Asianet Suvarna News Asianet Suvarna News

ಸರ್ಕಾರ ಕಾಶ್ಮೀರಿ ಜನರ ಹೃದಯ ಗೆಲ್ಲುವವರೆಗೂ ಉಗ್ರವಾದ ನಿಲ್ಲೋದಿಲ್ಲ: ಫಾರುಖ್‌ ಅಬ್ದುಲ್ಲಾ

ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಘಟನೆಯ ಬಗ್ಗೆ ಮಾತನಾಡಿರುವ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರುಖ್‌ ಅಬ್ದುಲ್ಲಾ, ಕಾಶ್ಮೀರದಲ್ಲಿ ಜನರ ಹೃದಯವನ್ನು ಸರ್ಕಾರ ಮೊದಲು ಗೆಲ್ಲಬೇಕು ಹಾಗಿದ್ದಲ್ಲಿ ಮಾತ್ರವೇ ಕಣಿವೆ ರಾಜ್ಯದಲ್ಲಿ ಉಗ್ರವಾದ ನಿಯಂತ್ರಣಕ್ಕೆ ಬರಲಿದೆ ಎಂದಿದ್ದಾರೆ.

National Conference president Farooq Abdulla says Militancy wont end till govt wins hearts of Kashmiri people san
Author
Bengaluru, First Published Jul 13, 2022, 4:02 PM IST

ಶ್ರೀನಗರ (ಜುಲೈ 13): ದೇಶದ ಸರ್ಕಾರವು ಕಾಶ್ಮೀರಿ ಜನರ ಹೃದಯ ಗೆಲ್ಲುವವರೆಗೆ ಹಾಗೂ ಪಾಕಿಸ್ತಾನದೊಂದಿಗೆ ಮಾತುಕತೆಯ ಮೂಲಕ ಹರಿಹಾರವನ್ನು ಕಂಡುಕೊಳ್ಳುವವರೆಗೂ ಕಣಿವೆ ರಾಜ್ಯದಲ್ಲಿ ಉಗ್ರವಾದ ನಿಲ್ಲೋದಿಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರುಖ್‌ ಅಬ್ದುಲ್ಲಾ ಬುಧವಾರ ಹೇಳಿದ್ದಾರೆ. ಮಂಗಳವಾರ ಸಂಭವಿಸಿದ ಭಯೋತ್ಪಾದಕ ಘಟನೆಯಲ್ಲಿ ಲಷ್ಕರ್‌ ಉಗ್ರರು ಪೊಲೀಸ್‌ ಅಧಿಕಾರಿಯನ್ನು ಹತ್ಯೆ ಮಾಡಿರುವುದನ್ನು ಖಂಡಿಸಿದ ಫಾರುಖ್‌ ಅಬ್ದುಲ್ಲಾ, ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಜನರು ಹೀಗೆ ಸಾಯುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ. ಉಗ್ರವಾದದ ಕಾರವಾನ್‌ ಇಲ್ಲಿ ಕೊನೆಗೊಳ್ಳುವುದಿಲ್ಲ. ಬಿಜೆಪಿಯ ಮಂತ್ರಿಗಳು ಹಾಗೂ ಇತರ ನಾಯಕರು ಕಾಶ್ಮೀರದಲ್ಲಿ ಭಯೋತ್ಪಾದನೆ ಮುಗಿದಿದೆ ಎನ್ನುವ ಅರ್ಥದ ಹೇಳಿಕೆಗಳನ್ನು ನೀಡುತ್ತಾರೆ. ಆದರೆ, ಕಾಶ್ಮೀರದ ಜನರೊಂದಿಗೆ ಬೆರೆತು ಅವರ ಹೃದಯವನ್ನು ಗೆಲ್ಲದೇ ಇದ್ದಲ್ಲಿ, ನೆರೆಯ ದೇಶ ಪಾಕಿಸ್ತಾನದೊಂದಿಗೆ ಮಾತನಾಡಿ ಪರಿಹಾರ ಹುಡುಕುವವರೆಗೂ ಈ ಉಗ್ರವಾದದ ಉಪಟಳ ಕೊನೆಗೊಳ್ಳುವುದಿಲ್ಲ ಎಂದು ಪಕ್ಷದ ಪ್ರಧಾನ ಕಚೇತಿ ನವಾ-ಇ-ಸುಬಾಹ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ. ಶ್ರೀನಗರದ ಲೋಕಸಭಾ ಸಂಸದರಾಗಿರುವ ಅಬ್ದುಲ್ಲಾ ಅವರು ನಗರದ ಲಾಲ್ ಬಜಾರ್ ಪ್ರದೇಶದಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮುಷ್ತಾಕ್ ಅಹ್ಮದ್ ಅವರ ಹತ್ಯೆಯನ್ನು ಖಂಡಿಸಿದರು. ಈತನ ಮಗನನ್ನು 2020ರಲ್ಲಿ ಸೇನೆ ತನ್ನ ಎನ್‌ಕೌಂಟರ್‌ನಲ್ಲಿ ಸಾಯಿಸಿತ್ತು. 

ಈಗ ಅಹ್ಮದ್ ಉಗ್ರಗಾಮಿಗಳಿಂದ ಹತ್ಯೆಯಾಗಿರುವುದು ದುರದೃಷ್ಟಕರ. ಕಾಶ್ಮೀರದಲ್ಲಿ ಕೊಲೆಗಾರ ಯಾರು? ರಕ್ಷಕರು ಯಾರು ಎನ್ನುವುದೇ ನಮಗೆ ಅರ್ಥವಾಗುತ್ತಿಲ್ಲ. ಇದೊಂದು ವಿಚಿತ್ರ. ಈ ಘಟನೆಯನ್ನು ನಾವು ಖಂಡಿಸುತ್ತೇವೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡುತ್ತೇವೆ. ಅವರ ಕುಟುಂಬಕ್ಕೂ ಈ ನಷ್ಟವನ್ನು ಸಹಿಸಿಕೊಳ್ಲುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದರು . ಹತ್ಯೆಗೀಡಾದ ಪೊಲೀಸರ ಕುಟುಂಬಕ್ಕೆ ಗೌರವಯುತವಾಗಿ ಬದುಕಲು ಆಡಳಿತದಿಂದ ಉತ್ತಮ ಪರಿಹಾರವನ್ನು ಸಿಗಬೇಕು ಎನ್ನುವುದನ್ನು ಕೇಳಿಕೊಂಡಿದ್ದಾರೆ

ಭಾರತದ ಪರಿಸ್ಥಿತಿಯೂ ಶ್ರೀಲಂಕಾದ ರೀತಿ ಅಗಬಹುದು: ಪ್ರಸ್ತುತ ಶ್ರೀಲಂಕಾದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಅದೇ ರೀತಿಯ ಸ್ಥಿತಿ ಭಾರತಕ್ಕೂ ಬರಬಹುದೇ ಎನ್ನುವ ಪ್ರಶ್ನೆಗೆ ಏನು ಬೇಕಾದರೂ ಆಗಬಹುದು ಎಂದು ಹೇಳಿದರು. ದೇವರೆ ನಮ್ಮನ್ನು ಕಾಪಾಡಬೇಕು. ಅಂಥ ಪರಿಸ್ಥಿತಿ ಎದುರಾಗದೇ ಇರಲಿ ಎಂದು ಬೇಡಿಕೊಳ್ಳುತ್ತೇವೆ. ಶ್ರೀಲಂಕಾದ (Sri Lanka) ಜನರನ್ನು ಈ ಕಷ್ಟದ ಸಮಯದಿಂದ ದೇವರು ಅವರನ್ನು ಹೊರತರಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಅಲ್ಲದೆ, ದೇವರು ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡಲಿ, ಆದ್ದರಿಂದ ಅವರು ಇಲ್ಲಿ ಅದನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ((Lok Sabha MP from Srinagar) ) ಹೇಳಿದರು. ಕುಟುಂಬ ಯೋಜನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ಅಥವಾ ಬೇರೆ ಯಾರನ್ನಾದರೂ ಗುರಿಯಾಗಿಸಿಕೊಂಡಿದೆಯೇ, ಭಾರತವು ವೈವಿಧ್ಯತೆಯನ್ನು ಹೊಂದಿರುವ ದೇಶ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಇದು ವೈವಿಧ್ಯಮಯ ದೇಶ. ತಮಿಳುನಾಡು ಮತ್ತು ಕಾಶ್ಮೀರದ (Kashmir) ನಡುವೆ ಯಾವುದೂ ಸಾಮ್ಯತೆಯಿಲ್ಲ. ಆಹಾರ, ಸಂಸ್ಕೃತಿ, ಭಾಷೆ, ಹವಾಮಾನ ಇದ್ಯಾವುದರಲ್ಲೂ ಸಾಮ್ಯತೆಯಿಲ್ಲ. ಒಟ್ಟಾಗಿ ಮುನ್ನಡೆಯಬೇಕು ಮತ್ತು ಬಡತನ, ರೋಗಗಳು ಮತ್ತು ಪ್ರತಿಕೂಲತೆಯನ್ನು ತೊಡೆದುಹಾಕಬೇಕು ಎನ್ನುವ ಅಂಶವೇ ನಮ್ಮಒಗ್ಗಟ್ಟಿಗೆ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ರಾಷ್ಟ್ರಧ್ವಜ ನಿಮ್ಮ ಮನೆಯಲ್ಲಿ ಹಾರಿಸಿ, ಫಾರೂಖ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ!

ಭಾರತದ ಒಟ್ಟುಗೂಡಿಸುವುದೇ ದೊಡ್ಡ ಗುರಿಯಾಗಿತ್ತು. ನಾವು ವೈವಿಧ್ಯತೆಯನ್ನು ಬಲಗೊಳಿಸಬೇಕು, ಆಗ ಮಾತ್ರ ಏಕತೆ ಇರುತ್ತದೆ. ನಾವು ಈ ವೈವಿಧ್ಯತೆಯನ್ನು ಮುರಿಯಲು ಪ್ರಯತ್ನಿಸಿದರೆ, ಈ ದೇಶವು ದುಃಖಕ್ಕೆ ಸಿಲುಕುತ್ತದೆ ಮತ್ತು ಅದನ್ನು ಅಲ್ಲಿಂದ ಹೊರತೆಗೆಯುವುದು ತುಂಬಾ ಕಷ್ಟಕರವಾಗಿರುತ್ತದೆ ಎಂದು ಅವರು ಹೇಳಿದರು. 1931ರ ಜುಲೈ 13ರಂದು ಗೌರವ ಸಲ್ಲಿಸಲು ರಾಜಕೀಯ ಪಕ್ಷಗಳಿಗೆ ಅವಕಾಶ ನೀಡದಿದ್ದಕ್ಕಾಗಿ ಅಬ್ದುಲ್ಲಾ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.  ದಿನದ ರಜೆಯನ್ನು ರದ್ದುಗೊಳಿಸಿದ್ದು ಮಾತ್ರವಲ್ಲದೆ ಜನರು ತಮ್ಮ ಶ್ರದ್ಧಾಂಜಲಿ ಸಲ್ಲಿಸುವುದನ್ನು ನಿಲ್ಲಿಸಿರುವುದು ದುರದೃಷ್ಟಕರ. ಇದೊಂದು ದೊಡ್ಡ ತಪ್ಪು ಎಂದರು.

ಇದನ್ನೂ ಓದಿ: ಪವಾರ್‌ ಬೆನ್ನಲ್ಲೇ ರಾಷ್ಟ್ರಪತಿ ಚುನಾವಣಾ ಕಣದಿಂದ ಹಿಂದೆ ಸರಿದ ಫಾರೂಕ್ ಅಬ್ದುಲ್ಲಾ, ಕಾರಣ ಹೀಗಿದೆ

ಗುಲಾಮಗಿರಿಯಲ್ಲಿ ಎಲ್ಲವೂ ನಡೆಯುತ್ತದೆ: ರಾಷ್ಟ್ರೀಯ ಲಾಂಛನದ (National Emblem) ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಎನ್‌ಸಿ ಅಧ್ಯಕ್ಷರು, ಗುಲಾಮಗಿರಿಯಲ್ಲಿ ಇದೆಲ್ಲವೂ ಸಂಭವಿಸುತ್ತದೆ. ಅವರು ನಾಳೆ ರೋಡ್ ರೋಲರ್ ಅನ್ನು ಸಹ ಇವರು ಓಡಿಸಬಹುದು. ಫರೋಹ (ಈಜಿಪ್ಟಿನ ಪ್ರಾಚೀನ ಆಡಳಿತಗಾರ ಸಹ ಇದನ್ನು ಮಾಡಿದ್ದ ಫರೋಹನು ಏನು ಮಾಡಿದ? ಸಿಕ್ಕ ಸಿಕ್ಕ ಜನರನ್ನೆಲ್ಲಾ ಹಿಂಸಿಸಿದ. ಅವರು ಏನು ಬೇಕಾದರೂ ಅದನ್ನು ಮಾಡಲಿ. ದೇವರೊಬ್ಬ ಇದ್ದಾನೆ ಅವನು ಎಲ್ಲವನ್ನೂ ನೋಡಿಕೊಳ್ಳುತ್ತಾನೆ. ಆತ ಎಲ್ಲವನ್ನೂ ನೋಡುತ್ತಿದ್ದಾನೆ ಎಂದು ಹೇಳಿದರು.

Follow Us:
Download App:
  • android
  • ios