ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 30 ಜನರು ಗಾಯಗೊಂಡಿದ್ದಾರೆ. ಭೂಕಂಪನದ ತೀವ್ರತೆಗೆ ಕಟ್ಟಡಗಳು ಅಲುಗಾಡುವ, ಅಕ್ವೇರಿಯಂ ನೀರು ಚೆಲ್ಲುವ ದೃಶ್ಯಗಳು ವೈರಲ್ ಆಗಿದ್ದು, ಕೆಲ ದೃಶ್ಯಗಳ ವಿಡಿಯೋ ಇಲ್ಲಿದೆ.
ಜಪಾನ್‌ನಲ್ಲಿ 7.5 ತೀವ್ರತೆಯ ಭಾರಿ ಭೂಕಂಪನ ಸಂಭವಿಸಿದ್ದು, ಭೂಕಂಪನದ ತೀವ್ರತೆಗೆ ಭೂಮಿ ನಡುಗುತ್ತಿರುವ ಕಟ್ಟಡಗಳು ಅಲುಗುತ್ತಿರುವ ಅಕ್ವೇರಿಯಂನಲ್ಲಿರುವ ನೀರು ಸೀಮೋಲಂಘನಾ ಮಾಡ್ತಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿವೆ. ಸೋಮವಾರ ರಾತ್ರಿ ಈಶಾನ್ಯ ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಈ ಭೂಕಂಪನದಿಂದಾಗಿ ಕನಿಷ್ಠ 30 ಜನರು ಗಾಯಗೊಂಡಿದ್ದಾರೆ. ಭೂಕಂಪನದಿಂದಾಗಿ ಸಾವಿರಾರು ಜನರು ತಮ್ಮ ಮನೆಗಳನ್ನು ಖಾಲಿ ಮಾಡಬೇಕಾಯಿತು ಎಂದು ವರದಿಯಾಗಿದೆ.
ವೈರಲ್ ಆದ ವೀಡಿಯೋಗಲ್ಲಿ ಒಂದರಲ್ಲಿ ಭೂಕಂಪನಕ್ಕೆ ಮನೆಯ ಗೋಡೆಗೆ ನೇತು ಹಾಕಿದ್ದ ಟೀವಿ ಅಲುಗಾಡುವುದನ್ನು ನೋಡಬಹುದಾಗಿದೆ. ತಾವೇ ಸ್ವತಃ ಅಲುಗಾಡುತ್ತಿದ್ದರು. ಅಲ್ಲಿನ ಇಬ್ಬರು ಯುವಕರು ನಿಧಾನವಾಗಿ ಆ ಟೀವಿಯನ್ನು ಕೆಳಗೆ ಮಲಗಿಸುತ್ತಾರೆ. ಹಾಗೆಯೇ ವೈರಲ್ ಆದ ಮತ್ತೊಂದು ವೀಡಿಯೋದಲ್ಲಿ ಕಚೇರಿಯೊಂದರಲ್ಲಿ ಕುರ್ಚಿ ಮೇಜುಗಳು ಜೋರಾಗಿ ಅತ್ತಿತ್ತ ವಾಲಾಡುತ್ತಾ ಮೇಜಿನ ಮೇಲಿದ್ದ ಫೈಲ್‌ಗಳೆಲ್ಲಾ ಕೆಳಗೆ ಬೀಳುವುದನ್ನು ಕಾಣಬಹುದಾಗಿದೆ. ಹಾಗೆಯೇ ಮತ್ತೊಂದು ವೀಡಿಯೋದಲ್ಲಿ ಮನೆಯ ಸೀಲಿಂಗ್‌ಗೆ ಹಾಕಿದ್ದ ಅಲಂಕಾರಿಕ ಲೈಟೊಂದು ಜೋರಾಗಿ ಅತ್ತಿತ್ತ ಅಲುಗಾಡುವುದನ್ನು ಕಾಣಬಹುದಾಗಿದೆ. ಹಾಗೆಯೇ ವೈರಲ್ ಆದ ಇನ್ನೊಂದು ವೀಡಿಯೋದಲ್ಲಿ ಅಕ್ವೇರಿಯಂ ನೀರು ಅಲುಗಾಡಕ್ಕೆ ಹೊರಕ್ಕೆ ಚೆಲ್ಲುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: 15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮನೆಗೆ ಬಂದ ಯೋಧ
ಸ್ಥಳೀಯ ಕಾಲಮಾನ ರಾತ್ರಿ 11.15(ಜಿಎಂಟಿ ಸಮಯದ ಪ್ರಕಾರ ಮಧ್ಯಾಹ್ನ 14:15ರ) ಸುಮಾರಿಗೆ ಈ ಭೂಕಂಪನ ಸಂಭವಿಸಿದೆ. ಅಮೋರಿ ಪ್ರದೇಶದ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿ 50 ಕಿ.ಮೀ (31 ಮೈಲಿ) ಆಳದಲ್ಲಿ ಭೂಕಂಪನ ಕೇಂದ್ರಬಿಂದು ಕಾಣಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇದರಿಂದಾಗಿ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿತ್ತು. ಭೂಕಂಪನದಿಂದಾಗಿ 70 ಸೆಂ.ಮೀ (27 ಇಂಚು) ಎತ್ತರದ ಅಲೆಗಳು ಅಲ್ಲಿನ ಸಮುದ್ರ ತೀರಗಳಲ್ಲಿ ಕಂಡು ಬಂದವು
ಭೂಕಂಪನಿಂದಾಗಿ ಜಪಾನ್‌ನಲ್ಲಿ ಕೆಲವು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು, ಜೊತೆಗೆ ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇಲ್ಲಿ ಮುಂದಿನ ದಿನಗಳಲ್ಲಿ ಬಲವಾದ ಭೂ ಕಂಪನ ಸಂಭವಿಸಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸಾರ್ವಜನಿಕರು ಕನಿಷ್ಠ ಒಂದು ವಾರದವರೆಗೆ ಹೆಚ್ಚಿನ ಎಚ್ಚರಿಕೆಯಲ್ಲಿರಲು ಸೂಚಿಸಲಾಗಿದೆ.
ಭೂಕಂಪದಿಂದ ಹಾನಿಗೊಳಗಾದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಜಪಾನ್ ಪ್ರಧಾನಿ ಸನೇ ತಕೈಚಿ, ನೀವು ದೈನಂದಿನ ಭೂಕಂಪನದಿಂದ ಪಾರಾಗುವುದಕ್ಕೆ ಸಿದ್ಧರಾಗಿರಿ ಎಂದಿದ್ದಾರೆ. ಉದಾಹರಣೆಗೆ ನೀವು ನಿಮ್ಮ ಮನೆಯ ಪೀಠೋಪಕರಣಗಳನ್ನು ತೂಗು ಹಾಕಿದ ಟಿವಿ ಕನ್ನಡಿ ಮುಂತಾದವುಗಳನ್ನುಸುರಕ್ಷಿತವಾಗಿರಿಸಿದ್ದೀರ ಎಂದು ಖಚಿತಪಡಿಸಿಕೊಳ್ಳಿ, ಇದರ ಜೊತೆಗ ನಿಮಗೆ ಅತ್ತಿತ್ತ ವಾಲುತ್ತಿದ್ದೇವೆ ಎಂದು ಭಾಸವಾದರೆ ಕೂಡಲೇ ಆ ಸ್ಥಳದಿಂದ ಹೊರಡಲು ಸಿದ್ದರಾಗಿರಿ ಎಂದು ಅವರು ಜನರಿಗೆ ಮನವಿ ಹಾಗೂ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: 15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮನೆಗೆ ಬಂದ ಯೋಧ
ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಭೂಕಂಪನದಿಂದಾಗಿ ಜಪಾನ್‌ನಲ್ಲಿ ಸುಮಾರು 90,000 ನಿವಾಸಿಗಳಿಗೆ ಮನೆಯಿಂದ ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಆದೇಶಿಸಲಾಗಿದೆ. ಘಟನೆಯಿಂದಾಗಿ ಸುಮಾರು 2,700 ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪೂರ್ವ ಜಪಾನ್ ರೈಲ್ವೆ ಈಶಾನ್ಯ ಕರಾವಳಿಯಲ್ಲಿ ಕೆಲವು ರೈಲ್ವೆ ಸೇವೆಗಳನ್ನು ಸ್ಥಗಿತಗೊಳಿಸಿದೆ. ಅಲ್ಲದೇ ಭೂಕಂಪನದಿಂದ ಸಂಕಷ್ಟಕ್ಕೆ ಒಳಗಾದವರಿಗಾಗಿ ಜಪಾನ್ ಸರ್ಕಾರವು ಪ್ರಧಾನ ಮಂತ್ರಿಯ ಬಿಕ್ಕಟ್ಟು ನಿರ್ವಹಣಾ ಕೇಂದ್ರದಲ್ಲಿ ಜನರಿಗೆ ಸಹಾಯವಾಣಿ ಕಚೇರಿಯನ್ನು ಸ್ಥಾಪಿಸಿದೆ ಮತ್ತು ತುರ್ತು ತಂಡವನ್ನು ಸನ್ನದ್ಧವಾಗಿರಿಸಿದೆ ಎಂದು ಜಪಾನ್‌ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಮಿನೋರು ಕಿಹರಾ ಹೇಳಿದ್ದಾರೆ.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭೂಕಂಪನದಿಂದಾದ ಹಾನಿಯನ್ನು ನಿರ್ಣಯಿಸಲು ಮತ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಸೇರಿದಂತೆ ತುರ್ತು ವಿಪತ್ತು ಪ್ರತಿಕ್ರಿಯೆ ಕ್ರಮಗಳನ್ನು ಕಾರ್ಯಗತಗೊಳಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಅವರು ಮಿನೋರು ಕಿಹರಾ ಹೇಳಿದ್ದಾರೆ. ಕಂಪನದ ನಂತರ, ಜಪಾನ್‌ನ ವಿದ್ಯುತ್ ಕಂಪನಿ ಟೊಹೊಕು ಎಲೆಕ್ಟ್ರಿಕ್ ಪವರ್, ತನ್ನ ಹಿಗಾಶಿಡೋರಿ ಮತ್ತು ಒನಗಾವಾ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಭೂಕಂಪದ ಪರಿಣಾಮವಾಗಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದೆ ಎಂದು ತಿಳಿಸಿದೆ. ಹಾಗೆಯೇ ನಿಷ್ಕ್ರಿಯಗೊಂಡ ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರ ಸ್ಥಳದಲ್ಲಿಯೂ ಯಾವುದೂ ಹಾನಿ ಪತ್ತೆಯಾಗಿಲ್ಲ ಎಂದು ಜಪಾನಿನ ಅಧಿಕಾರಿಗಳು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 11, 2011 ರಂದು ದೇಶದ ಪೂರ್ವ ಕರಾವಳಿಯಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿದಾಗ ಫುಕುಶಿಮಾಗೆ ತೀವ್ರ ಹಾನಿಯಾಗಿತ್ತು. ಜಪಾನ್‌ನಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಭೂಕಂಪನವೆಂದು ದಾಖಲಾದ ಆ ಭೂಕಂಪವು ಸುನಾಮಿಗೂ ಕಾರಣವಾಯಿತು, ಇದು ಅಲ್ಲಿನ ಹೊನ್ಶು ಮುಖ್ಯ ದ್ವೀಪದ ಮೇಲೆ ಸಂಭವಿಸಿತ್ತು. ಈ ದುರಂತದಲ್ಲಿ 18,000 ಕ್ಕೂ ಹೆಚ್ಚು ಜನರು ಮೃತಪಟ್ಟು ಇಡೀ ಪಟ್ಟಣವೇ ನಾಶವಾಗಿತ್ತು.
