70 ವರ್ಷದ ಅಜ್ಜಿಗೆ ಅದೃಷ್ಟವೋ ಅದೃಷ್ಟ: 30 ವರ್ಷ ಕಾಲ ಪ್ರತಿ ತಿಂಗಳು ಬರುತ್ತೆ 10.37 ಲಕ್ಷ ರೂ. ಬಂಪರ್ ಲಾಟರಿ
ಪ್ರತಿ ತಿಂಗಳು 30 ವರ್ಷಗಳ ಕಾಲ ಸುಮಾರು 10.37 ಲಕ್ಷ ರೂ. ಲಾಟರಿ ಗೆದ್ದಿದ್ದಾರೆ ಇಂಗ್ಲೆಂಡ್‌ನ 70 ವರ್ಷದ ಅಜ್ಜಿ. ತನ್ನ ಹುಟ್ಟುಬ್ಬದ ದಿನವೇ ಈ ಅದೃಷ್ಟ ಸಿಕ್ಕಿರೋದಕ್ಕೆ ಕಾರಣ ಒಂದು ಜೇಡ!

ಲಂಡನ್ (ಸೆಪ್ಟೆಂಬರ್ 12, 2023): ಇಂಗ್ಲೆಂಡ್‌ನ ಡಾರ್ಕಿಂಗ್ ಮೂಲದ ಅಜ್ಜಿಯೊಬ್ಬರಿಗೆ ಹುಟ್ಟುಹಬ್ಬದ ದಿನವೇ ಭರ್ಜರಿ ಅದೃಷ್ಟ ದೊರೆತಿದೆ. ಮುಂದಿನ 30 ವರ್ಷಗಳವರೆಗೆ 10,000 ಪೌಂಡ್ ಅಂದರೆ (ಸುಮಾರು 10.37 ಲಕ್ಷ ರೂ.) ಲಾಟರಿ ಗೆದ್ದಿದ್ದಾರೆ.
ಪ್ರತಿ ತಿಂಗಳು 30 ವರ್ಷಗಳ ಕಾಲ ಈ ಮೊತ್ತವನ್ನು ಅಜ್ಜಿ ಈ ಲಾಟರಿ ಹಣದಲ್ಲಿ ಸ್ವೀಕರಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಜ್ಜಿ ಈ ಅದೃಷ್ಟದ ಗೆಲುವು ತನ್ನನ್ನು 100 ವರ್ಷ ಬದುಕಲು ಪ್ರೇರೇಪಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ರೆಯ ಡೋರ್ಕಿಂಗ್ ಪಟ್ಟಣದಲ್ಲಿ ವಾಸಿಸುವ 70 ವರ್ಷದ ಡೋರಿಸ್ ಸ್ಟಾನ್‌ಬ್ರಿಡ್ಜ್ ತನ್ನ ಜನ್ಮದಿನವನ್ನು ಸಾವಿರಾರು ಪೌಂಡ್‌ಗಳ ಲಾಟರಿ ಟಿಕೆಟ್‌ನೊಂದಿಗೆ ಆಚರಿಸಿಕೊಂಡರು.
ಇದನ್ನು ಓದಿ: ಅದೃಷ್ಟ ಅಂದ್ರೆ ಇದು: ಆನ್‌ಲೈನ್ ಗೇಮಿಂಗ್ ಆ್ಯಪ್‌ನಿಂದ ರಾತ್ರೋರಾತ್ರಿ 1.5 ಕೋಟಿ ಗೆದ್ದ ಚಾಲಕ..!
ಇದು ಅವರ 70 ನೇ ಹುಟ್ಟುಹಬ್ಬದ ಪಾರ್ಟಿಯಾಗಿದ್ದು, ಅದಕ್ಕಾಗಿ ಅವರು ತಯಾರಿ ನಡೆಸುತ್ತಿದ್ದರು ಮತ್ತು ಹಾಗೆ ಮಾಡುವಾಗ ತಮ್ಮ ಮನೆಯಲ್ಲಿ ಮನಿ ಸ್ಪೈಡರ್ಸ್ ಅನ್ನು ನೋಡಿದರು. ಇದು ಜೇಡಗಳ ಜಾತಿಗಳಲ್ಲಿ ಒಂದಾಗಿದ್ದು, ಕುಟುಂಬಕ್ಕೆ ಸಂಪತ್ತನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆ ಡೋರಿಸ್ ಸ್ಟ್ಯಾನ್‌ಬ್ರಿಡ್ಜ್ ಲಾಟರಿ ಟಿಕೆಟ್ ಖರೀದಿಸುವ ಮೂಲಕ ತನ್ನ ಅದೃಷ್ಟವನ್ನು ಪರೀಕ್ಷೆ ಮಾಡಲು ನಿರ್ಧರಿಸಿದರು.
ನಂತರ, ತನ್ನ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ, ಲಾಟರಿ ಗೇಮ್ಸ್ ನಡೆಸುವ ಸಂಸ್ಥೆಯಾದ ನ್ಯಾಷನಲ್ ಲಾಟರಿಯಿಂದ ಅಜ್ಜಿಗೆ ಇಮೇಲ್ ಬಂದಿತ್ತು. ಆಗ ಅವರು 10 ಪೌಂಡ್‌ಗಳು ಅಥವಾ ಇನ್ನಾವುದೋ ಕಡಿಮೆ ಮೊತ್ತದ ಹಣ ಬಂದಿರಬಹುದು ಎಂದು ಭಾವಿಸಿ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿದರು. ಆದರೆ, "ಅಭಿನಂದನೆಗಳು, ನೀವು 30 ವರ್ಷಗಳ ಕಾಲ ತಿಂಗಳಿಗೆ 10 ಸಾವಿರ ಪೌಂಡ್ ಗೆದ್ದಿದ್ದೀರಿ" ಎಂಬ ಮೇಲ್ ಅನ್ನು ಓದಿದ ನಂತರ, ಡೋರಿಸ್ ಸ್ಟಾನ್‌ಬ್ರಿಡ್ಜ್‌ಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲವಂತೆ. ಬಳಿಕ ನನ್ನ ಪತಿಗೆ ತೋರಿಸಿ, 'ನಾನು ಅದನ್ನು ಸರಿಯಾಗಿ ಓದಿದ್ದೇನೆಯೇ? ಇಲ್ಲ, ಅದು ಸಾಧ್ಯವಿಲ್ಲ ಎಂದೂ ಹೇಳಿಕೊಂಡ್ರಂತೆ.
ಇದನ್ನೂ ಓದಿ: ಅದೃಷ್ಟ ಅಂದ್ರೆ ಇದಪ್ಪಾ..! ಹಳೆ ಗಾಡಿ ಲೈಸನ್ಸ್ ನಂಬರ್‌ಗೆ ಹೊಡೀತು 40 ಲಕ್ಷ Lottery
ಆಘಾತಕ್ಕೊಳಗಾದ ಅಜ್ಜಿ ಎರಡನೇ ಅಭಿಪ್ರಾಯ ಪಡೆಯಲು ಅಳಿಯನ ಬಳಿಗೆ ಹೋಗಿ ಸ್ಪಷ್ಟನೆ ಸಿಕ್ಕ ಬಳಿಕ ಶಾಂಪೇನ್ ಬಾಟಲಿಯೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿದರು. ಮರುದಿನ ಬೆಳಿಗ್ಗೆ, ಡೋರಿಸ್ ಸ್ಟ್ಯಾನ್‌ಬ್ರಿಡ್ಜ್ ರಾಷ್ಟ್ರೀಯ ಲಾಟರಿಯಿಂದ ಮೇಲ್ ಮೂಲಕ ಅಧಿಕೃತ ದೃಢೀಕರಣವನ್ನು ಪಡೆದರು. ಇನ್ನು, ನಾನು ಗೆಲುವಿನ ಬಗ್ಗೆ ಯೋಚಿಸಿದಾಗ ಇನ್ನೂ ಸ್ವಲ್ಪ ವಿಚಿತ್ರವಾಗಿ ತೋರುತ್ತದೆ ಮತ್ತು ನಾನು 30 ವರ್ಷಗಳವರೆಗೆ ಪ್ರತಿ ತಿಂಗಳು ಆ ಹಣವನ್ನು ಪಡೆಯುತ್ತೇನೆ. ಇದು ನನಗೆ 100 ವರ್ಷವಾಗುವವರೆಗೆ ಇರಲು ಒಂದು ಕಾರಣವನ್ನು ನೀಡುತ್ತದೆ ಎಂದು ಡೋರಿಸ್ ಸ್ಟ್ಯಾನ್‌ಬ್ರಿಡ್ಜ್ ಹೇಳಿದ್ದಾರೆ.