ಅದೃಷ್ಟ ಅಂದ್ರೆ ಇದಪ್ಪಾ..! ಹಳೆ ಗಾಡಿ ಲೈಸನ್ಸ್‌ ನಂಬರ್‌ಗೆ ಹೊಡೀತು 40 ಲಕ್ಷ Lottery

ತನ್ನ ವಾಹನದ ನಂಬರ್‌ ಪ್ಲೇಟ್‌ ಬಳಸಿಕೊಂಡು ಅದೇ ಸಂಖ್ಯೆಗಳನ್ನು ಲಾಟರಿಗೆ ನಮೂದಿಸಿ ಬರೋಬ್ಬರಿ 40 ಲಕ್ಷ ರೂ. ಲಾಟರಿ ಗೆದ್ದಿದ್ದಾರೆ ಅಮೆರಿಕದ ಮಹಿಳೆ. ಅದೃಷ್ಟ ಅಂದರೆ ಹೀಗೂ ಇರುತ್ತೆ ಅನ್ನೋದನ್ನೆ ನಾವು ಈ ಘಟನೆಯಿಂದ ತಿಳಿದುಕೊಳ್ಳಬೇಕು. 

woman wins rs 40 lakhs lottery using digits from her cars number plate ash

ಒಮ್ಮೊಮ್ಮೆ ಕೆಲವರಿಗೆ ಕೆಲವು ಬಾರಿ ಅದೃಷ್ಟ (Luck) ಖುಲಾಯಿಸಿಬಿಡುತ್ತೆ. ಆ ಅದೃಷ್ಟ ನಿಜಕ್ಕೂ ಎಲ್ಲರಿಗೂ ಇರೋದಿಲ್ಲ ಬಿಡಿ. ಇದೇ ರೀತಿ, ಅಮೆರಿಕದ ಮಹಿಳೆಯೊಬ್ಬರಿಗೆ ಸಿಕ್ಕಾಪಟ್ಟೆ ಅದೃಷ್ಟ ಖುಲಾಯಿಸಿದೆ. ಮನೆಯಲ್ಲಿರುವ ಹಳೆಯ ಗಾಡಿ ನಂಬರ್‌ ಇರುವ ಲಾಟರಿ ಖರೀದಿಸಿ ಅದೃಷ್ಟ ಪರೀಕ್ಷೆಗಿಳಿದ ಅಮೆರಿಕದ ಮಹಿಳೆ ಒಂದಲ್ಲ, ಎರಡಲ್ಲ ಬರೋಬ್ಬರಿ 40 ಲಕ್ಷ ರೂ. ಭರ್ಜರಿ ಲಾಟರಿ (Lottery) ಗೆದ್ದಿದ್ದಾರೆ. ಅಮೆರಿಕದ (United States of America) ಬಾಲ್ಟಿಮೋರ್‌ (Baltimore)  ನಗರದ 43 ವರ್ಷದ ಮಹಿಳೆ 1 ಡಾಲರ್‌ ಕೊಟ್ಟು 5 ಸಂಖ್ಯೆಗಳನ್ನು ತುಂಬುವ ಲಾಟರಿ ಟಿಕೆಟ್‌ ಡ್ರಾ ಖರೀದಿಸಿದ್ದರು. ತನ್ನ ಹಳೆಯ ಕಾರಿನ ಸಂಖ್ಯೆಯನ್ನೇ ಮಹಿಳೆ ತುಂಬಿದ್ದರು. ಅದೃಷ್ಟವಶಾತ್‌ ಆಕೆ ತುಂಬಿದ 5 ಸಂಖ್ಯೆಗಳು ತಾಳೆಯಾಗಿದ್ದು, ಭರ್ಜರಿ ಲಾಟರಿ ಗೆದ್ದಿದ್ದಾಳೆ. ಗೆದ್ದ ಹಣವನ್ನು ಆಕೆ ತನ್ನ ಮನೆ ಹಾಗೂ 3 ಮಕ್ಕಳ ಶಿಕ್ಷಣಕ್ಕಾಗಿ ಬಳಸುವುದಾಗಿ ಹೇಳಿದ್ದಾರೆ.

ಮೇರಿಲ್ಯಾಂಡ್‌ (Maryland) ಲಾಟರಿಯನ್ನು ಪಡೆಯುವಾಗ ನಂಬರ್‌ ನಮೂದಿಸಲು ಅಮೆರಿಕದ ಮಹಿಳೆಯೊಬ್ಬರು ತನ್ನ ಹಳೆಯ ವಾಹನದ ರಿಜಿಸ್ಟರ್‌ ಹೊಂದಿರುವ ನಂಬರ್‌ ಪ್ಲೇಟ್ ಅನ್ನು ಬಳಸಿದ್ದಾರೆ. ಆಕೆಗೆ ಅದೃಷ್ಟ ಖುಲಾಯಿಸಿದ್ದು, 50,000 ಡಾಲರ್‌ ಅಂದರೆ ಸುಮಾರು 40 ಲಕ್ಷ ರೂ. ಬಹುಮಾನವನ್ನು ಗೆದ್ದಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ 43 ವರ್ಷದ ಮಹಿಳೆ, ಮೇರಿಲ್ಯಾಂಡ್ ಲಾಟರಿಯಲ್ಲಿನ ಅಧಿಕಾರಿಗಳಿಗೆ $1 ನೇರ ಬೆಟ್‌ ಇರಿಸಲು ತನ್ನ ಹಳೆಯ ಕಾರಿನ ನಂಬರ್ ಪ್ಲೇಟ್ ಅನ್ನು ಬಳಸಿಕೊಂಡು ಬಾಲ್ಟಿಮೋರ್‌ನ ಫುಡ್ ಸ್ಟಾಪ್ ಮಿನಿ ಮಾರ್ಟ್‌ನಲ್ಲಿ "ಪಿಕ್ 5" ಡ್ರಾಯಿಂಗ್ ಟಿಕೆಟ್ ಖರೀದಿಸಿದೆ ಎಂದು ತಿಳಿಸಿದ್ದಾರೆ. ಹಾಗೂ, ತನ್ನ ಟಿಕೆಟ್‌ನ ಎಲ್ಲಾ ಐದು ಸಂಖ್ಯೆಗಳು ಡ್ರಾ ಮಾಡಿದ ಸಂಖ್ಯೆಗಳಿಗೆ ಹೊಂದಿಕೆಯಾಗಿರುವುದನ್ನು ಅರಿತುಕೊಂಡ ಮಹಿಳೆ, ತನಗೆ 50,000 ಡಾಲರ್‌ ಅಥವಾ 39.85 ಲಕ್ಷ ರೂ. ಜಾಕ್‌ಪಾಟ್ ಬಂದಿದೆ ಎಂಬುದನ್ನು ನಂಬಲು ಕಷ್ಟವಾಯಿತು, ಅಚ್ಚರಿಯಾಯಿತು ಎಂದೂ ಹೇಳಿದ್ದಾರೆ. 

ಸಾಲ ತೀರಿಸಲು ಮನೆ ಮಾರಲು ಹೊರಟವನಿಗೆ ₹1ಕೋಟಿ ಲಾಟರಿ

 "ನಾನು ನಿಜವಾಗಿಯೂ ದೊಡ್ಡದಾಗಿ ಲಾಟರಿ ಹೊಡೆದಿದ್ದೇನೆ ಎಂದು ನಾನು ಭಾವಿಸುತ್ತೇನೆ,"  ಎಂದು ಅಮೆರಿಕದ ಆ ಮಹಿಳೆ ತನ್ನ ಟಿಕೆಟ್ ಅನ್ನು 2 ಬಾರಿ ಪರಿಶೀಲಿಸಿದ ನಂತರ ತನ್ನ ತಾಯಿಗೆ ಅತೀವ ಸಂತಸದಿಂದ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು, ಲಾಟರಿಯಿಂದ ಬಂದ ಹಣವನ್ನು ಕೆಲವು ಬಿಲ್‌ಗಳನ್ನು ಪಾವತಿಸಲು, ಚಳಿಗಾಲಕ್ಕಾಗಿ ಹೊಸ ಕಾರಿಗೆ ರಿಪೇರಿ ಮಾಡಲು ಮತ್ತು ತನ್ನ 3 ಮಕ್ಕಳು ಹಾಗೂ ಒಬ್ಬರು ಮೊಮ್ಮಕ್ಕಳಿಗೆ ಟ್ರೀಟ್‌ ಕೊಡಿಸುವುದಾಗಿ 43 ವರ್ಷದ ಮಹಿಳೆ ಹೇಳಿಕೊಂಡಿದ್ದಾರೆ. "ನಾನು ಐದು ಅಂಕೆಗಳ ಮೌಲ್ಯದ ಹಣ ಜ್ಯಾಕ್‌ಪಾಟ್‌ ಆಗಿ ಗಳಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ" ಎಂದೂ ಅಮೆರಿಕದ ಮಹಿಳೆ ಹರ್ಷ ವ್ಯಕ್ತಪಡಿಸಿದ್ದಾಳೆ.

ಕನಸಿನಲ್ಲಿ ಬಂದ ಸಂಖ್ಯೆಯಿಂದ ಲಾಟರಿ ಗೆದ್ದಿದ್ದ ಮತ್ತೊಬ್ಬರು ಮಹಿಳೆ
ಈ ಹಿಂದೆ, ಮತ್ತೊಬ್ಬ ಮಹಿಳೆ ತನ್ನ ಸಹೋದರಿ ಕನಸಿನಲ್ಲಿ (Dream) ನೋಡಿದ ಸಂಖ್ಯೆಗಳನ್ನು ಬಳಸಿಕೊಂಡು ಸುಮಾರು 20 ಲಕ್ಷ ರೂಪಾಯಿ ಲಾಟರಿ ಬಹುಮಾನವನ್ನು ಗೆದ್ದಿದ್ದರು. 68 ವರ್ಷದ ಮೇರಿಲ್ಯಾಂಡ್ ಮಹಿಳೆಯ ಸಹೋದರಿ ತಾನು "23815" ಸಂಖ್ಯೆಯ ಬಸ್‌ನಲ್ಲಿ ಸವಾರಿ ಮಾಡುತ್ತಿದ್ದ ಕನಸನ್ನು ವಿವರಿಸಿದ್ದರು. ನಂತರ, ಕೋಕಿಸ್‌ವಿಲ್ಲೆಯಲ್ಲಿನ ಅಂಗಡಿಯಲ್ಲಿ 2-3-8-1-5 ಸಂಖ್ಯೆಗಳೊಂದಿಗೆ ಲಾಟರಿ ಡ್ರಾಗಾಗಿ 50-ಸೆಂಟ್ ಟಿಕೆಟ್ ಖರೀದಿಸಲು ಅವರು ನಿರ್ಧರಿಸಿದ್ದರು. "ನಾನು ಉತ್ಸುಕನಾಗಿದ್ದೆ. ನನ್ನ ಪಿಕ್ 3 ಮತ್ತು ಪಿಕ್ 4 ಟಿಕೆಟ್‌ಗಳಲ್ಲಿ ನಾನು ಏನನ್ನೂ ನೋಡಲಿಲ್ಲ, ಆದರೆ ನಾನು ಪಿಕ್ 5 ಅನ್ನು ಪರಿಶೀಲಿಸಿದಾಗ ಅದು ನೇರವಾಗಿ ಇತ್ತು. (ಅದೇ ಸಂಖ್ಯೆಗಳು ಅದೇ ಪ್ರಕಾರದಲ್ಲಿ ಇತ್ತು), ನನಗೆ ನಂಬಲಾಗಲಿಲ್ಲ" ಎಂದು ವಿಜೇತ ಮಹಿಳೆ ಹೇಳಿಕೊಂಡಿದ್ದರು. 
ಒಂದೇ ಕಡೆ ಖರೀದಿಸಿದ 2 ಟಿಕೆಟ್‌ಗೂ ಒಲಿದ ಲಾಟರಿ: ಮಹಿಳೆಯಾದಳು ಕೋಟ್ಯಾಧಿಪತಿ

Latest Videos
Follow Us:
Download App:
  • android
  • ios