ಆಫ್ರಿಕನ್ ಸಂತತಿಗೆ ಸೇರಿದ ಕ್ರೇಗ್ ಇಲ್ಲಿ ವಯೋಸಹಜ ಕಾರಣಗಳಿಂದ ಸಾವನ್ನಪ್ಪಿದೆ. ಈ ಆನೆಯ ಎರಡು ದಂತಗಳು ತಲಾ 45 ಕೆಜಿ ಭಾರವಿದ್ದು, ಒಂದು ದಂತ ನೆಲಕ್ಕೆ ತಾಗುವಷ್ಟು ಉದ್ದವಿತ್ತು. ತನ್ನ ಉದ್ದನೆಯ ದಂತ, ಗಾಂಭೀರ್ಯದಿಂದ ಗಮನ ಸೆಳೆದಿತ್ತು.
ನೈರೋಬಿ: ಜಗತ್ತಿನಾದ್ಯಂತ ಆನೆಗಳ ಸಂತತಿ ಪ್ರಯತ್ನಗಳಿಗೆ ಸ್ಪೂರ್ತಿ ನೀಡಿದ್ದ, ಆಫ್ರಿಕನ್ ಸಂತತಿಗೆ ಸೇರಿದ ಕ್ರೇಗ್ ಇಲ್ಲಿ ವಯೋಸಹಜ ಕಾರಣಗಳಿಂದ ಸಾವನ್ನಪ್ಪಿದೆ. ಈ ಆನೆಯ ಎರಡು ದಂತಗಳು ತಲಾ 45 ಕೆಜಿ ಭಾರವಿದ್ದು, ಒಂದು ದಂತ ನೆಲಕ್ಕೆ ತಾಗುವಷ್ಟು ಉದ್ದವಿತ್ತು. ತನ್ನ ಉದ್ದನೆಯ ದಂತ ಮತ್ತು ಗಾಂಭೀರ್ಯದಿಂದ ಕ್ರೇಗ್ ಇಡೀ ಜಗತ್ತಿನ ಗಮನ ಸೆಳೆದಿತ್ತು.
1972ರಲ್ಲಿ ಜನಿಸಿದ ಕ್ರೇಗ್
1972ರಲ್ಲಿ ಜನಿಸಿದ ಕ್ರೇಗ್, ಕೀನ್ಯಾದ ಅಂಬೋಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸವಿದ್ದು, ಅಲ್ಲಿನ ಪ್ರಮುಖ ಆಕರ್ಷಣೆಯಾಗಿತ್ತು. ಕೀನ್ಯಾದ ಈ ಐಕಾನಿಕ್ ಆನೆಯನ್ನು ಪ್ರತಿಷ್ಠಿತ ಬಿಯರ್ ತಯಾರಕ ಕಂಪನಿ ಬ್ರೂವರೀಸ್ ತನ್ನ ಜನಪ್ರಿಯ ಟಸ್ಕರ್ ಬ್ರ್ಯಾಂಡ್‌ಗೆ ರಾಯಭಾರಿಯನ್ನಾಗಿ ಮಾಡಿಕೊಂಡಿತ್ತು.
ಸೂಪರ್ ಟಸ್ಕರ್ ಪ್ರಬೇಧಕ್ಕೆ ಸೇರಿದ ಕೇವಲ 84 ಆನೆಗಳಷ್ಟೇ ಉಳಿದಿದೆ.
ಒಂದು ಅಂದಾಜಿನ ಪ್ರಕಾರ ಆಫ್ರಿಕಾದಾದ್ಯಂತ ಸೂಪರ್ ಟಸ್ಕರ್ ಪ್ರಬೇಧಕ್ಕೆ ಸೇರಿದ ಕೇವಲ 84 ಆನೆಗಳಷ್ಟೇ ಉಳಿದಿದೆ. ಅಂಬೋಸೆಲಿಯಲ್ಲಿ ಸದ್ಯ ಕ್ರೇಗ್ ಸಾವಿನ ಬಳಿಕ 9 ಆನೆಗಳಷ್ಟೇ ಉಳಿದಿದೆ.


