕ ಪ್ರಾಣಿ ಈಗ ತನ್ನಿಂದ ಆದ ತಪ್ಪಿಗೆ ಮರುಕ ಪಟ್ಟಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಈ ವಿಸ್ಮಯಕಾರಿ ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್‌ಗೆ ನಾಯಿ ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ, ಬೈಕಿಗೆ ಅಡ್ಢ ಬಂದಿದ್ದ ನಾಯಿ ಮೃತನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.
ವಿದ್ಯುತ್ ಅಪಘಾತ ತಡೆಗೆ ಮಾರ್ಗಸೂಚಿಗೆ ಸಮಿತಿ; ಇಂಧನ ಇಲಾಖೆ ಆದೇಶ
ತಿಪ್ಪೇಶ್ (21) ಸಾವನ್ನಪ್ಪಿದ ಯುವಕನಾಗಿದ್ದು, ಕಳೆದ ಗುರುವಾರ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದ. ಈ ವೇಳೆ ಬಿಟ್ಟು ವಾಪಸ್ಸು ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ ನಡೆಯಿತು. ಅಪಘಾತದಲ್ಲಿ ತಿಪ್ಪೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಸಾವನ್ನಪ್ಪಿದ ಮೂರನೇ ದಿನಕ್ಕೆ ಮೃತನ ಮನೆಗೆ ಅದೇ ನಾಯಿ ಆಗಮಿಸಿದೆ. ಮನೆಗೆ ಬಂದು ತಿಪ್ಪೇಶ್ ಕೊಠಡಿ, ಅಡುಗೆ ಮನೆ ಯನ್ನು ಸುತ್ತಾಡಿದ ನಾಯಿ. ತಿಪ್ಪೇಶ್ ತಾಯಿಯನ್ನು ಅಳದಂತೆ ಸಮಾಧಾನ ಮಾಡಿದೆ. ನಾಯಿ ಸುತ್ತಾಡುವುದನ್ನು ನೋಡಿ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದರ ಸತ್ಯಾಸತ್ಯಾತೆ ಬಗ್ಗೆ ತಿಳಿದುಬಂದಿಲ್ಲ. ವಿಡಿಯೋದಲ್ಲಿ ಈ ಬಗ್ಗೆ ಉಲ್ಲೇಖವಿದೆ. ನಾಯಿಯನ್ನು ಕೂಡ ದೇವರಂತೆ ನಾವು ಕಾಣುತ್ತೇವೆ. ಕೇರಳದಲ್ಲಿ ಪ್ರಸಿದ್ಧ ದೈವಸ್ಥಾನವಿದೆ. ಇನ್ನು ಹಿಂದೂ ದೇವತೆಗಳಲ್ಲಿ ಬೈರವ ದೇವನಿಗೆ ಶ್ವಾನ ವಾಹನವಾಗಿದೆ.
ಕಾರು ಅಪಘಾತ: ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರಗೆ ಗಾಯ
ನಾಯಿಯನ್ನು ದೇವರಂತೆ ಕಾಣುವ ದೇಶ ನಮ್ಮದು:
ಕೇರಳದಲ್ಲಿ ಪ್ರಸಿದ್ಧ ನಾಯಿನ್ನು ಪೂಜಿಸುವ ದೇವಾಲಯವಿದೆ. ಕಣ್ಣೂರು ಜಿಲ್ಲೆಯ ತಾಲಿಪರಂಬ ಎಂಬ ಪ್ರದೇಶದಿಂದ ಸುಮಾರು 10 ಕಿ. ಮೀ ದೂರದಲ್ಲಿರುವ ವಲಪಟ್ಟನಮಂ ನದಿ ದಡದಲ್ಲಿರುವ ಈ ದೇವಾಲಯವನ್ನು ಪರಶಿನಿಕಡವು ಮುತ್ತಪ್ಪನ್ ದೇವಾಲಯವಿದೆ. ಈ ದೇವಾಲಯದ ಆರಾಧ್ಯ ದೇವತೆ ಶ್ರೀ ಮುತ್ತಪ್ಪನ್. ಜನರ ಪ್ರಕಾರ, ಮುತ್ತಪ್ಪನ್ ಇಲ್ಲಿನ ಪ್ರಧಾನ ದೇವತೆಯಾಗಿದ್ದು, ಶಿವ ಮತ್ತು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಸ್ಥಳೀಯ ಜನರ ಪ್ರಕಾರ, ಇಲ್ಲಿನ ಜಾನಪದ ದೇವತೆಗಳು ಅಸಹಾಯಕ ಮತ್ತು ದುರ್ಬಲ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತಾರೆ.
ಇದೊಂದು ದೈವಸ್ಥಾನವಾಗಿದ್ದು, ನಾಯಿಗೆ ಇಲ್ಲಿ ಪ್ರಧಾನ ಪೂಜೆ ನಡೆಯುತ್ತದೆ. ಯಾವುದೇ ದೇಗುಲಗಳಿಗೆ ನಾಯಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಆದರೆ ಇಲ್ಲಿನ ವಿಶೇಷವೆಂದರೆ, ಜನರಲ್ಲದೆ, ನಾಯಿಗಳಿಗೂ ಈ ದೇವಾಲಯದೊಳಗೆ ಹೋಗಲು ಅವಕಾಶವಿದೆ. ಏಕೆಂದರೆ ಅವು ಭಗವಾನ್ ಮುತ್ತಪ್ಪನ್ ನ ವಾಹನಗಳಾಗಿವೆ (vehicle of Muthappan), ಆದ್ದರಿಂದ ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪ್ರಸಾದದ ಹೊರತಾಗಿ, ಮೀನು ಮತ್ತು ಕಳ್ಳನ್ನು (ಸಾರಾಯಿ) ಇಲ್ಲಿ ಮುತ್ತಪ್ಪನ್ ದೇವರಿಗೆ ಅರ್ಪಿಸಲಾಗುತ್ತದೆ, ಇದನ್ನು ನಂತರ ಜನರಿಗೆ ಸಾಂಪ್ರದಾಯಿಕ ಪ್ರಸಾದವಾಗಿ ಬಡಿಸಲಾಗುತ್ತದೆ.