ಹೆಬ್ಬಾವನ್ನು ಹಿಡಿಯಲು ಸೀಲಿಂಗ್‌ನ ಒಂದು ಭಾಗವನ್ನು ಒಡೆಯಬೇಕಾಯಿತು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಸೀಲಿಂಗ್‌ನ ಒಡೆದ ಭಾಗ ಕಾಣಬಹುದು.

ಮಲೇಷ್ಯಾ: ಮನೆಯೊಳಗೆ ದೊಡ್ಡ ಹೆಬ್ಬಾವು ನುಗ್ಗಿದರೆ ಏನು ಮಾಡ್ತೀರಿ? ಹೆದರಿ ಹೋಗ್ತೀರ ಅಲ್ವಾ? ಅಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಮಲೇಷ್ಯಾದ ಕಮುಂಟಿಂಗ್‌ನ ಕಂಪಾಂಗ್ ಡ್ಯೂವ್‌ನಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಹೆಬ್ಬಾವನ್ನು ಅಲ್ಲಿಂದ ಹೊರಗೆ ತೆಗೆಯುವ ದೃಶ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೃಹತ್ ಹೆಬ್ಬಾವು ಕಂಡ ನೆಟ್ಟಿಗರು ಭಯದಿಂದಲೇ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಹತ್ತಿರದ ತಾಳೆ ಮರದಿಂದ ಹಾವು ಮನೆಯೊಳಗೆ ನುಗ್ಗಿದೆ ಎಂದು ವರದಿಯಾಗಿದೆ. ಮೇಲ್ಛಾವಣಿಯಿಂದ ಹೆಬ್ಬಾವು ಒಳಗೆ ಬರುತ್ತಿರೋದನ್ನ ಗಮನಿಸಿದ ಮನೆಯವರು ಸ್ಥಳೀಯ ಸಹಾಯವಾಣಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಂಗ್ಕಟನ್ ಪೆರ್ತಹನನ್ ಅವಾಮ್ (Angkatan Pertahanan Awam) ಅಧಿಕಾರಿಗಳು ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

ನ್ಯೂ ಸ್ಟೇಟ್ಸ್ ಟೈಮ್ಸ್ ವರದಿ ಪ್ರಕಾರ, ಹೆಬ್ಬಾವು ಮನೆ ಪಕ್ಕದ ತೋಟದಲ್ಲಿರುವ ತಾಳೆ ಮರದಿಂದ ಮನೆಯೊಳಗೆ ಬಂದಿದೆ. ಮೇಲಿನಿಂದ ದೊಡ್ಡ ವಸ್ತು ಬಿದ್ದಂತಾಯ್ತು. ನೋಡಿದ್ರೆ ಅದು ದೊಡ್ಡ ಹೆಬ್ಬಾವು ಅಗಿತ್ತು. ಕೂಡಲೇ ನಾವು ಮಲೇಷ್ಯಾದ ತಾಯಿಪಿಂಗ್ ಜಿಲ್ಲೆಯ ನಾಗರೀಕ ರಕ್ಷಾ ಬಲ ಸಿಬ್ಬಂದಿಗೆ ಕರೆ ಮಾಡಿದೇವು. ರಾತ್ರಿ ಸುಮಾರು 8 ಗಂಟೆಗೆ ಬಂದ ಅಧಿಕಾರಿಗಳು ಒಂದು ಕಡೆಯ ಸೀಲಿಂಗ್ ಒಡೆದು ಹೆಬ್ಬಾವು ಹಿಡಿದರು ಎಂದು ಮನೆ ಸದಸ್ಯರು ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್‌ ಗಾಂಧಿಯನ್ನು ದೇಶದ್ರೋಹಿ ಎಂದವರೇ ನಿಜವಾದ ದೇಶದ್ರೋಹಿ: ಸಿದ್ದರಾಮಯ್ಯ

ಹೆಬ್ಬಾವು 5 ಮೀಟರ್ (16 ಅಡಿ) ಉದ್ದ ಮತ್ತು 80 ಕೆಜಿ ತೂಕವನ್ನು ಹೊಂದಿತ್ತು. ಮೊದಲು ಹೆಬ್ಬಾವನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿತ್ತು. ನಂತರ ಸಮೀಪದ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಹೆಬ್ಬಾವು ರಕ್ಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ವೇಗದಿಂದ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಅಬ್ಬಾ ಎಂಥಾ ದೈತ್ಯ ಸರೀಸೃಪ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹೆಬ್ಬಾವು ಸೋಫಾದ ಮೇಲೆ ಬೀಳುದನ್ನು ನೋಡಿದ್ರೆ ಭಯವಾಗುತ್ತದೆ. ಇಂತಹ ಹೆಬ್ಬಾವುಗಳು ಹೆಚ್ಚಾಗಿ ಆಸ್ಟ್ರೇಲಿಯಾದಲ್ಲಿ ಕಂಡು ಬರುತ್ತವೆ. ಬಹುಶಃ ಆಸ್ಟ್ರೇಲಿಯಾದಿಂದ ಮೇಲೆಷ್ಯಾಗೆ ಬಂದಿರಬೇಕು ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಯಾವುದೇ ಆಫರ್ ಇರದಿದ್ರೂ 1 ಕೋಟಿ ಸಂಬಳದ ಕೆಲಸಕ್ಕೆ ಗುಡ್‌ಬೈ ಹೇಳಿದ ಬೆಂಗಳೂರಿನ ಟೆಕ್ಕಿ

View post on Instagram