Asianet Suvarna News Asianet Suvarna News

ಕತಾರ್‌ನಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

ದೋಹಾದ ಡಿಪಿಎಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 1000 ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳು

67th Karnataka Rajyotsava Celebrated at Doha in Qatar grg
Author
First Published Nov 8, 2022, 10:35 PM IST

ದೋಹಾ(ನ.08): ಕತಾರ್‌ನ ದೋಹಾ ನಗರದಲ್ಲಿ ಇತ್ತೀಚೆಗೆ ಕರ್ನಾಟಕ ಸಂಘ ಕತಾರ್‌ನಿಂದ, 67 ನೇ  ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ದೋಹಾದ ಡಿಪಿಎಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.  ಸಭೆಯನ್ನು ಸ್ವಾಗತ ಮಾಡಿ ಮಾತನಾಡಿದ ಮಹೇಶ್ ಗೌಡ ಅವರು, ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಆನ್ಲೈನ್‌ಗೆ ಸೀಮಿತವಾಗಿದ್ದ ಕಾರ್ಯಕ್ರಮಗಳು ಈ ವರ್ಷ ಎಲ್ಲರ ಸಮ್ಮುಖದಲ್ಲಿ ಆಚರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಕತಾರ್‌ನಲ್ಲಿ ಪ್ರಪಂಚದ ಅತಿ ಪ್ರತಿಷ್ಟಿತ ಪಂದ್ಯಾವಳಿ ಫಿಫಾ ನೆಡೆಯುತ್ತಿರುವ ಸಂದರ್ಭದಲ್ಲಿ ಸಂಘವು ಕರ್ನಾಟಕ ರಾಜ್ಯೋತ್ಸವ ಆಚರಿಸಿರವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.      

ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ, ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್‌ನ ಮುಖ್ಯಸ್ಥರಾದ ರವಿ ಹೆಗ್ಡೆ,  ನಟ ಹಾಗೂ ನಿರ್ದೇಶಕ ಅನೂಪ್ ಭಂಡಾರಿ, ಖ್ಯಾತ ಮಿಮಿಕ್ರಿ ಕಲಾವಿದ ಯೋಗಿ ಗೌಡ, ಭಾರತ ರಾಯಭಾರಿ ಕಚೇರಿಯ ಪ್ರತಿನಿಧಿ ಏಂಜೆಲಿನ ಪ್ರೇಮಲತ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿ ಹಾಗೂ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಪಾಲ್ಗೊಂಡಿದ್ದರು.

ಬೆಂಗಳೂರು: ಒಂದೇ ಸ್ಥಳದಲ್ಲಿ 10 ರಾಜ್ಯಗಳ 21 ಭಾಷಿಕರಿಂದ ಕರ್ನಾಟಕ ರಾಜ್ಯೋತ್ಸವ

ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ತಂಡ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತ ಮೂಲಕ ಅತಿಥಿಗಳ ಸ್ವಾಗತ ಮಾಡಲಾಯಿತು. ಈ ಡೊಳ್ಳು ಕುಣಿತವನ್ನು ಸುಮಾ ಮಹೇಶ್ ಗೌಡ ಸಂಯೋಜಿಸಿದರು. ಇದು ಪ್ರೇಕ್ಷಕರಿಂದ ಮಾತ್ರವಲ್ಲದೆ ಗೌರವಾನ್ವಿತ ಅತಿಥಿಗಳಾದ ನಾಗಾಭರಣ ಅವರಿಂದ ಕೂಡ ಮೆಚ್ಚುಗೆ ಪಡೆಯಿತು.

ಭಾರತೀಯ ರಾಯಭಾರಿ ಕಚೇರಿಯ ಪ್ರತಿನಿಧಿ ಏಂಜೆಲಿನ ಪ್ರೇಮಲತ ಅವರು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನೆಡೆಸುತ್ತಾ ಬಂದಿರುವ ಕರ್ನಾಟಕ ಸಂಘ ಕತಾರ್ ನ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿ, ಮುಂದಿನ ದಿನಗಳ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.  

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟಿ.ಎಸ್. ನಾಗಾಭರಣ ಅವರು, ಸಂಘವು ನೆಡೆಸುತ್ತಿರುವ ಕನ್ನಡ ಶಾಲೆಯ ಹಾಗೂ ಕನ್ನಡ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಕನ್ನಡ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೆಡೆಸುತ್ತಿರುವ ಅಭಿಯಾನಗಳ ಬಗ್ಗೆ ಪ್ರೇಕ್ಷಕರಿಗೆ ತಿಳಿಸಿದರು. 

ಬಳಿಕ ಮಾತನಾಡಿದ ರವಿ ಹೆಗ್ಡೆ ಅವರು, ಸಂಘದ ಕಾರ್ಯಗಳಿಗೆ ಅವರ ಮಾಧ್ಯಮದಿಂದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಾ, ತಂತ್ರಜ್ಞಾನದ ಉಪಯೋಗದಿಂದ ಹೇಗೆ ಭಾಷಾ ಬೆಳೆವಣಿಗೆ ಸಾಧ್ಯ ಎಂದು ತಿಳಿಸಿದರು. ಚಿತ್ರ ನಟ ಯೋಗಿ ಗೌಡ ಅವರ ರಾಜಕೀಯ ವ್ಯಕ್ತಿಗಳು ಹಾಗೂ ಪತ್ರಿಕಾ ಮಾಧ್ಯಮದ ದಿಗ್ಗಜರ ಮಿಮಿಕ್ರಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.

ಸಂಘವು ಈ ವರ್ಷ ನಡೆಸಿದ ಅದ್ಧೂರಿ ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡ ನಾಡಿನ ರಂಗಭೂಮಿ, ನಾಟಕ ಕ್ಷೇತ್ರ,  ಕಲಾತ್ಮಕ ಹಾಗೂ ವಾಣಿಜ್ಯ ಚಲನಚಿತ್ರಗಳ ಹೆಸರಾಂತ ಕಲಾವಿದರು, ನಿರ್ಮಾಪಕರು, ನಿರ್ದೇಶಕರು,  ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಅಸಂಖ್ಯಾತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು,  ಕನ್ನಡ ನಾಡು-ನುಡಿಗೆ ಕಟಿಬದ್ಧರಾಗಿರುವ, ಪ್ರಸ್ತುತ ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಅಭ್ಯುದಯಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ  ಕನ್ನಡಿಗರ  ಹೆಮ್ಮೆಯ ಟಿ.ಎಸ್. ನಾಗಾಭರಣ" ರವರನ್ನು "ಕತಾರ್ ಕನ್ನಡ ಸಮ್ಮಾನ್ " ಪ್ರಶಸ್ತಿ ಪ್ರದಾನ ಮಾಡಿ, ಗೌರವಾದರಗಳೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. 

ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!

ಸಂಘದ ಸದಸ್ಯರು ಅನೂಪ್ ಭಂಡಾರಿ ಹಾಗೂ ಟಿ.ಎಸ್. ನಾಗಾಭರಣ ಅವರ ಹಾಡುಗಳ ನೃತ್ಯ ಪ್ರದರ್ಶನ ಮಾಡಿದರು. ಕನ್ನಡ ಉಳಿಸಿ ಬೆಳೆಸಿ ಎಂಬ ನೀತಿ ಕಥೆಯ ನಾಟಕ ಪ್ರದರ್ಶನ ಮಾಡಿದರು. ಸಂಘದ ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ ಸಂಜನಾ ಜೀವನ್ ಅವರು ಸಂಯೋಜಿಸಿದ ಪ್ರಪಂಚದಾದ್ಯಂತ ಯಶಸ್ವಿ ಪ್ರದರ್ಶನಗೊಳ್ಳುತಿರುವ ಕನ್ನಡ ಚಿತ್ರ ಕಾಂತಾರದ ವರಾಹ ರೂಪಂ ನೃತ್ಯವು ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಕಾರ್ಯಕ್ರಮದ ವಂದನಾರ್ಪಣೆಯನ್ನು ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸುಶೀಲ ಸುನಿಲ್ ಅವರು ನೆರವೇರಿಸಿದರು.

ಕರ್ನಾಟಕ ಸಂಘ ಹಾಗೂ ಅದರ ಸೋದರ ಸಂಸ್ಥೆಗಳಾದ ತುಳುಕೂಟ ಕತಾರ್, ಬಂಟ್ಸ್ ಕತಾರ್, ಮಂಗಳೂರ ಕಲ್ಚರಲ್ ಅಸೋಸಿಯೇಷನ್, ಬಿಲ್ಲವಾಸ್ ಕತಾರ್, ಮಂಗಳೂರು ಕ್ರಿಕೆಟ್ ಕ್ಲಬ್ ಗಳಿಂದ ರಾಜ ಮನೆತನ,  ದೇಶ ಪ್ರೇಮ ಹಾಗೂ ಅಪ್ಪು ಸ್ಮರಣಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅಂತ್ಯಗೊಂಡಿತು.
 

Follow Us:
Download App:
  • android
  • ios