ರಾಹುಲ್‌ ಗಾಂಧಿಯನ್ನು ದೇಶದ್ರೋಹಿ ಎಂದವರೇ ನಿಜವಾದ ದೇಶದ್ರೋಹಿ: ಸಿದ್ದರಾಮಯ್ಯ

ರಾಹುಲ್ ಗಾಂಧಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆಂದು ಹೋರಾಡುತ್ತಿರುವವರು. ಅಂತಹ ವ್ಯಕ್ತಿಯನ್ನು ದೇಶದ್ರೋಹಿ ಎಂದು ಹೇಳಿದವರೇ ನಿಜವಾದ ದೇಶದ್ರೋಹಿಗಳು ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ 

Karnataka CM Siddaramaiah Slams BJP National Spokesperson Sambit Patra grg

ಬೆಂಗಳೂರು(ಡಿ.07): ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮಹಾನ್ ದೇಶಭಕ್ತ. ಅಂತಹವರನ್ನು ದೇಶದ್ರೋಹಿ ಎಂದು ಯಾರು ಹೇಳಿದ್ದಾರೋ ಅವರೇ ನಿಜವಾದ ದೇಶ ದ್ರೋಹಿಗಳು ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ. 

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ದೇಶದ್ರೋಹಿ ಎಂದು ಟೀಕಿಸಿದ್ದಾರಲ್ವಾ ಎಂಬ ಪ್ರಶ್ನೆಗೆ, ರಾಹುಲ್ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕೆಂದು ಹೋರಾಡುತ್ತಿ ರುವವರು. ಅಂತಹ ವ್ಯಕ್ತಿಯನ್ನು ದೇಶ ದ್ರೋಹಿ ಎಂದು ಹೇಳಿದವರೇ ನಿಜವಾದ ದೇಶದ್ರೋಹಿಗಳು ಎಂದರು.

ಅಜ್ಜಿ ಅಬ್ಬರಿಸಿದ್ದ ಸಂಸತ್‌ಗೆ ಮೊಮ್ಮಗಳ ದೊಡ್ಡ ಹೆಜ್ಜೆ!, ಅದೇ ಚಹರೆ ಅದೇ ಕಿಚ್ಚು ಮತ್ತೆ ಬಂದ್ರಾ ಇಂದಿರಾ?

ರಾಹುಲ್ ಗಾಂಧಿ ದೇಶದ್ರೋಹಿ ಎಂದ ಬಿಜೆಪಿ ನಾಯಕ ಸಂಬಿತ್ ಪಾತ್ರಾ

ನವದೆಹಲಿ:  ಲೋಕಸಭಾ ಕಲಾಪದಲ್ಲಿ ಕಾಂಗ್ರೆಸ್ ಪಕ್ಷ ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದೆ. ಈ ನಡುವೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ನೇರವಾಗಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು.  

ನೀವೆಲ್ಲರೂ ಸಂಸತ್‌ನಲ್ಲಿ ಏನಾಗ್ತಿದೆ ಎಂದು ನೋಡುತ್ತಿದ್ದೀರಿ. ದೇಶದ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯತ್ತಿವೆ. ಭಾರತದ ಷೇರು ಮಾರುಕಟ್ಟೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸಂಬಿತ್ ಪಾತ್ರಾ ಅರೋಪಿಸಿದ್ದರು.  

ಕೆಲವು ಶಕ್ತಿಗಳು ಭಾರತದ ಷೇರು ಮಾರುಕಟ್ಟೆ ಮತ್ತು ದೇಶದ ಉದ್ಯೋಗಪತಿಗಳನ್ನು ಟಾರ್ಗೆಟ್ ಮಾಡುವ  ಕೆಲಸ ಮಾಡುತ್ತಿವೆ. ಈ ಮೂಲಕ ಭಾರತವನ್ನು ಒಡೆಯುವ ಪ್ರಯತ್ನದಲ್ಲಿದ್ದಾರೆ ಎಂದು ಸಂಬಿತ್ ಪಾತ್ರಾ ಗಂಭೀರ ಆರೋಪ ಮಾಡಿದರು. ಸಂಸತ್‌ನ ಸದಸ್ಯರು ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಓರ್ವ ದೇಶದ್ರೋಹಿ ಎಂದು ಕಿಡಿಕಾರಿದ್ದರು.

ಜಾರ್ಜ್ ಸೊರೊಸ್ ಓಪನ್ ಸೊಸೈಟಿಗೆ ಫಂಡಿಂಗ್  ಮಾಡುತ್ತಾರೆ. ನಂತರ ದೇಶದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದು ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದ ಸಂಬಿತ್ ಪಾತ್ರಾ, ಕೆಲ ದೇಶವಿರೋಧಿ ಶಕ್ತಿಗಳು ಭಾರತವನ್ನು ಒಡೆಯಲು ಬಯಸುತ್ತಿವೆ. ಫ್ರೆಂಚ್ ಪತ್ರಿಕೆ ಮಾಧ್ಯಮವು ಈ ಬಗ್ಗೆ ಕೆಲವು ಬಹಿರಂಗಪಡಿಸಿದೆ. ರಾಹುಲ್ ಗಾಂಧಿ ಕೂಡ ಜಾರ್ಜ್ ಸೊರೊಸ್ ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರ ನಡುವೆ ಸಂಬಂಧವಿದ್ದು, ರಾಹುಲ್ ಗಾಂಧಿ ಒರ್ವ ದೇಶದ್ರೋಹಿ ಎಂದು ಹೇಳಲು ಯಾವುದೇ ಆಳಕಿಲ್ಲ ಎಂದು ಗುಡುಗಿದ್ದರು.

ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕರು, ಸಂಸತ್ ಆವರಣದಲ್ಲಿ ಉದ್ಯಮಿ ಗೌತಮ್ ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ "ಮೋದಿ ಮತ್ತು ಅದಾನಿ ಇಬ್ಬರು ಒಂದೇ" ಎಂದು ಘೋಷಣೆ ಕೂಗಿದರು. ವಿರೋಧ ಪಕ್ಷಗಳು ಗೌತಮ್ ಅದಾನಿ  ವಿರುದ್ಧ  ತನಿಖೆ ನಡೆಸಬೇಕೆಂದು ಸಂಸತ್‌ ನಲ್ಲಿ ಆಗ್ರಹಿಸಿವೆ.

ರಾಹುಲ್ ಗಾಂಧಿ ಮತ್ತೊಮ್ಮೆ ವಿಫಲ ನಾಯಕ ಎಂಬುದು ಸಾಬೀತು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಸಂಭಲ್ ಮಸೀದಿ ಸಮೀಕ್ಷೆ ವೇಳೆ ಹಿಂಸೆಗೆ ಪಾಕ್ ನಂಟು: ರಾಹುಲ್ ಭೇಟಿಗೆ ಪೊಲೀಸರ ತಡೆ

ಗಾಜಿಯಾಬಾದ್ : ಮಸೀದಿ ಸಮೀಕ್ಷೆ ವಿವಾದದ ಕಾರಣ ಕೋಮುಗಲಭೆಗೆ ಒಳಗಾಗಿದ್ದ ಉತ್ತರ ಪ್ರದೇಶದ ಸಂಭಲ್‌ಗೆ ಹೊರಟಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವನ್ನು ಉತ್ತರ ಪ್ರದೇಶ ಪೊಲೀಸರು ಗಾಜಿಯಾಬಾದ್‌ ಬಳಿಯ ಗಾಜಿಪುರ ಗಡಿಯಲ್ಲೇ ತಡೆದಿದ್ದಾರೆ. ಹೀಗಾಗಿ ಎಲ್ಲ ನಾಯಕರು ದೆಹಲಿ ಉತ್ತರ ಪ್ರದೇಶ ಗಡಿಯಲ್ಲಿ ಸುಮಾರು 2 ಗಂಟೆಗಳ ಕಾಲ ತಂಗಿ, ನಂತರ ದೆಹಲಿಗೆ ಮರಳಿದ್ದರು. 

ರಾಹುಲ್‌ ಆಕ್ರೋಶ:

ಗಾಜಿಪುರ ಗಡಿಯಲ್ಲಿ ತಡೆದ ನಂತರ ಪೊಲೀಸರೊಂದಿಗೆ ಮಾತನಾಡಿದ ರಾಹುಲ್‌, ಸಂಭಲ್‌ಗೆ ಪೊಲೀಸ್ ರಕ್ಷಣೆಯಲ್ಲಿ ಏಕಾಂಗಿಯಾಗಿ ಹೋಗಲು ಸಿದ್ಧ ಎಂದು ಹೇಳಿದರು. ಆದರೆ ಪೊಲೀಸರು ಅನುಮತಿಸಲಿಲ್ಲ. ಏಕೆಂದರೆ ಡಿ.10ರವರೆಗೆ ಸಂಭಲ್‌ಗೆ ಬಾಹ್ಯ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿತ್ತು.  ಬಳಿಕ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಸುದ್ದಿಗಾರರ ಜತೆ ಮಾತನಾಡಿದ ರಾಹುಲ್‌, ಪೊಲೀಸರು ತಡೆದ ಕಾರಣ ವಿರೋಧ ಪಕ್ಷದ ನಾಯಕನ ಹಕ್ಕಿಗೆ ಚ್ಯುತಿ ಆದಂತಾಗಿದೆ. ಪೊಲೀಸರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ನಾವು ಸಂಭಲ್‌ಗೆ ಹೋಗಿ ಅಲ್ಲಿ ಏನಾಯಿತು ಎಂಬುದನ್ನು ನೋಡಿ, ಜನರನ್ನು ಭೇಟಿಯಾಗಲು ಬಯಸುತ್ತೇವೆ. ನಮಗೆ ನೀಡಿರುವ ತಡೆಯು ಸಂವಿಧಾನವನ್ನು ಕೊನೆಗೊಳಿಸುವ ಪ್ರಯತ್ನ. ಆದರೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದಿದ್ದರು. 

Latest Videos
Follow Us:
Download App:
  • android
  • ios