7 ವರ್ಷದಲ್ಲಿ 813 ಅಪಘಾತ, 1473 ಜನರ ಸಾವು, ವಿಮಾನ ಪ್ರಯಾಣ ಎಷ್ಟು ಸೇಫ್?

ದಕ್ಷಿಣ ಕೊರಿಯಾ ವಿಮಾನ ಅಪಘಾತ ಜನರಲ್ಲಿ ಆತಂಕ ಮೂಡಿಸಿದೆ. 179 ಮಂದಿಯ ಸಾವನ್ನು ಅರಗಿಸಿಕೊಳ್ಳಲಾಗ್ತಿಲ್ಲ. ವರ್ಷಾಂತ್ಯದಲ್ಲಿ ಈ ದುರಂತ ನಡೆದಿದ್ದು, ವಿಮಾನ ಪ್ರಯಾಣ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡ್ತಿದೆ. 
 

813 plane crashes worldwide in 7 years roo

ದಕ್ಷಿಣ ಕೊರಿಯಾ ವಿಮಾನ ಪತನ (South Korea plane crash) ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ವರ್ಷದ ಕೊನೆಯಲ್ಲಿ ನಡೆದ ಈ ದುರಂತದಲ್ಲಿ 179 ಮಂದಿ ಸಾವನ್ನಪ್ಪಿದ್ದು, ಇಬ್ಬರು ಮಾತ್ರ ಬದುಕುಳಿದಿದ್ದಾರೆ. ಈ ವಿಮಾನ, ಪ್ರಯಾಣಿಕರಲ್ಲಿ ಆತಂಕ ಹೆಚ್ಚಿಸಿದೆ. ವಿಮಾನ ಪ್ರಯಾಣ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ವಿಮಾನ ಹಾರಾಟದ ಸಂಖ್ಯೆ ಹೆಚ್ಚಾಗಿದೆ. ವಿಮಾನದಲ್ಲಿ ಪ್ರಯಾಣ ಬೆಳೆಸುವವರ ಸಂಖ್ಯೆ ಕೂಡ ಏರಿಕೆಯಾಗಿದೆ. ಹಾಗೆಯೇ ವಿಮಾನ ಅಪಘಾತದಲ್ಲೂ ಏರಿಕೆ ಕಂಡು ಬರ್ತಿದೆ. ಪಕ್ಷಿ ಡಿಕ್ಕಿ ಹೊಡೆದಿದ್ದು, ಹವಾಮಾನ ಕೈಕೊಟ್ಟಿದ್ದು, ತಾಂತ್ರಿಕ ತೊಂದರೆ ಹೀಗೆ ನಾನಾ ಕಾರಣಗಳಿಗೆ ವಿಮಾನ ಅಪಘಾತಗಳು ನಡೆಯುತ್ತಿದೆ.

ವಿಮಾನ ಅಪಘಾತದ ಡೇಟಾ ನೋಡಿದ್ರೆ ಭಯ ಹುಟ್ಟೋದು ಸಾಮಾನ್ಯ. 2023ರಲ್ಲಿ ವಿಶ್ವದಾದ್ಯಂತ 109 ವಿಮಾನ ಅಪಘಾತಗಳು ವರದಿಯಾಗಿವೆ. ಅದ್ರಲ್ಲಿ 120 ಮಂದಿ ಸಾವನ್ನಪ್ಪಿದ್ದಾರೆ. ಇದನ್ನು ಡಿವೈಡ್ ಮಾಡಿದ್ರೆ ತಿಂಗಳಿಗೆ ಒಂಭತ್ತು ವಿಮಾನ ಪತನ ಹಾಗೂ 10 ಮಂದಿ ಸಾವನ್ನಪ್ಪಿದಂತಾಗುತ್ತದೆ. ಏವಿಯೇಷನ್ ಸೇಫ್ಟಿ (aviation safety) ಪ್ರಕಾರ, ಕಳೆದ ವರ್ಷ ಅಮೆರಿಕದಲ್ಲಿ ಗರಿಷ್ಠ 34 ವಿಮಾನ ಅಪಘಾತಗಳು ಸಂಭವಿಸಿವೆ.

ದಕ್ಷಿಣ ಕೊರಿಯಾ ವಿಮಾನ ಪತನ ಹುಟ್ಟಿಸಿದ್ದೇಕೆ ಅನುಮಾನ?

ಏವಿಯೇಷನ್ ಸೇಫ್ಟಿ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಡೇಟಾ ನೀಡಿದೆ. ಅದ್ರ ಪ್ರಕಾರ, ಕಳೆದ 7 ವರ್ಷಗಳಲ್ಲಿ ಅಂದ್ರೆ 2017 ರಿಂದ 2023 ರವರೆಗೆ 813 ವಿಮಾನಗಳು ಪತನಗೊಂಡಿದ್ದು, 1473 ಮಂದಿ ಸಾವನ್ನಪ್ಪಿದ್ದಾರೆ. ಬಹುತೇಕ ವಿಮಾನ ಅಪಘಾತಗಳು ಲ್ಯಾಂಡಿಂಗ್ ವೇಳೆ ಸಂಭವಿಸುತ್ತವೆ. 813 ಅಪಘಾತಗಳ ಪೈಕಿ 261 ಅಪಘಾತ, ಲ್ಯಾಂಡಿಂಗ್ ವೇಳೆ ಸಂಭವಿಸಿದೆ. ಮತ್ತೆ 212 ಪ್ರಕರಣಗಳು ಹಾರಾಟದ ವೇಳೆ ನಡೆದಿದೆ. ಭಾರತದಲ್ಲಿ ಕಳೆದ ಏಳು ವರ್ಷಗಳಲ್ಲಿ 14 ವಿಮಾನಗಳು ಪತನಗೊಂಡಿವೆ. ಕಳೆದ ವರ್ಷ 37 ಟೇಕ್ಅಪ್ ಸಮಯದಲ್ಲಿ ಹಾಗೂ 30 ಲ್ಯಾಂಡಿಂಗ್ ಸಮಯದಲ್ಲಿ ನಡೆದಿದೆ. ಒಂದ್ಕಡೆ ವಿಮಾನ ಅಪಘಾತದ ಸಂಖ್ಯೆ ಹೆಚ್ಚಾಗ್ತಿದ್ದರೂ, ವಿಮಾನ ಪ್ರಯಾಣವನ್ನೇ ವಿಶ್ವದಲ್ಲಿ ಅತ್ಯಂತ ಸುರಕ್ಷಿತ ಪ್ರಯಾಣವೆಂದು  ನಂಬಲಾಗಿದೆ. ವಿಮಾನ ಪ್ರಯಾಣವು ಅತ್ಯಂತ ಸುರಕ್ಷಿತ ಪ್ರಯಾಣ ಎಂದು ಫ್ಲೋರಿಡಾದ ಎಂಬ್ರಿ-ರಿಡಲ್ ಏರೋನಾಟಿಕಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆಂಥೋನಿ ಬ್ರಿಕ್‌ಹೌಸ್ ಹೇಳಿದ್ದಾರೆ. ನೆಲದ ಮೇಲೆ ವಾಹನ ಚಲಾಯಿಸುವ ಬದಲು 38 ಸಾವಿರ ಅಡಿ ಎತ್ತರದಲ್ಲಿ ಹಾರುವುದು ಸುರಕ್ಷಿತ ಎಂದು ಅವರು ನಂಬುತ್ತಾರೆ.  

ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (IATA) ವರದಿಯ ಪ್ರಕಾರ, 2023ರಲ್ಲಿ ವಿಶ್ವದಾದ್ಯಂತ 3.7 ಕೋಟಿಗೂ ಹೆಚ್ಚು ವಿಮಾನಗಳು ಹಾರಾಟ ನಡೆಸಿವೆ. ಅದ್ರಲ್ಲಿ ಕೆಲವೇ ಕೆಲವು ಮಂದಿ ಸಾವನ್ನಪ್ಪಿದ್ದಾರೆ. ಹಿಂದಿನ ವರ್ಷ ನೇಪಾಳದಲ್ಲಿ ವಿಮಾನ ಕ್ರ್ಯಾಶ್ ಆಗಿತ್ತು. ಅದ್ರಲ್ಲಿ 72 ಮಂದಿ ಸಾವನ್ನಪ್ಪಿದ್ದರು. 2018 ರಿಂದ 2022ರವರೆಗೆ 1.34 ಕೋಟಿ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ನಡೆಸಿದ್ರೆ ಅದ್ರಲ್ಲಿ ಸತ್ತವರು ಕೇವಲ ಒಂದು ಪರ್ಸೆಂಟ್ ಮಾತ್ರ. ಹಾಗಾಗಿಯೇ ಅದನ್ನು ಸುರಕ್ಷಿತ ಪ್ರಯಾಣ ಎಂದು ನಂಬಲಾಗುತ್ತದೆ.

ಏನಾಯ್ತು? ನಾನೇಕೆ ಇಲ್ಲಿದ್ದೇನೆ? ಕೊರಿಯಾ ವಿಮಾನ ದುರಂತದಲ್ಲಿ ಬದುಕುಳಿದವರ ಆಘಾತಕಾರಿ ಅನುಭವ

ವಿಶ್ವದ ಮೊದಲ ವಿಮಾನ ಅಪಘಾತ ಯಾವ್ದು? : ಜೂನ್ 15, 1785 ರಂದು ಫ್ರಾನ್ಸ್ ವಿಮಾರೆಕ್ಸ್ ಬಳಿ ರೋಸಿಯರ್ ಏರ್ ಬಲೂನ್ ಅಪಘಾತವನ್ನು ವಿಶ್ವದ ಮೊದಲ ವಿಮಾನ ದುರ್ಘಟನೆ ಎಂದು ಪರಿಗಣಿಸಲಾಗುತ್ತದೆ. ರೋಜಿಯರ್ ಏರ್ ಬಲೂನ್ ಸಂಶೋಧಕ ಜೀನ್ ಫ್ರಾಂಕೋಯಿಸ್ ಪಿಲಾಟ್ರೆ ಡಿ ರೋಜಿಯರ್ ಈ ಅಪಘಾತದಲ್ಲಿ ಸಾವನ್ನಪ್ಪಿದರು. ಇನ್ನು 1908 ಸೆಪ್ಟೆಂಬರ್ 17 ರಂದು ಅಮೆರಿಕದ ವರ್ಜೀನಿಯಾದಲ್ಲಿ ಮಾಡೆಲ್-ಎ ವಿಮಾನ ಅಪಘಾತಕ್ಕೀಡಾಗಿತ್ತು. ಇದನ್ನು ಮೊದಲ ಹಾರಾಟ ವಿಮಾನ ಅಪಘಾತ ಎಂದು ಪರಿಗಣಿಸಲಾಗುತ್ತದೆ. 

Latest Videos
Follow Us:
Download App:
  • android
  • ios