Asianet Suvarna News Asianet Suvarna News

ಏಳು ದಿನಗಳವರೆಗೆ ಮುಳಗಲಿದ್ದಾನೆ ಸೂರ್ಯ, ಇದು ಈ ವರ್ಷದ ಅತ್ಯಂತ ಭಯಾನಕ, ಘೋರ ಭವಿಷ್ಯವಾಣಿ

2024ರ ಅಂತ್ಯದೊಳಗೆ ಸೂರ್ಯ ಏಳು ದಿನಗಳು ಮಾಯವಾಗುವುದು ಸೇರಿದಂತೆ ಐದು ವಿಚಿತ್ರ ಘಟನೆಗಳು ನಡೆಯಲಿವೆ ಎಂದು ಭವಿಷ್ಯ ನುಡಿಯಲಾಗಿದೆ. ದೈತ್ಯ ಪ್ರಾಣಿಗಳು ಕಾಣಿಸಿಕೊಳ್ಳುವಿಕೆ ಮತ್ತು ಸಾವಿನ ರಹಸ್ಯ ಬಹಿರಂಗಗೊಳ್ಳುವಿಕೆ ಸೇರಿದಂತೆ ಇತರೆ ಭವಿಷ್ಯವಾಣಿಗಳು ಸಹ ಸೇರಿವೆ.

2024 Scary  Predication Sun will vanished for seven days mrq
Author
First Published Sep 16, 2024, 11:43 AM IST | Last Updated Sep 16, 2024, 11:43 AM IST

Predictions of 2024:ಈ ವರ್ಷದ ಅಂತ್ಯದೊಳಗೆ ಅನೇಕ ವಿಚಿತ್ರಗಳನ್ನು ಕಾಣಲು ಸಾಧ್ಯವಿದೆ ಎಂಬ ಭವಿಷ್ಯವಾಣಿ ಹೊರ ಬಂದಿದೆ. ಈ ಭವಿಷ್ಯವಾಣಿ ಪ್ರಕಾರ, ಸೂರ್ಯ ಏಳು ದಿನಗಳವರೆಗೆ ಮಾಯವಾಗಲಿದ್ದಾನಂತೆ. ಆಸ್ಟ್ರೇಲಿಯಾದಲ್ಲಿ ಗಗನಚುಂಬಿ ಕಟ್ಟಡಗಳಿಗೆ ಮುತ್ತಿಕ್ಕುವ ಜಿರಾಫೆ  ಮತ್ತು 60 ಅಡಿಯಷ್ಟು ದೊಡ್ಡದಾದ ಚಿಟ್ಟೆ ಸೇರಿದಂತೆ ಅನೇಕ ವಿಚಿತ್ರ ಪ್ರಾಣಿಗಳು ನೋಡಲು ಸಿಗುತ್ತವೆ. ಈ ಪ್ರಾಣಿಗಳು ಮೊದಲ ಬಾರಿ ವಿಶ್ವದಲ್ಲಿ ಕಾಣಿಸುತ್ತವೆ ಎಂದು ಟೈಮ್ ಟ್ರಾವೆಲ್ಲರ್ ಎಂದು ಹೇಳಿಕೊಳ್ಳುವ ಈ ವ್ಯಕ್ತಿ ಭಯಾನಕ ಭವಿಷ್ಯವಾಣಿಯನ್ನು ನುಡಿದಿದ್ದಾನೆ.  ಟಿಕ್ ಟಾಕ್ ಯೂಸರ್ ಇನೋ ಅಲ್‌ರಿಕ್ ತನ್ನನ್ನು ಟೈಮ್ ಟ್ರಾವೆಲ್ಲರ್ ಎಂದು ಕರೆದುಕೊಂಡಿದ್ದಾನೆ. ತನ್ನನ್ನು 2671ರ ಟೈಮ್ ಟ್ರಾವೆಲ್ಲರ್ ಎಂದು ಹೇಳಿಕೊಂಡಿರುವ ಇನೋ, ಈ ವರ್ಷದ ಅಂತ್ಯದ ವೇಳೆಗೆ ವಿಶ್ವದಲ್ಲಿ ಐದು ವಿಚಿತ್ರ ಘಟನೆಗಳು ನಡೆಯಲಿವೆ ಎಂದು ಭವಿಷ್ಯವಾಣಿ ನುಡಿದಿದ್ದಾನೆ. ಆ ಐದು ಘಟನೆಗಳು ಯಾವವು ಎಂಬುದನ್ನು ಇನೋ ತಿಳಿಸಿದ್ದು, ಟಿಕ್‌ಟಾಕ್‌ನಲ್ಲಿ 9,00,000 ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾನೆ.

ಈ ಹಿಂದೆ ಇದೇ ಇನೋ, ಭೂಮಿ ಮೇಲೆ ಏಲಿಯನ್ ಆಗಮನವಾಗಲಿ ದೆ, ಭೂಮಿಗೆ ಬೇರೆ ಗ್ರಹಗಳು ಡಿಕ್ಕಿ, ಮೂರನೇ ವಿಶ್ವಯುದ್ಧದ  ಬಗ್ಗೆಯೂ ಭವಿಷ್ಯ ನುಡಿದಿದ್ದನು. ಇದೀಗ ಹೊಸ ಪೋಸ್ಟ್‌ನಲ್ಲಿ ಐದು ವಿಚಿತ್ರ ಘಟನೆಗಳ ಕುರಿತು ಹೇಳಲಾಗಿದೆ.

ಮೈಲಾರಲಿಂಗೇಶ್ವರನ ಕಾರ್ಣಿಕ ಸಂಪಾಯಿತಲೇ ಪರಾಕ್ ಭವಿಷ್ಯವಾಣಿ ನಿಜವಾಯ್ತು

1.ಇನೋ ಮೊದಲ ಭವಿಷ್ಯವಾಣಿ ಸೆಪ್ಟೆಂಬರ್ 20ರೊಳಗೆ ಆಸ್ಟ್ರೇಲಿಯಾದಲ್ಲಿ ಗಗನಚುಂಬಿ ಕಟ್ಟಡ ಎತ್ತರದಂತೆ ಜಿರಾಫೆ ಹಾಗೂ   ದೈತ್ಯಕಾರ ಪ್ರಾಣಿಗಳು ಕಾಣಿಸುವ ಬಗ್ಗೆ ಹೇಳಲಾಗಿದೆ. 70 ವಿವಿಧ ಜಾನುವಾರುಗಳು ಪತ್ತೆಯಾಗಲಿದ್ದು, ಇದರಲ್ಲಿ ಮೂರು ಅಡಿಯ ಸೊಳ್ಳೆ, 60 ಅಡಿಯ ಚಿಟ್ಟೆಗಳು ಇರಲಿವೆ. ಇವುಗಳ ಜೊತೆಯಲ್ಲಿ ಸ್ಕೈಸ್ಕ್ರ್ಯಾಪರ್‌ನಂತ ಬೃಹತ್ ಜೀವಿಗಳು  ಕಾಣಿಸಿಕೊಳ್ಳಲಿವೆ. 

2.ಇನೋ ಎರಡನೇ ಭವಿಷ್ಯವಾಣಿ, ಅಕ್ಟೋಬರ್  23ರಂದು ಸೂರ್ಯನಿಂದ ವಿಚಿತ್ರವಾದ ಅಗೋಚರ ಶಕ್ತಿ ಹೊರಹೊಮ್ಮಲಿದೆ. ಈ ಅಗೋಚರ ಶಕ್ತಿಯಿಂದ ಮನುಷ್ಯನಿಗೆ ತನ್ನ ಸಾವಿನ ರಹಸ್ಯ ತಿಳಿಯಲಿದೆ. ವಿಶಿಷ್ಟ ಶಕ್ತಿಯಿಂದ ಸಾವನ್ನು ತಿಳಿದುಕೊಳ್ಳಬಹುದು. ಪ್ರತಿನಿತ್ಯ ಲಕ್ಷಾಂತರ ಜನರ ಜೀವನದಲ್ಲಿ ಇದು ಸಂಭವಿಸುತ್ತದೆ. ಆದ್ರೆ ಕೆಲವರು ಅಮರರಾಗಿ ಉಳಿಯಲು ಪ್ರಯತ್ನಿಸುತ್ತಾರೆ.

3.ಅಕ್ಟೋಬರ್ 23ಕ್ಕೆ ಖ್ಯಾತ ಸಂಗೀತಕಾರ ಮತ್ತೆ ಹುಟ್ಟುತ್ತಾನೆ ಅಥವಾ ಸತ್ತಿದ್ದಾನೆಂದು ತಿಳಿದಿರುವ ಅಥವಾ ತೆರೆಯ ಹಿಂದೆ ಸರಿದಿರುವ ಖ್ಯಾತ ಸಂಗೀತಕಾರ ಹಿಂದಿರುಗಿ  ಬರಲಿದ್ದು, ತನ್ನ ವೃತ್ತಿಜೀವನವನ್ನು  ಆರಂಭಿಸಲಿದ್ದಾನೆ. ಈ ಮೂಲಕ ಸಂಗೀತಕಾರ ಜನಪ್ರಿಯನಾಗುತ್ತಾನೆ.

4.ಇನೋ ನೋಡಿದ ಮತ್ತೊಂದು ಭಯಾನಕ ಭವಿಷ್ಯವಾಣಿ ಏನೆಂದ್ರೆ  ನವೆಂಬರ್ 9ರಂದು ಸೂರ್ಯ ಒಂದು ವಾರದವರೆಗೆ ಮರೆಯಾಗಲಿದ್ದಾನೆ. ಹಾಗಾಗಿ ಇಡೀ ವಿಶ್ವ ಒಂದು ವಾರ ನೆರಳಿನಲ್ಲಿದ್ದ ಅನುಭವ ಹೊಂದಲಿದೆ. ಇದರಿಂದಾಗಿ ಸಮಾಜದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ಇನೋ ಆತಂಕ ವ್ಯಕ್ತಪಡಿಸಿದ್ದಾನೆ.

5.ಇನೋ ನುಡಿದ ಕೊನೆಯ ಭವಿಷ್ಯವಾಣಿ 12 ನವೆಂಬರ್‌ರಂದು ಅಂಟಾರ್ಟಿಕ ಹಿಮದಲ್ಲಿ ಏಲಿಯನ್ ಮಾದರಿಯ ವಸ್ತುವೊಂದು ಸಿಗಲಿದೆ. ಇದು ರಹಸ್ಯಮಯ ರೋಗಕ್ಕೆ ಕಾರಣವಾಗಲಿದೆ. ಈ ರೋಗ ಇಡೀ  ವಿಶ್ವದ ತುಂಬೆಲ್ಲಾ ಹರಡಲಿದ್ದು, ಇದಕ್ಕೆ ಯಾವುದೇ ಪರಿಹಾರ ಇರಲ್ಲ. ಇನೋ ಭವಿಷ್ಯವಾಣಿ  ವೈರಲ್ ಆಗಿದ್ದು, ಇದರ  ಸತ್ಯಾಸತ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ವರ್ಲ್ಡ್‌ ವಾರ್ ಶುರುವಾಗೋಕೆ ಇಷ್ಟೇ ದಿನ ಬಾಕಿ.. ಭಯಾನಕ ಭವಿಷ್ಯವಾಣಿ ನುಡಿದ ನಾಸ್ಟ್ರಾಡಾಮಸ್ ಖ್ಯಾತಿಯ ಜ್ಯೋತಿಷಿ

Latest Videos
Follow Us:
Download App:
  • android
  • ios