ಅಮೆರಿಕದಲ್ಲಿ ಮತ್ತೆ 3 ಕಡೆ ಗುಂಡಿನ ದಾಳಿ: 11 ಮಂದಿ ದುರ್ಮರಣ
ಅಮೆರಿಕದ ಮೂರು ನಗರಗಳಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, ಪ್ರತ್ಯೇಕ ಗುಂಡಿನ ದಾಳಿಯಲ್ಲಿ 8 ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿರುವ ವರದಿಯಾಗಿದೆ.

ವಾಷಿಂಗ್ಟನ್ (ಜನವರಿ 24, 2023): ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಚೀನಾದ ಚಾಂದ್ರಮಾನ ಹೊಸ ವರ್ಷಾಚರಣೆ ವೇಳೆ ಗುಂಡಿನ ದಾಳಿಯಾಗಿ 10ಕ್ಕೂ ಹೆಚ್ಚು ಮಂದಿ ಬಲಿಯಾಗಿರುವ ಘಟನೆ ನಡೆದ ಬೆನ್ನಲ್ಲೇ ಅಮೆರಿಕದ ಮೂರು ನಗರಗಳಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದ್ದು, ಪ್ರತ್ಯೇಕ ಗುಂಡಿನ ದಾಳಿಯಲ್ಲಿ 11 ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿರುವ ವರದಿಯಾಗಿದೆ. ಈ ಪೈಕಿ ಕ್ಯಾಲಿಫೋರ್ನಿಯಾದ (California) ಹಾಫ್ ಮೂನ್ ಬೇ ನಗರದಲ್ಲಿ (Half Moon Bay City) ಗುಂಡಿನ ದಾಳಿ (Firing) ನಡೆದಿದ್ದು, ಇದರಲ್ಲಿ 7 ಜನರು ಮೃತಪಟ್ಟಿದ್ದಾರೆ (Death) ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ (Severely Injured) ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಇನ್ನು, ಹೆದ್ದಾರಿ 92ರ (Highway 92) ಬಳಿ ವರದಿಯಾಗಿರುವ ಗುಂಡಿನ ದಾಳಿ ಘಟನೆಯ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆ ಸಮುದಾಯಕ್ಕೆ ಯಾವುದೇ ಆತಂಕ ಇಲ್ಲ ಎಂದು ಸ್ಯಾನ್ ಮ್ಯಾಟಿಯೊ ಕೌಂಟಿ ಶೆರಿಫ್ ಕಚೇರಿ ಮಾಹಿತಿ ನೀಡಿದೆ. HWY 92 ಮತ್ತು HMB ನಗರ ಮಿತಿಗಳಲ್ಲಿ ಕೆಲವರು ಬಲಿಯಾಗಿರುವ ಗುಂಡಿನ ದಾಳಿಯ ಘಟನೆಗೆ ಪ್ರತಿಕ್ರಿಯಿಸುತ್ತಿದ್ದೇವೆ ಎಂದು ಶೆರಿಫ್ ಕಚೇರಿ ಹೇಳಿದೆ. ಹಾಗೆ, ಶಂಕಿತನನ್ನು ಬಂಧಿಸಲಾಗಿದ್ದು, ಈ ಸಮಯದಲ್ಲಿ ಸಮುದಾಯಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದೂ ಶೆರಿಫ್ ಕಚೇರಿ ಹೇಳಿದೆ.
ಇದನ್ನು ಓದಿ: ಕ್ಯಾಲಿಫೋರ್ನಿಯಾದ ಚೈನೀಸ್ ನ್ಯೂ ಇಯರ್ ಪಾರ್ಟಿಯಲ್ಲಿ ಗುಂಡಿನ ದಾಳಿ: 10 ಜನರು ಬಲಿ
ಅಪಾಯದಲ್ಲಿರುವ ಯುವಕರಿಗೆ ಸಹಾಯ ಮಾಡಲು ಮೀಸಲಾಗಿರುವ ಡೆಸ್ ಮೊಯಿನ್ಸ್ ಶಾಲೆಯೊಂದರಲ್ಲಿ ಉದ್ದೇಶಿತ ಗುಂಡಿನ ದಾಳಿ ನಡೆದಿದ್ದು, ಇದರಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು ಮತ್ತು ವಯಸ್ಕ ಉದ್ಯೋಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿರುವ ಬಗ್ಗೆ ಎಪಿ ವರದಿ ಮಾಡಿದೆ. ಡೆಸ್ ಮೊಯಿನ್ಸ್ ಶಾಲಾ ಜಿಲ್ಲೆಗೆ ಸಂಯೋಜಿತವಾಗಿರುವ ಸ್ಟಾರ್ಟ್ಸ್ ರೈಟ್ ಹಿಯರ್ ಎಂಬ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಗುಂಡು ಹಾರಿಸಿದ ಸುಮಾರು 20 ನಿಮಿಷಗಳ ನಂತರ ಸಾಕ್ಷಿಗಳು ನೀಡಿದ ವಿವರಣೆಯನ್ನು ಆಧರಿಸಿದ ಕಾರನ್ನು ಅಧಿಕಾರಿಗಳು ನಿಲ್ಲಿಸಿದರು ಮತ್ತು ಮೂವರು ಶಂಕಿತರನ್ನು ಕಸ್ಟಡಿಗೆ ತೆಗೆದುಕೊಂಡರು ಎಂದೂ ಪೊಲೀಸರು ತಿಳಿಸಿದ್ದಾರೆ.
ಬಂದೂಕು ಹಿಂಸಾಚಾರದ ಮತ್ತೊಂದು ಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ನಾವು ದುಃಖಿತರಾಗಿದ್ದೇವೆ. ವಿಶೇಷವಾಗಿ ನಮ್ಮ ಕೆಲವು ವಿದ್ಯಾರ್ಥಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಸಂಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನಾವು ಇನ್ನೂ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಕಾಯುತ್ತಿದ್ದೇವೆ, ಆದರೆ ನಮ್ಮ ಆಲೋಚನೆಗಳು ಈ ಘಟನೆಯಲ್ಲಿ ಬಲಿಯಾಗಿರುವವರ ಬಗ್ಗೆ ಮತ್ತು ಅವರ ಕುಟುಂಬಗಳು ಹಾಗೂ ಸ್ನೇಹಿತರೊಂದಿಗೆ ಇವೆ ಎಂದು ಡೆಸ್ ಮೊಯಿನ್ಸ್ ಶಾಲಾ ಜಿಲ್ಲೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಶಾಲೆಯಲ್ಲಿ ಬಾಲಕನಿಂದ ಗುಂಡಿನ ದಾಳಿ: ಮಕ್ಕಳ ರಕ್ಷಿಸಿ ಹೀರೋ ಆದ ಶಿಕ್ಷಕಿ
ಈ ಮಧ್ಯೆ, ಸೋಮವಾರ ಮಧ್ಯಾಹ್ನ ಚಿಕಾಗೋ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಆಕ್ರಮಣದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು ಮತ್ತು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನೇಕ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಉದ್ದೇಶಪುರ್ವಕವಾಗೇ ಜನರನ್ನು ಸಾಯಿಸಲಾಗಿದೆ ಎಂದು ಉಪ ಪೊಲೀಸ್ ಮುಖ್ಯಸ್ಥ ಸೀನ್ ಲೌಗ್ರನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನ್ನೊಂದೆಡೆ, ಕ್ಯಾಲಿಫೋರ್ನಿಯಾದಲ್ಲಿ ನಡೆದ ಚೈನೀಸ್ ಹೊಸ ವರ್ಷದ ಪಾರ್ಟಿಯಲ್ಲಿ ಗುಂಡಿನ ದಾಳಿಗೆ ಬಲಿಯಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿರುವ ಏಷ್ಯಾ ನಗರದಲ್ಲಿ ಈ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಲೂನಾರ್ ಹೊಸ ವರ್ಷದ ಸಂಭ್ರಮದಲ್ಲಿ ಸ್ಥಳೀಯ ಸಮುದಾಯ ತೊಡಗಿದ್ದಾಗ ಮಾಂಟೆರಿ ಪಾರ್ಕ್‌ನ ನೃತ್ಯ ಮಾಡುವ ಸ್ಥಳದಲ್ಲಿ ಬಂದೂಕುಧಾರಿ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಶಿಕ್ಷಕಿಗೆ ಗುಂಡು ಹಾರಿಸಿದ 6 ವರ್ಷದ ಬಾಲಕ: ಸಾವು - ಬದುಕಿನ ನಡುವೆ ಟೀಚರ್ ಹೋರಾಟ