ಒಂದೆಡೆ ಇರಾನ್‌ ಜೊತೆ ಸಂಧಾನ ಮಾತುಕತೆಯ ಯತ್ನಗಳು ನಡೆದಿರುವಾಗ ಇನ್ನೊಂದೆಡೆ ಮಧ್ಯಪ್ರಾಚ್ಯದಲ್ಲಿ ತನ್ನ ಸೇನಾ ಬಲ ಹೆಚ್ಚಳದ ಮೂಲಕ, ಇರಾನ್‌ ಮೇಲಿನ ಭೂದಾಳಿಗೆ ಅಮೆರಿಕವು ತನ್ನ ಸಿದ್ಧತೆಯನ್ನು ತೀವ್ರಗೊಳಿಸಿದೆ ಎಂದು ಗೊತ್ತಾಗಿದೆ

ದುಬೈ: ಒಂದೆಡೆ ಇರಾನ್‌ ಜೊತೆ ಸಂಧಾನ ಮಾತುಕತೆಯ ಯತ್ನಗಳು ನಡೆದಿರುವಾಗ ಇನ್ನೊಂದೆಡೆ ಮಧ್ಯಪ್ರಾಚ್ಯದಲ್ಲಿ ತನ್ನ ಸೇನಾ ಬಲ ಹೆಚ್ಚಳದ ಮೂಲಕ, ಇರಾನ್‌ ಮೇಲಿನ ಭೂದಾಳಿಗೆ ಅಮೆರಿಕವು ತನ್ನ ಸಿದ್ಧತೆಯನ್ನು ತೀವ್ರಗೊಳಿಸಿದೆ ಎಂದು ಗೊತ್ತಾಗಿದೆ. ಇದರ ಭಾಗವಾಗಿಯೇ ಮಧ್ಯಪ್ರಾಚ್ಯದ ಸುತ್ತ ತನ್ನ ಸೇನಾ ಜಮಾವಣೆಯನ್ನು 57 ಸಾವಿರಕ್ಕೆ ಏರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯೋಧರ ಸಂಖ್ಯೆ ಇದೀಗ 57000ಕ್ಕೆ

ಮಧ್ಯಪ್ರಾಚ್ಯದಲ್ಲಿನ ವಿವಿಧ ಕೊಲ್ಲಿ ದೇಶಗಳಲ್ಲಿ ಸಾಮಾನ್ಯವಾಗಿ ನಿಯೋಜನೆಗೊಂಡಿರುತ್ತಿದ್ದ 40000 ಯೋಧರ ಸಂಖ್ಯೆ ಇದೀಗ 57000ಕ್ಕೆ ಹೆಚ್ಚಿದೆ.. ಶೀಘ್ರವೇ ಇನ್ನೂ 10 ಸಾವಿರ ಯೋಧರು ನಿಯೋಜನೆ ಆಗುವ ಸಂಭವವಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಸಾಮಾನ್ಯವಾಗಿ ಯುಎಇ, ಕತಾರ್‌, ಸೌದಿ ಅರೇಬಿಯಾ, ಜೋರ್ಡಾನ್‌, ಇರಾಕ್‌ ಮತ್ತು ಸಿರಿಯಾದಲ್ಲಿನ ಅಮೆರಿಕದ ನೌಕಾನೆಲಗಳಲ್ಲಿ ಅಂದಾಜು 40 ಸಾವಿರ ಯೋಧರನ್ನು ಅಮೆರಿಕ ನಿಯೋಜಿಸಿರುತ್ತದೆ. ಆದರೆ ಕೊಲ್ಲಿ ಯುದ್ಧ ಆರಂಭದ ಬಳಿಕ ಅದನ್ನು ದಿನೇ ದಿನೇ ಹೆಚ್ಚಳ ಮಾಡುತ್ತಿದೆ.

ಇರಾನ್‌ನ ಮೂರು ಆಯಕಟ್ಟಿನ ದ್ವೀಪ ವಶ ಮತ್ತು ಹೋರ್ಮಜ್‌ ಜಲಸಂಧಿ ವಶಕ್ಕೆ ಸಿದ್ಧತೆ ನಡೆಸುತ್ತಿರುವ ಅಮೆರಿಕ ಇದಕ್ಕೆಂದೇ 5000ಕ್ಕೂ ನೌಕಾಪಡೆಯ ಯೋಧರು ಮತ್ತು ಪ್ಯಾರಾಟ್ರೂಪರ್‌ಗಳನ್ನು ಕೊಲ್ಲಿಯ ತನ್ನ ಸೇನೆಗಳಲ್ಲಿ ನಿಯೋಜಿಸಿದೆ. ಇದು ಯುದ್ಧಕ್ಕೆ ಅಮೆರಿಕ ನಡೆಸುತ್ತಿರುವ ಅಂತಿಮ ಹಂತದ ಸಿದ್ಧತೆ ಎನ್ನಲಾಗಿದೆ.

ಇದರ ಜೊತೆಗೆ ಇನ್ನೂ 10 ಸಾವಿರ ಯೋಧರ ನಿಯೋಜನೆಗೂ ಅಮೆರಿಕ ಯೋಜಿಸಿದೆ. ಒಂದು ವೇಳೆ ಇರಾನ್‌ ಜೊತೆಗಿನ ಮಾತುಕತೆ ಫಲಪ್ರದವಾಗದೆ ಹೋಗದೇ ಯಾವುದೇ ಕ್ಷಣದಲ್ಲಿ ಅದು ಇರಾನ್‌ ಮೇಲೆ ವಾಯುಪಡೆ ಬಳಸಿ ಬಾಂಬ್‌ ದಾಳಿ, ನೌಕಾಪಡೆ ಮತ್ತು ಭೂಸೇನೆ ಬಳಸಿ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಯೋಜಿಸಿದೆ ಎಂದು ವರದಿಗಳು ತಿಳಿಸಿವೆ.

ಅಮೆರಿಕವು ಇರಾನ್‌ನ ಮುಖ್ಯ ಭೂಭಾಗದ ಮೇಲೆ ದಾಳಿ ಮಾಡುವುದಿಲ್ಲ. ಅದರ ಬದಲಾಗಿ ಖಾರ್ಗ್‌ ದ್ವೀಪಗಳು ಹಾಗೂ ಹೋರ್ಮುಜ್‌ ಜಲಸಂಧಿಯ ಸುತ್ತಲಿನ ಕೆಲವು ದ್ವೀಪಗಳ ಮೇಲೆ ಭೂದಾಳಿಗೆ ಯೋಜಿಸುತ್ತಿದೆ ಎಂದು ಸೋಮವಾರವೇ ವರದಿಯಾಗಿತ್ತು.

ಎಲ್ಲಿ ಎಷ್ಟು ಯೋಧರ ನಿಯೋನೆ?

ಕತಾರ್‌11000

ಯುಎಇ5000

ಬಹ್ರೈನ್‌14000

ಕುವೈತ್‌14000

ಜೋರ್ಡಾನ್‌3000

ಸೌದಿ ಅರೇಬಿಯಾ3000

ಇರಾಕ್‌/ ಸಿರಿಯಾ3400