Asianet Suvarna News Asianet Suvarna News

ಪಾಕ್‌ನಲ್ಲಿ ಹಿಂದೂ ಮಂದಿರ, 1300 ವರ್ಷ ಹಳೆಯ ದೇಗುಲದದ ಗೋಪುರವೂ ಸಿಕ್ತು!

ಪಾಕಿಸ್ತಾನದಲ್ಲಿ ಹಿಂದೂ ದೇಗುಲ| 1300 ವರ್ಷ ಹಳೆಯ ದೇಗುಲದ ಛಾವಣಿ, ಗೋಪುರಗಳೂ ಪತ್ತೆ|  

1300 year old Hindu temple discovered in northwest Pakistan pod
Author
Bangalore, First Published Nov 21, 2020, 5:16 PM IST

ಇಸ್ಲಮಾಬಾದ್(ನ.21): ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಶಿಖರವೊಂದರಲ್ಲಿ ಪಾಕಿಸ್ತಾನ ಹಾಗೂ ಇಟಾಲಿಯನ್ ಪುತರಾತತ್ವ ತಜ್ಞರು 1300 ವರ್ಷ ಹಳೆಯ ಹಿಂದೂ ಮಂದಿರವನ್ನು ಪತ್ತೆ ಹಚ್ಚಿದ್ದಾರೆ. ಬರಿಕೋಟ್ ಘಂಡೈನಲ್ಲಿ ಉತ್ಖನನ ಮಾಡುವಾಗ ಈ ದೇವಾಲಯ ಕಂಡು ಬಂದಿದ್ದು, ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಜಲ್ ಖಲಿಕ್ ಇದು ವಿಷ್ಣು ಮಂದಿರ ಎಂದು ಗುರುವಾರ ಘೋಷಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ಕಾರ್ಯ: ಭೂಮಿ ಅಗೆದಾಗ ಸಿಕ್ತು ಮೂರ್ತಿ ಹಾಗೂ ಮಂದಿರದ ಅವಶೇಷ!

ದೇಗುಲದ ಗೋಪುರಗಳೂ ಪತ್ತೆ

1,300 ವರ್ಷ ಹಳೆಯ ಈ ಮಂದಿರವನ್ನು ಹಿಂದೂ ರಾಜರ ಆಕೆ ವೇಳೆ ನಿರ್ಮಿಸಲಾಗಿದೆ ಎನ್ನಲಾಗಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಉತ್ಖನನದ ವೇಳೆ ಮಂದಿರದ ಬಳಿ ಛಾವಣಿ ಹಾಗೂ ಗೋಪುರಗಳೂ ಸಿಕ್ಕಿವೆ.

'ಬಾಬ್ರಿ ಮಸೀದಿ ಜಾಗದಲ್ಲಿ ದೇವಾಲಯ : ಉತ್ಖನನದ ವೇಳೆ ಪತ್ತೆ'

ಗಾಂಧಾರ ನಾಗರಿಕತೆಯ ಮೊದಲ ದೇವಾಲಯ

ತಜ್ಞರಿಗೆ ದೇಗುಲದ ಬಳಿ ನೀರಿನ ಕುಂಡವೂ ಲಭಿಸಿದೆ. ಇಲ್ಲಿಗೆ ಆಗಮಿಸುತ್ತಿದ್ದ ಭಕ್ತರು ದೇಗುಲ ಪ್ರವೇಶಿಸುವುದಕ್ಕೂ ಮುನ್ನ ಸ್ನಾನ ಮಾಡುತ್ತಿದ್ದರು ಎಂಬುವುದು ಸ್ಪಷ್ಟ. ಇನ್ನು ಈ ಪ್ರದೇಶದಲ್ಲಿ ಇದೇ ಮೊದಲ ಬಾರಿ ಹಿಂದೂ ಆಳ್ವಿಕೆ ಕಾಲದ ಗುರುತು ಲಭ್ಯವಾಗಿದೆ ಎಂದು ಖಲೀಕ್ ತಿಳಿಸಿದ್ದಾರೆ.

Follow Us:
Download App:
  • android
  • ios