Asianet Suvarna News Asianet Suvarna News

ಶಾಲೆಯಲ್ಲಿ ಬಾಲಕನಿಂದ ಗುಂಡಿನ ದಾಳಿ: ಮಕ್ಕಳ ರಕ್ಷಿಸಿ ಹೀರೋ ಆದ ಶಿಕ್ಷಕಿ

ಆರು ವರ್ಷದ ಬಾಲಕನೋರ್ವ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ  ಮಕ್ಕಳನ್ನು ರಕ್ಷಿಸಿದ ಶಿಕ್ಷಕಿಯೊಬ್ಬರಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

wounded Teacher saved children while 6 year old boy open fire in school at Virginia akb
Author
First Published Jan 10, 2023, 6:51 PM IST

ಅಮೆರಿಕಾ: ಆರು ವರ್ಷದ ಬಾಲಕನೋರ್ವ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ  ಮಕ್ಕಳನ್ನು ರಕ್ಷಿಸಿದ ಶಿಕ್ಷಕಿಯೊಬ್ಬರಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  ಗಾಯಗೊಂಡ ಶಿಕ್ಷಕಿಯನ್ನು 25 ವರ್ಷದ ಅಬಿಗೈಲ್ ಜ್ವೆರ್ನರ್ ಎಂದು ಗುರುತಿಸಲಾಗಿದೆ.  ವರ್ಜಿನಿಯಾದ ನ್ಯೂಪೋರ್ಟ್ ಎಂಬಲ್ಲಿಯ ರಿಚ್‌ನೆಕ್ ಎಲಿಮೆಂಟರಿ ಶಾಳೆಯಲ್ಲಿ ಶುಕ್ರವಾರ ಮಧ್ಯಾಹ್ನದ ನಂತರ ಈ ಘಟನೆ ನಡೆದಿದೆ. ಗುಂಡೇಟಿನಿಂದ ಗಾಯಗೊಂಡ ಶಿಕ್ಷಕಿಯನ್ನು ಆಸ್ಪತ್ರೆಗೆ ದಾಖಲಿಸಲಗಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರಿವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಇತ್ತ ಗುಂಡಿನ ದಾಳಿ ನಡೆಸಿದ ಬಾಲಕನನ್ನು ವೈದ್ಯಕೀಯ ಸೌಲಭ್ಯದ ತಾತ್ಕಾಲಿಕ ಕಸ್ಟಡಿಯಲ್ಲಿ ಇರಿಸಲಾಗಿದೆ.   ಈತನ ತಾತ್ಕಾಲಿಕ ಕಸ್ಟಡಿಯನ್ನು  ಮುಂದುವರಿಸಬೇಕೆ ಬೇಡವೇ ಎಂಬುದನ್ನು ನ್ಯಾಯಾಧೀಶರು ತೀರ್ಮಾನಿಸಲಿದ್ದಾರೆ.  ಅಲ್ಲದೇ ಈ ಘಟನೆಗೆ  ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳನ್ನು ಪುಟ್ಟ ಮಕ್ಕಳ ಕೈಗೆ ಸಿಗದಂತೆ ನಿರ್ವಹಿಸುವಲ್ಲಿ ವಿಫಲವಾದ ಆರು ವರ್ಷದ ಬಾಲಕನ ಪೋಷಕರ ಮೇಲೆ  ಅಪರಾಧ ಪ್ರಕರಣ ದಾಖಲಾಗುತ್ತದೆಯೇ ಎಂಬ ಬಗ್ಗೆ ಸದ್ಯದಲ್ಲಿಯೇ ತೀರ್ಮಾನವಾಗಲಿದೆ.  ಈ ಬಂದೂಕನ್ನು ಬಾಲಕನ ತಾಯಿ ಕಾನೂನಾತ್ಮಕವಾಗಿ ಕೊಂಡು ತಂದಿದ್ದರು. ಎಂದು ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರಿವ್ ಹೇಳಿದ್ದಾರೆ. 

Russia ಶಾಲೆಯಲ್ಲಿ ಮನಬಂದಂತೆ ಗುಂಡಿನ ದಾಳಿ: ಮಕ್ಕಳು ಸೇರಿ 10 ಬಲಿ; 20 ಕ್ಕೂ ಹೆಚ್ಚು ಜನರಿಗೆ ಗಾಯ

ಈ ಘಟನೆಯಲ್ಲಿ ಮಕ್ಕಳನ್ನು ರಕ್ಷಿಸಿದ  ಶಿಕ್ಷಕಿಗೆ ಭಾರಿ ಶ್ಲಾಘನೆ  ವ್ಯಕ್ತವಾಗುತ್ತಿದೆ.  ಬಾಲಕ ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ ಕೂಡಲೇ ಶಿಕ್ಷಕಿ ಅಬಿಗೈಲ್ ಜ್ವೆರ್ನರ್  ಮಕ್ಕಳನ್ನೆಲ್ಲಾ ಹೊರಗೆ ಕಳುಹಿಸಿದ್ದಾರೆ.  ತನಗೆ ಗುಂಡು ತಗುಲಿದ್ದರೂ ಎಲ್ಲರೂ ಕೊಠಡಿಯಿಂದ ಹೋಗಿದ್ದಾರೆ. ಮಕ್ಕಳೆಲ್ಲರೂ ಸುರಕ್ಷಿತವಾಗಿದ್ದಾರೆ ಎಂಬುದು ಖಚಿತವಾದ ನಂತರವೇ ಅವರು ಕೊಠಡಿಯಿಂದ  ಹೊರಹೋಗಿದ್ದಾರೆ  ಇದರಿಂದ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ ಎಂದು ಸ್ಟೀವ್ ಡ್ರಿವ್ ಹೇಳಿದ್ದಾರೆ.  ಗುಂಡು ಹಾರಿಸಿದ ಆರು ವರ್ಷದ ಪುಟ್ಟ ಬಾಲಕ, ಮನೆಯಲ್ಲಿದ್ದ 9 ಎಂಎಂ ಟಾರಸ್ ಹ್ಯಾಂಡ್‌ಗನ್ ( handgun) ಅನ್ನು  ತನ್ನ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಶಾಲೆಗೆ ತೆಗೆದುಕೊಂಡು ಬಂದಿದ್ದ. ಈ ವೇಳೆ ಶಾಲೆಯಲ್ಲಿ ಶಿಕ್ಷಕಿ ಅಬಿಗೈಲ್ ಪಾಠ ಮಾಡುತ್ತಿದ್ದ ವೇಳೆ  ಗುರಿಯಾಗಿಸಿ  ಒಮ್ಮೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಶಿಕ್ಷಕಿಗೆ ಗುಂಡು ತಾಗಿದೆ. 

ಗುಂಡಿನ ಸದ್ದು ಕೇಳಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬರು ಮಹಿಳೆ ತರಗತಿಗೆ ಓಡಿ ಬಂದಿದ್ದು, ಬಾಲಕನನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ಅಬಿಗೈಲ್ ಅವರು ತರಗತಿಯಲ್ಲಿದ್ದ ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದ್ದಾರೆ.  ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಾಗ ಗನ್ ನೆಲದ ಮೇಲೆ ಬಿದ್ದಿತ್ತು ಎಂದು ತಿಳಿದು ಬಂದಿದೆ.  ನಾವಿದನ್ನೂ ಕೇಳಬಾರದಿತ್ತು ಎಂದು ಬಯಸುತ್ತೇನೆ? ಆದರೆ ಹೇಗೆ  ಆರು ವರ್ಷದ ಬಾಲಕನಿಗೆ ಶಸ್ತ್ರಾಸ್ತ್ರವನ್ನು ಬಳಸುವುದು ಹೇಗೆ ತಿಳಿಯಿತು ? ನಾನು ನಿಮಗೆ ಸರಿಯಾದ ಉತ್ತರ ನೀಡುತ್ತೇನೋ ಎಂಬುದು ನನಗೆ ತಿಳಿಯದು ಎಂದು ಡ್ರಿವ್ ಹೇಳಿದ್ದಾರೆ.  ಘಟನೆಯ ಬಳಿಕ ಶಿಕ್ಷಣ ಸಂಸ್ಥೆಗಳು  ಭದ್ರತಾ ನಿಯಮಗಳನ್ನು ಮರು ಪರಿಶೀಲನೆ ಮಾಡಲು ಮುಂದಾಗಿದ್ದಾರೆ. 

ಮತ್ತೊಂದು ಕಾಶ್ಮೀರ್ ಫೈಲ್ಸ್‌..? ಹಿಂದೂಗಳನ್ನು ಗುರಿಯಾಗಿಸಿ ಉಗ್ರರಿಂದ ಗುಂಡಿನ ದಾಳಿ..!

ಘಟನೆಯ ಬಳಿಕ ನ್ಯೂಪೋರ್ಟ್ ನ್ಯೂಸ್(Newport News) ಶಾಲಾ ಸೂಪರಿಟೆಂಡೆಂಟ್ ಜಾರ್ಜ್ ಪಾರ್ಕರ್(George Parker), ಅವರು  ಮಾಧ್ಯಮಗಳೊಂದಿಗೆ ಮಾತನಾಡಿ, ಆರು ವರ್ಷ ಮಕ್ಕಳು ಶಾಲೆಗೆ ಗನ್ ಹಿಡಿದುಕೊಂಡು ಬರುತ್ತಾರೆ ಅದರಿಂದ ಶೂಟ್ ಮಾಡ್ತಾರೆ ಎಂಬ ವಿಚಾರಕ್ಕೆ ಶಾಲೆ ಇನ್ನು ಸಿದ್ದಗೊಂಡಿಲ್ಲ.  1970ರಲ್ಲಿ ಒಮ್ಮೆ ಇಂತಹ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಆರು ವರ್ಷ ಅಥವಾ ಅದಕ್ಕಿಂತ ಎಳೆಯ ಪ್ರಾಯದ  ಬಾಲಕ ಅಮೆರಿಕಾದ ಶಾಲೆಗೆ ಗನ್ ಹಿಡಿದುಕೊಂಡು ಬಂದಿದ್ದ ಎಂದು ಅವರು ನೆನಪಿಸಿಕೊಂಡರು.  ಘಟನೆಯ ಬಳಿಕ ಅಮೆರಿಕಾದ ಶಾಲೆಗಳಲ್ಲಿ  ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದ್ದು, ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. 

Follow Us:
Download App:
  • android
  • ios