Asianet Suvarna News Asianet Suvarna News

ಶಿಕ್ಷಕಿಗೆ ಗುಂಡು ಹಾರಿಸಿದ 6 ವರ್ಷದ ಬಾಲಕ: ಸಾವು - ಬದುಕಿನ ನಡುವೆ ಟೀಚರ್ ಹೋರಾಟ

6 ವರ್ಷದ ಬಾಲಕನೊಬ್ಬ ಶುಕ್ರವಾರ ಪೂರ್ವ ಅಮೆರಿಕದ ವರ್ಜೀನಿಯಾ ರಾಜ್ಯದ ಪ್ರಾಥಮಿಕ ಶಾಲೆಯ ತರಗತಿಯಲ್ಲಿ ಗುಂಡು ಹಾರಿಸಿದ್ದು, ಈ ಘಟನೆಯಲ್ಲಿ ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

6 year old boy shoots teacher in united states school cops say was not an accident ash
Author
First Published Jan 7, 2023, 6:25 PM IST

ಅಮೆರಿಕದಲ್ಲಿ (United States of America) ಆಗಾಗ್ಗೆ ಬಂದೂಕು (Gun) ಶಬ್ದ ಮಾಡುತ್ತಲೇ ಇರುತ್ತದೆ. ಅಲ್ಲಿನ ಬಂದೂಕು ಕಾನೂನು ಸಡಿಲವಾಗಿರುವುದರಿಂದ, ಅಲ್ಲಿನ ಜನಸಂಖ್ಯೆಗಿಂತ (Population) ಬಂದೂಕಿನ ಸಂಖ್ಯೆಯೇ ಹೆಚ್ಚಿದೆ. ಅಪ್ರಾಪ್ತರು ಸಹ ಆಗಾಗ್ಗೆ ಇತರರ ಮೇಲೆ ಶೂಟ್‌ ಮಾಡಿ ಸಾಯಿಸುವುದು, ಗುಂಡು ಹಾರಿಸುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತದೆ. ಆದರೆ ನಾವು ಹೇಳಲು ಹೊರಟಿರುವ ಈ ಘಟನೆಯಲ್ಲಿ 6 ವರ್ಷದ ಪೋರ (Child) ಶಿಕ್ಷಕಿಗೆ (Teacher) ಗುಂಡು ಹಾರಿಸಿದ್ದಾನೆ. ಆಕೆ ಸಾವು - ಬದುಕಿನ ನಡುವೆ ಹೋರಾಟ ಮಾಡ್ತಿದ್ದಾರೆ ಎಂದು ವರದಿಯಾಗಿದೆ.

ಹೌದು, 6 ವರ್ಷದ ಬಾಲಕನೊಬ್ಬ ಶುಕ್ರವಾರ ಪೂರ್ವ ಅಮೆರಿಕದ ವರ್ಜೀನಿಯಾ ರಾಜ್ಯದ (Virginia State) ಪ್ರಾಥಮಿಕ ಶಾಲೆಯ (Primary Class) ತರಗತಿಯಲ್ಲಿ ಗುಂಡು ಹಾರಿಸಿದ್ದು, ಈ ಘಟನೆಯಲ್ಲಿ ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ನ್ಯೂಪೋರ್ಟ್ ನ್ಯೂಸ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಕರಾವಳಿ ನಗರದಲ್ಲಿರುವ ರಿಚ್ನೆಕ್‌ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು. ಅದೃಷ್ಟವಶಾತ್‌, ಯಾವುದೇ ವಿದ್ಯಾರ್ಥಿಗಳು ಗಾಯಗೊಂಡಿಲ್ಲ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಇದನ್ನು ಓದಿ: Walmart shooting: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ಬಂದೂಕುಧಾರಿ ಸೇರಿ 10 ಜನ ಬಲಿ..!

ಗುಂಡು ಹಾರಿಸಿರುವ ವ್ಯಕ್ತಿ 6 ವರ್ಷದ ವಿದ್ಯಾರ್ಥಿ. ಆತ ಇದೀಗ ಪೊಲೀಸ್‌ ಕಸ್ಟಡಿಯಲ್ಲಿದ್ದಾನೆ. ಹಾಗೂ, ಇದು ಆಕಸ್ಮಿಕ ಗುಂಡಿನ ದಾಳಿಯಲ್ಲ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇನ್ನು, ಗುಂಡು ತಗುಲಿದ ಸಂತ್ರಸ್ಥೆ 30ರ ಆಸುಪಾಸಿನಲ್ಲಿದ್ದ ಶಿಕ್ಷಕಿಯಾಗಿದ್ದು, ಆಕೆಯ ದೇಹದ ಮೇಲೆ ಉಂಟಾಗಿರುವ ಗಾಯಗಳು ಜೀವಕ್ಕೆ ಅಪಾಯಕಾರಿ ಎಂದು ಹೇಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಇನ್ನು, ಈ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ  ನಗರದ ಶಾಲಾ ಅಧೀಕ್ಷಕ ಜಾರ್ಜ್ ಪಾರ್ಕರ್, ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ ಎಂದು ಹೇಳಿದರು. ಅಲ್ಲದೆ, ಯುವಕರಿಗೆ ಬಂದೂಕುಗಳು ಲಭ್ಯವಾಗದಂತೆ ನೋಡಿಕೊಳ್ಳಲು ನಮಗೆ ಸಮುದಾಯದ ಬೆಂಬಲ ಬೇಕು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: : Mexico Mass Shooting: ನಗರದ ಮೇಯರ್‌ ಸೇರಿ 12 ಜನರ ದಾರುಣ ಸಾವು!

ಇನ್ನು, ಮಧ್ಯಾಹ್ನದ ವೇಳೆಗೆ ಅವರ ಸ್ಥಿತಿ ಸ್ವಲ್ಪ ಸುಧಾರಿಸಿದೆ ಎಂದು ನ್ಯೂಪೋರ್ಟ್ ನ್ಯೂಸ್ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರೂ ಅವರು ಹೇಳಿದರು. ತರಗತಿಯಲ್ಲಿ ಮಗುವಿನ ಕೈಯಲ್ಲಿ ಬಂದೂಕು ಇತ್ತು ಮತ್ತು ನಾವು ಆ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಂಡೆವು ಎಂದು ಪೊಲೀಸರು ತಿಳಿಸಿದ್ದಾರೆ. 

ಅಲ್ಲದೆ, ಯಾರಾದರೂ ಶಾಲೆಯ ಶೂಟಿಂಗ್ ಸುತ್ತಲೂ ಹೋಗಿ ಗುಂಡು ಹಾರಿಸಿರುವ ಪರಿಸ್ಥಿತಿಯನ್ನು ನಾವು ಹೊಂದಿರಲಿಲ್ಲ. ನಾವು ಒಂದು ನಿರ್ದಿಷ್ಟ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿರುವ ಪರಿಸ್ಥಿತಿಯನ್ನು ಹೊಂದಿದ್ದೇವೆ ಎಂದು ಸ್ಟೀವ್ ಡ್ರೂ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಆರೋಪಿ ಬಾಲಕನಿಗೆ ಬಂದೂಕು ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆದಾರರು ಇನ್ನೂ ಪತ್ತೆ ಹಚ್ಚುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 28 ವರ್ಷಗಳ ನಂತರ ಡೆನ್ಮಾರ್ಕ್‌ ಮಾಲ್‌ನಲ್ಲಿ ಶೂಟೌಟ್‌, ಮೂವರ ಹತ್ಯೆ!

ಶಾಲೆಯಲ್ಲಿ ಗುಂಡಿನ ದಾಳಿ ಪ್ರಕರಣಗಳು ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕದಲ್ಲಿ ಆಗಾಗ್ಗೆ ಮರುಕಳಿಸುತ್ತಲೇ ಇದೆ. ಕಳೆದ ಮೇ ತಿಂಗಳಲ್ಲಿ ಅಮೆರಿಕದ ಟೆಕ್ಸಾಸ್‌ನ ಉವಾಲ್ಡೆಯಲ್ಲಿ 18 ವರ್ಷ ವಯಸ್ಸಿನ ಬಂದೂಕುಧಾರಿಯೊಬ್ಬ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಬಲಿ ತೆಗೆದುಕೊಂಡಿದ್ದ. ಇದೇ ರೀತಿ, ಅನೇಕ ದುರಂತಗಳು ನಡೆದಿದೆ. 

ಕಳೆದ ವರ್ಷ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು 44,000 ಗನ್ ಸಂಬಂಧಿತ ಸಾವುಗಳು ಸಂಭವಿಸಿವೆ. ಅವುಗಳಲ್ಲಿ ಅರ್ಧದಷ್ಟು ಕೊಲೆ ಪ್ರಕರಣಗಳು, ಅಪಘಾತಗಳು ಮತ್ತು ಆತ್ಮರಕ್ಷಣೆ, ಹಾಗೂ ಅವುಗಳಲ್ಲಿ ಅರ್ಧದಷ್ಟು ಆತ್ಮಹತ್ಯೆಗಳು ಎಂದು ಬಂದೂಕಿನಿಂದ ಸಂಭವಿಸಿರುವ ಹಿಂಸೆಯನ್ನು ಲೆಕ್ಕಹಾಕುವ ಆರ್ಕೈವ್ ಡೇಟಾಬೇಸ್ ಹೇಳುತ್ತದೆ. 

Follow Us:
Download App:
  • android
  • ios