ಮುಸ್ಲಿಂ ಪುಣ್ಯಕ್ಷೇತ್ರ ಮೆಕ್ಕಾದಲ್ಲಿ ಬೆಂಕಿಯಂತೆ ಸುಡುವ 52 ಡಿಗ್ರಿ ಬಿಸಿಲು: 550ಕ್ಕೂ ಹೆಚ್ಚು ಹಜ್ ಯಾತ್ರಿಗಳ ಸಾವು
ಮುಸ್ಲಿಂ ಸಮುದಾಯದ ಪವಿತ್ರ ತೀರ್ಥಕ್ಷೇತ್ರವಾಗಿರುವ ಜೆರುಸೇಲಂನ ಮೆಕ್ಕಾದಲ್ಲಿ ಈ ಬಾರಿ ಬಿರು ಬಿಸಿಲು ಕಳೆದ ಬಾರಿಗಿಂತಲೂ ತೀವ್ರವಾಗಿದ್ದು, ಇದು ಹಜ್ ಯಾತ್ರೆಗೆ ಪ್ರಪಂಚದ ಮೂಲೆ ಮೂಲೆಗಳಿಂದ ಬಂದ ಮುಸ್ಲಿಂ ಸಮುದಾಯದ ಜನರನ್ನು ಹೈರಾಣಾಗುವಂತೆ ಮಾಡಿದೆ.
ಜೆರುಸಲೇಂ: ಮುಸ್ಲಿಂ ಸಮುದಾಯದ ಪವಿತ್ರ ತೀರ್ಥಕ್ಷೇತ್ರವಾಗಿರುವ ಜೆರುಸೇಲಂನ ಮೆಕ್ಕಾದಲ್ಲಿ ಈ ಬಾರಿ ಬಿರು ಬಿಸಿಲು ಕಳೆದ ಬಾರಿಗಿಂತಲೂ ತೀವ್ರವಾಗಿದ್ದು, ಇದು ಹಜ್ ಯಾತ್ರೆಗೆ ಪ್ರಪಂಚದ ಮೂಲೆ ಮೂಲೆಗಳಿಂದ ಬಂದ ಮುಸ್ಲಿಂ ಸಮುದಾಯದ ಜನರನ್ನು ಹೈರಾಣಾಗುವಂತೆ ಮಾಡಿದೆ. ಈ ಬಾರಿಯ ಹಜ್ ಯಾತ್ರೆಯ ವೇಳೆ ಕನಿಷ್ಠ 550 ಯಾತ್ರಿಗಳು ಸಾವನ್ನಪ್ಪಿದ್ದಾರೆ ಎಂದು ಜೆರುಸಲೇಂ ರಾಜತಾಂತ್ರಿಕ ಇಲಾಖೆಯೂ ಮಾಹಿತಿ ನೀಡಿದೆ. ಮೃತಪಟ್ಟವರಲ್ಲಿ 323 ಜನ ಈಜಿಫ್ಟ ಮೂಲದವರಾಗಿದ್ದಾರೆ. ಮೃತರಲ್ಲಿ ಬಹುತೇಕ ಎಲ್ಲರೂ ಕೂಡ ಉಷ್ಣ ಹವೆ ಅಥವಾ ಬಿಸಿಲಿನ ತಾಪ ತಡೆಯಲಾಗದೇ ಸಂಭವಿಸಿದ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸಾವಿಗೆ ಸಂಬಂಧಿಸಿದಂತೆ ಎರಡು ಆರಬ್ ದೇಶಗಳ ನಡುವೆ ಸಂವಹನ ನಡೆಯುತ್ತಿದೆ ಎಂದು ವಿದೇಶಿ ಮಾಧ್ಯಮ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಎಲ್ಲಾ ಈಜಿಫ್ಟ್ ಪ್ರಜೆಗಳು ಉಷ್ಣ ಅಥವಾ ತೀವ್ರ ತಾಪಮಾನಕ್ಕೆ ಸಂಬಂಧಿಸಿದ ಅನಾರೋಗ್ಯದಿಂದಲೇ ಸಾವನ್ನಪ್ಪಿದ್ದಾರೆ. ಆದರೆ ಅದರಲ್ಲೊಬ್ಬರು ಮಾತ್ರ ಜನಸಂದಣಿಯ ಮಧ್ಯೆ ಸಿಕ್ಕು ತಿಕ್ಕಾಟದಿಂದ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ರಾಜತಾಂತ್ರಿಕ ಅಧಿಕಾರಿಯೊಬ್ಬರು ಸತ್ತವರ ಬಗ್ಗೆ ಮಾಹಿತಿ ನೀಡುವ ವೇಳೆ ಹೇಳಿದ್ದಾರೆ. ಜೋರ್ಡಾನ್ ಮೂಲದ 60 ಜನರು ಕೂಡ ಬಿಸಿಲಿನ ತಾಪಕ್ಕೆ ಬಲಿಯಾಗಿದ್ದಾರೆ. ಹೀಗಾಗಿ ವಿವಿಧ ದೇಶಗಳಿಂದ ಬಂದು ಸಾವಿಗೀಡಾದ ಯಾತ್ರಿಕರ ಸಂಖ್ಯೆ 577ಕ್ಕೆ ಏರಿಕೆ ಆಗಿದೆ.
ಹಜ್ ಯಾತ್ರಿಗಳಿಗೆ ಸುವಿಧಾ ಆ್ಯಪ್ ಜೊತೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ!
ಮೆಕ್ಕಾದಲ್ಲಿನ ಅತ್ಯಂತ ದೊಡ್ಡದಾದ ಅಲ್-ಮುಯಿಸೆಮ್‌ನಲ್ಲಿರುವ ಶವಾಗಾರದಲ್ಲಿ ಒಟ್ಟು 550 ಶವಗಳನ್ನು ಇರಿಸಲಾಗಿದೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ. ಇನ್ನು ಈ ಹಜ್ ಯಾತ್ರೆಯೂ ಇಸ್ಲಾಂ ಧರ್ಮದ ಐದು ಪ್ರಮುಖ ನಂಬಿಕೆಗಳಲ್ಲಿ ಒಂದಾಗಿದ್ದು, ಪ್ರತಿಯೊಬ್ಬ ಮುಸ್ಲಿಮರು ಅಲ್ಲಿಗೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಬೇಕು ಎಂಬ ನಂಬಿಕೆ ಇದೆ.
ಹವಾಮಾನ ಬದಲಾವಣೆಯಿಂದಾಗಿ ಈ ಹಜ್ ಯಾತ್ರೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕಳೆದ ತಿಂಗಳು ಪ್ರಕಟವಾದ ಸೌದಿ ಅಧ್ಯಯನದ ಪ್ರಕಾರ, ಜನರು ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸುವ ಸ್ಥಳದಲ್ಲಿ ತಾಪಮಾನವು ಪ್ರತಿ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆ ಆಗುತ್ತಿದೆ. ಹಾಗೆಯೇ ಕಳೆದ ಮಂಗಳವಾರ ಮೆಕ್ಕಾದಲ್ಲಿರುವ ದೊಡ್ಡ ಮಸೀದಿ ಇರುವ ಸ್ಥಳದಲ್ಲಿ ತಾಪಮಾನವೂ 51.8 ಡಿಗ್ರಿ ದಾಖಲಾಗಿದೆ.
ಹಜ್ ಯಾತ್ರೆಗೆ ಹೋಗಿದ್ದ ಮುಂಡಗೋಡ ಕುಟುಂಬದ ಮೂವರು ಮೆಕ್ಕಾ-ಮದೀನಾ ರಸ್ತೆ ಅಪಘಾತದಲ್ಲಿ ಸಾವು
ಕಳೆದ ವಾರ ಈಜಿಪ್ಟ್ ವಿದೇಶಾಂಗ ಸಚಿವಾಲಯವೂ ಹಜ್ ಯಾತ್ರೆಗೆ ತೆರಳಿ ನಾಪತ್ತೆಯಾದ ಈಜಿಪ್ಟ್ ನಿವಾಸಿಗಳ ಪತ್ತೆ ಸೌದಿ ಅಧಿಕಾರಿಗಳ ಜೊತೆ ಸಹಕಾರ ನೀಡುತ್ತಿದೆ ಎಂಬ ಹೇಳಿಕೆ ನೀಡಿತ್ತು. ಬಹಳ ಸಂಖ್ಯೆಯ ಸಾವು ಸಂಭವಿಸಿದೆ. ಅದರಲ್ಲಿ ಈಜಿಪ್ಟಿಯನ್‌ಗಳು ಇದ್ದಾರೋ ಎಂಬ ಬಗ್ಗೆ ವಿವರ ಸಿಕ್ಕಿಲ್ಲ ಎಂದು ವಿದೇಶಾಂಗ ಸಚಿವಾಲಯವೂ ಹೇಳಿತ್ತು. ಮತ್ತೊಂದೆಡೆ ತಾಪಮಾನದ ತೀವ್ರ ಏರಿಕೆಯಿಂದಾಗಿ ಅಸ್ವಸ್ಥರಾದ 2 ಸಾವಿರಕ್ಕೂ ಹೆಚ್ಚು ಯಾತ್ರಿಕರಿಗೆ ಸೌದಿ ಅಧಿಕಾರಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ವರ್ಷವೂ ಹಜ್ ಯಾತ್ರೆಗೆ ತೆರಳಿದ್ದ ವಿವಿಧ ದೇಶಗಳ 240 ಯಾತ್ರಿಕರು ಸಾವನ್ನಪ್ಪಿದ್ದರು. ಅವರಲ್ಲಿ ಹೆಚ್ಚಿನವರು ಇಂಡೋನೇಷ್ಯಾದವರು ಎಂದು ವರದಿ ಆಗಿತ್ತು.