Asianet Suvarna News Asianet Suvarna News

ಇದೇ ಮೊದಲ ಬಾರಿ ಸಿಗ್ತಿದೆ ಬಾಯಲ್ಲಿ ನೀರೂರಿಸುವ Chicken Big Mac

ಮೆಕ್ ಡೊನಾಲ್ಡ್ ಜನಪ್ರಿಯತೆ ಮೊದಲಿನಷ್ಟಿಲ್ಲ. ಅನೇಕ ಕಂಪನಿಗಳು ಮಾರುಕಟ್ಟೆಗೆ ಲಗ್ಗೆಯಿಡ್ತಿದ್ದು, ಗ್ರಾಹಕರನ್ನು ಸೆಳೆಯಲು ಹೊಸ ಪ್ರಯೋಗ ಅನಿವಾರ್ಯವಾಗಿದೆ. ಈ ಮಧ್ಯೆ ಕಂಪನಿ, ಗ್ರಾಹಕರ ಬಹುದಿನಗಳ ಬೇಡಿಕೆಯೊಂದನ್ನು ಈಡೇರಿಸಿದೆ.
 

McDonalds Adding Chicken Big Mac for its menu for the first time
Author
Bangalore, First Published Jan 26, 2022, 10:45 AM IST

ಚಿಕನ್ (Chicken) ಹೆಸರು ಕೇಳಿದ್ರೆ ಮಾಂಸಾಹಾರಿಗಳ ಬಾಯಲ್ಲಿ ನೀರು ಬರುವುದು ಸಹಜ. ರುಚಿ,ರುಚಿ ಚಿಕನ್ ತಿನ್ನಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಮನೆಯಲ್ಲಿ ಕುಳಿತು ಬರೀ ಚಿಕನ್ ತಿನ್ನುವ ಬದಲು,ಅದಕ್ಕೊಂದಿಷ್ಟು ಐಟಂ ಸೇರಿಸಿ ತಿಂದ್ರೆ ಅದ್ರ ಮಜವೇ ಬೇರೆ. ಇದಕ್ಕೆ ಮೆಕ್ ಡೊನಾಲ್ಡ್ (Mcdonald)ಬೆಸ್ಟ್. ಫಾಸ್ಟ್ ಫುಡ್ ಎಂದಾಗ ನಮಗೆ ಮೊದಲು ನೆನಪಾಗುವುದು  ಬರ್ಗರ್ (Burger). ಬರ್ಗರ್ ಪ್ರಿಯರ ಮೊದಲ ಆಯ್ಕೆ ಮೆಕ್‌ಡೊನಾಲ್ಡ್. ಕೊರೊನಾದಿಂದಾಗಿ ಜನರ ಆಯ್ಕೆಗಳು ಬದಲಾಗಿವೆ. ಹಾಗೆಯೇ ಮೆಕ್ ಡೊನಾಲ್ಡ್ ಗೆ ಬರ್ತಿದ್ದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಗ್ರಾಹಕರನ್ನು ಸೆಳೆಯಲು ಮೆಕ್ ಡೊನಾಲ್ಡ್ ಸತತ ಪ್ರಯತ್ನ ನಡೆಸುತ್ತಿದೆ. ಈಗ ಯುಕೆ ಗ್ರಾಹಕರನ್ನು ಸೆಳೆಯಲು ಮೆಕ್ ಡೊನಾಲ್ಡ್ ಮುಂದಾಗಿದೆ. 

ಯುಕೆ ಜನರಿಗೆ ಭರ್ಜರಿ ಆಫರ್ : ಯುಕೆ ಜನರ ಬಹುದಿನದ ಆಸೆ ಈಡೇರುತ್ತಿದೆ. ಮೆಕ್ ಡೊನಾಲ್ಡ್ ನಲ್ಲಿ ಬಿಗ್ ಚಿಕನ್ ತಿನ್ಬೇಕೆಂಬ ಅವರ ಬೇಡಿಕೆಯನ್ನು ಈಡೇರಿಸಲು ಮೆಕ್ ಮುಂದಾಗಿದೆ. ಯುಕೆ  ಜನರಿಗೆ ಖುಷಿ ಸುದ್ದಿಯನ್ನು ಫಾಸ್ಟ್ ಫುಡ್ ದಿಗ್ಗಜ ಕಂಪನಿ ನೀಡಿದೆ. ಮೆಕ್‌ಡೊನಾಲ್ಡ್ ತನ್ನ ಬಿಗ್ ಮ್ಯಾಕ್‌ನ ಚಿಕನ್ ಆವೃತ್ತಿಯನ್ನು ಯುಕೆ ಮತ್ತು ಐರ್ಲೆಂಡ್‌ನಲ್ಲಿ ಬಿಡುಗಡೆ ಮಾಡಲಿದೆ. ಸೀಮಿತ ಆವೃತ್ತಿಯ ಚಿಕನ್ ಬಿಗ್ ಮ್ಯಾಕ್  ಗ್ರಾಹಕರನ್ನು ಸೆಳೆಯಲಿದೆ. ಫೆಬ್ರವರಿ ಎರಡರಿಂದ ಮಾರಾಟ ಶುರುವಾಗಲಿದೆ. ಆದರೆ ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಮಾರ್ಚ್ 15ರವರೆಗೆ ಮಾತ್ರ ಇದರ ಸವಿಯನ್ನು ಸವಿಯಲು ಅವಕಾಶವಿರುತ್ತದೆ.
ಇದನ್ನು ಮೆನುವಿನಲ್ಲಿ ಸೇರಿಸಲು ಕಾರಣವೇನು ಎಂಬುದನ್ನೂ ಫಾಸ್ಟ್ ಫುಡ್ ದೈತ್ಯ ಹೇಳಿದೆ. ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿತ್ತು. ಚಿಕನ್ ಬಿಗ್ ಮ್ಯಾಕ್ ಸೇರ್ಪಡೆ ಮಾಡುವಂತೆ ಅನೇಕ ಗ್ರಾಹಕರಿಂದ ವಿನಂತಿ ಬಂದ ನಂತ್ರ ಈ ನಿರ್ಧಾರಕ್ಕೆ ಬಂದಿರುವುದಾಗಿ ಕಂಪನಿ ಹೇಳಿದೆ. ಯುಕೆಯ 1300 ಮೆಕ್ ಡೊನಾಲ್ಡ್ ಸ್ಟೋರ್ ನಲ್ಲಿ ಚಿಕನ್ ಬಿಗ್ ಮ್ಯಾಕ್ ಸಿಗಲಿದೆ. 

ಬೆಲೆ ಎಷ್ಟು ? : ಬೇರೆ ಬೇರೆ ಸ್ಟೋರ್ ನಲ್ಲಿ ಇದ್ರ ಬೆಲೆ ಬೇರೆ ಬೇರೆಯಾಗಿರಲಿದೆ ಎಂದು ಕಂಪನಿ ಹೇಳಿದೆ. ಇದ್ರ ಬೆಲೆ ದುಬಾರಿ ಎಂದ್ರೆ ತಪ್ಪಾಗಲಾರದು. ಒಂದು ಸ್ಯಾಂಡ್ವಿಚ್ ಬೆಲೆ 4.09 ಪೌಂಡ್ ಇರಲಿದೆ. ಒಂದು ಪಾನೀಯದ ಜೊತೆ ಮೀಲ್ ಪ್ಯಾಕ್ ಖರೀದಿ ಮಾಡಿದ್ರೆ ಇದ್ರ ಬೆಲೆ 5.59 ಪೌಂಡ್ ಆಗಲಿದೆ. 

ಚಿಕನ್ ಬಿಗ್ ಮ್ಯಾಕ್ ನಲ್ಲೇನಿದೆ? : ಚಿಕನ್ ಬಿಗ್ ಮ್ಯಾಕ್ ನಲ್ಲಿ 200 ಪರ್ಸೆಂಟ್ ಚಿಕನ್ ಬ್ರೆಸ್ಟ್ ಪ್ಯಾಟೀಸ್ ಇರಲಿದೆ. ಇದರಲ್ಲಿ ಮೂರು ಬನ್ ಸ್ಲೈಸ್ ಇರಲಿದೆ. ಬನ್ ಕೆಳಗೆ ಒಂದು ಚಿಕನ್ ಪೀಸ್ ಇರಲಿದೆ. ಅದ್ರ ಕೆಳಗೆ ತರಕಾರಿ,ಪಿಕಲ್ ಇರಲಿದೆ. ಅದ್ರ ನಂತ್ರ ಮತ್ತೊಂದು ಬನ್ ಪೀಸ್ ಇರಲಿದ್ದು ನಂತ್ರ ಮತ್ತೊಂದು ಚಿಕನ್ ಟಿಕ್ಕಾ ಸಿಗಲಿದೆ. ಇದಾದ್ಮೇಲೆ ಚೀಸ್ ಸ್ಲೈಸ್ ,ತರಕಾರಿ ಇರಲಿದ್ದು,ಕೊನೆಯಲ್ಲಿ ಮತ್ತೊಂದು ಬನ್ ಇರಲಿದೆ. 
ಇದಲ್ಲದೆ ಡಬಲ್ ಬಿಗ್ ಮ್ಯಾಕ್, ಮೊಝ್ಝಾರೆಲ್ಲಾ ಡಿಪ್ಪರ್ಸ್, ಗ್ಯಾಲಕ್ಸಿ ಚಾಕೊಲೇಟ್ ಮ್ಯಾಕ್‌ಫ್ಲರಿ, ಸಾಲ್ಟೆಡ್  ಕ್ಯಾರಮೆಲ್ ಮ್ಯಾಕ್‌ಫ್ಲರಿ  ಕೂಡ ಹಿಂದಿರುಗಲಿದೆ ಎಂದು ಕಂಪನಿ ಹೇಳಿದೆ. 

Health Tips: ಚರ್ಮದ ಅಲರ್ಜಿ ಸಮಸ್ಯೆಯಿದ್ದರೆ ಈ ಆಹಾರಗಳನ್ನು ಸೇವಿಸಿ

ನಿರಾಸೆ ಮೂಡಿಸಿರುವ ಮೆಕ್ : ಸೋಮವಾರ ಮೆಕ್ ಡೊನಾಲ್ಡ್  ಗ್ರಾಹಕರಿಗೆ ಕಂಪನಿ ನಿರಾಸೆ ಸುದ್ದಿ ನೀಡಿತ್ತು. ಕಂಪನಿ ಎರಡು ಪ್ರಮುಖ ಐಟಂಗಳನ್ನು ತೆಗೆದು ಹಾಕಿದೆ. ಬ್ರೆಕ್ ಪಾಸ್ಟ್ ಬಾಗಲ್ ಮತ್ತು ರ್ಯಾಪನ್ನು ಶಾಶ್ವತವಾಗಿ ತೆಗೆದು ಹಾಕಿದೆ. ಕೊರೊನಾ ಸಂದರ್ಭದಲ್ಲಿ ಮೆಕ್ ಡೊನಾಲ್ಡ್  ಈ ಐಟಂಗಳನ್ನು ತೆಗೆದಿತ್ತು. ಆದ್ರೀಗ ಮತ್ತೆ ಇದನ್ನು ಮರಳಿ ತರುವುದಿಲ್ಲ ಎಂದಿದೆ. ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಅಸಾಮಾಧಾನ ವ್ಯಕ್ತವಾಗಿದೆ. ಅನೇಕರು ಮೆಕ್ ಡೊನಾಲ್ಡ್  ನಿರ್ಧಾರವನ್ನು ಖಂಡಿಸಿದ್ದಾರೆ. 

Kitchen Hacks: ಕರಿದ ಎಣ್ಣೆಯನ್ನು ಈ ರೀತಿ ಕ್ಲೀನ್ ಮಾಡಿದ್ರೆ ಮತ್ತೆ ಬಳಸ್ಬೋದು

ಗ್ರಾಹಕರಿಗೆ ಸಿಗಲಿದೆ ಬಿಗ್ ಸರ್ಪ್ರೈಸ್?:  ಕಂಪನಿ ಈ ವರ್ಷ ಹೊಸ ಐಟಂ ಮಾರುಕಟ್ಟೆಗೆ ಬಿಡಲಿದೆ ಎನ್ನಲಾಗ್ತಿದೆ. ಆದ್ರೆ ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಇದಲ್ಲದೆ ಕಂಪನಿ ಹೊಸ ಲಾಯಲ್ಟಿ ಪ್ಲಾನ್ ಜಾರಿಗೆ ತರುವ ಘೋಷಣೆ ಕೂಡ ಮಾಡಿದೆ. ಇದ್ರಲ್ಲಿ ಗ್ರಾಹಕರಿಗೆ ರಿಯಾಯಿತಿ ಜೊತೆ ಉಚಿತ ಮೀಲ್ಸ್ ಕೂಡ ಸಿಗಲಿದೆ. 

Follow Us:
Download App:
  • android
  • ios