ನವದೆಹಲಿ(ಜು.16): ಗಲ್ವಾನ್‌ನ ಗಡಿ ನಿಯಂತ್ರಣ ರೇಖೆ ಬಳಿ ಭಾರತ ಮತ್ತು ಚೀನಾ ಮಧ್ಯೆ ಉದ್ಭವಿಸಿದ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಗಡಿ ನಿರ್ವಹಣೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಚೀನಾ ಪಾಲನೆ ಮಾಡಲೇಬೇಕು ಎಂಬ ಕಠಿಣ ಹಾಗೂ ಸ್ಪಷ್ಟ ಸಂದೇಶವನ್ನು ಭಾರತ ಚೀನಾಕ್ಕೆ ರವಾನಿಸಿದೆ.

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!

ಗಡಿ ವಿವಾದ ಪರಿಹಾರಕ್ಕಾಗಿ ಉಭಯ ದೇಶಗಳ ಮಧ್ಯೆ ಭಾರತದ ಲೆಫ್ಟಿನೆಂಟ್‌ ಜನರಲ್‌ ಹರೀಂದರ್‌ ಸಿಂಗ್‌ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ನಡೆದ ಈ ಮಹತ್ವದ ಸಭೆ ಮಧ್ಯರಾತ್ರಿ 2 ಗಂಟೆಗೆ ಮುಕ್ತಾಯವಾಗಿದೆ. ಅಂದರೆ, ನಿರಂತರ 15 ಗಂಟೆಗಳ ಕಾಲ ಈ ಸಭೆ ನಡೆದಿದೆ.

ಪ್ಯಾಂಗಾಂಗ್‌ನಿಂದ ಚೀನಾ ಇನ್ನಷ್ಟು ಹಿಂದಕ್ಕೆ!

ಈ ವೇಳೆ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಬೀಡುಬಿಟ್ಟಿರುವ ಚೀನೀ ಯೋಧರ ವಾಪಸ್ಸಾತಿ ಮಾತ್ರವೇ ಗಡಿ ಬಿಕ್ಕಟ್ಟು ಶಮನಕ್ಕೆ ಇರುವ ಏಕಮಾತ್ರ ಮಾರ್ಗ. ಅಲ್ಲದೆ, ಈ ಪ್ರಾಂತ್ಯದಲ್ಲಿ ಸಂಪೂರ್ಣ ಪ್ರಮಾಣದ ಶಾಂತಿ ಪುನಃ ಸ್ಥಾಪನೆ ಮತ್ತು ಪರಿಸ್ಥಿತಿ ಸುಧಾರಣೆಗೆ ತರುವ ಹೊಣೆಗಾರಿಕೆ ಚೀನಾ ಮೇಲೆಯೇ ಇದೆ ಎಂದು ಭಾರತ ಚೀನಾಕ್ಕೆ ಮನವರಿಕೆ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.