Asianet Suvarna News Asianet Suvarna News

ಫ್ರೆಂಚ್‌ ಲೇಖಕಿ ಅನ್ನಿ ಎರ್ನಾಕ್ಸ್‌ಗೆ 2022ರ ಸಾಹಿತ್ಯದ ನೊಬೆಲ್‌ ಪ್ರಶಸ್ತಿ!

2022ರ ನೊಬೆಲ್‌ ಸಾಹಿತ್ಯ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದ್ದು, ಫ್ರೆಂಚ್‌ ಲೇಖಕಿ ಅನ್ನಿ ಎರ್ನಾಕ್ಸ್‌ಗೆ ಈ ಬಾರಿಯ ನೊಬೆಲ್‌ ಗೌರವ ನೀಡಲಾಗಿದೆ. ಶುಕ್ರವಾರ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಘೋಷಣೆ ಮಾಡಲಾಗುತ್ತದೆ.
 

2022 Nobel Prize in Literature is awarded to the French author Annie Ernaux san
Author
First Published Oct 6, 2022, 5:27 PM IST


ಸ್ಟಾಕ್‌ಹೋಮ್‌ (ಅ.6): 2022ರ ಸಾಲಿನ ಸಾಹಿತ್ಯದ ನೊಬೆಲ್‌ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಈ ವರ್ಷದ ಸಾಹಿತ್ಯದ ನೊಬೆಲ್‌ ಅನ್ನು ಫ್ರೆಂಚ್‌ ಲೇಖಕಿ ಅನ್ನಿ ಎರ್ನಾಕ್ಸ್‌ ಅವರಿಗಗೆ ನೀಡಲಾಗಿದೆ. 1940 ಸೆಪ್ಟೆಂಬರ್‌ 1 ರಂದು ಜನಿಸಿದ್ದ ಅನ್ನಿ ಎರ್ನಾಕ್ಸ್‌, ಫ್ರಾನ್ಸ್‌ನ ಪ್ರಖ್ಯಾತ ಲೇಖಕಿ ಹಾಗೂ ಸಾಹಿತ್ಯದ ಪ್ರಾಧ್ಯಾಪಕಿಯಾಗಿದ್ದಾರೆ. ಅವರ ಸಾಹಿತ್ಯಿಕ ಕೆಲಸವು ಹೆಚ್ಚಾಗಿ ಆತ್ಮಚರಿತ್ರೆಯಾಗಿದ್ದು, ಸಮಾಜಶಾಸ್ತ್ರವನ್ನು ಆಧರಿಸಿದೆ. ಇದಕ್ಕೂ ಮೊದಲು, USA ಯ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕ್ಯಾರೊಲಿನ್ ಬರ್ಟೊಝಿ, ಕೋಪನ್‌ಹೇಗನ್ ವಿಶ್ವವಿದ್ಯಾಲಯದ (ಡೆನ್ಮಾರ್ಕ್) ಮಾರ್ಟೆನ್ ಮೈಲ್ಡೊಲ್ ಮತ್ತು ಬ್ಯಾರಿ ಶಾರ್ಪ್‌ಲೆಸ್‌ಗೆ ಕೆ. ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಕ್ಲಿಕ್ ರಸಾಯನಶಾಸ್ತ್ರ ಮತ್ತು ಜೈವಿಕ ಆರ್ಥೋಗೋನಲ್ ರಸಾಯನಶಾಸ್ತ್ರದ ಅಭಿವೃದ್ಧಿಗಾಗಿ ನೀಡಲಾಯಿತು. ಭೌತಶಾಸ್ತ್ರದಲ್ಲಿ 2022 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸಹ ಘೋಷಿಸಲಾಗಿದೆ. ಕ್ವಾಂಟಮ್ ಮೆಕ್ಯಾನಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಮೂವರು ವಿಜ್ಞಾನಿಗಳಿಗೆ ಈ ವರ್ಷ ಪ್ರಶಸ್ತಿಯನ್ನು ನೀಡಲಾಯಿತು. ವಿಜ್ಞಾನಿಗಳಾದ ಫ್ರಾನ್ಸ್‌ನ ಅಲೈನ್ ಆಸ್ಪೆಕ್ಟ್, ಅಮೆರಿಕದ ಜಾನ್ ಎಫ್ ಕ್ಲೌಸರ್ ಮತ್ತು ಆಸ್ಟ್ರಿಯಾದ ಆಂಟನ್ ಗೆಲ್ಲಿಂಜರ್ ಅವರಿಗೆ 10 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 7.5 ಕೋಟಿ ರೂ.) ಸಿಗಲಿದೆ. ಮಂಗಳವಾರ ಸ್ಕಾಥೋಮ್‌ನಲ್ಲಿರುವ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಈ ಪ್ರಶಸ್ತಿಯನ್ನು ಪ್ರಕಟಿಸಿದೆ.

ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರಿಗೆ ನೀಡಲಾಗಿದೆ. ಪಾಬೊ ಅವರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ. ‘ಮನುಷ್ಯರ ವಿಕಸನ’ ಕುರಿತ ಸಂಶೋಧನೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಪಾಬೊ ಆಧುನಿಕ ಮಾನವರು ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಜಿನೋಮ್‌ಗಳನ್ನು ಹೋಲಿಸಿ ಅವು ಮಿಶ್ರಿತವಾಗಿವೆ ಎಂದು ತೋರಿಸಿದ್ದರು.

ಶುಕ್ರವಾರ ಶಾಂತಿ ಪ್ರಶಸ್ತಿ: ಈ ವರ್ಷದ (2022) ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗುತ್ತದೆ. ಅದಲ್ಲದೆ, ಅರ್ಥಶಾಸ್ತ್ರ ಕ್ಷೇತ್ರದ ಬಹುಮಾನವನ್ನು ಅಕ್ಟೋಬರ್ 10 ರಂದು (Nobel Prize 2022 In Literature) ಪ್ರಕಟಿಲಾಗುತ್ತದೆ. 2021ರಲ್ಲಿ ಶಾಂತಿ ಪ್ರಶಸ್ತಿಯನ್ನು ಪಿಲಿಪ್ಪಿನ್ಸ್‌ನ ಮಾರಿಯಾ ರೀಸಾ ಹಾಗೂ ರಷ್ಯಾದ ಡಿಮಿಟ್ರು ಮುರಾಟೋವ್‌ ಅವರಿಗೆ ನೀಡಲಾಗಿತ್ತು. ಮುಕ್ತ ಸ್ವಾತಂತ್ರ್ಯದ ಕೆಲಸಗಳಿಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು. 2020ರಲ್ಲಿ ಈ ಪ್ರಶಸ್ತಿಯನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕೆ ನೀಡಲಾಗಿತ್ತು. ಇನ್ನು ಭಾರತೀಯ ಮೂಲದ ವ್ಯಕ್ತಿ ಶಾಂತಿ ಪ್ರಶಸ್ತಿ ಪಡೆದಿದ್ದು 2014ರಲ್ಲಿ. ಅಂದು ಕೈಲಾಶ್‌ ಸತ್ಯಾರ್ಥಿ (Kailash Satyarthi) ಪಾಕಿಸ್ತಾನದ ಮಲಾಲಾ ಯೂಸುಫ್‌ಝೈ (malala yousafzai) ಅವರೊಂದಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದರು.

 

ನೊಬೆಲ್‌ ರೇಸಲ್ಲಿ ರಶ್ದಿ, ಆಲ್ಟ್‌ ನ್ಯೂಸ್‌ ಸಂಸ್ಥಾಪಕ ಜುಬೇರ್

ಈ ಬಹುಮಾನವನ್ನು ಸ್ವೀಡಿಷ್ ಅಕಾಡೆಮಿಯಿಂದ (Royal Swdish Accademy) ನೀಡಲಾಗುತ್ತದೆ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರಾನರ್‌ ($914,704) ಮೌಲ್ಯದ್ದಾಗಿದೆ. ಈ ಹಣವು 1895 ರಲ್ಲಿ ಪ್ರಶಸ್ತಿಯ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಇಟ್ಟ ಉಯಿಲಿನಿಂದ ಈ ಹಣ ಬರುತ್ತದೆ. 

ಭಾರತ್ ಜೋಡೋ ನಡುವೆ ಕಾಂಗ್ರೆಸ್‌ಗೆ ನ್ಯಾಷನಲ್ ಹೆರಾಲ್ಡ್ ಸಂಕಷ್ಟ, ಹಿರಿಯ ನಾಯಕರಿಗೆ ಇಡಿ ಸಮನ್ಸ್!


2021 ರ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಟಾಂಜೇನಿಯಾದ (Nobel Prize) ಕಾದಂಬರಿಕಾರ ಅಬ್ದುಲ್ರಾಝಾಕ್ ಗುರ್ನಾಹ್ ಅವರಿಗೆ ನೀಡಲಾಗಿತ್ತು. "ವಸಾಹತುಶಾಹಿಯ ಪರಿಣಾಮಗಳು ಮತ್ತು ಸಂಸ್ಕೃತಿಗಳು ಮತ್ತು ಖಂಡಗಳ ನಡುವಿನ ಕೊಲ್ಲಿಯಲ್ಲಿ ನಿರಾಶ್ರಿತರ ಭವಿಷ್ಯಕ್ಕಾಗಿ" ಅವರ ಕಾರ್ಯಗಳನ್ನು ಗಮನಿಸಿ ಪ್ರಶಸ್ತಿ ನೀಡಲಾಗಿತ್ತು. ಅಮೆರಿಕನ್‌ ಕವಿ ಲೂಯಿಸ್ ಗ್ಲಕ್ ಅವರು ಸಾಹಿತ್ಯಕ್ಕಾಗಿ 2020 ರ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದರು.  2019 ರ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪೀಟರ್ ಹ್ಯಾಂಡ್ಕೆ ಅವರಿಗೆ "ಭಾಷಾ ಜಾಣ್ಮೆಯೊಂದಿಗೆ ಮಾನವ ಅನುಭವದ ಪರಿಧಿಯನ್ನು ಮತ್ತು ನಿರ್ದಿಷ್ಟತೆಯನ್ನು ಪರಿಶೋಧಿಸಿದ ಪ್ರಭಾವಶಾಲಿ ಕೆಲಸಕ್ಕಾಗಿ" ನೀಡಲಾಯಿತು. 2018 ರ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪೋಲೆಂಡ್‌ನ ಲೇಖಕ ಓಲ್ಗಾ ಟೊಕಾರ್ಕ್‌ಜುಕ್ ಅವರಿಗೆ ನೀಡಲಾಗಿತ್ತು. "ವಿಶ್ವಕೋಶದ ಉತ್ಸಾಹವು ಗಡಿಗಳನ್ನು ದಾಟುವುದನ್ನು ಜೀವನದ ಒಂದು ರೂಪವಾಗಿ ಪ್ರತಿನಿಧಿಸುತ್ತದೆ ಎಂಬ ನಿರೂಪಣೆಯ ಕಲ್ಪನೆಗಾಗಿ" ಈ ಪ್ರಶಸ್ತಿ ನೀಡಲಾಗಿತ್ತು.

Follow Us:
Download App:
  • android
  • ios