Asianet Suvarna News Asianet Suvarna News

16 ವರ್ಷದ ಹಿಂದೂ ಯುವತಿ ಅಪಹರಣ, ಬಲವಂತದ ಮತಾಂತರ, ಮುಸ್ಲಿಂ ಯುವಕನೊಂದಿಗೆ ಮದುವೆ

Forceful conversion of hindu girl in Pakistan: ಪಾಕಿಸ್ತಾನದಲ್ಲಿ ಹಿಂದೂ ಯುವತಿಯೊಬ್ಬಳನ್ನು ಅಪಹರಿಸಿ, ಬಲವಂತದಿಂದ ಮತಾಂತರ ಮಾಡಿದ ನಂತರ ಆಕೆಯನ್ನು ಮುಸ್ಲಿಂ ಯುವಕ ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂ ಸಮುದಾಯ ಪ್ರತಿಭಟನೆ ಮಾಡುತ್ತಿದೆ. 

16 year old hindu girl abducted forced to convert and married to muslim man in pakistan
Author
Bengaluru, First Published Jul 14, 2022, 11:45 AM IST

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಹಿಂದೂ ಯುವತಿಯೊಬ್ಬಳನ್ನು ಬಲವಂತದಿಂದ ಮತಾಂತರ ಮಾಡಲಾಗಿದ್ದು ನಂತರ ಆಕೆಯನ್ನು ಮುಸ್ಲಿಂ ಯುವಕನೊಬ್ಬನ ಜೊತೆ ಮದುವೆ ಮಾಡಿಸಿರುವ ಘಟನೆ ನಡೆದಿದೆ. ಸಂತ್ರಸ್ತೆಯನ್ನು ಕರೀನಾ ಎಂದು ಗುರುತಿಸಲಾಗಿದ್ದು, ಬಲವಂತದಿಂದ ಮತಾಂತರ ಮಾಡಿ ಮದುವೆಯಾದವನ ಹೆಸರು ಖಲಿಲ್‌ ರೆಹ್ಮಾನ್‌ ಜೊನೊ. ಈತ ಪಾಕಿಸ್ತಾನದ ಮೀರ್‌ ಮೊಹಮ್ಮದ್‌ ಜೊನೊ ಎಂಬ ಹಳ್ಳಿಯ ನಿವಾಸಿ. ಹಿಂದೂ ಯುವತಿಯನ್ನು ಅಪಹರಿಸಿದ ತಕ್ಷಣ ಹಿಂದೂ ಕುಟುಂಬಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದೆ. ಹುಡುಗಿಯನ್ನು ಖಾಜಿ ಅಹ್ಮದ್‌ ನಗರದ ಉನ್ನರ್‌ ಮುಹಲ್ಲಾದಿಂದ ಅಪಹರಿಸಲಾಗಿದೆ. ನವಾಬ್‌ಶಾಹ್‌ನ ಜರ್ದಾರಿ ಹೌಸ್‌ ಮುಂದೆ ಪ್ರತಿಭಟನಕಾರರು ಬೀಡು ಬಿಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ಬಲವಂತದಿಂದ ಅಪಹರಿಸಿ ಮತಾಂತದ ಮಾಡಲಾಗಿದೆ ಎಂದು ಹಿಂದೂ ಸಮುದಾಯ ಆರೋಪ ಮಾಡುತ್ತಿದ್ದರೆ, ಇತ್ತ ಪೊಲೀಸರು ಹುಡುಗಿ ತನ್ನಿಚ್ಚೆಯ ಪ್ರಕಾರವೇ ಮುಸ್ಲಿಂ ಹುಡುಗನ ಜೊತೆ ಓಡಿ ಹೋಗಿದ್ದಾಳೆ ಎನ್ನುತ್ತಿದ್ದಾರೆ. ಹಿಂದೂ ಪಂಚಾಯತ್ ಉಪಾಧ್ಯಕ್ಷ ಲಜ್‌ಪತ್‌ ರಾಯ್‌ ಅವರ ನೇತೃತ್ವದ ನಿಯೋಗ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಎಸ್‌ಎಸ್‌ಪಿ ಅವರನ್ನು ಭೇಟಿ ಮಾಡಿ ದೂರು ನೀಡಿದರೂ ಬಲವಂತದ ಮತಾಂತರದ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ: ವೇಗವಾಗಿ ಖಾಲಿಯಾಗುತ್ತಿದೆ ವಿದೇಶಿ ವಿನಿಮಯ ಮೀಸಲು, ನಗದು ಕೊರತೆ! 

ಮನೊಮಾಲ್‌, ಮತ್ತೊಬ್ಬ ಪಂಚಾಯತ್‌ ನಾಯಕ ಹೇಳುವ ಪ್ರಕಾರ ಅಪಹರಣಕ್ಕೊಳಗಾದ ಯುವತಿಗೆ ಪ್ರಾಣ ಬೆದರಿಕೆ ಒಡ್ಡಿ ಮತಾಂತರ ಮಾಡಲಾಗಿದೆ. ಮತ್ತು ಆಕೆಯನ್ನು ಯಾವುದೇ ನ್ಯಾಯಾಲಯಕ್ಕೂ ಇದುವರೆಗೆ ಕರೆತಂದಿಲ್ಲ. ಪಾಕಿಸ್ತಾನ ಸಂಸದ ಆಸಿಫ್‌ ಅಲಿ ಜರ್ದಾರಿ ಅವರ ಸಹಾಯವನ್ನು ಹಿಂದೂ ಪಂಚಾಯತ್‌ ಕೋರಿದೆ. ಅಪಹರಣಕ್ಕೊಳಗಾದ ಯುವತಿಯನ್ನು ವಾಪಸ್‌ ಕರೆತರಲು ಪಾಕ್‌ ಸರ್ಕಾರ ಸಹಾಯ ಮಾಡಬೇಕು ಎಂದು ಮನೊಮಾಲ್‌ ಕೋರಿದ್ದಾರೆ. ಈಗಾಗಲೇ ಪ್ರಥಮ ವರ್ತಮಾನ ವರದಿ ಕೂಡ ದಾಖಲಾಗಿದೆಯಾದರೂ ಯಾವುದೇ ಕ್ರಮ ಜರುಗಿಸಿಲ್ಲ. ಪಾಕಿಸ್ತಾನದಲ್ಲಿ ಹಿಂದೂ ಸಮುದಾಯ ಆತಂಕದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಬಲವಂತದ ಮತಾಂತರ ಪ್ರಕರಣಗಳು ಹೆಚ್ಚುತ್ತಿವೆ. ಅಪಹರಣಕ್ಕೊಳಗಾದ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಹಿಂದೂ ಸಮುದಾಯ ತಿಳಿಸಿದೆ. 

ಇದನ್ನೂ ಓದಿ: ಕ್ಯಾಮರಾ ಮುಂದೆಯೇ ಬಾಲಕನಿಗೆ ಹೊಡೆದ ಪಾಕ್ ಪತ್ರಕರ್ತೆ

ಈ ಘಟನೆಯ ಬಗ್ಗೆ ಹಿರಿಯ ಪತ್ರಕರ್ತೆ ನಾಲಿಯಾ ಇನಾಯತ್ ಟ್ವೀಟ್‌ ಮಾಡಿದ್ದು ಘಟನೆಯನ್ನು ಖಂಡಿಸಿದ್ದಾರೆ. ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬಲವಂತದ ಮತಾಂತರವನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

 

ಇತ್ತೀಚಿನ ದಿನಗಳಲ್ಲಿ ಈ ರೀತಿಯಾ ಹತ್ತಾರು ಪ್ರಕರಣಗಳು ಪಾಕಿಸ್ತಾನದಲ್ಲಿ ಬೆಳಕಿಗೆ ಬರುತ್ತಿವೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದೂ ಸಮುದಾಯ ಈ ಬಗ್ಗೆ ದನಿಯೆತ್ತುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರಿಯಾದ ರೀತಿಯ ಕಾನೂನು ಕ್ರಮವಾಗಲೀ ಅಥವಾ ಸುರಕ್ಷತೆಯಾಗಲಿ ಹಿಂದೂಗಳಿಗೆ ಸಿಕ್ಕುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ. 

ಇದನ್ನೂ ಓದಿ: ಸರ್ಕಾರ ಕಾಶ್ಮೀರಿ ಜನರ ಹೃದಯ ಗೆಲ್ಲುವವರೆಗೂ ಉಗ್ರವಾದ ನಿಲ್ಲೋದಿಲ್ಲ: ಫಾರುಖ್‌ ಅಬ್ದುಲ್ಲಾ

Follow Us:
Download App:
  • android
  • ios