Asianet Suvarna News Asianet Suvarna News

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!| ಸಾಂಪ್ರದಾಯಿಕ ಶೈಲಿ, ಬಹಿರಂಗ ಅಂತ್ಯಸಂಸ್ಕಾರ ಬೇಡ| ಅತ್ಯಂತ ದೂರದ ಪ್ರದೇಶದಲ್ಲಿ ಅಂತ್ಯವಿಧಿಗೆ ಸೂಚನೆ

China denies burial to its soldiers killed in Galwan clash to cover up its blunder
Author
Bangalore, First Published Jul 15, 2020, 8:04 AM IST

ವಾಷಿಂಗ್ಟನ್‌(ಜು.15): ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಕಾಲುಕೆರೆದು ಜಗಳಕ್ಕೆ ಬಂದು ಭಾರತೀಯ ಯೋಧರ ಕೈಯಲ್ಲಿ ಭಾರೀ ಪೆಟ್ಟು ತಿಂದಿದ್ದ ಚೀನಾ, ಇದೀಗ ತನ್ನ ಯೋಧರ ಅಂತ್ಯಸಂಸ್ಕಾರಕ್ಕೇ ಕ್ಯಾತೆ ತೆಗೆದಿರುವ ವಿಷಯ ಬೆಳಕಿಗೆ ಬಂದಿದೆ.

ಘಟನೆ ನಡೆದಾಗ ತನ್ನ ಯೋಧರಾರ‍ಯರೂ ಸಾವನ್ನಪ್ಪಿಯೇ ಇಲ್ಲ ಎನ್ನುತ್ತಿದ್ದ ಚೀನಾ, ಕೊನೆಗೆ ಕೆಲ ಯೋಧರು ಹತರಾಗಿದ್ದಾರೆ ಎಂದು ಒಪ್ಪಿಕೊಂಡಿತ್ತು. ಆದರೆ ಎಷ್ಟುಜನ ಸಾವನ್ನಪ್ಪಿದ್ದಾರೆ ಎಂಬುದನ್ನು ಇದುವರೆಗೂ ಒಪ್ಪಿಕೊಂಡಿಲ್ಲ. ಅದರ ನಡುವೆಯೇ ಭಾರತೀಯ ಯೋಧರ ಕೈಯಲ್ಲಿ ಹತರಾದ ಯೋಧರ ಅಂಸ್ಯಸಂಸ್ಕಾರ ಪ್ರಕ್ರಿಯೆಗಳನ್ನು ದೊಡ್ಡ ಮಟ್ಟದಲ್ಲಿ ನಡೆಸಬಾರದು. ಯೋಧರು ಸಾವನ್ನಪ್ಪಿದಾಗ ನಡೆಸುವ ಸಾಂಪ್ರದಾಯಿಕ ಶೈಲಿಯಲ್ಲೂ ಅಂತ್ಯಸಂಸ್ಕಾರ ನಡೆಸಬಾರದು. ಇಂಥ ಪ್ರಕ್ರಿಯೆ ದೂರದ ಪ್ರದೇಶಗಳಲ್ಲಿ ನಡೆಸಬೇಕು. ಅದರಲ್ಲಿ ಹೆಚ್ಚಿನ ಜನ ಸೇರಬಾರದು ಎಂದೆಲ್ಲಾ ಸೂಚನೆ ನೀಡಿದೆ ಎಂದು ಅಮೆರಿಕಗ ಗುಪ್ತಚರ ಇಲಾಖೆಗಳನ್ನು ಉಲ್ಲೇಖಿಸಿ ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.

ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಚೀನಿ ಸೈನಿಕರಿಗೆ ಅವಮಾನ; ತಪ್ಪು ಮುಚ್ಚಿಡಲು ಚೀನಾ ಯತ್ನ!

ಕೆಲ ದಿನಗಳ ಹಿಂದೆ ಬ್ರಿಟನ್‌ ಗಾರ್ಡಿಯನ್‌ ಪತ್ರಿಕೆ ಕೂಡಾ ಚೀನಾದ ಇಂಥ ವರ್ತನೆ ಬಗ್ಗೆ ವರದಿ ಪ್ರಕಟಿಸಿತ್ತು. ಗಲ್ವಾನ್‌ನಲ್ಲಿ ಮಡಿದ ಭಾರತೀಯ ಯೋಧರಿಗೆ ಅಲ್ಲಿನ ಸರ್ಕಾರ ಎಲ್ಲಾ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸುತ್ತಿರುವಾ ನಮ್ಮ ಯೋಧರಿಗೆ ಇಂಥ ಅಗೌರವ ಏಕೆ ಎಂದು ಚೀನಿಯರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದ ವಿಷಯವನ್ನು ಪತ್ರಿಕೆ ವರದಿ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಅಮೆರಿಕ ಪತ್ರಿಕೆ ಕೂಡಾ ಅದೇ ರೀತಿಯ ಮಾಹಿತಿ ಹೊರಗೆಡವಿದೆ.

ಅಮೆರಿಕ ಗುಪ್ತಚರ ಇಲಾಖೆ ಮೂಲಗಳ ಪ್ರಕಾರ ಚೀನಾದ 35ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ. ಆದರೆ ಇಷ್ಟುದೊಡ್ಡಮಟ್ಟದಲ್ಲಿ ಸಾವನ್ನು ಒಪ್ಪಿಕೊಂಡರೆ ಅದು ಭಾರೀ ಮುಖಭಂಗದ ವಿಷಯ. ಜೊತೆಗೆ ತಾನೇ ಕಾಲು ಕೆರೆದುಕೊಂಡು ಹೋಗಿ, ವಾಸ್ತವ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ನಡೆಸಿದ ಕೃತ್ಯ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗುವುದು ಖಚಿತ ಎಂಬ ಕಾರಣಕ್ಕಾಗಿ, ತನ್ನ ಯೋಧರಿಗೇ ಚೀನಾ ಅವಮಾನ ಮಾಡುತ್ತಿದೆ ಎನ್ನಲಾಗಿದೆ.

ವೈರತ್ವ ಬೇಡ ಪಾರ್ಟ್ನರ್ ಆಗೋಣ; ಭಾರತದ ನಡೆಗೆ ಬೆಚ್ಚಿ ವರಸೆ ಬದಲಿಸಿದ ಚೀನಾ!

ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಜೂ.15ರ ರಾತ್ರಿ ಚೀನಾ ಮತ್ತು ಭಾರತ ಯೋಧರ ಮಧ್ಯೆ ಭಾರೀ ಗುಂಡಿನ ಕಾಳಗವೇ ನಡೆದಿತ್ತು. ಭಾರತ ತನ್ನ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಬಹಿರಂಗಪಡಿಸಿತ್ತು.

Follow Us:
Download App:
  • android
  • ios