Asianet Suvarna News Asianet Suvarna News

ನೊಬೆಲ್‌ ರೇಸಲ್ಲಿ ರಶ್ದಿ, ಆಲ್ಟ್‌ ನ್ಯೂಸ್‌ ಸಂಸ್ಥಾಪಕ ಜುಬೇರ್

ಬೂಕರ್‌ ಪ್ರಶಸ್ತಿ ವಿಜೇತ, ಭಾರತೀಯ ಮೂಲದ ಲೇಖಕ ಸಲ್ಮಾನ್‌ ರಶ್ದಿ ಈ ಬಾರಿಯ ಸಾಹಿತ್ಯ ನೊಬೆಲ್‌ ಪ್ರಶಸ್ತಿಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ‘ದ ಗಾರ್ಡಿಯನ್‌’ ಪತ್ರಿಕೆ ವರದಿ ಮಾಡಿದೆ.

salman Rushdie And Alt News Founder Zubair in Nobel race akb
Author
First Published Oct 6, 2022, 10:56 AM IST

ಲಂಡನ್‌: ಬೂಕರ್‌ ಪ್ರಶಸ್ತಿ ವಿಜೇತ, ಭಾರತೀಯ ಮೂಲದ ಲೇಖಕ ಸಲ್ಮಾನ್‌ ರಶ್ದಿ ಈ ಬಾರಿಯ ಸಾಹಿತ್ಯ ನೊಬೆಲ್‌ ಪ್ರಶಸ್ತಿಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ‘ದ ಗಾರ್ಡಿಯನ್‌’ ಪತ್ರಿಕೆ ವರದಿ ಮಾಡಿದೆ. ಒಂದು ವೇಳೆ ರಶ್ದಿ ಈ ಪ್ರಶಸ್ತಿಯನ್ನು ಗೆದ್ದರೆ, ರವೀಂದ್ರನಾಥ ಟ್ಯಾಗೋರ್‌ ಅವರ ಬಳಿಕ ನೊಬೆಲ್‌ ಗೆದ್ದ ಭಾರತೀಯ ಎನಿಸಿಕೊಳ್ಳಲಿದ್ದಾರೆ. ರಶ್ದಿ ಅವರ ರಚನೆಗಳಿಂದ ಉಂಟಾಗಿರುವ ವಿವಾದದಿಂದ ಇತ್ತೀಚಿಗೆ ಅವರು ಚೂರಿ ಇರಿತಕ್ಕೆ ಒಳಗಾಗಿದ್ದರು.

ಈ ನಡುವೆ ಪ್ರಸಕ್ತ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ ರೇಸ್‌ನಲ್ಲಿ ಸುಳ್ಳು ಸುದ್ದಿಗಳ ಸಾಚಾತನ ಬಹಿರಂಗಪಡಿಸುವ ಆಲ್ಟ್‌ ನ್ಯೂಸ್‌ನ ಸಂಸ್ಥಾಪಕರಾದ ಮೊಹಮ್ಮದ್‌ ಜುಬೇರ್‌(Mohammad Zubair) ಮತ್ತು ಪ್ರತೀಕ್‌ ಸಿನ್ಹಾ (Prateek Sinha) ಇದ್ದಾರೆ ಎಂದು ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಇವರ ಜೊತೆಗೆ ಉಕ್ರೇನ್‌ ಅಧ್ಯಕ್ಷ (Ukrainian President) ವೊಲೊಡಿಮಿರ್‌ ಜೆಲೆನ್‌ಸ್ಕಿ (Volodymyr Zelensky), ಅಮೆರಿಕದ ನಿರಾಶ್ರಿತ ಏಜೆನ್ಸಿ(US refugee agency), ಡಬ್ಲ್ಯುಎಚ್‌ಒ (WHO) ಸಹ ರೇಸ್‌ನಲ್ಲಿವೆ. ಒಟ್ಟು 343 ಅಭ್ಯರ್ಥಿಗಳು ಶಾಂತಿ ಪ್ರಶಸ್ತಿ ರೇಸ್‌ನಲ್ಲಿದ್ದು, ಇದರಲ್ಲಿ 251 ವ್ಯಕ್ತಿಗಳಿದ್ದರೆ, 92 ಸಂಘಟನೆಗಳಿವೆ.

ಸಾಹಿತ್ಯಕ್ಕಾಗಿ ಮೊದಲ ನೊಬೆಲ್ ಪ್ರಶಸ್ತಿ ಪಡೆದ ಸೆಲ್ಮಾ ಲಾಗರ್ ಲೋಫ್‌; ಕೇವಲ ಲೇಖಕಿ ಮಾತ್ರ ಆಗಿರಲಿಲ್ಲ

Follow Us:
Download App:
  • android
  • ios