Asianet Suvarna News Asianet Suvarna News

ಫ್ಲೈಟ್‌ ಕ್ಯಾನ್ಸಲ್‌ : 10 ಲಕ್ಷ ಡಾಲರ್‌ ಬಂಪರ್‌ ಲಾಟರಿ!

  • ವಿಮಾನ ರದ್ದಾಗಿದ್ದರಿಂದ ಭಾರೀ ಮೊತ್ತೊದ ಲಾಟರಿ ಹಣ ಗಿಟ್ಟಿಸಿಕೊಂಡ ಮಹಿಳೆ
  •  ಸಮಯ ಕಳೆಯಲು ಲಾಟರಿ ಟಿಕೆಟ್‌ ತೆಗೆದುಕೊಂಡು ಬರೋಬ್ಬರಿ 10 ಲಕ್ಷ ಡಾಲರ್‌ ಜಾಕ್‌ಪಾಟ್‌  
  • ಟೈಮ್‌ಪಾಸ್‌ಗೆಂದು ಸ್ಕ್ರಾಚ್‌ ಆಫ್‌ ಟಿಕೆಟ್‌ ಖರೀದಿಸಿದ್ದರು. 
US Woman Wins Huge Lottery Prize after Missing Her Flight  snr
Author
Bengaluru, First Published Aug 6, 2021, 9:32 AM IST

ನ್ಯೂಯಾರ್ಕ್ (ಆ.06):  ವಿಮಾನ ರದ್ದಾಗಿದ್ದರಿಂದ ಮತ್ತೊಂದು ವಿಮಾನಕ್ಕಾಗಿ ಕಾಯುತ್ತಾ ಕುಳಿತ ಮಹಿಳೆಯೊಬ್ಬರು ಸಮಯ ಕಳೆಯಲು ಲಾಟರಿ ಟಿಕೆಟ್‌ ತೆಗೆದುಕೊಂಡು ಬರೋಬ್ಬರಿ 10 ಲಕ್ಷ ಡಾಲರ್‌ ಜಾಕ್‌ಪಾಟ್‌ ಹೊಡೆದ ಅಚ್ಚರಿಯ ಘಟನೆ ಅಮೆರಿಕದಲ್ಲಿ ನಡೆದಿದೆ. 

40 ಕೋಟಿ ಲಾಟರಿ ಗೆದ್ದ ಭಾರತೀಯ, 9 ಮಂದಿ ಸ್ನೇಹಿತರು!

ಏಂಜೆಲಾ ಕಾರಾವೆಲ್ಲಾ (51) ಎಂಬವರು ಹೋಗಬೇಕಿದ್ದ ವಿಮಾನ ಅನಿರೀಕ್ಷಿತವಾಗಿ ರದ್ದಾಗಿತ್ತು. ಮತ್ತೊಂದು ವಿಮಾನಕ್ಕಾಗಿ ಕಾದು ಕುಳಿತ ಅವರು ಟೈಮ್‌ಪಾಸ್‌ಗೆಂದು ಸ್ಕ್ರಾಚ್‌ ಆಫ್‌ ಟಿಕೆಟ್‌ ಖರೀದಿಸಿದ್ದರು. 

ಈ ಪೈಕಿ ಒಂದು ಟಿಕೆಟ್‌ನಲ್ಲಿ ಬರೋಬ್ಬರಿ 10 ಲಕ್ಷ ಡಾಲರ್‌ ಬಹುಮಾನ ಗೆದ್ದು, ಬಂಪರ್‌ ಹೊಡೆದಿದ್ದಾರೆ.

Follow Us:
Download App:
  • android
  • ios