Asianet Suvarna News Asianet Suvarna News

ಕ್ಯಾನ್ಸರ್‌ ಕೇಸು ವಾಪಸ್‌ಗೆ ₹ 55000 ಕೋಟಿ ಪರಿಹಾರ: ಜೆ ಆ್ಯಂಡ್‌ ಜೆ ಕಂಪನಿ ಆಫರ್‌!

ಆರೋಗ್ಯ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಕಂಪನಿಯಾದ ಜಾನ್ಸನ್‌ ಆ್ಯಂಡ್‌ ಜಾನ್ಸನ್‌, ತನ್ನ ಬೇಬಿ ಪೌಡರ್‌ ವಿರುದ್ಧ ದಾಖಲಾಗಿದ್ದ ಕ್ಯಾನ್ಸರ್‌ ಕೇಸು ಇತ್ಯರ್ಥಕ್ಕೆ 55000 ಕೋಟಿ ರು. ಪರಿಹಾರದ ಆಫರ್‌ ಮುಂದಿಟ್ಟಿದೆ.

55000 crore compensation offe for case back J&J in talc cancer case rav
Author
First Published May 4, 2024, 3:12 PM IST

ನ್ಯೂಯಾರ್ಕ್: ಆರೋಗ್ಯ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಕಂಪನಿಯಾದ ಜಾನ್ಸನ್‌ ಆ್ಯಂಡ್‌ ಜಾನ್ಸನ್‌, ತನ್ನ ಬೇಬಿ ಪೌಡರ್‌ ವಿರುದ್ಧ ದಾಖಲಾಗಿದ್ದ ಕ್ಯಾನ್ಸರ್‌ ಕೇಸು ಇತ್ಯರ್ಥಕ್ಕೆ 55000 ಕೋಟಿ ರು. ಪರಿಹಾರದ ಆಫರ್‌ ಮುಂದಿಟ್ಟಿದೆ.

ಬೇಬಿ ಪೌಡರ್‌ ಬಳಕೆಯಿಂದ ಅಂಡಾಶಯ ಕ್ಯಾನ್ಸರ್‌ ಸಂಭವಿಸಿರುವ ಕುರಿತು ಅಮೆರಿಕದಾದ್ಯಂತ ದಾಖಲಾದ ಕೇಸುಗಳ ವಿಚಾರಣೆ ವೇಳೆ, ಈ ಪರಿಹಾರದ ಮೊತ್ತ ನೀಡಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಸಿದ್ಧ ಎಂದು ಕಂಪನಿ ಕೋರ್ಟ್‌ಗೆ ಮಾಹಿತಿ ನೀಡಿದೆ. ಜೊತೆಗೆ ಪರಿಹಾರದ ಮೊತ್ತವನ್ನು ಮುಂದಿನ 25 ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ನೀಡುವುದಾಗಿ ಹೇಳಿದೆ.

ಹೊಟ್ಟೆಗೆ ಹಿಟ್ಟು ತಿನ್ನೋದು ಬಿಟ್ಟು, ಜಾನ್ಸನ್ಸ್ ಬೇಬಿ ಪೌಡರ್ ತಿನ್ನೋದಕ್ಕೆ 8 ಲಕ್ಷ ಖರ್ಚು ಮಾಡೋ ಮಹಿಳೆಯರು!

ನ್ಯಾಯಾಲಯದಲ್ಲಿ ಸಂಸ್ಥೆಯ ಮೇಲೆ ಅಂಡಾಶಯ ಕ್ಯಾನ್ಸರ್‌ ಸಂಬಂಧಿ ಪ್ರಕರಣ ದಾಖಲಿಸಿದವರ ಪೈಕಿ ಶೇ.75ರಷ್ಟು ದೂರುದಾರರು ಪರಿಹಾರ ಪಡೆಯಲು ಒಪ್ಪಿಕೊಂಡಲ್ಲಿ ಮಾತ್ರ ನ್ಯಾಯಾಲಯ ಈ ವ್ಯಾಜ್ಯಗಳನ್ನು ಕೈಬಿಟ್ಟು ತಮ್ಮ (ದೂರುದಾರರು ಹಾಗೂ ಪ್ರತಿವಾದಿಗಳು) ನಡುವೆಯೇ ಬಗೆಹರಿಸಿಕೊಳ್ಳಲು ಅವಕಾಶ ನೀಡಲಿದೆ. ಈ ಕುರಿತಾಗಿ ದೂರುದಾರರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಂಸ್ಥೆಯ ವಕೀಲರಾದ ಎರಿಕ್‌ ಹಾಸ್‌ ತಿಳಿಸಿದ್ದಾರೆ.

Follow Us:
Download App:
  • android
  • ios