Asianet Suvarna News Asianet Suvarna News

ಕ್ಯಾಮರಾ ಮುಂದೆಯೇ ಬಾಲಕನಿಗೆ ಹೊಡೆದ ಪಾಕ್ ಪತ್ರಕರ್ತೆ

ಪಾಕಿಸ್ತಾನದ ಮಹಿಳಾ ಪತ್ರಕರ್ತೆಯೊಬ್ಬರು  ವರದಿ ಮಾಡುವಾಗ ಕ್ಯಾಮರಾ ಮುಂದೆಯೇ ಬಾಲಕನಿಗೆ ಕಪಾಳಕ್ಕೆ ಹೊಡೆದಿದ್ದು, ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

woman journalist from Pakistan slaps boy video goes viral akb
Author
Islamabad, First Published Jul 13, 2022, 5:00 PM IST

ಪಾಕಿಸ್ತಾನದ ಮಹಿಳಾ ಪತ್ರಕರ್ತೆಯೊಬ್ಬರು  ವರದಿ ಮಾಡುವಾಗ ಕ್ಯಾಮರಾ ಮುಂದೆಯೇ ಬಾಲಕನಿಗೆ ಕಪಾಳಕ್ಕೆ ಹೊಡೆದಿದ್ದು, ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಮಹಿಳಾ ಪತ್ರಕರ್ತೆಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದ ಲಾಹೋರ್ ರಂಗ್‌ನ ಪತ್ರಕರ್ತೆ ನೇರ ವರದಿ ಮಾಡುವ ವೇಳೆ ಅಪರಿಚಿತ ಬಾಲಕನೋರ್ವನಿಗೆ ಹೊಡೆದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

ಈ ಪತ್ರಕರ್ತೆಯನ್ನು ಮೈರಾ ಹಶ್ಮಿ ಎಂದು ಗುರುತಿಸಲಾಗಿದೆ. ಜುಲೈ 9ರ ಭಾನುವಾರ ಈ ಘಟನೆ ನಡೆದಿದೆ. ವಿಶ್ವಾದ್ಯಂತ ಆಚರಿಸಲಾಗುವ ಈದ್ ಅಲ್-ಅದಾ (ಈದ್ ಮಿಲಾದ್‌)  ಹಬ್ಬವನ್ನು ವರದಿ ಮಾಡುವಾಗ ಈ ಘಟನೆ ಸಂಭವಿಸಿದೆ. ವೀಡಿಯೊದಲ್ಲಿ, ಪತ್ರಕರ್ತೆ ವರದಿ ಮಾಡುತ್ತಿರುವಾಗ ಕ್ಯಾಮರಾದ ಮುಂದೆಯೇ ತನ್ನ ಸ್ಥಿಮಿತ ಕಳೆದುಕೊಂಡು ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಆದರೆ ಏಕೆ ಕೋಪ ಬಂದಿದೆ ಎಂಬುದು ಕೂಡ ತಿಳಿಯುತ್ತಿಲ್ಲ. ಆದಾಗ್ಯೂ, ಬಾಲಕ ಅನಗತ್ಯವಾದ ಟೀಕೆ ಮಾಡಿದ್ದು, ಇದರಿಂದ ಸಿಟ್ಟಿಗೆದ್ದ ಪತ್ರಕರ್ತೆ ತನ್ನ ತಾಳ್ಮೆ ಕಳೆದುಕೊಂಡು ಬಾಲಕನಿಗೆ ಬಾರಿಸಿದ್ದಾಳೆ ಎಂದು ತಿಳಿದು ಬಂದಿದೆ. ವೀಡಿಯೊ ವೈರಲ್ ಆದ ನಂತರ  ವರದಿಗಾರ್ತಿಯ ಕೃತ್ಯವನ್ನು ಅನೇಕರು ಟೀಕಿಸಿದ್ದಾರೆ. ತನ್ನ ಈ ಕೃತ್ಯ ವಿವಾದಕ್ಕೀಡಾಗುತ್ತಿದ್ದಂತೆ ಘಟನೆಗೆ ಸಂಬಂಧಿಸಿದಂತೆ ಮೈರಾ ಹಶ್ಮಿ ಟ್ವಿಟ್ಟರ್‌ನಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಈ  ತರುಣ  ಸಂದರ್ಶನದ ಸಮಯದಲ್ಲಿ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ. ಇದು ಕುಟುಂಬವನ್ನು ಅಸಮಾಧಾನಗೊಳಿಸಿತು ಎಂದು ಆಕೆ ಬರೆದುಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಈ ವಿಡಿಯೋ ಹಂಚಿಕೊಂಡ ನಂತರ, ವೀಡಿಯೊವನ್ನು 66 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆದರೆ ವಿಡಿಯೋ ನೋಡಿದ ಜನ ಮಾತ್ರ ಗೊಂದಲಕ್ಕೆ ಒಳಗಾಗಿದ್ದರು. ಪತ್ರಕರ್ತೆ ಸಿಟ್ಟಿಗೇಳಲು ಕಾರಣ ಏನು ಎಂಬುದು ಅವರ ಪ್ರಶ್ನೆಯಾಗಿತ್ತು. ಅಲ್ಲದೇ ಪತ್ರಕರ್ತೆಯ ವರ್ತನೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದು ನಿಮ್ಮ ಮಕ್ಕಳಾದರೆ ಹೀಗೆ ಬಾರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಮಕ್ಕಳು ಅದೇ ರೀತಿ ಇರುತ್ತಾರೆ. ಗಲಾಟೆ ಮಾಡುವುದು ಹಾಗೂ ತೊಂದರೆ ಕೊಡುವುದು ಮಕ್ಕಳ ಸ್ವಭಾವ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಯುಪಿಎ ಸರ್ಕಾರದ ವೇಳೆ ಭಾರತಕ್ಕೆ ಭೇಟಿ, ISI ಪರ ಬೇಹುಗಾರಿಕೆ ಮಾಡಿದ್ದೆ ಎಂದ ಪಾಕ್‌ ಪತ್ರಕರ್ತ!

ಆದರೆ ಆಕೆ ಗಮನ ಸೆಳೆಯುವುದಕ್ಕಾಗಿ ಈ ವಿಡಿಯೋ ಅಪ್‌ಲೋಡ್ ಮಾಡಿ ಸುಳ್ಳು ಹೇಳುತ್ತಿದ್ದಾಳೆ. ಹುಡುಗ ಕುಟುಂಬಕ್ಕೆ ಕಿರಿಕಿರಿ ಮಾಡುತ್ತಿರುವ ದೃಶ್ಯವನ್ನು ಏಕೆ ಅಪ್‌ಲೋಡ್ ಮಾಡಲಿಲ್ಲ ಎಂದು ಅಕೆಯನ್ನು ಪ್ರಶ್ನಿಸಿದ್ದಾರೆ. 

ICC T20 World Cup: ಈ ಬಾರಿ ವಿಶ್ವಕಪ್‌ನಲ್ಲಿ ಭಾರತ ಸೋಲಿಸುವುದು ಪಾಕ್‌ಗೆ ಸುಲಭವಲ್ಲ..!

Follow Us:
Download App:
  • android
  • ios