ಮೈಲಾರಲಿಂಗೇಶ್ವರನ ಕಾರ್ಣಿಕ ಸಂಪಾಯಿತಲೇ ಪರಾಕ್ ಭವಿಷ್ಯವಾಣಿ ನಿಜವಾಯ್ತು

ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆಯಾಗುವ ಮೂಲಕ ನದಿಗಳು, ಕೆರೆ ಕಟ್ಟೆಗಳು ತುಂಬಿ ತುಳುಕುವ ಮೂಲಕ ಸುಕ್ಷೇತ್ರ ಮೈಲಾರ ಲಿಂಗೇಶ್ವರ ದೇವರ ಕಾರ್ಣಿಕೋತ್ಸವದ ಭವಿಷ್ಯವಾಣಿ ನಿಜವಾಗಿದೆ.

Mylara Lingeshwara Karnika Sampayithale parak predictions come true in Karnataka sat

ವಿಜಯನಗರ (ಜು.31): ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆಯಾಗುವ ಮೂಲಕ ನದಿಗಳು, ಕೆರೆ ಕಟ್ಟೆಗಳು ತುಂಬಿ ತುಳುಕುವ ಮೂಲಕ ಸುಕ್ಷೇತ್ರ ಮೈಲಾರ ಲಿಂಗೇಶ್ವರ ದೇವರ ಕಾರ್ಣಿಕೋತ್ಸವದ ಭವಿಷ್ಯವಾಣಿ ನಿಜವಾಗಿದೆ. ಈ ಹಿನ್ನೆಲೆಯಲ್ಲಿ ಏಳುಕೋಟಿ ಭಂಡಾರದ ಒಡೆಯ ಮೈಲಾರ ಲಿಂಗೇಶ್ವರ ಭಕ್ತರು ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಹೌದು, ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ಮೈಲಾರ ಲಿಂಗೇಶ್ವರ ದೇವರ ಕಾರ್ಣಿಕೋತ್ಸವನ ನಡೆಯಲಿದೆ. ಕಾರ್ಣಿಕ ಭವಿಷ್ಯವಾಣಿಯು ಒಂದು ವರ್ಷದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ವರ್ಷದಲ್ಲಿ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರೇಶ್ವರ ದೇವರು ನುಡಿದ ಭವಿಷ್ಯವಾಣಿ ನಿಜವಾಗಿದೆ. ಈ ವರ್ಷದ ಜಾತ್ರೆಯಲ್ಲಿ 'ಸಂಪಾಯಿತಲೆ ಪರಾಕ್' ಎಂದು ಮೈಲಾರ ಲಿಂಗೇಶ್ವರ ಸ್ವಾಮಿಯ ಗೊರವಯ್ಯ ಬಿಲ್ಲನೇರಿ ಕಾರ್ಣಿಕ ನುಡಿದಿದ್ದನು. ಪ್ರಸಕ್ತ ವರ್ಷದ ಕಾರ್ಣಿಕ  ನುಡಿದಂತೆ ನಡೆದಿರುವ ಹಿನ್ನೆಲೆಯಲ್ಲಿ ಭಂಡಾರದ ಒಡೆಯ ಮೈಲಾರ ಲಿಂಗೇಶ್ವರ ದೇವರಿಗೆ ಭಕ್ತರು ಜೈ ಎಂದು ಕೂಗಿದ್ದಾರೆ. 

ರಾಜ್ಯಕ್ಕೆ ಉಜ್ವಲ ಭವಿಷ್ಯ ಕೊಟ್ಟ ಮೈಲಾರ ಲಿಂಗೇಶ್ವರ ಕಾರ್ಣಿಕ; 'ಸಂಪಾಯಿತಲೇ ಪರಾಕ್'..

ಇನ್ನು ಮೈಲಾರ ಲಿಂಗೇಶ್ವರನ ಕಾರ್ಣಿಕ ವಾಣಿಯಂತೆ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಮೂಲಕ ಉತ್ತಮ ಬೆಳೆಯೂ ಬಂದು ಇಡೀ ರಾಜ್ಯವೇ ಸಂಪಾಗಿರುತ್ತದೆ ಎಂದು ಭವಿಷ್ಯವಾಣಿಯ ವಿಸ್ತರಣೆಯಾಗಿತ್ತು.ಭವಿಷ್ಯವಾಣಿಯಂತೆ ರಾಜ್ಯದ ಎಲ್ಲ ನದಿಗಳು ತುಂಬಿ ತುಳುಕುತ್ತಿದ್ದು, ಕೆರೆ-ಕಟ್ಟೆ, ನದಿ- ಹಳ್ಳಗಳೆಲ್ಲ ಬೊರ್ಗರೆಯುತ್ತಿವೆ. ಈ ಬಾರಿ ಹಾಕಿದ ಬೆಳೆಗಳು ಸಮೃದ್ಧಿಯಾಗಿ ಬೆಳೆದು ನಿಲ್ಲುವ ವಿಶ್ವಾಸವಿದೆ.

ದೇವರ ಅನತಿಯಂತೆ ಬಿಲ್ಲನ್ನೇರಿ ವರ್ಷದ ಭವಿಷ್ಯ ನುಡಿದಿದ್ದ ಗೊರವಯ್ಯ ರಾಮಪ್ಪ ನುಡಿದ ಕಾರ್ಣಿಕ ನುಡಿ ನಿಜವಾಗಿದ್ದಕ್ಕೆ ರೈತಾಪಿ ವರ್ಗ ಹಾಗೂ ಭಕ್ತಗಣದಲ್ಲಿ ಸಂತಸ ಮೂಡಿದೆ. ಸಂಪಾಯಿತಲೇ ಪರಾಕ್ ಎನ್ನುವ ಕಾರ್ಣಿಕ ನುಡಿ ರೈತರಿಗೆ ವರವಾಗಲಿದೆ ಎಂದು ಕಾರ್ಣಿಕ ವಿಶ್ಲೇಷಣೆ ಮಾಡಲಾಗಿತ್ತು. ಅದರಂತೆ, ಈ ಬಾರಿ ಎಲ್ಲೆಲ್ಲೊ ಸಂಪಾದ ಮಳೆ ಹಿನ್ನಲೆಯಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಲಾಗಿದೆ. ನಮ್ಮ ಕರ್ನಾಟಕ ರಾಜ್ಯ ಮಾತ್ರವಲ್ಲದೇ ಮೈಲಾರ ಲಿಂಗೇಶ್ವರನ ಕಾರ್ಣಿಕ ಕೇಳಲು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಭಾಗದಿಂದ ಭಕ್ತರು ಬರುತ್ತಾರೆ.

ಪುನೀತ್ ಕೆರೆಹಳ್ಳಿ ಬೆತ್ತಲೆಗೊಳಿಸಿ ಹಲ್ಲೆ ಆರೋಪ; ಎಸಿಪಿ ಚಂದನ್ ಭೇಟಿಗೆ ಬಂದ ಮಾಜಿ ಸಂಸದ ಪ್ರತಾಪ್ ಸಿಂಹ

ಭರ್ತಿಯಾದ ಜಲಾಶಯಗಳು: ಕನ್ನಡ ನಾಡಿನ ಜೀವನದಿ ಕಾವೇರಿ ನದಿಗೆ ಅಡ್ಡಲಾಗಿ ರಾಜ್ಯದಲ್ಲಿ ನಿರ್ಮಾಣ ಮಾಡಲಾಗಿರುವ ಕೆಆರ್‌ಎಸ್‌, ಕಬಿನಿ, ಹಾರಂಗಿ ಜಲಾಶಯಗಳು ಕೂಡ ತುಂಬಿ ತುಳುಕುತ್ತಿವೆ. ಕಲ್ಯಾಣ ಕರ್ನಾಟಕದ ಜೀವನದಿ ಆಗಿರುವ ತುಂಗಭದ್ರಾ ನದಿ ಕೂಡ ತುಂಬಿ ಹರಿಯುತ್ತಿದ್ದು, ದಾವಣಗೆರೆ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ನೀರಾವರಿಗೆ ಅನುಕೂಲ ಆಗಿದೆ. ಇನ್ನು ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿಗಳು ಕೂಡ ಭೋರ್ಗರೆಯುತ್ತಿದ್ದು, ಆಲಮಟ್ಟಿ ಸೇರಿದಂತೆ ಹಲವು ಉತ್ತರ ಕರ್ನಾಟಕದ ಜಲಾಶಗಳು ಕೂಡ ತುಂಬಿ ತುಳುಕುತ್ತಿವೆ.

Latest Videos
Follow Us:
Download App:
  • android
  • ios