ಅಜ್ಜಿಗೆ ಹೊಡೆದ ಲಾಟರಿ... ಬಂದ ಹಣದಲ್ಲಿ ಸರಿ ಅರ್ಧ ಟಿಕೆಟ್ ಮಾರಿದವನಿಗೆ ನೀಡಿ ಉದಾರತೆ
- ಲಾಟರಿ ಟಿಕೆಟ್ ನೀಡಿದವನಿಗೆ ಅರ್ಧ ಹಣ ನೀಡಿದ ಅಜ್ಜಿ
- 00 ಡಾಲರ್‌ನ ಲಾಟರಿ ಗೆದ್ದಿದ್ದ 86 ವರ್ಷದ ವೃದ್ಧೆ
- ವೃದ್ಧೆಯ ಉದಾರತೆಗೆ ಭಾರಿ ಮೆಚ್ಚುಗೆ
ಲಾಟರಿ ಹೊಡೆದರೆ ಸಾಮಾನ್ಯವಾಗಿ ನಾವು ನೀವು ಏನು ಮಾಡುತ್ತೇವೆ. ಹೊಸ ಕಾರು ಕೊಳ್ಳುವುದೋ ಟಿವಿ, ಫ್ರಿಡ್ಜ್ ಖರೀದಿಸುವುದೋ ಅಥವಾ ನಾಳೆಗಾಗಿ ಡಿಪಾಸಿಟ್ ಹಾಕಿ ಇಡುವುದೋ ಮಾಡಬೇಕು ಎಂದೆಲ್ಲಾ ಯೋಚಿಸುತ್ತೇವೆ ಅಲ್ಲವೇ. ಆದರೆ ಇಲ್ಲಿ 86 ವರ್ಷದ ಅಜ್ಜಿಯೊಬ್ಬರಿಗೆ ಲಾಟರಿ ಹೊಡೆದಿದ್ದು, ಅವರೇನು ಮಾಡಿದ್ದಾರೆ ಗೊತ್ತಾ.... ಲಾಟರಿ ಹೊಡೆದ ಸುದ್ದಿ ತಿಳಿದ ಕೂಡಲೇ ಲಾಟರಿ ಟಿಕೆಟ್ ಮಾರಿದಾತನ ಬಳಿ ಹೋಗಿ ತಮಗೆ ಸಿಕ್ಕ ಹಣದಲ್ಲಿ ಸರಿ ಅರ್ಧವನ್ನು ಟಿಕೆಟ್ ಮಾರಿದವನಿಗೆ ನೀಡಿದ್ದಾರೆ ಇದಲ್ಲವೇ ಉದಾರತೆ ಎಂದರೆ.
ಮರಿಯನ್ ಫಾರೆಸ್ಟ್ (Marion Forrest) ಎಂಬ 86 ವರ್ಷದ ವೃದ್ಧೆಯೊಬ್ಬರು 300 ಡಾಲರ್‌ನ ಲಾಟರಿಯನ್ನು ಗೆದ್ದಿದ್ದರು. ಆದರೆ ಅವರು ಎಲ್ಲರಂತೆ ಈ ಹಣವನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವ ಬದಲು ತನಗೆ ಈ ಫ್ಯಾಂಟಸಿ 5 ಲೊಟ್ಟೊ ಟಿಕೆಟ್ ಅನ್ನು ಮಾರಾಟ ಮಾಡಿದ ಕ್ಯಾಷಿಯರ್‌ನೊಂದಿಗೆ ಅರ್ಧದಷ್ಟು ಬಹುಮಾನದ ಹಣವನ್ನು ಹಂಚಿಕೊಳ್ಳಲು ನಿರ್ಧರಿಸಿದರು.
ಮರಿಯನ್ ಫಾರೆಸ್ಟ್ ಅವರು ಡ್ಯೂಕ್(Duke)ನ ಮಿನಿ ಮಾರ್ಕ್(Mini Mark)ಗೆ ದಿನವೂ ಆಗಮಿಸುವ ಗ್ರಾಹಕರಾಗಿದ್ದರು. ಅವರು ಅಲ್ಲಿನ ಕ್ಯಾಷಿಯರ್ ಆಗಿದ್ದ ವಾಲ್ಟರ್‌ನಿಂದ ಲಾಟರಿ ಟಿಕೆಟ್ ಖರೀದಿಸುವಂತೆ ಮರಿಯನ್ ಫಾರೆಸ್ಟ್ ಅವರಿಗೆ ಮನವಿ ಮಾಡಿದ್ದರು. ವಾಲ್ಟರ್ ಅಜ್ಜಿ ಮರಿಯನ್ ಫಾರೆಸ್ಟ್ ಅವರಿಗೆ ಜಾಕ್‌ಪಾಟ್ 500,000 ಡಾಲರ್ ಎಂದು ಹೇಳಿದ್ದರು. ಈ ವೇಳೆ ಮರಿಯನ್ ಫಾರೆಸ್ಟ್ ತಾವು ಲಾಟರಿಯನ್ನು ಗೆದ್ದರೆ, ಅವನನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.
ರಾತ್ರೋ ರಾತ್ರಿ ಬದಲಾಯ್ತು ಆಟೋ ಡ್ರೈವರ್ ಅದೃಷ್ಟ, ರಾಜ್ಯದಿಂದ ಸಿಗಲಿದೆ 12 ಕೋಟಿ ರೂಪಾಯಿ!
ಆದರೆ ಮರಿಯನ್ ಫಾರೆಸ್ಟ್ ಅವರು ಜಾಕ್‌ಪಾಟ್‌ನ್ನು ಗೆದ್ದಿರಲಿಲ್ಲ. ಬದಲಿಗೆ ಅವು 300 ಡಾಲರ್‌ನ ಕ್ಯಾಶ್ ಪ್ರೈಜ್ ಗೆದ್ದಿದ್ದರು. ಅಲ್ಲದೇ ತಾವು ಕೊಟ್ಟ ಮಾತಿನಂತೆ ವಾಲ್ಟರ್‌ಗೆ ಅದರಲ್ಲಿ 150 ಡಾಲರ್‌ನ್ನು ನೀಡಿದರು. ಹಣವನ್ನು ಇಟ್ಟಿದ ಒಂದು ಕವರ್ ಹಾಗೂ ವಾಲ್ಟರ್ ಹೆಸರನ್ನು ಹೊಂದಿದ್ದ ಬಲೂನ್‌ಗಳನ್ನು ಹಿಡಿದುಕೊಂಡು ಅವರು ಶಾಪ್‌ಗೆ ಬಂದುವಾಲ್ಟರ್‌ಗೆ ಕೊಟ್ಟಿದ್ದು ಈ ಮೂಲಕ ಅಜ್ಜಿ ವಾಲ್ಟರ್‌ಗೆ ಸರ್‌ಪ್ರೈಜ್ ನೀಡಿದರು.
ಫ್ಲೈಟ್ ಕ್ಯಾನ್ಸಲ್ : 10 ಲಕ್ಷ ಡಾಲರ್ ಬಂಪರ್ ಲಾಟರಿ!
ಈ ವಿಡಿಯೋದಲ್ಲಿ ಅಜ್ಜಿಯ ಉದಾರತೆಯಿಂದ ಅಚ್ಚರಿಗೊಳಗಾದ ವಾಲ್ಟರ್‌ನನ್ನು ಕೂಡ ಕಾಣಬಹುದು. ವಾಲ್ಟರ್ ಇಡೀ ಪ್ರಪಂಚದಲ್ಲೇ ತುಂಬಾ ಸಿಹಿಯಾದ(ಒಳ್ಳೆಯ) ವ್ಯಕ್ತಿ ಎಂದು ಅಜ್ಜಿ ಹೇಳಿದರು. ಅಲ್ಲದೇ ಇಬ್ಬರು ಪರಸ್ಪರ ತಬ್ಬಿಕೊಂಡರು. ಈ ವೇಳೆ ಈ ಅಂಗಡಿಯಲ್ಲಿ ಇದ್ದವರೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಿದರು.
ಈ ಹಿಂದೆ ದುಬೈನಲ್ಲಿ ಕಾರು ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮೂಲದ ರಂಜಿತ್ ಸೋಮರಾಜನ್ ಮತ್ತು ಅವರ 9 ಸ್ನೇಹಿತರು ಭರ್ಜರಿ 40 ಕೋಟಿ ಮೊತ್ತದ ಲಾಟರಿ ಗೆದ್ದಿದ್ದರು. ದುಬೈ ಸರ್ಕಾರ ನಡೆಸುವ ಲಾಟರಿ ಸ್ಪರ್ಧೆಯಲ್ಲಿ ರಂಜಿತ್ ಮತ್ತು ವಿವಿಧ ದೇಶಗಳಿಗೆ ಸೇರಿದ 10 ಜನರು ಸೇರಿ ತಲಾ 2000 ರೂ. ತೆತ್ತು ಬಂಪರ್ ಲಾಟರಿಯ ಟಿಕೆಟ್ ಖರೀದಿಸಿದ್ದರು. ನಾನು ಯಾವಾಗಲಾದರೂ 2 ಮತ್ತು 3ನೇ ಬಹುಮಾನ ಬರಬಹುದು ಎಂದು ನಿರೀಕ್ಷಿಸುತ್ತಿದ್ದೆ. ಇದಕ್ಕಾಗಿಯೇ ಕಳೆದ 3 ವರ್ಷಗಳಿಂದ ಟಿಕೆಟ್ ಖರೀದಿಸುತ್ತಿದ್ದೆ. ಒಂದಲ್ಲಾ ಒಂದು ದಿನ ಲಾಟರಿ ಹೊಡೆಯಬಹುದು ಎಂಬ ಆಸೆ ಇತ್ತು. ಆದರೆ ಬಂಪರ್ ಬಹುಮಾನದ ನಿರೀಕ್ಷೆ ಇರಲಿಲ್ಲ ಎಂದು ರಂಜಿತ್ ಹೇಳಿದ್ದರು. ಲಾಟರಿಯಿಂದಾಗಿ ಎಲ್ಲರಿಗೂ ತಲಾ 4 ಕೋಟಿ ರೂ.ನಷ್ಟು ಹಣ ಸಿಕ್ಕಿತ್ತು.