Asianet Suvarna News Asianet Suvarna News

ಹುವೈ ಸೇರಿ ಚೀನಾದ 7 ಕಂಪನಿಗೂ ಭಾರತದಿಂದ ಶಾಕ್?

ಹುವೈ ಸೇರಿ ಚೀನಾದ 7 ಕಂಪನಿಗಳ ವಿರುದ್ಧ ಭಾರತದಿಂದ ಕಠಿಣ ಕ್ರಮ?| ಚೀನಾ ಸೇನೆಯ ಜೊತೆ ಈ ಕಂಪನಿಗಳ ಪರೋಕ್ಷ ನಂಟು| ಪೇಟಿಎಂ, ಝೊಮೆಟೋ, ಬಿಗ್‌ ಬಾಸ್ಕೆಟ್‌ಗಳಿಗೆ ಸಂಕಷ್ಟ ಸಾಧ್ಯತೆ

7 Chinese companies including Huawei Alibaba may face action in India for having links with PLA
Author
Bangalore, First Published Jul 19, 2020, 8:38 AM IST

ನವದೆಹಲಿ(ಜು.19): ಪೂರ್ವ ಲಡಾಖ್‌ ಗಡಿಯಲ್ಲಿ ಭಾರತೀಯ ಯೋಧರ ಹತ್ಯೆಗೆ ಪ್ರತಿಯಾಗಿ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ, ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ) ಜೊತೆ ಪರೋಕ್ಷ ಸಂಬಂಧ ಹೊಂದಿರುವ ಜಾಗತಿಕ ದೈತ್ಯ ಕಂಪನಿ ಹುವೈ, ಅಲಿಬಾಬಾ ಸೇರಿ ಚೀನಾದ 7 ಕಂಪನಿಗಳ ವಿರುದ್ಧ ಭಾರತ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಗಡೀಲಿ ಶಾಂತಿ ಸ್ಥಾಪನೆ: ಚೀನಾಕ್ಕೆ ಭಾರತದ 15 ಗಂಟೆಗಳ ನೀತಿಪಾಠ!

ಕ್ಷಿಇಂಡಿಯಾ ಸ್ಟೀಲ್ಸ್‌, ಕ್ಸಿನ್ಸಿಂಗ್‌ ಕೆಥೆ ಇಂಟರ್‌ ನ್ಯಾಷನಲ್‌, ಚೀನಾ ಇಲೆಕ್ಟ್ರಾನಿಕ್‌ ಟೆಕ್ನಾಲಜಿ ಗ್ರೂಪ್‌, ಹುವೈ, ಅಲಿಬಾಬಾ, ಟೆನ್ಸೆಂಟ್‌ ಮತ್ತು ಎಸ್‌ಎಐಸಿ ಮೋಟಾರ್‌ ಕಾರ್ಪೊರೇಷನ್‌ ಕಂಪನಿಗಳ ಕಾರ್ಯಚಟುವಟಿಕೆಗಳ ಮೇಲೆ ಸರ್ಕಾರ ನಿಗಾ ವಹಿಸಿದೆ. ಹುವಾವೇ ಟೆಲಿಕಾಂ ಕಂಪನಿ ಸ್ಥಾಪಕ ರೆನ್‌ ಝೆಂಗ್‌ಫೆಯ್‌, ಪಿಎಲ್‌ಎಯ ಎಂಜಿನಿಯರಿಂಗ್‌ ವಿಭಾಗದ ಮಾಜಿ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ 5ಜಿ ವಿಷಯ ಸಂಬಂಧ ಹುವೈ ಅಮೆರಿಕ, ಜಪಾನ್‌, ಬ್ರಿಟನ್‌, ಆಸ್ಪ್ರೇಲಿಯಾಗಳ ವಿರೋಧ ಎದುರಿಸುತ್ತಿದೆ.

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!

ಅಲಿಬಾಬಾ ಹಾಗೂ ಟೆನ್ಸೆಂಟ್‌ ಕಂಪನಿಗಳು ಚೀನಾ ಸೇನೆಯ ಕೃತಕ ಬುದ್ಧಿಮತ್ತೆ ಯೋಜನೆಗಳು, ಸೇನೆ ಹಾಗೂ ನಾಗರಿಕರ ಸಹಭಾಗಿತ್ವದ ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಂತೆ ಈ ಸಂಸ್ಥೆಗಳು ಚೀನಾದ ರಕ್ಷಣಾ ವಲಯಕ್ಕೆ ತಮ್ಮದೇ ಕೊಡುಗೆಯನ್ನು ನೀಡುತ್ತಿವೆ ಎಂದು ಮೂಲಗಳು ತಿಳಿಸಿವೆ. ಅಲಿಬಾಬಾ ಸಂಸ್ಥೆ ಪೇಟಿಎಂ, ಝೊಮೆಟೋ, ಬಿಗ್‌ ಬಾಸ್ಕೆಟ್‌ ಸೇರಿದಂತೆ ಭಾರತದ ಪ್ರಸಿದ್ಧ ಕಂಪನಿಗಳಲ್ಲಿ ನೂರಾರು ಕೋಟಿ ರು. ಹೂಡಿಕೆ ಮಾಡಿದೆ. ಅದೇ ರೀತಿ ಟೆನ್ಸೆಂಟ್‌ ಕಂಪನಿ ಓಲಾ ಕ್ಯಾಬ್‌ನಲ್ಲಿ 3000 ಕೋಟಿ ರು. ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ 5300 ಕೋಟಿ ರು.ನಷ್ಟುಹೂಡಿದೆ.

ಟೆಕ್‌ ಅಥವಾ ಮೊಬೈಲ್‌ ಕಂಪನಿಗಳು ಮಾತ್ರವಲ್ಲ ಚೀನಾದ ಆಟೋಮೊಬೈಲ್‌ ಕಂಪನಿಗಳು ಕೂಡ ಪಿಎಲ್‌ಎ ಜೊತೆ ಪರೋಕ್ಷ ಸಂಬಂಧ ಹೊಂದಿವೆ. ಎಸ್‌ಎಐಸಿ ಮೊಟಾರ್‌ ಕಾರ್ಪೊರೇಷನ್‌ನ ಅಂಗ ಸಂಸ್ಥೆಯಾದ ನಾನ್ಜಿಂಗ್‌ ಆಟೋ ಮೊಬೈಲ್‌ ಈ ಮುನ್ನ ಚೀನಾ ಸೇನೆಯ ವಾಹನ ನಿರ್ವಹಣಾ ಘಟಕವಾಗಿ ಕಾರ್ಯನಿರ್ವಹಿಸಿತ್ತು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios