ರಾತ್ರೋ ರಾತ್ರಿ ಬದಲಾಯ್ತು ಆಟೋ ಡ್ರೈವರ್ ಅದೃಷ್ಟ, ರಾಜ್ಯದಿಂದ ಸಿಗಲಿದೆ 12 ಕೋಟಿ ರೂಪಾಯಿ!
* ದಿನ ಬೆಳಗಾಗುತ್ತಿದ್ದಂತೆಯೇ ಆಟೋ ಡ್ರೈವರ್ ಖಾತೆಗೆ ಬಂತು ಕೋಟಿ ಕೋಟಿ ಮೊತ್ತ
* ದಿನ ಬೆಳಗಾಗುತ್ತಿದ್ದಂತೆಯೇ ಅದೃಷ್ಟ ಬದಲಾಯಿಸಿದ ಲಾಟರಿ ಟಿಕೆಟ್
* ಕೇರಳದಲ್ಲಿ ಓಣಂ ಬಂಪರ್ ಲಾಟರಿ ಟಿಕೆಟ್ ಫಲಿತಾಂಶ
ಕೊಚ್ಚಿ(ಸೆ.21): ಕೇರಳ(Kerala)ದಲ್ಲಿ ದಿನ ಬೆಳಗಾಗುವಷ್ಟರಲ್ಲಿ ಆಟೋ ಡ್ರೈವರ್ ಒಬ್ಬರ ಅದೃಷ್ಟ ಖುಲಾಯಿಸಿ ಹಣದ ಹೊಳೆಯೇ ಹರಿದಿದೆ. ಹೌದು ಆ ಡ್ರೈವರ್ 12 ಕೋಟಿ ರೂಪಾಯಿ ಮೊತ್ತದ ಲಾಟರಿ(Lottery) ಟಿಕೆಟ್ ಖರೀದಿಸಿದ್ದು, ಸದ್ಯ ಆತನ ಮನೆಗೆ ಲಕ್ಷ್ಮಿ ಆಗಮಿಸಿದ್ದಾಳೆ. ಲಾಟರಿಯ ಮೊದಲ ಬಹುಮಾನ ಆಟೋ ಚಾಲಕನ ಪಾಲಾಗಿದೆ.
ಅದೃಷ್ಟ ಬದಲಾಯಿಸಿತು ಓಣಂ ಬಂಪರ್ ಲಾಟರಿ
ಓಣಂ(Onam) ಬಂಪರ್ ಲಾಟರಿ ಮೂಲಕ ಆಟೋ ಚಾಲಕ ಜಯ್‌ಪಾಲನ್ ಅವರ ಅದೃಷ್ಟ ಅರಳಿದೆ. ಲಾಟರಿ ಡ್ರಾ ಆದ ಒಂದು ದಿನದ ಬಳಿಕ ಆಟೋ ಡ್ರೈವರ್ ವಿಜೇತ ಎಂಬ ಮಾಹಿತಿ ಬಹಿರಂಗವಾಗಿದೆ. ಇನ್ನು ಈ ವಿಚಾರ ತಿಳಿದ ಆಟೋ ಡ್ರೈವರ್ ಕುಣಿದು ಕುಪ್ಪಳಿಸಿದ್ದಾರೆ. ಇಡೀ ಕುಟುಂಬದಲ್ಲಿ ಸಮಭ್ರಮದ ವಾತಾವರಣ ಮನೆ ಮಾಡಿದೆ. ಇನ್ನು ಮಾಧ್ಯಮಗಳ ವರದಿಯನ್ವಯ ಈ ಆಟೋ ಚಾಲಕ ಕೇರಳ ಕೊಚ್ಚಿ ಬಳಿಯ ಮರಡೂ ನಿವಾಸಿ.
ಫ್ಯಾನ್ಸಿ ನಂಬರ್ ಬಗ್ಗೆ ತಿಳಿದಿಲ್ಲ
ಓಣಂ ಹಬ್ಬದ ಮರುದಿನವೇ ಈ ಲಾಟರಿ ಡ್ರಾ ನಡೆಎದಿದ್ದು, ಫಲಿತಾಂಶ ಬಿಡುಗಡೆ ಮಾಡಲಾಗಿದೆ. ವಿಜೇತರ ಟಿಕೆಟ್ ಸಂಖ್ಯೆ TE 645465 ಆಗಿತ್ತು. ಲಾಟರಿ ಗೆದ್ದ ನಂತರ, ಜಯಪಾಲನ್ ಲಾಟರಿ ಖರೀದಿಸಿದ ವಿವರ ತಿಳಿಸಿದ್ದು, ತಾನು ಸೆಪ್ಟೆಂಬರ್ 10 ರಂದು ತ್ರಿಪುನಿತುರಾದಲ್ಲಿ ಈ ಲಾಟರಿ ಟಿಕೆಟ್ ಖರೀದಿಸಿದ್ದೆ. ಆದರೆ ಲಾಟರಿ ಪಲಿತಾಂಶ ಪ್ರಕಟವಾದ ಬಳಿಕವೇ ಇದೊಂದು ಫ್ಯಾನ್ಸಿ ನಂಬರ್(Fancy Number) ಎಂಬುವುದು ತಿಳಿದು ಬಂದಿದೆ ಎಂದಿದ್ದಾರೆ.
ಕೇರಳ ರಾಜ್ಯ ಲಾಟರಿ ನಿರ್ದೇಶನಾಲಯದಿಂದ ಮಾಹಿತಿ
ಜಯಪಾಲನ್ ಲಾಟರಿಯಲ್ಲಿ 12 ಕೋಟಿ ಗೆದ್ದಿದ್ದಾರೆ, ಆದರೆ ಅವರು ಕೇವಲ 7 ಕೋಟಿ ಪಡೆಯುತ್ತಾರೆ. ಈ ಲಾಟರಿಯ ಮೇಲೆ ವಾಸ್ತವವಾಗಿ 5 ಕೋಟಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ತೆರಿಗೆ ಪಾವತಿಸಿದ ನಂತರ ಜಯಪಾಲನ್ ಸುಮಾರು 7 ಕೋಟಿ ರೂ ಪಡೆಯಲು ಅರ್ಹರಾಗುತ್ತಾರೆ ಎಂದು ಕೇರಳ ರಾಜ್ಯ ಲಾಟರಿ(Lottery) ನಿರ್ದೇಶನಾಲಯ ಮಾಹಿತಿಯನ್ನು ಹಂಚಿಕೊಂಡಿದೆ. ಈ ಲಾಟರಿಯ ಫಲಿತಾಂಶಕ್ಕಾಗಿ ತಿರುವನಂತಪುರಂನಲ್ಲಿ ಭಾನುವಾರ ಡ್ರಾ ನಡೆದಿತ್ತು. ಈ ಸಮಾರಂಭದಲ್ಲಿ ರಾಜ್ಯಾದ್ಯಂತ ಮಾರಾಟವಾಗಿರುವ 54 ಲಕ್ಷ ಲಾಟರಿ ಟಿಕೆಟ್‌ಗಳಿಗೆ ಓಣಂ ಬಂಪರ್ ಲಾಟರಿ ಫಲಿತಾಂಶ ಘೋಷಿಸಲಾಗಿದೆ.