McDonald Meal ಬಾತ್‌ರೂಂನಲ್ಲಿ ಸಿಕ್ತು 60 ವರ್ಷ ಹಳೆ ಮೆಕ್‌ಡೋನಾಲ್ಡ್ ಫುಡ್, ಪೊಟ್ಟಣ ತೆರೆದ ಮನೆ ಮಾಲೀಕನಿಗೆ ಅಚ್ಚರಿ!
- ಮನೆ ನವೀಕರಣದ ವೇಳೆ ಪತ್ತೆಯಾಯ್ತು ಮೆಕ್‌ಡೋನಾಲ್ಡ್ ಫುಡ್
- ಬಾತ್ ರೂಂನಲ್ಲಿತ್ತು 60 ವರ್ಷ ಹಳೆಯ ಫುಡ್ ಪಾರ್ಸೆಲ್
- ಫ್ರೆಂಚ್ ಫ್ರೈಸ್ ಅದೇ ಕ್ರಿಸ್ಪಿ ಎಂದ ಮನೆ ಮಾಲೀಕ
ಇಲ್ಲಿನಿಯಸ್(ಏ.26): ಮನೆ ನವೀಕರಣ, ಮನೆ ಕಟ್ಟಲು ಸ್ಥಳ ಅಗೆತ, ಕಾಮಾಗಾರಿ ವೇಳೆ ಹಲವು ವಸ್ತುಗಳು ಪತ್ತೆಯಾಗಿ ಅಚ್ಚರಿಗೆ ಕಾರಣವಾಗಿದೆ. ಹೀಗೆ ಮನೆ ನವೀಕರಣ ವೇಳೆ ಮನೆ ಮಾಲೀಕನಿಗೆ ತನ್ನ ಬಾತ್‌ರೂಂನಲ್ಲಿ 60 ವರ್ಷ ಹಳೆಯ ಮೆಕ್‌ಡೋನಾಲ್ಡ್ ಫುಡ್ ಪಾರ್ಸೆಲ್ ಪತ್ತೆಯಾಗಿದೆ. ಈ ಪಾರ್ಸೆಲ್ ತೆರೆದು ನೋಡಿದ ಮಾಲೀಕನಿಗೆ ಅಚ್ಚರಿ ಕಾದಿತ್ತು. ಕಾರಣ ಪೊಟ್ಟಣ ತೆರೆದಾಗ ಬಿಸಿ ಬಿಸಿ ಮೆಕ್‌ಡೋನಾಲ್ಡ್ ಆಹಾರದ ಸುವಾಸನೆ, ಫ್ರೆಂಚ್ ಫ್ರೈಸ್ ಈಗಲೂ ಅದೇ ಕ್ರಿಸ್ಪಿಯಾಗಿದೆ ಎಂದು ಮಾಲೀಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಇಲ್ಲಿನಿಯಸ್‌ನ ನಿವಾಸಿ ರೊಬ್ ಮನೆ ನವೀಕರಣದ ವೇಳೆ ಈ ಪೊಟ್ಟಣ ಪತ್ತೆಯಾಗಿದೆ. ಈ ಪೊಟ್ಟಣ ಮೆಕ್‌ಡೋನಾಲ್ಡ್ ಆಹಾರ ತುಂಬಿದ ಪಾರ್ಸೆಲ್ ಆಗಿತ್ತು. ಪೊಟ್ಟಣದಲ್ಲಿ ಮೆಕ್‌ಡೋನಾಲ್ಡ್ ಲೋಗೋ ಮಾಸಿಲ್ಲ, ಪೊಟ್ಟಣದ ಕಳೆ ಇನ್ನೂ ಕುಂದಿಲ್ಲ. ಮೆಕ್‌ಡೋನಾಲ್ಡ್ ಖರೀದಿಸಿದ ದಿನಾಂಕ ನೋಡಿದಾಗ ಇದು ಬರೋಬ್ಬರಿ 60 ವರ್ಷ ಹಳೇಯ ಪಾರ್ಸೆಲ್ ಅನ್ನೋದು ಸಾಬೀತಾಗಿದೆ.
ಇದೇ ಮೊದಲ ಬಾರಿ ಸಿಗ್ತಿದೆ ಬಾಯಲ್ಲಿ ನೀರೂರಿಸುವ Chicken Big Mac
ಹೀಗಾಗಿ ಮಾಲೀಕನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 60 ವರ್ಷ ಹಿಂದೆ ತಂದು ಈ ಬಾತ್‌ರೊಂ ಒಳಗಿಟ್ಟ ಮೆಕ್‌ಡೋನಾಲ್ಡ್ ಫುಡ್ ಪಾರ್ಸೆಲ್ ಆಹಾರ ಹೇಗಿರಬಹುದು ಎಂದು ಪಾರ್ಸೆಲ್ ತೆರೆದಿದ್ದಾರೆ. ಪೊಟ್ಟಣ ತರೆಯುತ್ತಿದ್ದಂತೆ ಮೆಕ್‌ಡೋನಾಲ್ಡ್ ಘಮ ಘಮ ಹರಡಲು ಆರಂಭಿಸಿದೆ. ಇನ್ನು ಫ್ರೆಂಚ್ ಫ್ರೈಸ್ ಈಗಲೂ ಅದೇ ಕ್ರಿಸ್ಪಿಯಾಗಿದೆ. ಈ ಕುರಿತು ರೊಬ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
1959ರಲ್ಲಿ ಈ ಮೆಕ್‌ಡೋನಾಲ್ಡ್ ಫುಡ್ ತರಿಸಲಾಗಿದೆ. ಕಾರಣ 1959ರಲ್ಲಿ ಈ ಮನೆ ಕಟ್ಟಲಾಗಿದೆ. ಇಲ್ಲಿವರೆಗೂ ಈ ಮನೆಯ ಬಾತ್‌ರೂಂ ಒಳಗಡೆ ಅಡಗಿಸಿಟ್ಟ ಈ ಮೆಕ್‌ಡೋನಾಲ್ಡ್ ಯಾರಿಗೂ ತಿಳಿದೇ ಇರಲಿಲ್ಲ. ಇದಕ್ಕೂ ಮುನ್ನ ಈ ಮನೆಯನ್ನು ನವೀಕರಣ ಮಾಡಿಲ್ಲ. ಬಾತ್ ರೂಂ ನವೀಕರಣ ವೇಳೆ ಒಡೆಯಲಾಗಿದೆ. ಈ ವೇಳೆ ಬಾತ್‌ರೂಂ ಪೇಪರ್ ಬಳಿ ಸುತ್ತಿಟ್ಟ ಮೆಕ್‌ಡೋನಾಲ್ಡ್ ಪೊಟ್ಟಣ ಪತ್ತೆಯಾಗಿದೆ ಎಂದು ರೊಬ್ ಹೇಳಿದ್ದಾರೆ.
ಕೊತ್ತಂಬರಿ ಸೊಪ್ಪಿನ ಐಸ್‌ಕ್ರೀಮ್.. ಹೊಸ ತಿನಿಸು ಬಿಡುಗಡೆ ಮಾಡಿದ ಮ್ಯಾಕ್‌ಡೊನಾಲ್ಡ್
ನಿವಾಸ ಕ್ರಿಸ್ಟಲ್ ಲೇಕ್ ಬಳಿ ಇರುವ ಮೆಕ್‌ಡೋನಾಲ್ಡ್ ಸೆಂಟರ್ ಹತ್ತಿರವಿದೆ. ಈ ಕೇಂದ್ರ 1959ರಲ್ಲಿ ಆರಂಭಗೊಂಂಡಿದೆ. ಈ ವೇಳೆ ತಂದಿರುವ ಪೊಟ್ಟಣ ಇದಾಗಿದೆ. ಕುಟುಂಬದ ಹಿರಿಯ ಸದಸ್ಯರು ಅಂದು ತರಿಸಿದ್ದ ಮೆಕ್‌ಡೋನಾಲ್ಡ್ ಯಾವ ಕಾರಣದಿಂದ ಬಾತ್ ರೂಂ ಸೇರಿದೆ ಅನ್ನೋದು ತಿಳಿದಿಲ್ಲ. ಅಂದು ಮನೆಯಲ್ಲಿದ್ದ ಕುಟುಂಬ ಸದಸ್ಯರು ತಂದು ಇಲ್ಲಿಟ್ಟಿರಬಹುದು ಎಂದು ರೊಬ್ ಹೇಳಿದ್ದಾರೆ.
ವಿಶ್ವ ಮಟ್ಟದಲ್ಲಿ ಗಮನ ಸೆಳೆದ ಕನ್ನಡದ ಚಾಕ್ಲೇಟ್ ಕಂಪನಿ ಕ್ಯಾಂಪ್ಕೋ
ಕರ್ನಾಟಕದಲ್ಲಿ ಸಣ್ಣದಾಗಿ ಉದ್ಯಮವನ್ನು ಆರಂಭಿಸಿ ಸತತ ಪ್ರಯತ್ನ ಮಾಡಿ ಆ ಉದ್ಯಮವನ್ನು ಗೆಲ್ಲಿಸಿ ನೂರಾರು ಮಂದಿಗೆ ಕೆಲಸ ಕೊಟ್ಟು ಪರೋಕ್ಷವಾಗಿ ನಾಡಿನ ಅಭಿವೃದ್ಧಿಗೆ ಕಾರಣರಾಗುವ ಸಾವಿರಾರು ಉದ್ಯಮಿಗಳಿದ್ದಾರೆ. ಅವರಲ್ಲಿ ಕೆಲವು ಸಾಧಕರನ್ನು ಆರಿಸಿ ಆ ಸಾಧನೆಯನ್ನು ಗೌರವಿಸಲು ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಕರ್ನಾಟಕ ಬಿಸಿನೆಸ್ ಅವಾರ್ಡ್ಸ್ ಪ್ರಶಸ್ತಿ ನೀಡುತ್ತಿದೆ. ಈ ಸಾಲಿನ ಕರ್ನಾಟಕ ಬಿಸಿನೆಸ್ ಅವಾರ್ಡ್ಸ್ ಪುರಸ್ಕೃತ ಕ್ಯಾಂಪ್ಕೋ ಲಿಮಿಟೆಡ್ ಇಂಡಿಯಾ ಸಂಸ್ಥೆಯ ಗೆಲುವಿನ ಕತೆ ಇಲ್ಲಿದೆ.
ಅಡಿಕೆ ಬೆಳೆಗಾರರ ಅಭಿವೃದ್ಧಿಯ ಉದ್ದೇಶ ಇಟ್ಟುಕೊಂಡು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ 1973ರಲ್ಲಿ ವಾರಣಾಸಿ ಸುಬ್ರಾಯ ಭಟ್ಟರು ಸ್ಥಾಪಿಸಿದ ಸಹಕಾರಿ ಸಂಘವೇ ಕ್ಯಾಂಪ್ಕೋ ಲಿಮಿಟೆಡ್. ಕೃಷಿಕರಿಂದ ಕೃಷಿಕರಿಗಾಗಿ ಹುಟ್ಟಿಕೊಂಡ ಸಹಕಾರಿ ಸಂಸ್ಥೆ ಅದು. ಆರಂಭದಲ್ಲಿ ಇದ್ದಿದ್ದು 3000 ಸದಸ್ಯರು. ಸುಬ್ರಾಯ ಭಟ್ಟರು ಕನಸು ಮತ್ತು ದೂರದೃಷ್ಟಿಅದ್ಭುತವಾಗಿತ್ತು. ಅವರು ಕಂಡ ಕನಸನ್ನು ಅವರು ಕಟ್ಟಿದ ತಂಡ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಈಗ ಆ ಸಹಕಾರಿ ಸಂಘದ ಸದಸ್ಯರ ಸಂಖ್ಯೆ 1 ಲಕ್ಷ 20 ಸಾವಿರಕ್ಕೂ ಹೆಚ್ಚು.