ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!

ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. 67ನೇ ಕನ್ನಡ ರಾಜ್ಯೋತ್ಸವ ದಿನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕನ್ನಡದಲ್ಲೇ ಶುಭಕೋರಿದ್ದಾರೆ.

Delhi CM Arvind kejriwal wish people of Karnataka on Karnataka Rajyotsava in Kannada ckm

ನವದೆಹಲಿ(ನ.01): ಮೈಸೂರು ರಾಜ್ಯ ಕರ್ನಾಟಕವಾಗಿ ರೂಪುಗೊಂಡ ದಿನ. ಈ ಶುಭದಿನವನ್ನು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ. ಕೊರೋನಾ ನಿರ್ಬಂಧ, ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದಿಂದ ಕಳೆದೆರಡು ವರ್ಷ ರಾಜ್ಯೋತ್ಸವ ಆಚರಣೆಗೆ ಬ್ರೇಕ್ ಬಿದ್ದಿತ್ತು. ಹೀಗಾಗಿ ಈ ಬಾರಿ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲಾಗಿದೆ. ಇದೇ ದಿನ ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹೀಗಾಗಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಹಲವು ಕಾರಣಗಳಿಂದ ವಿಶೇಷವಾಗಿದೆ.  ಕನ್ನಡ ರಾಜ್ಯೋತ್ಸವಕ್ಕೆ ಹಲವು ದಿಗ್ಗಜರು ಶುಭಾಶಯ ಕನ್ನಡಿಗರ ಸಂಭ್ರಮ ಹೆಚ್ಚಿಸಿದೆ. ಇದೀಗ ದಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕನ್ನಡದಲ್ಲೇ ಶುಭಕೋರಿದ್ದಾರೆ.

ಕನ್ನಡ ರಾಜ್ಯ ಏಕೀಕರಣಗೊಂಡ ಸವಿನೆನಪಿನ  ರಾಜ್ಯೋತ್ಸವದ ಈ ಸಂತಸದಲ್ಲಿ ನಾನೂ ಭಾಗಿ ಎಂದು ಅರವಿಂದ್ ಕೇಜ್ರಿವಾಲ್ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವ ಶುಭಾಶಯ, ಕರ್ನಾಟಕ ಜನತೆಯ ಒಳಿತಿಗಾಗಿ ಪ್ರಾರ್ಥಿಸುತ್ತೇನೆ ಎಂದು  ಇದೇ ಟ್ವೀಟ್‌ನಲ್ಲಿ ಇಂಗ್ಲೀಷ್‌ನಲ್ಲಿ ಬರೆದುಕೊಂಡಿದ್ದಾರೆ.

 

 

ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಅರವಿಂದ್ ಕೇಜ್ರಿವಾಲ್ ಟ್ವೀಟ್‌ಗೆ ಹಲವರು ಧನ್ಯವಾದ ಹೇಳಿದ್ದಾರೆ. ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಕೋರಿದ ಕೇಜ್ರಿವಾಲ್‌ಗೆ ಧನ್ಯವಾದ ಹೇಳಿದ್ದಾರೆ. ಸದ್ಯ ಕೇಜ್ರಿವಾಲ್ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಎರಡು ರಾಜ್ಯಗಳಲ್ಲಿ ಆಮ್ ಆದ್ಮಿ ಪಾರ್ಟಿ ಖಾತೆ ತೆರೆಯಲು ಯತ್ನ ನಡೆಸುತ್ತಿದ್ದಾರೆ. 

ಕರ್ನಾಟಕ ರಾಜ್ಯೋತ್ಸವ ದಿನವೇ ಕೇರಳ ಏಕೀಕರಣ ದಿನವಾಗಿದೆ. ಆದರೆ ಅರವಿಂದ್ ಕೇಜ್ರಿವಾಲ್ ಕರ್ನಾಟಕಕ್ಕೆ ಮಾತ್ರ ಯಾಕೆ ಶುಭಕೋರಲಾಗಿದೆ. ಕೇರಳಕ್ಕೂ ಶುಭಕೋರಿಲ್ಲ ಯಾಕೆ ಎಂದು ಹಲವರು ಟ್ವಿಟರ್ ಮೂಲಕ ಪ್ರಶ್ನಿಸಿದ್ದಾರೆ. ಕೇರಳದಲ್ಲಿ ಆಮ್ ಆದ್ಮಿ ಪಾರ್ಟಿ ಮುಂಬರುವ ಚುನಾವಣೆಯಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ. ಮುಂಬರುವ ಚುನಾವಣೆ ದೃಷ್ಟಿಯಿಂದ ಕೇಜ್ರಿವಾಲ್ ಕರ್ನಾಟಕ ಜನರ ಪ್ರೀತಿ ಗಳಿಸಲು ಈ ಟ್ವೀಟ್ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಚುನಾವಣೆ, ರಾಜಕೀಯ ಏನೇ ಇದ್ದರೂ ಅರವಿಂದ್ ಕೇಜ್ರಿವಾಲ್ ಕನ್ನಡದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿರುವುದು ಪ್ರಶಂಸನೀಯ. 

ವ್ಯಕ್ತಿತ್ವದಿಂದ ಇಡೀ ರಾಜ್ಯದ ಮನ ಗೆದ್ದಿರುವ ಏಕೈಕ ವ್ಯಕ್ತಿ ಪುನೀತ್: ಜೂ. ಎನ್‌ಟಿಆರ್

ಕರ್ನಾಟಕದ ಮೂಲೆ ಮೂಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಗಿದೆ. ಕನ್ನಡ ರಾಜ್ಯೋತ್ಸವದ ನಿಮಿತ್ತ ಕೊಟ್ಟೂರು ಪಟ್ಟಣದ ಡಾ.ಪುನೀತ್‌ ರಾಜ್‌ಕುಮಾರ ಅಭಿಮಾನಿ ಸಂಘದಿಂದ ಮಂಗಳವಾರ ನಾಡದೇವತೆ ಭುವನೇಶ್ವರಿದೇವಿ ಮತ್ತು ಡಾ. ಪುನೀತ್‌ ರಾಜ್‌ಕುಮಾರವರ ಭಾವಚಿತ್ರವನ್ನು ಅಲಂಕೃತ ಆಟೋದಲ್ಲಿರಿಸಿಕೊಂಡು ಮೆರವಣಿಗೆ ಮಾಡಲಾಯಿತು. ಡಾ.ಪುನೀತ್‌ರಾಜ್‌ಕುಮಾರವರ 20ಅಡಿ ಕಟೌಟ್‌ಗೆ ಅಭಿಮಾನಿಗಳು ಕೆಂಪು,ಹಳದಿ ಹೂವಿನ ಹಾರವನ್ನು ಜೆಸಿಬಿ ಮೂಲಕ ಹಾಕಿ ಸಂಭ್ರಮ ತೋರಿದರಲ್ಲದೆ ವಿಶೇಷ ಬಗೆಯ ಪೂಜೆ ಸಲ್ಲಿಸಿದರು.

Latest Videos
Follow Us:
Download App:
  • android
  • ios